Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ-56 — ಸೈತಾನನ ವಂಚನೆಯ ಕಾರ್ಯಗಳು

    ಸೈತಾನನ ಕೆಟ್ಟದೂತರು ಜನರನ್ನು ತಮ್ಮಕಡೆಗೆ ಸೆಳೆದುಕೊಳ್ಳುವುದಕ್ಕೆ ಪೈಪೋಟಿ ನಡೆಸುವುದನ್ನೂ ಮತ್ತು ದೇವದೂತರು ಅದನ್ನು ಪ್ರತಿರೋಧಿಸುವುದನ್ನು ಶ್ರೀಮತಿವೈಟಮ್ಮನವರು ದರ್ಶನದಲ್ಲಿ ನೋಡಿದರು. ಈ ಹೋರಾಟ ಬಹಳ ತೀವ್ರವಾಗಿತ್ತು. ಕೆಟ್ಟದೂತರು ತಮ್ಮ ಹಾನಿಕರವಾದ ಪ್ರಭಾವದಿಂದ ಪರಿಸರವನ್ನು ಮಲಿನಗೊಳಿಸುತ್ತಾ, ಜನರ ಹತ್ತಿರಬಂದು ಅವರ ಸಂವೇದನಾಶಕ್ತಿಸಾಮರ್ಥ್ಯಗಳನ್ನು(Sensibility) ಮಂಕುಗೊಳಿಸುತ್ತಿದ್ದರು. ಪರಿಶುದ್ಧ ದೇವದೂತರು ಆತಂಕದಿಂದ ಇದನ್ನು ಗಮನಿಸುತ್ತಾ, ಸೈತಾನನ ದೂತರನ್ನು ಹಿಂದಕ್ಕೆ ದೂಡಲು ಕಾದುಕೊಂಡಿದ್ದರು. ಆದರೆ ಮನುಷ್ಯರ ಇಚ್ಛೆಗೆ ವಿರುದ್ಧವಾಗಿ ಅವರ ಮನಸ್ಸನ್ನು ನಿಯಂತ್ರಿಸುವುದು ಪರಿಶುದ್ಧ ದೇವದೂತರ ಕೆಲಸವಲ್ಲ. ಜನರು ಸೈತಾನನಿಗೆ ವಶವಾಗಿ ಅವನನ್ನು ಪ್ರತಿರೋಧಿಸಲು ಯಾವ ಪ್ರಯತ್ನವನ್ನು ಮಾಡದಿದ್ದಲ್ಲಿ, ದೇವದೂತರು ಏನೂಮಾಡಲಾಗದು. ಬದಲಾಗಿ ಸೈತಾನನ ವಶವಾಗಿರುವವರಿಗೆ ಹೆಚ್ಚಿನ ಬೆಳಕುಕೊಡಲ್ಪಟ್ಟು ಅವರು ಪರಲೋಕದಿಂದ ಸಹಾಯ ಕೇಳುವತನಕ ಸೈತಾನನದೂತರು ಅವರನ್ನು ನಾಶಮಾಡದಂತೆ ದೇವದೂತರು ದುಷ್ಟಶಕ್ತಿಗಳನ್ನು ತಡೆಹಿಡಿಯುವರು. ತಮಗೆ ಸಹಾಯ ಮಾಡಿಕೊಳ್ಳಲು ಯಾವುದೇ ಪ್ರಯತ್ನ ಮಾಡದಿರುವವರನ್ನು ಅಂತಹ ಪರಿಸ್ಥಿತಿಯಿಂದ ಪಾರುಮಾಡಲು ದೇವರು ತನ್ನ ದೂತರನ್ನು ನೇಮಿಸುವುದಿಲ್ಲ.KanCCh 402.1

    ಒಬ್ಬನನ್ನು ತಾನು ಕಳೆದುಕೊಳ್ಳುವ ಅಪಾಯವಿದೆ ಎಂದು ಸೈತಾನನಿಗೆ ತಿಳಿದಾಗ, ಆ ವ್ಯಕ್ತಿಯನ್ನು ಉಳಿಸಿಕೊಳ್ಳಲು ಅವನು ತನ್ನೆಲ್ಲಾಶಕ್ತಿಯನ್ನು ಉಪಯೋಗಿಸುತ್ತಾನೆ. ವ್ಯಕ್ತಿಯು ತಾನು ಸೈತಾನನಿಗೆ ವಶವಾಗುವೆನೆಂಬ ಭಯದಿಂದ ಎಚ್ಚೆತ್ತುಕೊಂಡು ಅತಿಯಾದ ವೇದನೆ ಮತ್ತು ಉತ್ಕಟ ಆಸಕ್ತಿಯಿಂದ ಬೇಕಾದ ಬಲಕ್ಕಾಗಿ ಕ್ರಿಸ್ತನನ್ನು ದೃಷ್ಟಿಸಿನೋಡಿದಾಗ, ತನ್ನ ಸೆರೆಯಾಳನ್ನು ಕಳೆದುಕೊಳ್ಳುವೆನೆಂದು ಸೈತಾನನು ಭಯಪಡುತ್ತಾನೆ. ಆಗ ಅವನು ತನ್ನ ಇತರ ಕೆಟ್ಟದೂತರನ್ನು ಕರೆದು, ಪರಲೋಕದ ಬೆಳಕು ಆ ವ್ಯಕ್ತಿಯನ್ನು ಮುಟ್ಟದಂತೆ ಅವನ ಸುತ್ತಲೂ ತನ್ನದೂತರನ್ನು ನೇಮಿಸಿ ಅವನನ್ನು ಕತ್ತಲಲ್ಲಿರಿಸಲು ಪ್ರಯತ್ನಿಸುತ್ತಾನೆ. ಆದರೆ ಸೈತಾನನ ವಶವಾಗುವ ಅಪಾಯದ ಪರಿಸ್ಥಿತಿಯಲ್ಲಿರುವ ಅಂತಹ ವ್ಯಕ್ತಿಯು ದೃಢನಿರ್ಧಾರದಿಂದಲೂ, ಅಸಹಾಯಕತೆಯಿಂದಲೂ ಕ್ರಿಸ್ತನ ರಕ್ತದಮೇಲೆ ಆತುಕೊಂಡಲ್ಲಿ, ನಮ್ಮ ರಕ್ಷಕನು ನಂಬಿಕೆಯಿಂದ ಮಾಡಿದ ಪ್ರಾಮಾಣಿಕವಾದ ಶ್ರದ್ಧಾಪೂರ್ವಕವಾದ ಪ್ರಾರ್ಥನೆಯನ್ನು ಕೇಳುವನು. ಅಲ್ಲದೆ ಅವನನ್ನು ಸೈತಾನನ ವಶದಿಂದ ಬಿಡುಗಡೆಮಾಡಲು ಬಲಿಷ್ಠರಾದ ಹೆಚ್ಚಿನ ದೇವದೂತರನ್ನು ಸಹಾಯಕ್ಕಾಗಿ ಕಳುಹಿಸುವನು.KanCCh 402.2

    ದೇವರಲ್ಲಿ ಭರವಸವಿಟ್ಟ ದೃಢನಂಬಿಕೆಯುಳ್ಳ ಬಲಿಷ್ಠನಾದ ಪ್ರತಿಸ್ಪರ್ಧಿಯು ಆತನಿಗೆ ಮೊರೆಯಿಟ್ಟಾಗ, ಸೈತಾನನು ದೇವರಸಾಮರರ್ಥ್ಯ ಹಾಗೂ ಸಾರ್ವಭೌಮತ್ವಕ್ಕೆ ಹೆದರಿ ನಡುಗುವನು. ಶ್ರದ್ಧಾಪೂರ್ವಕವಾಗಿ ಉತ್ಸಾಹದಿಂದ ಮಾಡಿದ ಪ್ರಾರ್ಥನೆಯ ಸ್ವರವನ್ನು ಕೇಳಿದಾಗ, ಸೈತಾನನ ಸಮಸ್ತದೂತರು ಹೆದರಿ ನಡುಗುವರು. ಆಗ ಸೈತಾನನು ತನ್ನ ಗುರಿಯನ್ನು ಸಾಧಿಸಲು ಕೆಟ್ಟದೂತರ ದಂಡುಗಳನ್ನು ಕರೆಯುತ್ತಲೇ ಇರುವನು. ಆದರೆ ಪರಲೋಕದ ಸರ್ವಾಯುಧಗಳಿಂದ ಸುಸಜ್ಜಿತರಾದ ಮಹಾಬಲಿಷ್ಠರಾದ ದೇವದೂತರು ಅಸಹಾಯಕನಾದ ವ್ಯಕ್ತಿಯ ಸಹಾಯಕ್ಕೆ ಬಂದಾಗ, ಸೈತಾನನು ಹಾಗೂ ಅವನ ಕೆಟ್ಟ ದೂತರು ತಾವು ಹೋರಾಟದಲ್ಲಿ ಸೋತೆವೆಂದು ತಿಳಿದು ಪಲಾಯನ ಮಾಡುವರು. ಸೈತಾನನಿಗೆ ನಿಷ್ಠರಾಗಿರುವವರು ಒಂದೇ ಉದ್ದೇಶಕ್ಕಾಗಿ ಪ್ರಾಮಾಣಿಕವಾಗಿ ಕಾರ್ಯಮಾಡಲು ಒಂದುಗೂಡುವರು. ಅವರು ಒಬ್ಬರಿಗೊಬ್ಬರು ದ್ವೇಷಿಸಿ ಹೋರಾಟ ಮಾಡಿದರೂ, ದೇವರ ಮಕ್ಕಳಿಗೆ ವಿರುದ್ಧವಾಗಿ ಕಾರ್ಯಮಾಡುವುದಕ್ಕೆ ಒಂದಾಗುವ ಯಾವ ಅವಕಾಶವನ್ನೂ ಅವರು ಬಿಡುವುದಿಲ್ಲ. ಆದರೆ ಭೂಪರಲೋಕಗಳ ಮಹಾದಂಡನಾಯಕನಾದ ಕ್ರಿಸ್ತನು ಸೈತಾನನಶಕ್ತಿಯನ್ನು ಮಿತಿಗೊಳಿಸುತ್ತಾನೆ.KanCCh 403.1

    Larger font
    Smaller font
    Copy
    Print
    Contents