Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ವೈದ್ಯಕೀಯ ಸೇವೆಯು ಸತ್ಯಕ್ಕೆ ಆಹ್ವಾನಿಸುತ್ತದೆ

  ಸುವಾರ್ತಾಸೇವೆ ಮಾಡುವುದಲ್ಲದೆ, ರೋಗಿಗಳಿಗೆ ಶುಕ್ರೂಷೆ ಮಾಡುವ ದಾದಿಯರು(ನರ್ಸ್) ಅನೇಕರೀತಿಯಲ್ಲಿ ಸೇವೆಮಾಡಬಹುದು. ಉತ್ತಮ ತರಬೇತಿಪಡೆದ ದಾದಿಯರುಕುಟುಂಬಗಳನ್ನು ಸಂಧಿಸಿ ಅವರಲ್ಲಿ ಸತ್ಯದ ಬಗ್ಗೆ ಆಸಕ್ತಿ ಉಂಟಾಗುವಂತೆ ಮಾಡಬಹುದು.ಯಾವುದೇಸಮುದಾಯದಲ್ಲಿಯೂ, ಧರ್ಮದಲ್ಲಿ ನಂಬಿಕೆಯಿಲ್ಲದಿರುವ ಸಾಕಷ್ಟುಜನರಿದ್ದಾರೆ. ಅಂತವರಮನೆಗಳಿಗೆ ಭೇಟಿಕೊಟ್ಟು ಸುವಾರ್ತೆಯನ್ನು ಅವರಿಗೆ ತಿಳಿಸಬಹುದು.ಅನೇಕ ಸಂದರ್ಭಗಳಲ್ಲಿ ಅವರ ಶಾರೀರಿಕ ಅಗತ್ಯಗಳಾದ ಆಹಾರ, ಬಟ್ಟೆ, ಆರೋಗ್ಯದಸಮಸ್ಯೆಗಳು ಮುಂತಾದ ಕೊರತೆಗಳನ್ನು ನಿವಾರಿಸುವುದು ಅವರಿಗೆ ಕ್ರಿಸ್ತನಬಗ್ಗೆ ತಿಳಿಸುವಏಕೈಕಮಾರ್ಗವಾಗಿದೆ. ಕ್ರೈಸ್ತ ಆಸ್ಪತ್ರೆಗಳಲ್ಲಿ ಸೇವೆ ಮಾಡುವ ದಾದಿಯರು ರೋಗಿಗಳಿಗೆಆರೈಕೆ ಮಾಡುವಾಗ ಮತ್ತು ಬಡವರ ಕಷ್ಟಗಳನ್ನುಸಾಧ್ಯವಾದಷ್ಟು ನಿವಾರಿಸಿ ಅವರಿಗಾಗಿಪ್ರಾರ್ಥಿಸಿದಾಗ ದೇವರ ವಾಕ್ಯಗಳನ್ನು ಹಂಚಿಕೊಳ್ಳುವ ಹಾಗೂ ರಕ್ಷಕನಾದ ಕ್ರಿಸ್ತನಬಗ್ಗೆತಿಳಿಸುವ ಅನೇಕ ಅವಕಾಶಗಳು ಅವರಿಗೆ ದೊರೆಯುವವು. ತಮ್ಮ ಸ್ವಾಭಾವಿಕಅವಶ್ಯಕತೆಗಳಾದ ಆಹಾರ, ಕಾಮನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೆ, ನಿಸ್ಸಹಾಯಕರಾಗಿರುವವರಿಗಾಗಿ ದಾದಿಯರು ಪ್ರಾರ್ಥಿಸಬಹುದು. ಜೀವನದಲ್ಲಿ ಸೋತಿರುವಮತ್ತು ನಿರಾಶೆಯಿಂದ ಎದೆಗುಂದಿರುವವರ ಜೀವನದಲ್ಲಿ ಅವರು ನಿರೀಕ್ಷೆಯ ಕಿರಣವನ್ನುತರಬಹುದು.ದಾದಿಯರ ನಿಸ್ವಾರ್ಥ ಪ್ರೀತಿಯು ಅವರು ರೋಗಿಗಳಿಗೆ ಮಾಡುವಕರುಣೆಯ ಸೇವೆಯಲ್ಲಿ ಕಂಡುಬಂದಲ್ಲಿ, ಅನೇಕ ರೋಗಿಗಳು ಕ್ರಿಸ್ತನ ಪ್ರೀತಿಯಲ್ಲಿಸುಲಭವಾಗಿ ನಂಬಿಕೆ ಇಡುತ್ತಾರೆ.KanCCh 389.2

  ನೈತಿಕವಾಗಿಯೂ, ಧಾರ್ಮಿಕವಾಗಿಯೂ ಅವನತಿಯಲ್ಲಿರುವ ವ್ಯಕ್ತಿಗಳು ಅತ್ಯಂತಬುದ್ಧಿಶಾಲಿಗಳೂ ಮತ್ತೂ ಅತ್ಯುತ್ತಮ ಶಿಕ್ಷಣ ಪಡೆದವರೂ ಆಗಿದ್ದರೆಂದು ವೈದ್ಯಕೀಯಸೇವೆಮಾಡುವವರು ಕಂಡುಕೊಳ್ಳಬಹುದೆಂದು ಶ್ರೀಮತಿ ವೈಟಮ್ಮನವರಿಗೆ ದೇವರುದರ್ಶನದಲ್ಲಿ ತೋರಿಸಿದನು. ಅಂತವರಿಗೆ ಉತ್ತಮ ಸೇವೆಮಾಡಿದಾಗ, ಅವರ ಪರಿಸ್ಥಿತಿಯನ್ನುಸುಧಾರಿಸಬಹುದು.KanCCh 390.1

  ಅಂತವರಿಗೆ ಅನುಕಂಪದಿಂದ ಆರೈಕೆ ಮಾಡಿ ಅವರ ಶಾರೀರಿಕ ಅಗತ್ಯಗಳಾದಅನ್ನ, ಬಟ್ಟೆಗಳನ್ನು ಕೊಟ್ಟು, ಆರೋಗ್ಯ ಸುಧಾರಿಸಿದ ನಂತರ ಕ್ರಿಸ್ತನ ಸತ್ಯಗಳನ್ನು ಅವರಿಗೆತಿಳಿಸಿ ಹೇಳಬೇಕು. ಇಂತಹ ವ್ಯಕ್ತಿಗಳಿಗೆ ಸೇವೆ ಮಾಡುವವರಿಗೆ ಪವಿತ್ರಾತ್ಮನು ಪ್ರೇರೇಪಣೆನೀಡಿಸಹಕಾರನೀಡುತ್ತಾನೆ. ಅವರ ಧಾರ್ಮಿಕ ನಂಬಿಕೆಯು ಬಂಡೆಯ ಮೇಲೆ ಹಾಕಿದಅಸ್ತಿವಾರದಂತೆ ದೃಢವಾಗಿರುತ್ತದೆ.KanCCh 390.2

  ವೈದ್ಯಕೀಯ ಸುವಾರ್ತಾಸೇವೆಯು ಇಂದಿನ ಕಾಲಕ್ಕೆ ಅಗತ್ಯವಾದ ಸತ್ಯವನ್ನುಸ್ವೀಕರಿಸಲಿಕ್ಕೆ ಬೇಕಾದ ಮಾರ್ಗವನ್ನು ಹೆಚ್ಚಾಗಿ ಸಿದ್ಧಪಡಿಸುತ್ತದೆ. ಕೈಗಳಿಲ್ಲದ ಶರೀರವುಪ್ರಯೋಜನವಿಲ್ಲದ್ದು, ಶರೀರಕ್ಕೆ ಗೌರವಕೊಡುವಾಗ, ಸಹಾಯ ಮಾಡುವ ಕೈಗಳಿಗೂಸಹ ಗೌರವ ನೀಡಬೇಕು. ಕೈಗಳು ಎಷ್ಟೊಂದು ಪ್ರಾಮುಖ್ಯವಾಗಿವೆ ಎಂದರೆ, ಅವುಗಳಿಲ್ಲದೆಶರೀರವು ಏನೂ ಮಾಡಲು ಸಾಧ್ಯವಿಲ್ಲ.ಆದುದರಿಂದ ಕೈಗಳ ಸಹಾಯವನ್ನು ತಾತ್ಸಾರಮಾಡುವ ಶರೀರವು ಏನನ್ನೂ ಸಾಧಿಸಲು ಸಾಧ್ಯವಾಗದು.KanCCh 390.3

  ಸುವಾರ್ತೆಯ ತತ್ವಗಳನ್ನು ಅನುಸರಿಸಿ ನಡೆಯುವುದು ಹಾಗೂ ಅದರ ಸಿದ್ಧಾಂತಗಳನ್ನುಅಳವಡಿಸಿಕೊಳ್ಳುವುದು ಜೀವನದ ವಿಶಿಷ್ಟ ಲಕ್ಷಣವಾಗಿದ್ದು, ಸುಗಂಧ ವಾಸನೆಯಿಂದಕೂಡಿದಂತಿರುತ್ತದೆ. ಸುವಾರ್ತೆಯನ್ನು ಮಾತ್ರ ಸಾರಿದಾಗ, ಅದನ್ನು ಅಂಗೀಕರಿಸದವರುವೈದ್ಯಕೀಯಸೇವೆಯನ್ನು ಬುದ್ಧಿವಂತಿಕೆಯಿಂದ ಮಾಡಿದಾಗ, ಅಂಗೀಕರಿಸುವ ಸಾಧ್ಯತೆಯಿದೆ.ಶಾರೀರಿಕ ಬಾಧೆಯಿಂದ ಮುಕ್ತರಾದವರ ಹೃದಯಗಳಲ್ಲಿ ದೇವರು ಪ್ರೇರಣೆ ನೀಡುತ್ತಾನೆ.ಸತ್ಯದ ಬೀಜವನ್ನು ವೈದ್ಯರು ಬಿತ್ತಿದಾಗ, ದೇವರು ಅದಕ್ಕೆ ಅಗತ್ಯವಾದ ನೀರು,ಪೋಷಕಾಂಶಗಳನ್ನು ಒದಗಿಸುತ್ತಾನೆ. ಈ ಬೀಜವು ಮೊಳಕೆಬರುವವರೆಗೆ ತಾಳ್ಮೆಯಿಂದಕಾದುಕೊಂಡಿರಬೇಕು. ಆದರೆ ಕೊನೆಯಲ್ಲಿ ಅದು ಜೀವತಳೆದು ಮೊಳಕೆ ಒಡೆದಾಗ,ಅದು ನಿತ್ಯಜೀವಕ್ಕಾಗಿ ಫಲಕೊಡುವುದು.KanCCh 390.4

  *****