Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಭಾನುವಾರಾಚರಣೆಯ ಕಾನೂನುಗಳು

    ಕ್ರೈಸ್ತರೆನಿಸಿಕೊಳ್ಳುವ ಧಾರ್ಮಿಕ ಅಧಿಕಾರಿಗಳು ತಾವು ಕುರಿಮರಿಂರುಗುಣಹೊಂದಿದ್ದೇವೆಂದು ಹೇಳಿಕೊಳ್ಳುತ್ತಾರೆ. ಆದರೆ ತಮ್ಮ ಕಾರ್ಯಗಳಲ್ಲಿ ಅವರುಘಟಸರ್ಪನ ಮನಸ್ಸನ್ನು ಹೊಂದಿದವರು ಮತ್ತು ಸೈತಾನನಿಂದ ಪ್ರಚೋದಿಸಲ್ಪಟ್ಟವರುಹಾಗೂ ನಿಯಂತ್ರಿಸಲ್ಪಟ್ಟವರೂ ಎಂದು ಕಂಡುಬರುತ್ತಾರೆ. ದೇವಜನರು ಏಳನೇ ದಿನದಸಬ್ಬತ್ತನ್ನು ಪರಿಶುದ್ಧವೆಂದು ಕೈಗೊಳ್ಳುವುದರಿಂದ ಹಿಂಸೆಗೊಳಗಾಗುವ ಸಮಯ ಬರಲಿದೆ.ಸೈತಾನನು ದೇವರ ಯೋಜನೆಗಳನ್ನು ವಿಫಲಗೊಳಿಸಬೇಕೆಂಬ ಕಾರಣದಿಂದ ಏಳನೇದಿನದಶನಿವಾರದ ಸಬ್ಬತ್ ದಿನವನ್ನು ವಾರದ ಮೊದಲನೆಯ ದಿನವಾದ ಭಾನುವಾರಕ್ಕೆಬದಲಾಯಿಸಿದನು. ದೇವರಾಜ್ಞೆಗಳು ಈ ಲೋಕದಲ್ಲಿ ಮನುಷ್ಯರ ಕಾನೂನು ಕಟ್ಟಳೆಗಳಿಗಿಂತಕಡಿಮೆಯೆಂದು ತೋರಿಸಲು ಸೈತಾನನು ಪ್ರಯತ್ನಿಸುತ್ತಾನೆ. ಕಟ್ಟಳೆಯ ಕಾಲಗಳನ್ನೂ,ಧರ್ಮವಿಧಿಗಳನ್ನೂ ಬದಲಾಯಿಸಲು ಆಲೋಚಿಸಿದ (ದಾನಿಯೇಲನು 7:25)ಅಧರ್ಮಸ್ವರೂಪನು (2 ಥೆಸಲೋನಿಕ 2:3), ದೇವಜನರನ್ನು ಯಾವಾಗಲೂ ಬಹಳವಾಗಿಹಿಂಸೆ ಪಡಿಸಿದ್ದಾನೆ. ಅವನು ವಾರದ ಮೊದಲನೆದಿನವಾದ ಭಾನುವಾರವನ್ನು ಪರಿಶುದ್ಧದಿನವನ್ನಾಗಿ ಆಚರಿಸುವ ಕಾನೂನುಗಳನ್ನು ಜಾರಿಗೆ ತರುವನು. ಆದರೆ ದೇವಜನರುಕ್ರಿಸ್ತನಿಗಾಗಿ ದೃಢನಂಬಿಕೆಯಿಂದ ನಿಲ್ಲಬೇಕು. ದೇವರು ಅವರಿಗೆ ಸಹಾಯಮಾಡಿ ತಾನು ದೇವಾಧಿದೇವನೆಂದು ಸ್ಪಷ್ಟವಾಗಿ ತೋರಿಸುವನು.KanCCh 399.3

    ವಾರದ ಮೊದಲನೆಯದಿನವಾದ ಭಾನುವಾರವನ್ನು ಪರಿಶುದ್ಧ ಸಬ್ಬತ್ ದಿನವೆಂದುಆಚರಿಸಬೇಕೆಂಬ ಕಾನೂನು ಧರ್ಮಭ್ರಷ್ಟವಾದ ಕ್ರೈಸ್ತದೇಶಗಳಿಂದ ಅನುಮೋದನೆ ಪಡೆದುಅಲ್ಲಿಂದಲೇ ಜಾರಿಗೆ ಬರುತ್ತದೆ. ಭಾನುವಾರವು ರೋಮನ್ ಕಥೋಲಿಕ್ ಸಭೆಯಿಂದಮೊದಲು ಪವಿತ್ರವೆಂದು ಎಣಿಸಲ್ಪಟ್ಟು, ಅನಂತರ ದೇವರ ಪರಿಶುದ್ಧ ವಿಶ್ರಾಂತಿದಿನವಾದಶನಿವಾರಕ್ಕಿಂತ ಹೆಚ್ಚಾಗಿ ಕ್ರೈಸ್ತದೇಶಗಳು ಅದನ್ನು ಉನ್ನತಸ್ಥಾನಕ್ಕೇರಿಸಿವೆ. ದೇವಜನರುಯಾವ ಕಾರಣದಿಂದಲೂ ಭಾನುವಾರವನ್ನು ದೇವರ ಪವಿತ್ರದಿನವೆಂದು ಎಣಿಸಬಾರದುಹಾಗೂ ಶ್ರೇಷ್ಠವಾದದ್ದೆಂದು ಗೌರವಿಸಬಾರದು. ಆದರೆ ದೇವರು ಈ ವಿಷಯದಲ್ಲಿತನ್ನಜನರು ಅದಕ್ಕೆ ವಿಧೇಯತೆತೋರುವ ಬದಲು ಅದರಿಂದ ದೂರವಿರಬೇಕೆಂದುಬಯಸುತ್ತಾನೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ಇದನ್ನು ಅಥೈಂಟಿಸ್ಟರುಮನವರಿಕೆ ಮಾಡಿಕೊಳ್ಳಬೇಕು. ಭಾನುವಾರಾಚರಣೆಗೆ ವಿರೋಧ ವ್ಯಕ್ತಪಡಿಸಿದಲ್ಲಿ,ದೇವಜನರು ಬಲವಾದ ವಿರೋಧ ಎದುರಿಸಬೇಕಾಗುವುದರಿಂದ, ಸತ್ಯವನ್ನು ಸಾರುವುದುಅಸಾಧ್ಯವಾಗುತ್ತದೆ. ಭಾನುವಾರಾಚರಣೆಯ ಕಾನೂನಿಗೆ ವಿರುದ್ಧವಾಗಿ ಯಾವುದೇಪ್ರತಿಭಟನೆ ಮಾಡಬಾರದು. ಒಂದು ಸ್ಥಳದಲ್ಲಿ ಪ್ರತಿಭಟನೆ ತೋರಿದಲ್ಲಿ, ನಿಮಗೆಅವಮಾನವಾಗುವುದಲ್ಲದೆ, ಇದೇ ರೀತಿ ಬೇರೊಂದು ಸ್ಥಳದಲ್ಲಿಯೂ ನಡೆಯುತ್ತದೆ.ಭಾನುವಾರಕ್ಕೆ, ಯಾವುದೇ ಪರಿಶುದ್ಧತೆ ಕೊಡದಿದ್ದರೂ, ಆ ದಿನದಲ್ಲಿ ಕ್ರಿಸ್ತನು ಮೆಚ್ಚುವಂತಕಾರ್ಯಗಳನ್ನು ನಮ್ರತೆಯಿಂದ ಶಕ್ತಿಮೀರಿ ಮಾಡಬಹುದು.KanCCh 400.1

    ಭಾನುವಾರಾಚರಣೆ ಕಡ್ಡಾಯವಾಗಿ ಜಾರಿಗೆ ಬಂದಾಗ, ನಾವು ಆ ದಿನದಲ್ಲಿ ಸುವಾರ್ತಾಸೇವೆಯನ್ನು ಧಾರಾಳವಾಗಿ ಮಾಡಬೇಕು. ಆಗ ಸೆವೆಂತ್ ಡೇ ಅಡ್ಡೆಂಟಿಸ್ಪರನ್ನು ಅವಮಾನಿಸಬೇಕೆಂದು ಅವಕಾಶಕ್ಕಾಗಿ ಕಾದಿರುವ ದುರಭಿಮಾನಿಗಳ ಕೋಪಕ್ಕೆ ನಾವು ಗುರಿಯಾಗುವುದಿಲ್ಲ. ಭಾನುವಾರದಂದು ನಾವು ಜನರನ್ನು ಸಂಧಿಸಿ ಸತ್ಯವೇದದಿಂದ ವಾಕ್ಯಗಳನ್ನು ಬೋಧಿಸುವುದನ್ನು ಅವರು ನೋಡಿದಾಗ, ಅಡ್ವೆಂಟಿಸ್ಟರ ಸೇವೆಗೆ ಅಡ್ಡಿಪಡಿಸಬೇಕೆಂದು ಭಾನುವಾರಾಚರಣೆಯನ್ನು ಕಡ್ಡಾಯವಾಗಿ ಜಾರಿಗೆ ತಂದರೂ ಅದನ್ನು ತಪ್ಪಿಸಲು ಪ್ರಯತ್ನಿಸುವುದು ವ್ಯರ್ಥವೆಂದುತಿ ಳಿದುಕೊಳ್ಳುವರು.KanCCh 400.2

    ಭಾನುವಾರದಂದು ಸಾರ್ವಜನಿಕ ಸುವಾರ್ತಾಕೂಟ ಹಾಗೂ ಮನೆಗಳಲ್ಲಿ ಕೂಟಗಳನ್ನು ಏರ್ಪಡಿಸಬಹುದು. ಲೇಖಕರು ಆ ದಿನವನ್ನು ಧಾರ್ಮಿಕವಾದ ಲೇಖನ ಬರೆಯಲು ಉಪಯೋಗಿಸಬಹುದು. ಈ ಕೂಟಗಳು ಬಹಳ ಆಸಕ್ತಿಕರವಾಗಿರುವಂತೆ ನೋಡಿಕೊಳ್ಳಬೇಕು. ಆತ್ಮಗಳನ್ನು ಪುನರುಜ್ಜೀವನಗೊಳಿಸುವಂತ ಹಾಡುಗಳನ್ನು ಹಾಡಬೇಕು ಹಾಗೂ ದೇವರ ಪ್ರೀತಿಯ ಭರವಸೆಯ ಬಗ್ಗೆ ಬಲವಾಗಿ ಮಾತಾಡುವುದು ಒಳ್ಳೆಯದು. ಎಲ್ಲಾ ವಿಧದಲ್ಲಿಯೂ ಮಿತಸಂಯಮ (Temperance) ವಾಗಿರುವುದು ಮತ್ತು ಯಥಾರ್ಥವಾದ ಧಾರ್ಮಿಕ ಅನುಭವದ ಬಗ್ಗೆ ಬೋಧಿಸಬೇಕು. ಆಗ ದೇವರ ಸೇವೆಯನ್ನು ಹೇಗೆ ಉತ್ತಮವಾಗಿ ಮಾಡಿ ಅನೇಕ ಆತ್ಮಗಳನ್ನು ಕರ್ತನ ಬಳಿಗೆ ತರುವುದರ ಬಗ್ಗೆ ತಿಳಿದುಕೊಳ್ಳುತ್ತೇವೆ.KanCCh 401.1

    ಅಡ್ವೆಂಟಿಸ್ಟ್ಶಾ ಲೆಗಳ ಶಿಕ್ಷಕರು ಭಾನುವಾರವನ್ನು ಸುವಾರ್ತೆಸಾರುವುದಕ್ಕೆ ಮೀಸಲಾಗಿರಿಸಬೇಕು. ಈ ರೀತಿ ಮಾಡಿದಲ್ಲಿ ಶತ್ರುವಿನ ಯೋಜನೆಗಳನ್ನು ವಿಫಲಗೊಳಿಸಬಹುದೆಂದು ದೇವರು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ತಿಳಿಸಿದ್ದಾನೆ. ವಿದ್ಯಾರ್ಥಿಗಳನ್ನು ಕರೆದುಕೊಂಡು ಸತ್ಯವನ್ನು ತಿಳಿಯದವರಿಗೆ ತಿಳಿಸಿ ಹೇಳಬೇಕು. ಈ ರೀತಿ ಮಾಡಿದಾಗ, ಬೇರೆಲ್ಲಾ ಮಾರ್ಗಗಳಿಗಿಂತಲೂ ಶಿಕ್ಷಕರು ಹೆಚ್ಚಿನ ಸಾಧನೆಮಾಡಬಹುದು.KanCCh 401.2

    ಜನರಿಗೆ ಸತ್ಯವನ್ನು ನೇರವಾಗಿಯೂ, ಸಕಾರಾತ್ಮಕವಾಗಿಯೂ ಸ್ಪಷ್ಟವಾಗಿತಿಳಿಸಬೇಕು. ಆದರೆ ಈ ಸತ್ಯವನ್ನು ಕ್ರಿಸ್ತನ ಆತ್ಮನಿಂದ ಪ್ರೇರಿತರಾಗಿ ತಿಳಿಸಬೇಕು. ತೋಳುಗಳನಡುವೆ ನಾವು ಕುರಿಗಳಂತಿರಬೇಕು. ದೇವರುಕೊಟ್ಟಿರುವ ಎಚ್ಚರಿಕೆಗಳನ್ನು ಅನುಸರಿಸದ ಹಾಗೂ ತಾಳ್ಮೆ ಮತ್ತು ಆತ್ಮಸಂಯಮವನ್ನು ತೋರಿಸದವರುಕ ರ್ತನಿಗೆ ಸೇವೆಮಾಡುವ ಅತ್ಯಮೂಲ್ಯ ಅವಕಾಶ ಕಳೆದುಕೊಳ್ಳುವರು. ದೇವರಆಜ್ಞೆಗಳನ್ನು ಮೀರಿನಡೆಯುವವರ ವಿರುದ್ಧವಾಗಿ ತೀವ್ರವಾದ ಟೀಕೆ, ನಿಂದೆ ಹಾಗೂ ಆರೋಪಗಳನ್ನು ಮಾಡುವ ಕೆಲಸವನ್ನು ಕರ್ತನು ತನ್ನಜನರಿಗೆಕೊಟ್ಟಿಲ್ಲ. ಇತರಸಭೆಗಳ ಮೇಲೆ ಯಾವ ಕಾರಣದಿಂದಲೂ ನಾವು ನಮ್ಮ ಸತ್ಯ ಒಪ್ಪಿಕೊಳ್ಳಬೇಕೆಂದು ಬಲವಂತ ಮಾಡಬಾರದು.KanCCh 401.3

    ನಮ್ಮ ಸುವಾರ್ತಾಸೇವೆ ಹಾಗೂ ಸತ್ಯವೇದದಸಬ್ಬತ್ತಿನ ವಿರುದ್ಧವಾಗಿ ಪೂರ್ವಗ್ರಹ ಪೀಡಿತ ದ್ವೇಷಭಾವನೆ ಹೊಂದಿರುವವರು ಇದ್ದಾರೆ. ಅವರ ಮನಸ್ಸಿನಿಂದ ಅದನ್ನು ತೆಗೆದುಹಾಕುವುದಕ್ಕೆ ಬೇಕಾದ ಎಲ್ಲವನ್ನೂ ನಾವು ಮಾಡಬೇಕು.KanCCh 401.4

    *****