Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಪ್ರಾರ್ಥನೆಯಲ್ಲಿ ಹೆಚ್ಚಾದ ಸ್ತುತಿ ಸ್ತೋತ್ರವಿರಲಿ

    “ಶ್ವಾಸವಿರುವುದೆಲ್ಲವೂ ಕರ್ತನಾದ ಯೆಹೋವನನ್ನು ಸ್ತುತಿಸಲಿ”, ನಾವು ದೇವರಿಗೆಎಷ್ಟೊಂದು ಉಪಕಾರಸ್ತುತಿ ಮಾಡಬೇಕೆಂಬ ಬಗ್ಗೆ ಎಷ್ಟಾಗಿ ಅರಿತಿದ್ದೇವೆ?”... ಯೆಹೋವನಕೃಪಾವರಗಳು ನಿಂತುಹೋಗವು; ಅವು ದಿನವೂ ಹೊಸಹೊಸದಾಗಿ ಒದಗುತ್ತವೆ; ನಿನ್ನಸತ್ಯಸಂಧತೆಯು ದೊಡ್ಡದು” (ಪ್ರಲಾಪಗಳು 3:22,23) ಎಂಬುದನ್ನು ನೆನಪಿಸಿಕೊಳ್ಳಿಆತನ ಮೇಲೆ ಆತುಕೊಂಡಿದ್ದೇವೆಂದು ತಿಳಿದು ಆತನ ಎಲ್ಲಾ ಕರುಣೆಗಳಿಗಾಗಿ ನಾವುಕೃತಜ್ಞತೆ ವ್ಯಕ್ತಪಡಿಸುತ್ತೇವೆಯೇ? ಬದಲಾಗಿ ಪರಲೋಕದಿಂದ ಬರುವ ಪ್ರತಿಯೊಂದುಒಳ್ಳೆಯ ಕೃಪಾವರವು ಬೆಳಕಿನ ತಂದೆಯಾದ ದೇವರಿಂದ ಬರುತ್ತದೆ” ಎಂಬುದನ್ನುನಾವು ಹೆಚ್ಚಾಗಿ ಮರೆಯುತ್ತೇವೆ.KanCCh 355.1

    ಉತ್ತಮ ಆರೋಗ್ಯದಿಂದಿರುವವರು ಎಷ್ಟೊಂದುಸಾರಿ ದಿನದಿಂದದಿನಕ್ಕೆ ವರ್ಷದಿಂದವರ್ಷಕ್ಕೆ ಮುಂದುವರಿಯುತ್ತಿರುವ ದೇವರ ಕೃಪಾವರವನ್ನು ಮರೆಯುತ್ತಾರಲ್ಲವೇ?ದೇವರ ಎಲ್ಲಾ ಆಶೀರ್ವಾದಗಳಿಗಾಗಿ ಅವರು ಆತನಿಗೆ ಕೃತಜ್ಞತಾಸ್ತುತಿ ಅರ್ಪಿಸುವುದಿಲ್ಲ.ಆದರೆ ರೋಗಬಂದಾಗ ದೇವರ ನೆನಪು ಅವರಿಗೆ ಬರುವುದು. ಬೇಗನೆ ಗುಣವಾಗಬೇಕೆಂಬಬಯಕೆಯಿಂದ ಪ್ರಾಮಾಣಿಕವಾಗಿ ಪ್ರಾರ್ಥಿಸುವುದು ಒಳ್ಳೆಯದು. ರೋಗದಲ್ಲಿ ಮಾತ್ರವಲ್ಲದೆಆರೋಗ್ಯದಲ್ಲಿಯೂ ದೇವರು ನಮ್ಮ ಆಶಯವಾಗಿದ್ದಾನೆ. ಆದರೆ ಕೆಲವರು ದೇವರಮೇಲೆ ಭರವಸವಿಡದೆ, ತಮ್ಮಲ್ಲಿ ಕೊರಗುತ್ತಾ ಬಲಹೀನರಾಗಿ ತಾವೇ ರೋಗತಂದುಕೊಳ್ಳುವರು. ಅವರು ತಮ್ಮಲ್ಲಿ ಚಿಂತಿಸುವುದನ್ನು ಬಿಟ್ಟು ಮಾನಸಿಕ ಖಿನ್ನತೆಯಿಂದದೂರವಾದಲ್ಲಿ, ಶೀಘ್ರವಾಗಿ ಗುಣಹೊಂದುವರು. ಎಷ್ಟೊಂದು ವರ್ಷಗಳ ಕಾಲಒಳ್ಳೆಯ ಆರೋಗ್ಯದ ಆಶೀರ್ವಾದ ಅನುಭವಿಸಿದ್ದೇವೆಂದು ಅವರು ಕೃತಜ್ಞತೆಯಿಂದKanCCh 355.2

    ನೆನಪಿಸಿಕೊಳ್ಳಬೇಕು. ಅವರು ಅನಾರೋಗ್ಯದಿಂದ ಗುಣಮುಖರಾದಾಗ, ಇದನ್ನುದಯಪಾಲಿಸಿದ ಸೃಷ್ಟಿಕರ್ತನಿಗೆ ಉಪಕಾರ ಸ್ಮರಣೆ ಮಾಡುವ ಹಂಗಿನಲ್ಲಿದ್ದೇವೆಂದುತಿಳಿದುಕೊಳ್ಳಬೇಕು. ಹತ್ತುಮಂದಿ ಕುಷ್ಠರೋಗಿಗಳು ಗುಣವಾದಾಗ, ಅವರಲ್ಲಿ ಒಬ್ಬನುಮಾತ್ರ ಕ್ರಿಸ್ತನ ಬಳಿಗೆ ತಿರುಗಿಬಂದು ಆತನಿಗೆ ಸ್ತುತಿಸ್ತೋತ್ರ ಸಲ್ಲಿಸಿದನು (ಲೂಕ 17:1l-19). ನಾವು ದೇವರ ಕೃಪೆಯನ್ನು ನೆನಪಿಸಿಕೊಳ್ಳದ ಉಳಿದ ಒಂಬತ್ತು ಮಂದಿಕುಷ್ಟರೋಗಿಗಳಂತಿರಬಾರದು.KanCCh 355.3

    ಕೆಟ್ಟದ್ದು ಮುಂದೆ ಸಂಭವಿಸಬಹುದೆಂದು ಎದುರು ನೋಡುತ್ತಾ ಅದರ ಬಗ್ಗೆಕೊರಗುವುದು ಅವಿವೇಕತನದಿಂದ ಕೂಡಿದ್ದು, ಕ್ರೈಸ್ತನಂಬಿಕೆಗೆ ವಿರುದ್ಧವಾದದ್ದು. ಈರೀತಿ ಮಾಡುವುದರಿಂದ ನಾವು ಇಂದಿನ ಅಂದರೆ ವರ್ತಮಾನದ ಆಶೀರ್ವಾದವನ್ನು ಅನುಭವಿಸುವುದರಲ್ಲಿ ವಿಫಲರಾಗುತ್ತೇವೆ. ನಮ್ಮ ಅನುದಿನದ ಕರ್ತವ್ಯಗಳನ್ನುನಿಭಾಯಿಸುತ್ತಾ, ಬರಬಹುದಾದ ಶೋಧನೆಗಳನ್ನು ಸಹಿಸಿಕೊಳ್ಳಬೇಕೆಂದು ದೇವರುಅಪೇಕ್ಷಿಸುತ್ತಾನೆ. ಇಂದು ನಾವು ದೇವರಿಗೆ ಸ್ತೋತ್ರ ಸಲ್ಲಿಸಿ ಮಹಿಮೆಪಡಿಸಬೇಕು.ನಂಬಿಕೆಯಿಂದ ಜೀವಿಸುವುದರ ಮೂಲಕ ಶತ್ರುವಾದ ಸೈತಾನನನ್ನು ನಾವು ಜಯಿಸಬೇಕು.ಇಂದೇ ಆತನನ್ನು ಹುಡುಕಿ ಆತನ ಸನ್ನಿಧಿಯಲ್ಲಿ ತೃಪ್ತಿಗೊಳ್ಳಬೇಕು. ಈ ದಿನವೇ ನಮ್ಮಜೀವನದ ಕೊನೆಯದಿನವೆಂಬ ರೀತಿಯಲ್ಲಿ ಎಚ್ಚರವಾಗಿದ್ದು ಕೆಲಸ ಮಾಡಬೇಕು ಮತ್ತುಪ್ರಾರ್ಥಿಸಬೇಕು. ಹಾಗಿದ್ದಲ್ಲಿ ನಮ್ಮ ಜೀವಿತವು ಎಷ್ಟೊಂದು ಪ್ರಾಮಾಣಿಕವಾಗಿರುವುದಲ್ಲವೇ? ನಮ್ಮೆಲ್ಲಾ ನಡೆನುಡಿಗಳಲ್ಲಿ ಕ್ರಿಸ್ತನನ್ನು ಎಷ್ಟೊಂದು ನಿಕಟವಾಗಿಅನುಸರಿಸುತ್ತೇವಲ್ಲವೇ?KanCCh 355.4