Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಒಗ್ಗಟ್ಟಿನಲ್ಲಿ ಬಲವಿದೆ

    ಒಗ್ಗಟ್ಟಿಗಾಗಿ ನಾವೆಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಅದಕ್ಕಾಗಿ ಪ್ರಾರ್ಥಿಸಿಹಾಗೂ ಅದಕ್ಕಾಗಿ ಶ್ರಮವಹಿಸಿ. ಇದು ನಮಗೆ ಆತ್ಮೀಕ ಆರೋಗ್ಯ ಕೊಡುತ್ತದೆ,ಆಲೋಚನೆಗಳನ್ನು ಉನ್ನತಗೊಳಿಸುತ್ತದೆ ಹಾಗೂ ನಮ್ಮ ಗುಣಸ್ವಭಾವಗಳು ಶ್ರೇಷ್ಟವಾಗುತ್ತವೆ.ಅಲ್ಲದೆ ಕೆಟ್ಟತನ ಹಾಗೂ ಸ್ವಾರ್ಥವನ್ನು ಗೆಲ್ಲಲು ಬೇಕಾದ ಸಾಮರ್ಥ್ಯ ನೀಡುತ್ತದೆ ಮತ್ತು ಪರಲೋಕದ ಬಗ್ಗೆ ಒಲವುಳ್ಳವರಾಗುವಂತೆ ಮಾಡುತ್ತದೆ. ನಮ್ಮನ್ನು ಪ್ರೀತಿಸಿ ನಮಗಾಗಿತನ್ನ ಪ್ರಾಣವನ್ನೇ ಕೊಟ್ಟ ಕ್ರಿಸ್ತನಮೂಲಕ ನಾವು ಜಯಶಾಲಿಗಳಾಗುತ್ತೇವೆ. ನಿಮ್ಮೆಲ್ಲಾಕೆಟ್ಟ ಗುಣಗಳನ್ನು ತ್ಯಜಿಸಿಬಿಡಿ, ಇತರರನ್ನು ನಿಮಗಿಂತ ಶ್ರೇಷ್ಠರೆಂದು ಎಣಿಸಿ. ಈರೀತಿಯಾಗಿ ನೀವು ಕ್ರಿಸ್ತನಲ್ಲಿ ಒಂದಾಗುವಿರಿ. ಪರಲೋಕ ಮತ್ತು ಪಾಪಮಾಡದ ಇತರಲೋಕಗಳು, ಕ್ರೈಸ್ತಸಭೆ ಹಾಗೂ ಜಗತ್ತಿನಮುಂದೆ ನೀವು ದೇವರ ಮಕ್ಕಳಾಗಿದ್ದೇವೆಂದುಸಂದೇಹಕ್ಕೆ ಆಸ್ಪದವಿಲ್ಲದಂತೆ ಸಾಕ್ಷಿಗಳಾಗಿರುವಿರಿ. ನಿಮ್ಮ ಮಾದರಿಯಿಂದ ದೇವರಿಗೆಮಹಿಮೆಯಾಗುವುದು.KanCCh 368.3

    ದೇವಜನರ ಹೃದಯಗಳು ಕ್ರೈಸ್ತ ಪ್ರೀತಿಯಲ್ಲಿ ಒಟ್ಟಾಗಿ ಬಂಧಿಸಲ್ಪಟ್ಟಿರುವ ಅದ್ಭುತವನ್ನುಜಗತ್ತು ನೋಡುವ ಅಗತ್ಯವಿದೆ. ಅವರು ಪರಲೋಕದಲ್ಲಿ ಕ್ರಿಸ್ತನೊಂದಿಗೆ ಒಟ್ಟಾಗಿಕುಳಿತಿರುವುದನ್ನು ಲೋಕವು ನೋಡಬೇಕಾಗಿದೆ. ದೇವರನ್ನು ಪ್ರೀತಿಸಿ ಆತನನ್ನುಸೇವಿಸುವವರಿಗೆ ದೇವರಸತ್ಯವು ಏನು ಮಾಡುತ್ತದೆಂಬುದನ್ನು ನಿಮ್ಮಜೀವನದ ಮೂಲಕಸಾಕ್ಷಿಯಾಗಿ ನೀವು ತೋರಿಸಬಲ್ಲಿರಾ? ನೀವು ಏನು ಮಾಡಬಲ್ಲಿರೆಂದು ದೇವರಿಗೆತಿಳಿದಿದೆ. ನೀವು ದೈವೀಕ ಸ್ವಭಾವದಲ್ಲಿ ಪಾಲುಗಾರರಾದಲ್ಲಿ, ದೈವೀಕಪ್ರೀತಿಯು ನಿಮಗೇನುಮಾಡಬಹುದೆಂದು ಆತನಿಗೆ ತಿಳಿದಿದೆ.KanCCh 369.1

    “ಸಹೋದರರೇ, ನಿಮ್ಮೆಲ್ಲರಮಾತು ಒಂದೇಆಗಿರಬೇಕು; ನಿಮ್ಮಲ್ಲಿ ಭೇದಗಳಿರಬಾರದು.ನೀವು ಒಂದೇಮನಸ್ಸು, ಒಂದೇಅಭಿಪ್ರಾಯವೂ ಉಳ್ಳವರಾಗಿದ್ದು ಹೊಂದಿಕೆಯಿಂದಿರಬೇಕುಎಂಬುದಾಗಿ ನಾನು ನಮ್ಮ ಕರ್ತನಾದ ಯೇಸುಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ“(1 ಕೊರಿಂಥ 1:10).KanCCh 369.2

    ಐಕ್ಯತೆಯಲ್ಲಿ ಬಲವಿದೆ, ಅನೈಕ್ಯತೆಯು ದೌರ್ಬಲ್ಯವಾಗಿದೆ. ವರ್ತಮಾನದ ಸತ್ಯದಲ್ಲಿವಿಶ್ವಾಸವಿಟ್ಟಿರುವವರು ಐಕ್ಯತೆ ಹೊಂದಿದ್ದಲ್ಲಿ, ಇತರರ ಮೇಲೆ ಬಹಳ ಪರಿಣಾಮಕಾರಿಯಾದಪ್ರಭಾವ ಬೀರುವರು. ಸೈತಾನನಿಗೆ ಇದು ಚೆನ್ನಾಗಿ ತಿಳಿದಿದೆ. ದೇವಜನರಲ್ಲಿ ಭಿನ್ನಾಭಿಪ್ರಾಯಮತ್ತು ದ್ವೇಷಭಾವನೆ ಉಂಟಾಗುವಂತೆ ಮಾಡಿ ದೇವರ ಸತ್ಯವು ಅವರಲ್ಲಿ ಯಾವುದೇಪರಿಣಾಮ ಬೀರದಂತೆ ಮಾಡಲು ಸೈತಾನನು ಹಿಂದೆಂದಿಗಿಂತಲೂ ಈಗ ಹೆಚ್ಚಿನದೃಢನಿರ್ಧಾರ ಮಾಡಿದ್ದಾನೆ.KanCCh 369.3

    *****