Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಐಕ್ಯತೆ ಕಂಡುಬರುವುದಕ್ಕೆ ಒಂದು ದೃಷ್ಟಾಂತ

    ಶ್ರೀಮತಿ ವೈಟಮ್ಮನವರು ಜೀವಿಸಿದ್ದ ಸಮಯದಲ್ಲಿ ಕ್ರಿಸ್ತನ ಎರಡನೇ ಬರೋಣವನ್ನುನಿರೀಕ್ಷಿಸುತ್ತಿದ್ದ ವಿಶ್ವಾಸಿಗಳು ಬಹಳ ಕಡಿಮೆ ಸಂಖ್ಯೆಯಲ್ಲಿದ್ದರು. ಒಂದು ಸಬ್ಬತ್‌ದಿನದಲ್ಲಿಈ ವಿಶ್ವಾಸಿಗಳು ಅಮೇರಿಕಾದೇಶದ ಮೆ ಎಂಬ ಪಟ್ಟಣದ ಸಮೀಪದಲ್ಲಿದ್ದಟಾಪ್‌ಶಾಮ್ ಎಂಬ ಊರಿನಲ್ಲಿ ಸ್ಟಾಕ್ ಬ್ರಿಡ್ಜ್ ಹೌಲ್ಯಾಂಡ್ ಎಂಬುವವರ ಮನೆಯಲ್ಲಿಸೇರಿದ್ದರು. ಒಂದು ಸಬ್ಬತ್‌ದಿನದಲ್ಲಿ ಸಹೋದರಹೌಲ್ಯಾಂಡ್‌ರವರು ಅಲ್ಲಿರಲಿಲ್ಲ. ಎಲ್ಲರಿಗೂಇದರಿಂದ ಆಶ್ಚರ್ಯವಾಯಿತು. ಸ್ವಲ್ಪ ಸಮಯದ ನಂತರ ಅವರು ಅಲ್ಲಿಗೆಬಂದರು. ಅವರ ಮುಖವು ದೇವರ ಮಹಿಮೆಯಿಂದ ಹೊಳೆಯುತ್ತಿತ್ತು. ಹೌಲ್ಯಾಂಡ್‌ರವರುಸಭಿಕರನ್ನು ಉದ್ದೇಶಿಸಿ ಸಹೋದರರೇ, “ನಾವು ಎಂದಿಗೂ ಬೀಳುವುದಿಲ್ಲ, ಇದರಬಗ್ಗೆನಾನು ನಿಮಗೆ ಹೇಳುತ್ತೇನೆ” ಎಂದು ತಮ್ಮ ಅನುಭವವನ್ನು ತಿಳಿಸಿದರು.KanCCh 366.5

    ಸಹೋದರ ಹೌಲ್ಯಾಂಡ್‌ರವರು ಅಡ್ಡೆಂಟಿಸ್ಟ್ ವಿಶ್ವಾಸಿಯಾದ ಬಡವನಾದ ಒಬ್ಬಮೀನುಗಾರನನ್ನು ಗಮನಿಸಿದರು. ಈ ಸಭೆಯಲ್ಲಿ ತನಗೆ ಸಲ್ಲಬೇಕಾದ ಗೌರವ ಸಿಕ್ಕುತ್ತಿಲ್ಲಹಾಗೂ ಸಹೋದರರಾದ ಹೌಲ್ಯಾಂಡ್ ಮತ್ತು ಇತರರು ತನಗಿಂತ ಶ್ರೇಷ್ಠರೆಂದುಎಣಿಸಿಕೊಳ್ಳುತ್ತಾರೆಂದು ಬಡಮೀನುಗಾರನ ಭಾವನೆಯಾಗಿತ್ತು. ಇದು ನಿಜವಲ್ಲ, ಆದರೆಅವನು ಆ ರೀತಿ ತಿಳಿದುಕೊಂಡಿದ್ದನು. ಈ ಕಾರಣದಿಂದ ಅವನು ಅನೇಕ ವಾರಗಳುಸಬ್ಬತ್ತಿನ ಆರಾಧನೆಗೆ ಬರಲಿಲ್ಲ.KanCCh 367.1

    ಇದರಿಂದ ಪೌಲ್ಯಾಂಡ್‌ರವರು ಮೀನುಗಾರನ ಮನೆಗೆ ಹೋದರು. ಅವನ ಮುಂದೆಮೊಣಕಾಲೂರಿ “ಸಹೋದರನೇ, ನಾನು ನಿನಗೇನು ಮಾಡಿದ್ದೇನೆ, ದಯೆಯಿಟ್ಟು ನನ್ನನ್ನುಕ್ಷಮಿಸು. ನಿನ್ನಬಗ್ಗೆ ನನಗೆ ಯಾವುದೇ ತಪ್ಪು ಭಾವನೆಯಿಲ್ಲ. ಆದರೆ ನೀನು ನನ್ನ ಬಗ್ಗೆತಪ್ಪುಭಾವನೆ ಇಟ್ಟುಕೊಂಡಿದ್ದೀ. ಮೊದಲು ನೀನು ನನ್ನೊಂದಿಗೆ ಮಾತಾಡುತ್ತಿದ್ದೆ,ಆದರೆ ಈಗ ಮಾತಾಡುತ್ತಿಲ್ಲ. ಇದಕ್ಕೆ ಕಾರಣವೇನೆಂದು ನಾನು ತಿಳಿದುಕೊಳ್ಳಬೇಕಾಗಿದೆ”ಎಂದು ಹೇಳಿದರು.KanCCh 367.2

    ಬಡಮೀನುಗಾರನು ಹೌಲ್ಯಾಂಡ್‌ರವರನ್ನು ಎಬ್ಬಿಸಲು ಪ್ರಯತ್ನಿಸಿದರೂ, ಅವರುಏಳಲಿಲ್ಲ. ಇದರಿಂದ ಅವನೇ ಸ್ವತಃ ಮೊಣಕಾಲೂರಿಕೊಂಡು, ಹೌಲ್ಯಾಂಡ್‌ರವರಿಗೆತನ್ನ ಮನಸ್ಸಿನಲ್ಲಿದ್ದಂತ ಬಾಲಿಶವಾದ ಅಭಿಪ್ರಾಯವನ್ನು ತಿಳಿಸಿ, ಈಗ ಅಂತಾ ಭಾವನೆತನ್ನಲ್ಲಿಲ್ಲ ಎಂದು ತಿಳಿಸಿದನು.KanCCh 367.3

    ಹೌಲ್ಯಾಂಡ್‌ರವರು ಈ ಘಟನೆಯನ್ನು ವಿವರಿಸಿದಾಗ, ಅವರ ಮುಖವು ಕರ್ತನಮಹಿಮೆಯಿಂದ ಹೊಳೆಯುತ್ತಿತ್ತು. ಅಷ್ಟರಲ್ಲಿ ಮೀನುಗಾರ ಸಹೋದರನು ತನ್ನಕುಟುಂಬದೊಡನೆ ಸಭೆಗೆ ಬಂದನು. ಅದೊಂದು ಅತ್ಯುತ್ತಮ ಆರಾಧನೆಯಾಗಿತ್ತು.KanCCh 367.4

    ನಮ್ಮಲ್ಲಿ ಕೆಲವರು ಸಹೋದರ ಹೌಲ್ಯಾಂಡ್‌ರವರ ಮಾದರಿ ಅನುಸರಿಸಿ ನಮ್ಮಬಗ್ಗೆಕೆಟ್ಟಭಾವನೆ ಹೊಂದಿರುವವರ ಬಳಿಗೆ ಹೋಗೋಣ. ಅವರಿಗೆ “ಸಹೋದರನೇ, ನಾನುನಿನಗೆ ಏನಾದರೂ ತಪ್ಪು ಮಾಡಿದ್ದಲ್ಲಿ, ದಯೆಯಿಟ್ಟು ನನ್ನನ್ನು ಕ್ಷಮಿಸು” ಎಂದು ಹೇಳಿದಲ್ಲಿ,ಸೈತಾನನ ಬಂಧನದಿಂದ ನಾವು ಮುಕ್ತರಾಗುತ್ತೇವೆ. ಅಲ್ಲದೆ ಆ ಸಹೋದರನನ್ನುಶೋಧನೆಗಳಿಂದ ಬಿಡಿಸಬಹುದು. ನಿಮ್ಮ ಹಾಗೂಇತರ ಸಹೋದರರ ನಡುವೆ ಯಾವುದೇಅಡ್ಡಿಬಾರದಂತೆ ನೋಡಿಕೊಳ್ಳಿ, ಸಹೋದರನಿಗೆ ನಿಮ್ಮ ಬಗ್ಗೆ ಏನಾದರೂ ಸಂಶಯವಿದ್ದಲ್ಲಿ,ಅದನ್ನು ನಿವಾರಿಸಲು ನೀವು ಎಲ್ಲಾ ಪ್ರಯತ್ನ ಮಾಡಬೇಕು. ನಾವು ಒಬ್ಬರನ್ನೊಬ್ಬರು ಸಹೋದರರಂತೆ ಪ್ರೀತಿಸಬೇಕೆಂದು ದೇವರು ಆಶಿಸುತ್ತಾನೆ. ಪ್ರೀತಿಯು ಪ್ರೀತಿಯನ್ನುಹುಟ್ಟಿಸುತ್ತದೆ.KanCCh 367.5

    ನಮ್ಮ ಸಹೋದರರನ್ನು ಪರಲೋಕದಲ್ಲಿ ಭೇಟಿ ಮಾಡಬೇಕೆಂದು ನೀವು ನಿರೀಕ್ಷಿಸುವಿರಾ?ಈ ಲೋಕದಲ್ಲಿ ನಾವು ಅವರೊಂದಿಗೆ ಶಾಂತಿ ಹಾಗೂ ಸೌಹಾರ್ದತೆಯಿಂದ ಜೀವಿಸಿದಲ್ಲಿಮಾತ್ರ, ಪರಲೋಕದಲ್ಲಿಯೂ ಅವರೊಂದಿಗೆ ಜೀವಿಸಬಹುದು. ಈ ಲೋಕದಲ್ಲಿ ನಾವುಆ ಸಹೋದರರೊಂದಿಗೆ ಸಮಾಧಾನದಿಂದ ಜೀವಿಸದೆ, ಯಾವಾಗಲೂ ಜಗಳ, ಕಲಹಮಾಡುತ್ತಿದ್ದಲ್ಲಿ, ಪರಲೋಕದಲ್ಲಿ ಅವರೊಂದಿಗೆ ಜೀವಿಸಲು ಹೇಗೆ ಸಾಧ್ಯ? ಸಹೋದರರನಡುವೆ ಭಿನ್ನಾಭಿಪ್ರಾಯ ಹಾಗೂ ವೈಮನಸ್ಸು ಉಂಟಾಗುವಂತೆ ಮಾಡಿ ಅವರನ್ನುಬೇರ್ಪಡಿಸುವಂತ ಕೆಲಸ ಮಾಡುತ್ತಿರುವವರಲ್ಲಿ, ಒಂದು ಸಂಪೂರ್ಣ ಬದಲಾವಣೆಬೇಕಾಗಿದೆ. ಕ್ರಿಸ್ತನ ಪ್ರೀತಿಯು ನಮ್ಮ ಹೃದಯಗಳನ್ನು ಕರಗಿಸಿ, ಅಂಕೆಯಲ್ಲಿಡಬೇಕು.ಆತನು ಶಿಲುಬೆಯಲ್ಲಿ ಸಾಯುತ್ತಿರುವಾಗ, ತೋರಿಸಿದಂತ ಪ್ರೀತಿಯನ್ನು ನಾವುಬೆಳೆಸಿಕೊಳ್ಳಬೇಕು. ರಕ್ಷಕನ ಹತ್ತಿರ ಬರಬೇಕಾದ ಅಗತ್ಯವಿದೆ. ಹೆಚ್ಚಾದ ಪ್ರಾರ್ಥನೆ ಮೂಲಕ,ದೃಢನಂಬಿಕೆ ಬೆಳೆಸಿಕೊಳ್ಳಬೇಕು. ನಾವು ಅನುಕಂಪವೂ, ಕರುಣೆಯೂ ಹಾಗೂ ಹೆಚ್ಚಾದಸೌಜನ್ಯವುಳ್ಳವರೂ ಆಗಿರಬೇಕು. ನಾವು ಈ ಲೋಕದಲ್ಲಿ ಒಂದುಸಾರಿ ಮಾತ್ರ ಜೀವಿಸುತ್ತೇವೆ.ಅಂದಮೇಲೆ ನಮ್ಮ ಒಡನಾಡಿಗಳಿಗೆ ಕ್ರಿಸ್ತನಂತ ಒಳ್ಳೆಗುಣಗಳನ್ನು ನಾವುತೋರಿಸಬೇಕಾಗಿದೆಯಲ್ಲವೇ?KanCCh 368.1

    ಕಠಿಣವಾದ ನಮ್ಮ ಹೃದಯಗಳು ಮೃದುವಾಗಬೇಕು. ಪರಿಪೂರ್ಣ ಐಕ್ಯತೆಯಿಂದಕ್ರೈಸ್ತರೆಲ್ಲರೂ ಒಂದಾಗಬೇಕು. ಅಲ್ಲದೆ ನಜರೇತಿನ ಕ್ರಿಸ್ತ ಯೇಸುವಿನ ಅಮೂಲ್ಯ ರಕ್ತದಿಂದನಾವು ಕೊಂಡುಕೊಳ್ಳಲ್ಪಟ್ಟಿದ್ದೇವೆಂಬುದನ್ನು ಅರಿಯುವುದು ಅಗತ್ಯವಾಗಿದೆ. ನಾವುಪ್ರತಿಯೊಬ್ಬರೂ ಸಹ “ಕ್ರಿಸ್ತನು ನನಗಾಗಿ ತನ್ನ ಪ್ರಾಣ ಕೊಟ್ಟನು. ಆತನು ನನ್ನನ್ನುಅಂಗೀಕರಿಸಿಕೊಳ್ಳಲು ಸಿದ್ಧನಾಗಿದ್ದಾನೆ. ತನ್ನ ಪ್ರಾಣವನ್ನೇ ನನಗಾಗಿಕೊಟ್ಟು ನನ್ನ ಮೇಲೆತನ್ನ ಪ್ರೀತಿಯನ್ನು ತೋರಿಸಿದ ಕ್ರಿಸ್ತನ ಪ್ರೀತಿಯನ್ನುನಾನು ಜಗತ್ತಿನ ಇತರರಿಗೆತೋರಿಸಿಕೊಡಬೇಕಾಗಿದೆ” ಎಂದು ಹೇಳಬೇಕು. ದೇವರು ನ್ಯಾಯವಂತನೆಂದು ತೋರಿಸಿಕೊಡಲು ಕ್ರಿಸ್ತನು ನನ್ನ ಭಾರವನ್ನು ಶಿಲುಬೆಯಮೇಲೆ ಹೊತ್ತುಕೊಂಡನು. ಕ್ರಿಸ್ತನಿಗೆತಮ್ಮನ್ನು ಒಪ್ಪಿಸಿಕೊಡುವ ಎಲ್ಲರಿಗೂ ನಿತ್ಯಜೀವ ದೊರೆಯುತ್ತದೆ.KanCCh 368.2

    Larger font
    Smaller font
    Copy
    Print
    Contents