Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಸೇವಕರ ಸೇವಕನು

    ಶಿಷ್ಯರು ಪಸ್ಕಆಚರಿಸುವ ಮೇಲುಪ್ಪರಿಗೆಗೆ ಹೋದಾಗ, ಅವರೆಲ್ಲರ ಹೃದಯಗಳುಅಸಮಾಧಾನ ಹಾಗೂ ಕೋಪದಿಂದ ತುಂಬಿತ್ತು. ಕ್ರಿಸ್ತನ ಎಡಗಡೆಯಲ್ಲಿ ಯೂದನುಕುಳಿತಿದ್ದನು; ಮತ್ತು ಯೋಹಾನನು ಬಲಗಡೆಯಲ್ಲಿ ತಿದ್ದನು. ಒಂದುವೇಳೆ ಅಧಿಕಾರದಲ್ಲಿಉನ್ನತಸ್ಥಾನವಿದ್ದಲ್ಲಿ, ಅದನ್ನು ಪಡೆದುಕೊಳ್ಳಲೇಬೇಕೆಂದು ಯೂದನು ನಿರ್ಧರಿಸಿದ್ದನು.ಅದು ಕ್ರಿಸ್ತನ ಪಕ್ಕದಲ್ಲಿ ಕುಳಿತುಕೊಳ್ಳುವುದೇ ಆಗಿದೆಯೆಂದು ದ್ರೋಹಿಯಾದ ಯೂದನಎಣಿಕೆಯಾಗಿತ್ತು.KanCCh 371.3

    ಶಿಷ್ಯರ ನಡುವೆ ಮತ್ತೊಂದು ಭಿನ್ನಾಭಿಪ್ರಾಯವಿತ್ತು. ಯೆಹೂದ್ಯರ ಪಸ್ಯಹಬ್ಬದಲ್ಲಿಭಾಗವಹಿಸುವ ಅತಿಥಿಗಳ ಕಾಲುಗಳನ್ನು ಸೇವಕನು ತೊಳೆಯುವುದು ರೂಢಿಯಲ್ಲಿತ್ತು.ಈ ಸಮಯದಲ್ಲಿಯೂ ಸಹ ಅದಕ್ಕೋಸ್ಕರ ಬೇಕಾದ ಎಲ್ಲಾ ಸಿದ್ಧತೆ ಮಾಡಲಾಗಿತ್ತು.ಪಾದತೊಳೆಯಲು ಬೇಕಾದ ನೀರು, ಬೋಗುಣಿ, ಕೈಪಾವುಡ (ಟವಲ್) ಎಲ್ಲವೂ ಅಲ್ಲಿಸಿದ್ಧವಾಗಿ ಇಡಲ್ಪಟ್ಟಿದ್ದವು. ಆದರೆ ಅಲ್ಲಿ ಯಾವ ಸೇವಕನೂ ಇರಲಿಲ್ಲ. ಆದುದರಿಂದಶಿಷ್ಯರು ಈ ಸೇವೆ ಮಾಡಬೇಕಾಗಿತ್ತು. ಆದರೆ ಅವರಲ್ಲಿ ಅಹಂಕಾರವು ತುಂಬಿದ್ದರಿಂದತಾವು ಯಾರೂಸಹ ಸೇವಕನಂತೆ ಬೇರೆಯವರ ಕಾಲು ತೊಳೆಯಬಾರದೆಂದುನಿರ್ಧರಿಸಿದ್ದರು. ತಾವು ಅಲ್ಲಿ ಮಾಡಬೇಕಾದ ಕಾರ್ಯವೂ ಯಾವುದೂ ಇಲ್ಲವೆಂಬದೃಢವಾದ ಉದಾಸೀನತೆಯಿಂದ ಅವರೆಲ್ಲರೂ ಕುಳಿತಿದ್ದರು. ಶಿಷ್ಯರು ತಮ್ಮ ಮೌನದಮೂಲಕ ತಮ್ಮನ್ನು ತಗ್ಗಿಸಿಕೊಳ್ಳಲು ನಿರಾಕರಿಸಿದ್ದರು.KanCCh 372.1

    ಶಿಷ್ಯರು ಇತರರ ಪಾದಗಳನ್ನು ತೊಳೆಯಲು ಯಾವುದೇ ಪ್ರಯತ್ನ ಮಾಡಲಿಲ್ಲ.ಅವರೇನುಮಾಡುತ್ತಾರೆಂದು ನೋಡಲು ಕ್ರಿಸ್ತನು ಸ್ವಲ್ಪ ಸಮಯ ಕಾದುಕೊಂಡಿದ್ದನು.ಅನಂತರ ದೇವಾಧಿದೇವನೂ, ದೈವೀಕಗುರುವಾದ ಆತನು ಎದ್ದು ಒಂದು ಕೈಪಾವುಡವನ್ನುತನ್ನ ನಡುವಿಗೆಕಟ್ಟಿಕೊಂಡನು. ಆಶ್ಚರ್ಯಚಕಿತರಾದ ಶಿಷ್ಯರು, ಮುಂದೇನಾಗುವುದೋಎಂದು ಆಸಕ್ತಿಯಿಂದ ಮೌನವಾಗಿ ಗಮನಿಸುತ್ತಿದ್ದರು. “ಆತನು ಬೋಗುಣಿಯಲ್ಲಿನೀರು ಹಾಕಿಕೊಂಡು ಶಿಷ್ಯರ ಕಾಲುಗಳನ್ನು ತೊಳೆಯುವುದಕ್ಕೂ, ನಡುವಿಗೆ ಕಟ್ಟಿಕೊಂಡಿದ್ದಕೈಪಾವುಡದಿಂದ ಒರಸುವುದಕ್ಕೂ ಪ್ರಾರಂಭಿಸಿದನು (ಯೋಹಾನ 13:4,5). ಕ್ರಿಸ್ತನ ಈಸೇವೆ ಶಿಷ್ಯರ ಕಣ್ಣುಗಳನ್ನು ತೆರೆಸಿತು. ಅಪಾರವಾದ ನಾಚಿಕೆ ಮತ್ತು ಅವಮಾನವುಅವರಿಗಾಯಿತು. ಕ್ರಿಸ್ತನು ಇದರ ಮೂಲಕ ಮೌನವಾಗಿ ಅವರನ್ನುಗದರಿಸಿದಂತಾಯಿತು.ಅವರಲ್ಲಿ ಹೊಸ ಬದಲಾವಣೆ ಉಂಟಾಯಿತು.KanCCh 372.2

    ಕ್ರಿಸ್ತನು ಶಿಷ್ಯರಿಗೆ ತನ್ನ ಪ್ರೀತಿಯನ್ನು ಹೀಗೆ ವ್ಯಕ್ತಪಡಿಸಿದನು. ಅವರ ಸ್ವಾರ್ಥಮನೋಭಾವನೆಯಿಂದ ಆತನಿಗೆ ಬಹಳ ದುಃಖವಾಯಿತು. ಆದರೆ ಈ ವಿಷಯದಬಗ್ಗೆ ಕ್ರಿಸ್ತನು ಅವರೊಂದಿಗೆ ಯಾವುದೇ ವಾದ ವಿವಾದಕ್ಕಿಳಿಯಲಿಲ್ಲ. ಬದಲಾಗಿ ಅವರುಎಂದೂ ಮರೆಯಲಾಗದಂತ ಒಂದು ಮಾದರಿತೋರಿಸಿದನು. ಅವರ ಮೇಲೆ ಆತನಿಗಿದ್ದಪ್ರೀತಿಯನ್ನು ಅಷ್ಟು ಸುಲಭವಾಗಿ ಅಳಿಸಲಾಗಲಿಲ್ಲ. ತಾನು ದೇವರಿಂದ ಬಂದವನೂಹಾಗೂ ದೇವರ ಬಳಿಗೆ ಹೋಗುತ್ತೇನೆಂದೂ ಮತ್ತು ದೇವರು ಎಲ್ಲವನ್ನೂ ತನಗೆಒಪ್ಪಿಸಿಕೊಟ್ಟಿದ್ದಾನೆಂದು ಕ್ರಿಸ್ತನಿಗೆ ತಿಳಿದಿತ್ತು. ತನ್ನ ದೈವೀಕತ್ವದ ಬಗ್ಗೆ ಕ್ರಿಸ್ತನಿಗೆ ಸಂಪೂರ್ಣಅರಿವಿತ್ತು. ಆದರೆ ಆತನು ತನ್ನ ರಾಜಕಿರೀಟ ಹಾಗೂ ರಾಜವಸ್ತ್ರಗಳನ್ನು ತೆಗೆದಿಟ್ಟುದಾಸನ ರೂಪವನ್ನು ಧರಿಸಿದನು. ಸೇವಕನಂತೆ ನಡುವಿಗೆ ಪಾವುಡ ಕಟ್ಟಿಕೊಂಡುಸೇವೆಮಾಡಿದ್ದು, ಕ್ರಿಸ್ತನು ಈ ಲೋಕದಲ್ಲಿದ್ದಾಗ ಮಾಡಿದ ಕೊನೆಯ ಕಾರ್ಯಗಳಲ್ಲಿಒಂದಾಗಿದೆ.KanCCh 372.3

    ಯೇಸುವು ತನ್ನ ಶಿಷ್ಯರ ಪಾದಗಳನ್ನು ತೊಳೆದಿದ್ದರೂ, ಆತನ ಗೌರವ ಇದರಿಂದಕಡಿಮೆಯಾಗಲಿಲ್ಲವೆಂದು ಅವರು ತಿಳಿಯಬೇಕೆಂದು ಬಯಸಿದ್ದನು. “ನೀವು ನನ್ನನ್ನುಗುರುವೆಂದೂ, ಕರ್ತನೆಂದೂ ಕರೆಯುತ್ತೀರಿ; ನೀವು ಕರೆಯುವುದು ಸರಿ, ನಾನುಅಂತವನೇ ಹೌದು” ಎಂದು ಕ್ರಿಸ್ತನು ತನ್ನ ಶಿಷ್ಯರಿಗೆ ಹೇಳಿದ್ದಾನೆ (ಯೋಹಾನ 13:13).ದೇವಾಧಿದೇವನೂ ಅಗಮ್ಯನೂ ಆದ ಆತನು, ಸೇವಕರು ಮಾಡುವ ಕೆಲಸಕ್ಕೆ ಗಾಂಭೀರ್ಯಮತ್ತು ಪ್ರಾಮುಖ್ಯತೆ ತಂದನು. ಸೃಷ್ಟಿಕರ್ತನೂ, ಮಹೋನ್ನತನೂ ಆದ ಕ್ರಿಸ್ತನುಪವಿತ್ರಭೋಜನಕ್ಕೆ ಪ್ರಾಮುಖ್ಯತೆ ಹಾಗೂ ಶೋಭೆ ತಂದನು. ವಿಶ್ವದಲ್ಲಿ ಯಾರೂಸಹಆತನಂತೆ ಉನ್ನತ ಸ್ಥಾನಕ್ಕೇರಿಸಲ್ಪಟ್ಟಿಲ್ಲ. ಆದರೂ ಆತನು ದೀನಭಾವದಿಂದ ಶಿಷ್ಯರಕಾಲುಗಳನ್ನು ತೊಳೆದನು. ಮನುಷ್ಯ ಸಹಜ ಸ್ವಾರ್ಥದಿಂದ ಅವರು ದಾರಿ ತಪ್ಪಿಹೋಗದಂತೆ,ಕ್ರಿಸ್ತನು ದೀನಭಾವನೆಯ ಮಾದರಿಯನ್ನು ಸ್ವತಃ ತೋರಿಸಿದನು. ಇಂತಹ ಮಹಾಸೇವೆಯವಿಷಯವನ್ನು ಮನುಷ್ಯರ ವಶಕ್ಕೆ ಒಪ್ಪಿಸಲಿಲ್ಲ. ಕರ್ತನ ಪವಿತ್ರ ಭೋಜನ ಸಂಸ್ಕಾರವುಎಷ್ಟೊಂದು ಮಹತ್ವವುಳ್ಳದ್ದಾಗಿದೆ ಎಂದು ಅವರಿಗೆ ಮನವರಿಕೆ ಮಾಡಲು ದೇವರಿಗೆಸಮಾನನೂ, ಸ್ವತಃ ದೇವರೂಆದ ಕ್ರಿಸ್ತನು ತನ್ನಶಿಷ್ಯರ ಸೇವಕನಾದನು. ಅವರು ತಮ್ಮಲ್ಲಿದೊಡ್ಡವರು ಯಾರು? ಎಂದು ವಾಗ್ವಾದ ಮಾಡುತ್ತಿದ್ದರು. ಆದರೆ ಎಲ್ಲರೂ ಅಡ್ಡಬೀಳುವ, ದೇವದೂತರಿಂದ ಆರಾಧಿಸಲ್ಪಡುವ, ಕರ್ತನೆಂದು ಯುಗಯುಗಾಂತರಗಳಲ್ಲಿಯೂಸ್ತೋತ್ರಕ್ಕೆ ಅರ್ಹನಾದವನು ತನ್ನನ್ನು ಗುರುವೆಂದು ಕರೆದ ಶಿಷ್ಯರಪಾದಗಳನ್ನು ತೊಳೆದನು.ತನ್ನನ್ನು ಹಿಡುಕೊಡಲಿರುವ ದ್ರೋಹಿಯಾದ ಯೂದನ ಕಾಲುಗಳನ್ನೂ ಸಹ ಸ್ವಾಮಿತೊಳೆದನು.KanCCh 373.1

    ಶಿಷ್ಯರ ಕಾಲುಗಳನ್ನು ತೊಳೆದ ನಂತರ ಆತನು “ನಾನು ನಿಮಗೆಮಾಡಿದ ಮೇರೆಗೆನೀವುಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ” ಎಂದು ಹೇಳಿದನು(ಯೋಹಾನ 13:14,15). ಈ ಮಾತುಗಳ ಮೂಲಕ ಕ್ರಿಸ್ತನು ಸತ್ಕಾರಮಾಡಬೇಕೆಂಬಕಟ್ಟಪ್ಪಣೆ ವಿಧಿಸಿದನು. ಕ್ರಿಸ್ತನು ಇಲ್ಲಿ ಒಂದು ಧಾರ್ಮಿಕ ವಿಧಿವಿಧಾನವನ್ನು ಸ್ಥಾಪಿಸಿದನು.ನಮ್ಮ ಕರ್ತನು ಮಾಡಿದ ಈ ಸೇವೆಯಿಂದ ಈ ಸಂಸ್ಕಾರವು ಒಂದು ಪರಿಶುದ್ಧವಾದಸಂಸ್ಕಾರವಾಯಿತು. ಕ್ರಿಸ್ತನ ದೀನತೆ ಹಾಗೂ ಸೇವೆಯ ಈ ಮಾದರಿಯನ್ನು ಸದಾಕಾಲಕ್ಕೆನೆನಪಿನಲ್ಲಿಟ್ಟುಕೊಳ್ಳುವಂತೆ ಶಿಷ್ಯರು ಈ ಆಚರಣೆಯನ್ನು ಅನುಸರಿಸಬೇಕಾಗಿತ್ತು.KanCCh 373.2

    Larger font
    Smaller font
    Copy
    Print
    Contents