ಅಧ್ಯಾಯ-6 — ಪರಿಶುದ್ಧ ಜೀವನ
ನಮ್ಮಲ್ಲಿರುವ ಎಲ್ಲವನ್ನೂ ನಮ್ಮ ರಕ್ಷಕನು ಹಕ್ಕಿನಿಂದ ಕೇಳುತ್ತಾನೆ. ನಮ್ಮ ಪರಿಶುದ್ಧ ಆಲೋಚನೆಗಳು ಹಾಗೂ ನಮ್ಮ ನಿರ್ಮಲವಾದ ಭಕ್ತಿ ಹಾಗೂ ಪ್ರೀತಿಯನ್ನೂ ನಮ್ಮಿಂದ ಕೇಳುತ್ತಾನೆ. ನಾವು ಆತನ ದೈವೀಕಸ್ವಭಾವದಲ್ಲಿ ನಿಜವಾಗಿಯೂ ಪಾಲುಗಾರರಾಗಿದ್ದಲ್ಲಿ, ನಿರಂತರವೂ ಆತನಸ್ತುತಿ ನಮ್ಮ ಹೃದಯಗಳಲ್ಲಿರುತ್ತದೆ. ನಮ್ಮ ಸರ್ವಸ್ವವನ್ನೂ ದೇವರಿಗೆ ಒಪ್ಪಿಸಿ ನಿರಂತರವೂ ಆತನ ಕೃಪೆಯಲ್ಲಿಯೂ ಹಾಗೂ ಸತ್ಯದ ಜ್ಞಾನದಲ್ಲಿಯೂ ಆತ್ಮೀಕವಾಗಿ ಬೆಳವಣಿಗೆ ಹೊಂದುವುದೇ ನಮ್ಮ ಏಕೈಕ ಸುರಕ್ಷೆಯಾಗಿದೆ. ಸತ್ಯವೇದದಲ್ಲಿ ತಿಳಿಸಿರುವಂತೆ ನಮ್ಮ ಆತ್ಮ, ಪ್ರಾಣ, ಶರೀರಗಳಲ್ಲಿ ನಾವು ಪರಿಶುದ್ಧರಾಗಿರಬೇಕೆಂದು ಪೌಲನು ಪ್ರಾರ್ಥಿಸುತ್ತಾನೆ. “ನಮ್ಮಕರ್ತನಾದ ಯೇಸುಕ್ರಿಸ್ತನು ಪ್ರತ್ಯಕ್ಷನಾದಾಗ, ನಿಮ್ಮ ಆತ್ಮ, ಪ್ರಾಣ, ಶರೀರಗಳು ದೋಷವಿಲ್ಲದೆ ಸಂಪೂರ್ಣವಾಗಿ ಕಾಣಿಸುವಂತೆ ಕಾಪಾಡಲ್ಪಡಲಿ” ಎಂದು ಅವನು ಹೇಳುತ್ತಾನೆ (1 ಥೆಸಲೋನಿಕ 5:23) ಧಾರ್ಮಿಕ ಜಗತ್ತಿನ ಪರಿಶುದ್ಧತೆಯ ಬಗ್ಗೆ ಒಂದು ತಪ್ಪಾದ ಮತ್ತು ಅಪಾಯಕಾರಿ ಪರಿಣಾಮ ಬೀರುವ ಸಿದ್ಧಾಂತವಿದೆ. ಅನೇಕ ಸಂದರ್ಭಗಳಲ್ಲಿ ಪರಿಶುದ್ಧರಾಗಿದ್ದೇವೆಂದು ಹೇಳಿಕೊಳ್ಳುವವರು ಯಥಾರ್ಥವಾದ ಪವಿತ್ರೀಕರಣ ಹೊಂದಿರುವುದಿಲ್ಲ, ಅವರ ಪರಿಶುದ್ಧತೆಯು ಬರೀ ಬಾಯಿಮಾತಿನಲ್ಲಿಯೂ ಹೊರತೋರಿಕೆಯಲ್ಲಿಯೂ ಇರುತ್ತದೆ.KanCCh 28.1
ಅಂತವರು ತಮ್ಮ ವಿವೇಚನಾಶಕ್ತಿ, ವಿಮರ್ಶನಾಶಕ್ತಿ ಹಾಗೂ ಔಚಿತ್ಯ ಪ್ರಜ್ಞೆಯನ್ನು (Judgement) ನಿರಾಕರಿಸಿ ಸಂಪೂರ್ಣವಾಗಿ ತಮ್ಮ ಭಾವನೆಗಳ ಮೇಲೆ ಆತುಕೊಂಡಿರುತ್ತಾರೆ. ಅಲ್ಲದೆ ಕೆಲವುವೇಳೆ ಅನುಭವಿಸಿರುವ ಭಾವಪರವಶತೆ ಅಂದರೆ ಉದ್ವೇಗವೇ (Emotion) ಪರಿಶುದ್ಧತೆ ಎಂದು ತಿಳಿದುಕೊಳ್ಳುತ್ತಾರೆ. ಅವರು ತಮ್ಮ ದುರಾಗ್ರಹದ ಮೊಂಡುತನ ಹಾಗೂ ಹಠಮಾರಿತನದಿಂದ ತಾವು ಪರಿಶುದ್ಧರೆಂದು ದೃಢಸಂಕಲ್ಪದಿಂದಲೂ ಬಹಳವಾದ ಮಾತುಗಳಿಂದಲೂ ಹೇಳಿಕೊಳ್ಳುತ್ತಾರೆ. ಆದರೆ ಅದಕ್ಕೆ ಸಾಕ್ಷ್ಯಾಧಾರವಾಗಿ ಅವರ ಜೀವನದಲ್ಲಿ ಯಾವುದೇ ಪವಿತ್ರಾತ್ಮನ ಫಲಕಂಡುಬರುವುದಿಲ್ಲ. ತಾವು ಪರಿಶುದ್ಧರೆಂದು ಸುಮ್ಮನೆ ಹೇಳಿಕೊಳ್ಳುವ ಇವರು ತಮ್ಮ ಸೋಗಲಾಡಿತನದಿಂದ ತಮ್ಮನ್ನು ಮೋಸಗೊಳಿಸಿಕೊಳ್ಳುವುದು ಮಾತ್ರವಲ್ಲದೆ, ಮನಃಪೂರ್ವಕವಾಗಿ ದೇವರ ಚಿತ್ತಕ್ಕೆ ವಿಧೇಯರಾಗಬೇಕೆಂದು ಬಯಸುವವರನ್ನೂ ಸಹ, ಧರ್ಮಭ್ರಷ್ಟರಾಗುವಂತೆ ಮಾಡುತ್ತಾರೆ. ದೇವರು ನನ್ನನ್ನು ನಡೆಸುತ್ತಾನೆ! ದೇವರು ನನಗೆ ಬೋಧಿಸುತ್ತಾನೆ! ನಾನು ಪಾಪವಿಲ್ಲದೆ ಜೀವಿಸುತ್ತಿದ್ದೇನೆ! ಎಂದು ಮತ್ತೆ ಮತ್ತೆ ಅವರು ಹೇಳಿಕೊಳ್ಳುತ್ತಾರೆ. ಇಂತವರ ಸಂಪರ್ಕಕ್ಕೆ ಬಂದ ಅನೇಕರು ಗ್ರಹಿಸಿಕೊಳ್ಳಲಾಗದಂತ ಯಾವುದೋ ಆತ್ಮೀಕವಾಗಿ ಅಂಧಕರವಾದ ಮರ್ಮವನ್ನು ಎದುರಿಸುವರು.KanCCh 28.2
ಒಬ್ಬ ವ್ಯಕ್ತಿಯು ಪರಿಶುದ್ಧತೆ ಹೊಂದುವುದು ನಿರಂತರವಾದ ಕ್ರಿಯೆಯಾಗಿದೆ. ಈ ವಿಷಯದಲ್ಲಿ ಯಾವರೀತಿ ನಾವು ಬೆಳವಣಿಗೆ ಹೊಂದುತ್ತೇವೆಂದು ಅಪೋಸ್ತಲನಾದ ಪೇತ್ರನು ಹೀಗೆ ತಿಳಿಸುತ್ತಾನೆ : “ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ, ಸದ್ಗುಣಕ್ಕೆ ಜ್ಞಾನವನ್ನೂ, ಜ್ಞಾನಕ್ಕೆ ದಯೆಯನ್ನೂ, ದಯೆಗೆ ತಾಳ್ಮೆಯನ್ನೂ, ತಾಳ್ಮೆಗೆ ಭಕ್ತಿಯನ್ನೂ, ಭಕ್ತಿಗೆ ಸಹೋದರ ಸ್ನೇಹವನೂ, ಸಹೋದರ ಸ್ನೇಹಕ್ಕೆ ಪ್ರಿತಿಯನ್ನೂ ಕೂಡಿಸಿರಿ. ಇವು ನಿಮ್ಮಲ್ಲಿದ್ದು ಹೆಚ್ಚುತ್ತಾ ಬಂದರೆ, ನಮ್ಮ ಕರ್ತನಾದ ಯೇಸುಕ್ರಿಸ್ತನ ಸಂಬಂಧವಾದ ಪರಿಜ್ಞಾನವನ್ನು ಹೊಂದುವ ವಿಷಯದಲ್ಲಿ ನಿಮ್ಮನ್ನು ಆಲಸ್ಯಗಾರರೂ, ನಿಷ್ಫಲರೂ ಆಗದಂತೆ ಮಾಡುತ್ತವೆ” (2 ಪೇತ್ರನು 1:5-8).KanCCh 29.1
ಅಲ್ಲದೆ ಇದೇ ಅಧ್ಯಾಯ 10-11ನೇ ವಚನಗಳಲ್ಲಿ ಪೇತ್ರನು ಮುಂದುವರಿದು “ಆದುದರಿಂದ ಸಹೋದರರೇ, ದೇವರು ನಿಮ್ಮನ್ನು ಕರೆದದ್ದನ್ನೂ, ಆದು ಕೊಂಡದ್ದನ್ನೂ ದೃಢಪಡಿಸಿಕೊಳ್ಳುವುದಕ್ಕೆ ಮತ್ತಷ್ಟು ಪ್ರಯಾಸಪಡಿರಿ. ಹೀಗೆ ನೀವು ಮಾಡಿದರೆ ಎಂದಿಗೂ ಎಡವುದಿಲ್ಲ ಮತ್ತು ನಮ್ಮ ಕರ್ತನೂ, ರಕ್ಷಕನೂ ಆಗಿರುವ ಯೇಸುಕ್ರಿಸ್ತನ ನಿತ್ಯರಾಜ್ಯದಲ್ಲಿ ಪ್ರವೇಶಿಸುವ ಹಾಗೆ ದೇವರು ನಿಮಗೆ ಧಾರಾಳವಾಗಿ ಅನುಗ್ರಹಿಸುವನು” ಎಂದು ಹೇಳುತ್ತಾನೆ.KanCCh 29.2
ಪರಿಶುದ್ಧಜೀವನ ನಡೆಸುವುದು ಒಂದುಕ್ಷಣದ, ಒಂದುಗಂಟೆಯ ಅಥವಾ ಒಂದು ದಿನದ ಕಾರ್ಯವಲ್ಲ. ಇದು ಸದಾಕಾಲವೂ ಕೃಪೆಯಲ್ಲಿ ಆತ್ಮೀಕವಾಗಿ ಬೆಳೆಯುವುದೇ ಆಗಿದೆ. ನಮ್ಮ ಆತ್ಮೀಕ ಹೋರಾಟದಲ್ಲಿ ಬಲವಾಗಿರಬಹುದು. ಆದರೆ ನಾಳೆ ಹೇಗಿರುತ್ತೇವೆಂದು ನಮಗೆ ತಿಳಿಯದು. ಸೈತಾನನು ಇನ್ನೂ ಜೀವಿಸುತ್ತಿದ್ದಾನೆ ಹಾಗೂ ತನ್ನ ಕೆಲಸದಲ್ಲಿ ನಿರತನಾಗಿದ್ದಾನೆ. ಅವನನ್ನು ಎದುರಿಸಲು ನಾವು ಪ್ರತಿದಿನವೂ ಸಹಾಯಕ್ಕಾಗಿ ದೇವರಲ್ಲಿ ಮೊರೆಯಿಡಬೇಕಾಗಿದೆ. ಎಲ್ಲಿಯವರೆಗೆ ಸೈತಾನನು ಆಳಿಕೆ ನಡೆಸುತ್ತಾನೋ, ಅಲ್ಲಿಯವರೆಗೆ ನಾವು ಅವನ ಮುತ್ತಿಗೆಯನ್ನು ಜಯಿಸಬೇಕು ಮತ್ತು ನಮ್ಮನ್ನು ನಾವೇ ತಗ್ಗಿಸಿಕೊಂಡು ಸ್ವಾರ್ಥವನ್ನು ಬಿಡಬೇಕು. ಸೈತಾನನು ಕಾರ್ಯನಿರತನಾಗಿರುವ ತನಕ ನಾನು ಸಂಪೂರ್ಣವಾಗಿ ಪರಿಶುದ್ಧ ಜೀವನ ನಡೆಸುತ್ತಿದ್ದೇನೆಂದು ಹೇಳಲಾಗದು. KanCCh 29.3
ಕ್ರೈಸ್ತರ ಜೀವನವು ನಿರಂತರವಾಗಿ ಪರಲೋಕದ ಕಡೆಗೆ ನಡೆಯುವಂತದ್ದಾಗಿದೆ. ಯೇಸುಕ್ರಿಸ್ತನು ತನ್ನ ಜನರನ್ನು ಸಂಸ್ಕರಿಸಿ ಪರಿಶುದ್ಧಗೊಳಿಸುತ್ತಾನೆ. ಆತನ ಸ್ವರೂಪವು ನಮ್ಮಲ್ಲಿ ಸಂಪೂರ್ಣವಾಗಿ ಪ್ರತಿಫಲಿಸಿದಾಗ, ನಾವು ಪರಿಪೂರ್ಣರೂ ಹಾಗೂ ಪರಿಶುದ್ಧರೂ ಆಗಿ ಪರಲೋಕಕ್ಕೆ ಮರಣವನ್ನು ಕಾಣದೆ ಎತ್ತಲ್ಪಡುವುದಕ್ಕೆ ಸಿದ್ಧರಾಗಿರುತ್ತೇವೆ. ಇದಕ್ಕಾಗಿ ಕ್ರೈಸ್ತರು ಮಹಾಕಾರ್ಯ ಮಾಡಬೇಕಾಗಿದೆ. ನಾವು ಶರೀರದ ಹಾಗೂ ಮಾಂಸದ ಇಚ್ಛೆಗಳಿಂದ ದೂರವಾಗಿ ನಮ್ಮನ್ನು ಶುದ್ಧೀಕರಿಸಿಕೊಂಡು, ದೇವರ ಭಯಭಕ್ತಿಯಲ್ಲಿ ಪರಿಪೂರ್ಣತೆಯಿಂದ ಪರಿಶುದ್ಧತೆ ಪಡೆದುಕೊಳ್ಳಬೇಕೆಂದು ಸತ್ಯವೇದವು ನಮ್ಮನ್ನುKanCCh 29.4
ಎಚ್ಚರಿಸುತ್ತದೆ. ಕ್ರೈಸ್ತರಾದ ನಮ್ಮ ಮಹಾಕಾರ್ಯವು ಏನೆಂದು ಇಲ್ಲಿ ನಾವುತಿಳಿದುಕೊಳ್ಳಬಹುದು. ಕ್ರೈಸ್ತರು ಸದಾಕಾಲವೂ ಕಾರ್ಯಮಾಡಬೇಕಾಗಿದೆ. ಕ್ರಿಸ್ತನು ದ್ರಾಕ್ಷೆಬಳ್ಳಿ,ನಾವು ಕೊಂಬೆಗಳು. ನಾವು ಫಲಕೊಡಬೇಕಾದಲ್ಲಿ, ಮೂಲ ದ್ರಾಕ್ಷೆಬಳ್ಳಿಯಿಂದ ಜೀವಹಾಗೂ ಬಲ ಪಡೆದುಕೊಳ್ಳಬೇಕು. ದೇವರ ಅಪ್ಪಣೆಯಂತೆ ಮಾಡಬೇಕಾದ ಕರ್ತವ್ಯಗಳಲ್ಲಿಯಾರಾದರೂ ಒಂದನ್ನು ಮಾತ್ರ ನೆರವೇರಿಸದಿದ್ದರೂ, ಆತನು ನಮ್ಮನ್ನು ಕ್ಷಮಿಸಿಆಶೀರ್ವದಿಸುವನೆಂಬ ನಂಬಿಕೆಯಿಂದ ತಮ್ಮನ್ನು ತಾವೇ ಮೋಸಗೊಳಿಸಿಕೊಳ್ಳಬಾರದು.ಬೇಕೆಂದೇ ಮಾಡಿದ ಪಾಪವು ಪವಿತ್ರಾತ್ಮನಿಂದ ನಮ್ಮನ್ನು ದೂರಮಾಡಿ ದೇವರಿಂದಬೇರ್ಪಡಿಸುತ್ತದೆ. ಧಾರ್ಮಿಕ ಭಾವನೆಯ ಭಾವಪರವಶತೆಗಳು(Ecstasy) ಏನೇಇರಲಿ,ದೈವೀಕಆಜ್ಞೆಗಳನ್ನು ನಿರ್ಲಕ್ಷಿಸಿ ಅಗೌರವಿಸುವವರ ಹೃದಯಗಳಲ್ಲಿ ಕ್ರಿಸ್ತನು ನೆಲೆಗೊಳ್ಳಲುಸಾಧ್ಯವಿಲ್ಲ. ತನ್ನನ್ನು ಯಾರು ಗೌರವಿಸುತ್ತಾರೋ, ಅವರನ್ನು ದೇವರು ಗೌರವಿಸುವನು.KanCCh 30.1
“ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಪರಿಪೂರ್ಣವಾಗಿ ಪ್ರೀತಿ ಮಾಡಲಿ” ಎಂದು ಪೌಲನು ಹೇಳುತ್ತಾನೆ (1 ಥೆಸಲೋನಿಕ 5:23). ಕ್ರೈಸ್ತ ಸಹೋದರರು ಮುಟ್ಟಲು ಅಸಾಧ್ಯವಾದಂತ ಔನ್ನತ್ಯವನು ಮುಟ್ಟುವ ಗುರಿಯಿಟ್ಟು ಕೊಳ್ಳಬೇಕೆಂದು ಪೌಲನು ನಮಗೆ ಹೇಳುತ್ತಿಲ್ಲ. ದೇವರ ಚಿತ್ತಕ್ಕೆ ವಿರುದ್ಧವಾಗಿ ಆಶೀರ್ವಾದ ಹೊಂದಿಕೊಳ್ಳಬೇಕೆಂದು ಅವರಿಗಾಗಿ ಅವನು ಪ್ರಾರ್ಥಿಸುತ್ತಿಲ್ಲ. ಆದರೆ ಸಮಾಧಾನದಿಂದ ಕ್ರಿಸ್ತನನ್ನು ಎದುರುಗೊಳ್ಳಲು ಯೋಗ್ಯರಾಗ ಬಯಸುವವರು ನಿರ್ಮಲವಾದ ಹಾಗೂ ಪರಿಶುದ್ಧ ಗುಣಸ್ವಭಾವ ಹೊಂದಿರಬೇಕೆಂದು ಪೌಲನಿಗೆ ತಿಳಿದಿತ್ತು (1 ಕೊರಿಂಥ 9:25-27; 6:19, 20ನೇ ವಚನಗಳನ್ನು ಓದಿರಿ).KanCCh 30.2
ಯಥಾರ್ಥವಾದ ಕ್ರೈಸ್ತಸಿದ್ಧಾಂತವು ಪರಿಣಾಮಗಳ ಬಗ್ಗೆ ಆಲೋಚಿಸುವುದಿಲ್ಲ. ನಾನು ಇದನ್ನು ಮಾಡಿದರೆ ಜನರು ನನ್ನ ಬಗ್ಗೆ ಏನು ತಿಳಿದುಕೊಂಡಾರೆಂದು ಅದು ಕೇಳುವುದಿಲ್ಲ. ಅಥವಾ ಅದನ್ನು ಮಾಡಿದರೆ ಸಮಾಜದಲ್ಲಿ ನನ್ನ ಸ್ಥಾನಮಾನಕ್ಕೆ ಯಾವ ರೀತಿ ಧಕ್ಕೆಯಾಗುತ್ತದೆಂದೂ ಸಹ ನಿಜ ಕ್ರೈಸ್ತಸಿದ್ಧಾಂತವು ಪ್ರಶ್ನಿಸುವುದಿಲ್ಲ. ಬದಲಾಗಿ ದೇವರ ಮಕ್ಕಳು ನಮ್ಮ ಕ್ರಿಯೆಯು ದೇವರಿಗೆ ಮಹಿಮೆ ತರುವಂತೆ ನಾವೇನು ಮಾಡಬೇಕೆಂದು ಆತನು ಬಯಸುತ್ತಿದ್ದಾನೆಂಬ ಉತ್ಕಟವಾದ ಬಯಕೆ ಹೊಂದಿರುತ್ತಾರೆ. ತನ್ನ ಅನುಯಾಯಿಗಳು ಈ ಲೋಕದಲ್ಲಿ ಬೆಳಕಿನಂತೆ ಪ್ರಕಾಶಿಸುವ ಹಾಗೆ ಅವರ ಹೃದಯ ಹಾಗೂ ಜೀವನವು ದೈವೀಕಕೃಪೆಯಿಂದ ನಿಯಂತ್ರಿಸಲ್ಪಡಲು ಬೇಕಾದ ಸಾಕಷ್ಟು ಸಿದ್ಧತೆಗಳನ್ನು ದೇವರು ಮುಂದಾಗಿಯೇ ಮಾಡಿದ್ದಾನೆ.KanCCh 30.3