ಅಲ್ಪ ವಿಷಯಗಳಲ್ಲಿ ದೇವರ ಆಸಕ್ತಿ
ಪ್ರಾರ್ಥನೆಯ ಮಹತ್ವವನ್ನು ಕೆಲವರುಮಾತ್ರ ಸರಿಯಾಗಿ ತಿಳಿದಿದ್ದಾರೆ. ಅದು ನಮಗೆಕೊಟ್ಟ ಅಮೂಲ್ಯ ಸದವಕಾಶವಾಗಿದೆ ಎಂದು ಅವರು ಅರಿತಿದ್ದಾರೆ. ಕ್ರಿಸ್ತನ ಬಳಿಯಲ್ಲಿನಮ್ಮೆಲ್ಲಾ ಅಗತ್ಯಗಳನ್ನು ಹೇಳಿಕೊಳ್ಳಬೇಕು. ನಮ್ಮ ದೊಡ್ಡ ಕಷ್ಟಗಳನ್ನು ಮಾತ್ರವಲ್ಲದೆ,ಚಿಕ್ಕ ತೊಂದರೆಗಳನ್ನೂ ಸಹ ಆತನಿಗೆ ಅರಿಕೆ ಮಾಡಬೇಕು. ನಮ್ಮ ಮನಃಶಾಂತಿ ಹಾಳುಮಾಡುವಂತ ಯಾವುದೇ ವಿಷಯವಾಗಿರಲಿ, ಅದನ್ನು ಪ್ರಾರ್ಥನೆಮೂಲಕ ಕರ್ತನಬಳಿಗೆ ತರಬೇಕು. ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲಿಯೂ ಕ್ರಿಸ್ತನ ಸಾನ್ನಿಧ್ಯ (ಪ್ರಸನ್ನತೆ)ನಮಗೆ ಅಗತ್ಯವಿದೆ ಎಂದು ತಾವು ಭಾವಿಸಿದಾಗ, ನಮ್ಮನ್ನು ಶೋಧಿಸಲು ಸೈತಾನನಿಗೆಅವಕಾಶವಿರುವುದಿಲ್ಲ. ನಮಗೆ ಅತ್ಯಂತ ಆತ್ಮೀಯಸ್ನೇಹಿತನೂ, ಕರುಣೆ ತೋರಿಸುವವನೂಆದ ಕ್ರಿಸ್ತನಿಂದ ನಮ್ಮನ್ನು ದೂರ ಮಾಡುವುದೇ ಸೈತಾನನ ಸತತ ಪ್ರಯತ್ನವಾಗಿದೆ.ಕ್ರಿಸ್ತನನ್ನು ಬಿಟ್ಟು ಬೇರೆ ಯಾರಮೇಲೂ ಹೆಚ್ಚಾದ ಭರವಸವಿಡಬಾರದು. ನಮ್ಮಹೃದಯದಲ್ಲಿರುವುದೆಲ್ಲವನ್ನೂ ನಿಶ್ಚಿಂತೆಯಿಂದ ಆತನಿಗೆ ತಿಳಿಸಬೇಕು. ಕ್ರೈಸ್ತ ವಿಶ್ವಾಸಿಗಳುಸಂತೋಷ ಕೂಟಗಳಲ್ಲಿ ಭಾಗವಹಿಸುವಾಗ, ಯೇಸುವು ನಿಮ್ಮನ್ನು ಸಂಧಿಸುತ್ತಾನೆಂದುನಂಬಬೇಕೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ನಿಮ್ಮನ್ನು ಆಶೀರ್ವದಿಸಲುಆತನು ಕಾದುಕೊಂಡಿದ್ದಾನೆಂಬ ವಿಶ್ವಾಸ ನಿಮ್ಮಲ್ಲಿರಲಿ. ನಿಮ್ಮ ದೃಷ್ಟಿಯು ಕ್ರಿಸ್ತನ ಮೇಲಿರಲಿ,ಆತನ ಸರಿಸಾಟಿಯಿಲ್ಲದ ಪ್ರೀತಿಯ ಬಗ್ಗೆ ಮಾತಾಡಿ. ಆತನನ್ನು ದೃಷ್ಟಿಸುವುದರಿಂದನೀವೂ ಆತನಂತೆ ಬದಲಾಗುವಿರಿ. ನಿಮ್ಮ ಪ್ರಾರ್ಥನೆ ಸಂಕ್ಷಿಪ್ತವಾಗಿದ್ದು, ವಿಷಯಕ್ಕೆಮಾತ್ರ ಸಂಬಂಧಪಟ್ಟಿರಲಿ. ಉದ್ದವಾದ ಪ್ರಾರ್ಥನೆಯ ಮೂಲಕ ಕರ್ತನಾದ ದೇವರಿಗೆದೈವಸಂದೇಶ ನೀಡಬೇಡಿ. ಹಸಿದಿರುವ ಮಗು ತನ್ನ ತಂದೆಯನ್ನು ರೊಟ್ಟಿಕೊಡು ಎಂದು ಕೇಳುವಂತೆ ಜೀವದರೊಟ್ಟಿಗಾಗಿ ಬೇಡಿಕೊಳ್ಳಿರಿ. ನಾವು ಸರಳತೆ ಹಾಗೂನಂಬಿಕೆಯಿಂದಲೂ ಬೇಡಿಕೊಂಡಾಗ, ಅಗತ್ಯವಾದ ಎಲ್ಲಾ ಆಶೀರ್ವಾದಗಳನ್ನು ದೇವರುನಮಗೆ ಕೊಡುವನು.KanCCh 356.1
ನಮ್ಮ ಪ್ರಾಣವು ಮಾಡುವ ಅತ್ಯಂತ ಪವಿತ್ರವಾದ ವ್ಯಾಯಾಮವು ಪ್ರಾರ್ಥನೆಯಾಗಿದೆ.ಅದು ಪ್ರಾಮಾಣಿಕವಾಗಿಯೂ, ಕುಗ್ಗಿದ ಹೃದಯದಿಂದ ಮಾಡಿದ್ದಾಗಿರಬೇಕು.ಪ್ರಾರ್ಥಿಸುತ್ತಿರುವವನು ತಾನು ದೇವರ ಸನ್ನಿಧಿಯಲ್ಲಿದ್ದೇನೆಂದು ಭಾವಿಸಿದಾಗ, ಇತರೆಲ್ಲವನ್ನೂಮರೆಯುವನು. ತನ್ನ ಜಾಣತನ ಮೆರೆಸುವ ಬಯಕೆ ಅವನಲ್ಲಿರುವುದಿಲ್ಲ. ಮನುಷ್ಯನನ್ನುಮೆಚ್ಚಿಸುವುದಕ್ಕಲ್ಲ, ಬದಲಾಗಿ ದೇವರ ಆಶೀರ್ವಾದ ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸುವನು.KanCCh 357.1
ಸಭೆಯಲ್ಲಾಗಲಿ ಅಥವಾ ವೈಯಕ್ತಿಕ ಪ್ರಾರ್ಥನೆಯಲ್ಲಾಗಲಿ, ದೇವರ ಮುಂದೆಮೊಣಕಾಲೂರುವುದು ಬಹಳ ಒಳ್ಳೆಯದು. ನಮ್ಮ ಮಾದರಿಯಾಗಿರುವ ಯೇಸುವುಮೊಣಕಾಲೂರಿ ಪ್ರಾರ್ಥಿಸಿದನು (ಲೂಕ 22:41), ಶಿಷ್ಯರೂ ಕೂಡ ಮೊಣಕಾಲೂರಿಪ್ರಾರ್ಥಿಸಿದರು (ಅ.ಕೃತ್ಯಗಳು 9:40, 20:36, 21:5), ಪರಲೋಕದ “ತಂದೆಯ ಮುಂದೆಮೊಣಕಾಲೂರುತ್ತೇನೆ” ಎಂದು ಪೌಲನು ಹೇಳುತ್ತಾನೆ (ಎಫೆಸ 3:14). ಇಸ್ರಾಯೇಲ್ಯರಪಾಪಗಳನ್ನು ದೇವರ ಮುಂದೆ ಅರಿಕೆಮಾಡುವಾಗ ಎಜ್ರನು ಮೊಣಕಾಲೂರಿದನು(ಎಜ್ರನು 9:5), ದಾನಿಯೇಲನು “ಯಥಾಪ್ರಕಾರ ದಿನಕ್ಕೆ ಮೂರಾವರ್ತಿ ಮೊಣಕಾಲೂರಿತನ್ನ ದೇವರಿಗೆ ಪ್ರಾರ್ಥನೆ ಮಾಡಿ ಸ್ತೋತ್ರ ಸಲ್ಲಿಸಿದನು” (ದಾನಿಯೇಲನು 6:10).KanCCh 357.2
*****