Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸುವಾರ್ತೆಯ ಮಾರ್ಗದರ್ಶಕ ಸೇವೆ

    ವೈದ್ಯರು ಯಾವ ದೇಶಕ್ಕೆ, ಯಾವ ಪ್ರದೇಶಕ್ಕೆ ಸೇವೆ ಮಾಡಲು ಹೋಗುತ್ತಾರೋ,ಅಲ್ಲಿ ಮೊದಲನೆಯದಾಗಿ ಜನರ ಶಾರೀರಿಕ ಅಭ್ಯಾಸಗಳು, ಕೆಟ್ಟಚಟಗಳು ಇವುಗಳನ್ನುಸರಿಪಡಿಸುವ ಮೂಲಕ ವೈದ್ಯಕೀಯ ಸೇವೆ ಆರಂಭಿಸಬೇಕು. ಈ ಸೇವೆಯು ಮನುಷ್ಯರಿಗೆಕಷ್ಟಸಂಕಟಗಳಿಂದ ಬಿಡಿಸುವಂತ ಸುವಾರ್ತೆಯಾಗಬೇಕು. ಇದು ಸುವಾರ್ತಾಸೇವೆಯಮಾರ್ಗದರ್ಶಕವೂ ಹಾಗೂ ಮೊದಲನೆಯ ಕಾರ್ಯವೂ ಆಗಿದೆ. ಇದು ಸುವಾರ್ತೆಯನ್ನುಕೈಕೊಂಡು ನಡೆಯುವಂತದ್ದಾಗಿದ್ದು, ಕ್ರಿಸ್ತನ ಅನುಕಂಪವನ್ನು ತಿಳಿಸುತ್ತದೆ. ಈ ಸೇವೆಗೆಜಗತ್ತಿನಾದ್ಯಂತ ಅವಶ್ಯಕತೆಯಿದೆ ಹಾಗೂ ಆಹ್ವಾನವಿದೆ. ವೈದ್ಯಕೀಯ ಸುವಾರ್ತಾಸೇವೆಯಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಂಡು, ತಕ್ಷಣವೇ ಹೊಸ ಸ್ಥಳಗಳಿಗೆ ಹೋಗಲುದೇವರು ಅನುಗ್ರಹ ತೋರುತ್ತಾನೆ. ಆಗ ಈ ಸೇವೆಯು ದೇವರ ಕ್ರಮದಂತೆ ನಡೆಯುತ್ತದೆಹಾಗೂ ರೋಗಿಗಳು ಗುಣವಾಗುತ್ತಾರೆ ಮತ್ತು ಬಡವರು ಹಾಗೂ ಬಾಧೆಗೊಳಗಾದವರುಆಶೀರ್ವಾದ ಹೊಂದುತ್ತಾರೆ.KanCCh 387.2

    ಅಂತಹ ಸಂದರ್ಭದಲ್ಲಿ ಅನೇಕರು ವೈದ್ಯರುಗಳ ಮೇಲೆ ಪೂರ್ವಗ್ರಹಪೀಡಿತರಾಗಿದ್ವೇಷಸಾಧಿಸುತ್ತಾರೆ. ಆದರೆ ಸ್ವದೇಶ ಹಾಗೂ ವಿದೇಶಗಳಲ್ಲಿ ನೀವು ಊಹಿಸಿದ್ದಕ್ಕಿಂತಲೂಹೆಚ್ಚಿನ ಆತ್ಮಗಳನ್ನು ದೇವರು ಸತ್ಯದ ಮಾರ್ಗಕ್ಕೆ ಸಿದ್ಧಪಡಿಸಿರುತ್ತಾನೆ. ಆಗ ದೈವೀಕಸಂದೇಶವನ್ನು ಸಾರಿದಾಗ ಜನರುಅತ್ಯಂತ ಆನಂದದಿಂದ ಅಂಗೀಕರಿಸುತ್ತಾರೆ. ಶರೀರಕ್ಕೂತೋಳುಗಳಿಗೂ ಹೇಗೆ ಸಂಬಂಧವಿದೆಯೋ, ಸುವಾರ್ತಾಸೇವೆಗೂ ಮತ್ತು ವೈದ್ಯಕೀಯಸುವಾರ್ತಾಸೇವೆಗೂಅದೇರೀತಿಯಾದ ಸಂಬಂಧವಿದೆ. ಸುವಾರ್ತಾಸೇವೆಯುರೋಗಿಗಳಿಗೂ ಮತ್ತುಆರೋಗ್ಯವಂತರಿಗೂ ಸತ್ಯವನ್ನು ಸಾರುವ ಸಂಸ್ಥೆಯಾಗಿದೆ.ಇದು ಶರೀರವಾಗಿದೆ ಹಾಗೂ ವೈದ್ಯಕೀಯ ಸೇವೆಯು ತೋಳುಗಳಂತೆ (Arm)ಕ್ರಿಸ್ತನು ಎಲ್ಲದಕ್ಕೂ ತಲೆಯಾಗಿದ್ದಾನೆ. ಶ್ರೀಮತಿ ವೈಟಮ್ಮನವರಿಗೆ ದೇವರುಈ ರೀತಿಯಾದವಿಷಯವನ್ನು ದರ್ಶನದಲ್ಲಿ ದಯಪಾಲಿಸಿದನು.KanCCh 387.3

    ಎಲ್ಲಾ ಇತಿಮಿತಿಗಳ ನಡುವೆಯೂ ನಮಗೆ ದೊರೆಯುವ ಸೌಕರ್ಯ, ಸೌಲಭ್ಯಗಳನ್ನೇಉಪಯೋಗಿಸಿಕೊಂಡು ವೈದ್ಯಕೀಯ ಸೇವೆ ಆರಂಭಿಸಬೇಕು. ಈ ರೀತಿಯಲ್ಲಿ ಸತ್ಯವೇದವನ್ನುಜನರಿಗೆ ತಿಳಿಸುವ ಮಾರ್ಗ ದೊರೆಯುತ್ತದೆ. ರೋಗದ ಚಿಕಿತ್ಸೆಯಲ್ಲಿ ನಿಮಗೆ ತಿಳಿದಿರುವಂತಎಲ್ಲವನ್ನೂ ಅನುಸರಿಸಿ. ಈ ರೀತಿಯಾಗಿ ರೋಗಿಗಳ ಕಷ್ಟಸಂಕಟಗಳು ಎಷ್ಟೋ ಮಟ್ಟಿಗೆಪರಿಹಾರವಾಗುತ್ತವೆ ಮತ್ತು ಆತ್ಮೀಕವಾಗಿ ಹಸಿವೆಯಿಂದಿರುವ ಆತ್ಮಗಳಿಗೆ ಜೀವದ ರೊಟ್ಟಿಹಂಚುವಂತ ಅವಕಾಶ ನಿಮಗೆ ದೊರೆಯುತ್ತದೆ.KanCCh 388.1