Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ-51 — ಕರ್ತನ ಪವಿತ್ರಭೋಜನ

    ದೇವಾಲಯದ ಆರಾಧನಾ ಸಂಕೇತಗಳು ಬಹಳ ಸರಳವಾಗಿದ್ದು, ಸ್ಪಷ್ಟವಾಗಿಅರ್ಥಮಾಡಿಕೊಳ್ಳಬಹುದಾಗಿದೆ ಹಾಗೂ ಅವುಗಳು ವಿವರಿಸುವ ಸತ್ಯಗಳು ನಮಗೆಬಹಳ ಪ್ರಾಮುಖ್ಯವಾಗಿವೆ.KanCCh 370.1

    ಅದು ಯೆಹೂದ್ಯರ ಎರಡು ಪ್ರಮುಖ ಹಬ್ಬಗಳ ಕಾಲವಾಗಿತ್ತು. ದೇವರ ನಿಷ್ಕಳಂಕಕುರಿಮರಿಯಾದ ಕ್ರಿಸ್ತನು ಪಾಪ ಪರಿಹಾರಕ್ಕಾಗಿ ತನ್ನನ್ನೇ ತಾನೇ ಬಲಿಯಾಗಿಅರ್ಪಿಸಬೇಕಾಗಿತ್ತು. ಅದರ ಮೂಲಕ ನಾಲ್ಕು ಸಾವಿರ ವರ್ಷಗಳಿಂದ ತನ್ನ ಮರಣವನ್ನುಸೂಚಿಸುತ್ತಿದ್ದ ಪ್ರತಿ ಮಾದರಿ (Antitype) ಹಾಗೂ ಸಾಂಪ್ರದಾಯಿಕ ಧಾರ್ಮಿಕಕ್ರಿಯಾವ್ಯವಸ್ಥೆಯನ್ನು ಮುಕ್ತಾಯಗೊಳಿಸುತ್ತಿದ್ದನು. ಆತನು ತನ್ನ ಶಿಷ್ಯರೊಂದಿಗೆ ಪಕ್ಕದಊಟಮಾಡಿದ ನಂತರ, ಅದಕ್ಕೆಬದಲಾಗಿ ತನ್ನ ಮಹಾತ್ಯಾಗದ ನೆನಪಿನಲ್ಲಿ ಒಂದುಸಂಸ್ಕಾರವನ್ನು ಸ್ಥಾಪಿಸಿದನು. ಯೆಹೂದ್ಯರ ರಾಷ್ಟ್ರೀಯ ಉತ್ಸವವಾಗಿದ್ದ ಪಕ್ಕಹಬ್ಬವುಇನ್ನೆಂದಿಗೂ ಆಚರಿಸದಂತೆ ಮುಕ್ತಾಯವಾಗಬೇಕಿತ್ತು. ಅಲ್ಲಿ ಕ್ರಿಸ್ತನುಸ್ಥಾಪಿಸಿದ ಸಂಸ್ಕಾರವನ್ನುಎಲ್ಲಾಕಾಲಗಳಲ್ಲಿಯೂ ಜಗತ್ತಿನಾದ್ಯಂತ ಇರುವ ಆತನ ಅನುಯಾಯಿಗಳುಆಚರಿಸಬೇಕಾಗಿತ್ತು.KanCCh 370.2

    ಇಸ್ರಾಯೇಲ್ಯರು ಐಗುಪ್ತದೇಶದ ಗುಲಾಮತನದಿಂದ ಬಿಡುಗಡೆಯಾದ ನೆನಪಿಗಾಗಿಪಸ್ಯಹಬ್ಬವು ಪ್ರತಿಷ್ಠಾಪಿಸಲ್ಪಟ್ಟಿತು. ಪ್ರತಿವರ್ಷವೂ ಇದನ್ನು ಆಚರಿಸುವಾಗ, ಅದರಮಹತ್ವವನ್ನು ಇಸ್ರಾಯೇಲ್ಯರು ತಮ್ಮ ಮಕ್ಕಳಿಗೆ ವಿವರಿಸಿ ಹೇಳಬೇಕೆಂದು ದೇವರುಅವರಿಗೆ ಆದೇಶಿಸಿದನು. ಈ ರೀತಿಯಲ್ಲಿ ಇಸ್ರಾಯೇಲ್ಯರು ಅದ್ಭುತವಾಗಿ ಐಗುಪ್ತದೇಶದಿಂದಬಿಡುಗಡೆಯಾದ ಘಟನೆಯು ಎಲ್ಲರ ಮನಸ್ಸಿನಲ್ಲಿಯೂ ಹೊಸಹೊಸತಾಗಿ ಇರಬೇಕಾಗಿತ್ತು.ಕರ್ತನಭೋಜನ ಸಂಸ್ಕಾರವು ಯೇಸುಕ್ರಿಸ್ತನ ಶಿಲುಬೆಯ ಮೇಲಿನ ಮರಣದಿಂದಪಾಪಿಗಳಾದ ನಮಗೆ ಉಂಟಾದ ಮಹಾಬಿಡುಗಡೆಯ ನೆನಪಿಗಾಗಿಆಚರಿಸಲುಕೊಡಲ್ಪಟ್ಟಿತು. ಆತನು ಮಹಾ ಅಧಿಕಾರದಿಂದಲೂ ಹಾಗೂ ಮಹಿಮೆಯಿಂದಲೂಎರಡನೇಸಾರಿ ಬರುವವರೆಗೆ ಈ ಪವಿತ್ರಸಂಸ್ಕಾರವನ್ನು ನಾವು ಆಚರಿಸಬೇಕು, ಇದುಆತನು ನಮಗಾಗಿ ಮಾಡಿದ ಮಹಾತ್ಯಾಗವನ್ನು ನಮ್ಮ ಮನಸ್ಸಿನಲ್ಲಿ ಸದಾಕಾಲವೂಹೊಸಹೊಸದಾಗಿ ನೆನಪಿಸುವ ಮುನ್ಸೂಚನೆಯಾಗಿದೆ.KanCCh 370.3

    ಕರ್ತನ ಪವಿತ್ರಭೋಜನಸಂಸ್ಕಾರದಲ್ಲಿ ಯಾರನ್ನೂ ಸಹ ಭಾಗವಹಿಸಬಾರದೆಂದುಹೇಳಬಾರದು. ಕ್ರಿಸ್ತನಮಾದರಿಯು ಇದನ್ನು ಸಮರ್ಥಿಸುತ್ತದೆ. ಬಹಿರಂಗವಾಗಿಪಾಪಮಾಡುವವನ ಸಹವಾಸ ಮಾಡಬಾರದೆಂದು ಪವಿತ್ರಾತ್ಮನು ಹೇಳುವುದು ನಿಜ (1ಕೊರಿಂಥ 5:11). ಆದರೆ ಇದಕ್ಕೆಮೀರಿ ನಾವುಯಾರಿಗೂ ತೀರ್ಪುಮಾಡಬಾರದು.ಇಂತಹ ಸಂಸ್ಕಾರಗಳಲ್ಲಿ ಯಾರು ಭಾಗವಹಿಸಬೇಕೆಂದು ತಿಳಿಸುವ ಹಕ್ಕನ್ನು ದೇವರುಯಾರಿಗೂ ಕೊಟ್ಟಿಲ್ಲ. ಹೃದಯದ ಆಲೋಚನೆಗಳನ್ನು ಮನುಷ್ಯರಲ್ಲಿ ಯಾರು ತಾನೇತಿಳಿಯಬಲ್ಲರು? ಗೋಧಿ ಹಾಗೂ ಹಣಜಿಯ ನಡುವಣ ವ್ಯತ್ಯಾಸ ಯಾರು ಮಾಡಬಲ್ಲರು?“ಪ್ರತಿ ಮನುಷ್ಯನು ತನ್ನನ್ನು ಪರೀಕ್ಷಿಸಿಕೊಂಡವನಾಗಿ ಆ ರೊಟ್ಟಿಯಲ್ಲಿ ತಕ್ಕೊಂಡುತಿನ್ನಲಿ, ಆ ಪಾತ್ರೆಯಲ್ಲಿ ಕುಡಿಯಲಿ” (1 ಕೊರಿಂಥ 11:28). “ಹೀಗಿರುವುದರಿಂದಯಾವನಾದರೂ ಅಯೋಗ್ಯವಾಗಿ ಕರ್ತನ ರೊಟ್ಟಿಯನ್ನು ತಿಂದರೆ, ಇಲ್ಲವೆ ಆತನಪಾತ್ರೆಯಲ್ಲಿ ಪಾನಮಾಡಿದರೆ, ಅವನು ಕರ್ತನ ದೇಹಕ್ಕೂ, ರಕ್ತಕ್ಕೂದ್ರೋಹಮಾಡಿದವನಾಗಿರುವನು“. “ಯಾಕೆಂದರೆ ಕರ್ತನದೇಹವೆಂದು ವಿವೇಚಿಸದೆ ತಿಂದುಕುಡಿಯುವವನು ಹಾಗೆ ತಿಂದು ಕುಡಿಯುವುದರಿಂದ ನ್ಯಾಯತೀರ್ಪಿಗೊಳಗಾಗುವನು“(1 ಕೊರಿಂಥ 11:27,29).KanCCh 370.4

    ಕೆಲವು ಅಯೋಗ್ಯರು ಕರ್ತನ ಭೋಜನದಲ್ಲಿ ಭಾಗವಹಿಸಿರಬಹುದು. ಈ ಕಾರಣನೀಡಿಇತರರು ಅದರಲ್ಲಿ ಭಾಗವಹಿಸದೆ ಇರಬಾರದು. ಕ್ರಿಸ್ತನ ಶಿಷ್ಯರಾದ ನಾವೆಲ್ಲರೂ ಈಸಂಸ್ಕಾರದಲ್ಲಿ ಎಲ್ಲರೊಂದಿಗೆ ಭಾಗವಹಿಸಬೇಕು. ಇದರಿಂದ ನಾವು ಕ್ರಿಸ್ತನನ್ನುಸ್ವಂತರಕ್ಷಕನೆಂದು ಅಂಗೀಕರಿಸಿದ್ದೇವೆಂದು ಸಾಕ್ಷಿ ಕೊಟ್ಟಂತಾಗುವುದು.KanCCh 371.1

    ಕ್ರಿಸ್ತನು ತನ್ನ ಶಿಷ್ಯರೊಂದಿಗೆ ರೊಟ್ಟಿಮುರಿಯುವ ಹಾಗೂ ದ್ರಾಕ್ಷಾರಸ ಕುಡಿಯುವುದರಮೂಲಕ ತಾನು ಅವರ ವಿಮೋಚಕನೆಂದು ಸ್ವತಃ ಹೊಣೆಯಾದನು. ಅವರಿಗೆ ಒಂದುನೂತನ ಒಡಂಬಡಿಕೆಮಾಡಿ, ಅದರ ಮೂಲಕ ತನ್ನನ್ನು ಅಂಗೀಕರಿಸುವವರು ದೇವರಮಕ್ಕಳಾಗುವ ಹಾಗೂ ತನ್ನೊಂದಿಗೆ ಸಹಬಾಧ್ಯಸ್ಥರಾಗುವ ಅಧಿಕಾರ ಕೊಟ್ಟನು. ಈಒಡಂಬಡಿಕೆಯಿಂದ (Covenant) ಈ ಜೀವಿತದಲ್ಲಿ ಹಾಗೂ ಮುಂದೆ ಬರಲಿರುವಪರಲೋಕದ ಜೀವಿತದಲ್ಲಿ ಪರಲೋಕದಿಂದ ಬರುವ ಆಶೀರ್ವಾದಗಳೆಲ್ಲವೂಅವರಿಗಾಗುತ್ತದೆ. ಈ ಒಡಂಬಡಿಕೆ ಅಂದರೆ ಕರಾರು ಕ್ರಿಸ್ತನ ರಕ್ತದಿಂದ ಅನುಮೋದಿಸಲ್ಪಡಬೇಕು. ಪವಿತ್ರ ಭೋಜನ ಸಂಸ್ಕಾರದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂಕ್ರಿಸ್ತನು ಪಾಪಿಗಳ ವಿಮೋಚನೆಗಾಗಿ ಮಾಡಿದ ಮಹಾತ್ಯಾಗವು ವೈಯಕ್ತಿಕವಾಗಿ ತಮಗೂಸಹಅನ್ವಯವಾಗುತ್ತದೆಂದು ತಿಳಿಯಬೇಕು.KanCCh 371.2

    Larger font
    Smaller font
    Copy
    Print
    Contents