Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಾರ್ವಜನಿಕ ಉದ್ರೇಕ ಉಂಟುಮಾಡುವ ಧರ್ಮದ ವಿರುದ್ಧವಾಗಿ ಎಚ್ಚರಿಕೆ

    ದೇವರ ಸೇವೆಗಾಗಿ ಇಂದು ಕ್ರೈಸ್ತತತ್ವ, ಸಿದ್ಧಾಂತಗಳಲ್ಲಿ ದೃಢವಾದ ನಂಬಿಕೆ ಇರುವವರು ಹಾಗೂ ಸತ್ಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡಿರುವ ದೈವಭಕ್ತಿಯುಳ್ಳ ಜನರ ಅಗತ್ಯ ನಮಗಿದೆ.KanCCh 413.2

    ಜನರಿಗೆ ಹೊಸದಾದ ಹಾಗೂ ಕಾಲ್ಪನಿಕವೂ, ವಿಲಕ್ಷಣವೂ ಆದ ಸಿದ್ಧಾಂತಗಳ ಅಗತ್ಯವಿಲ್ಲ. ಅವರಿಗೆ ಮಾನವರ ಊಹಾಪೋಹದ ಭಾವನೆ, ಸಂಗತಿಗಳು ಬೇಕಾಗಿಲ್ಲ. ಸತ್ಯವನ್ನು ಅರಿತುಕೊಂಡು ಅದನ್ನು ಜೀವನದಲ್ಲಿ ಅನುಸರಿಸುವಂತ ಹಾಗೂ ತಿಮೊಥೆಯನಿಗೆ ಪೌಲನು “ಖಂಡಿತವಾಗಿಯೂ ತಿಳಿಸಿದ” ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ, ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು, ಪೂರ್ಣ ದೀರ್ಘಶಾಂತಿಯಿಂದ ಉಪದೇಶಿಸುತ್ತಾ ಖಂಡಿಸು, ಗದರಿಸು, ಎಚ್ಚರಿಸು- ಯಾಕೆಂದರೆ ಜನರು ಸ್ವಸ್ಥ ಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ; ಅದರಲ್ಲಿ ಅವರು ತೀಟೆ ಕಿವಿಗಳುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲರಾದ ಅನೇಕ ಉಪದೇಶಕರನ್ನು ಇಟ್ಟುಕೊಳ್ಳವರು. ಅವರು ಸತ್ಯಬೋಧನೆಗೆ ಕಿವಿಗೊಡದೆ ಕಲ್ಪನಾಕತೆಗಳನ್ನು ಕೇಳುವುದಕ್ಕೆ ಹೋಗುವರು. ಆದರೆ ನೀನು ಎಲ್ಲ ವಿಷಯಗಳಲ್ಲಿ ಸ್ವಸ್ಥ ಚಿತ್ತನಾಗಿರು, ಶ್ರಮೆಯನ್ನು ತಾಳಿಕೋ, ಸೌವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡೆಸು” (2 ತಿಮೊಥೆ 4:2-5) ಎಂಬ ಎಚ್ಚರಿಕೆಯ ಮಾತುಗಳನ್ನು ಮನವರಿಕೆ ಮಾಡಿಕೊಂಡು ಅದಕ್ಕೆ ಜವಾಬ್ದಾರಿಯುತವಾಗಿ ವಿಧೇಯರಾಗುವಂತ ಜನರ ಅಗತ್ಯವಿದೆ ಎಂದು ತನಗೆ ದೇವರು ದರ್ಶನದಲ್ಲಿ ತೋರಿಸಿದನೆಂದು ಶ್ರೀಮತಿವೈಟಮ್ಮನವರು ಹೇಳುತ್ತಾರೆ.KanCCh 413.3

    ಕ್ರೈಸ್ತರಾದನಾವು ದೃಢವಾದ, ಖಚಿತಮನಸ್ಸಿನಿಂದ ನಂಬಿಕೆಯಲ್ಲಿ ನಡೆಯಬೇಕು. ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸಿರಿ (ಎಫೆಸ 6:14-16). ಪರಿಶುದ್ಧವಾದ ಹಾಗೂ ಕಳಂಕವಿಲ್ಲದ ನಿರ್ಮಲವಾದ ಧರ್ಮವು ಸಾರ್ವಜನಿಕವಾಗಿ ಭಾರಿ ಉದ್ರೇಕ ಅಥವಾ ಇಂದ್ರಿಯ ಸಂವೇದನೆ (Sensational) ಉಂಟುಮಾಡುವ ಧರ್ಮವಲ್ಲ. ಊಹಾಪೋಹವುಳ್ಳ ಸಿದ್ಧಾಂತಗಳು ಅಥವಾ ತತ್ವಗಳ ಬಗ್ಗೆ ಆಸಕ್ತಿ ಹುಟ್ಟಿಸುವಂತ ವಿಷಯಗಳನ್ನು ಉತ್ತೇಜಿಸುವಂತೆ ದೇವರು ಯಾರಿಗೂ ಜವಾಬ್ದಾರಿ ವಹಿಸಿಲ್ಲ. ಸಹೋದರರೇ, ನಿಮ್ಮ ಬೋಧನೆಗಳಲ್ಲಿ ಇಂತವುಗಳನ್ನು ದೂರವಿರಿಸಿ, ನಿಮ್ಮ ಅನುಭವಕ್ಕೆ ಇದು ಅಡ್ಡಿಯಾಗಬಾರದು. ಇಂತಹ ಭಾರಿ ಉದ್ರೇಕ ಉಂಟುಮಾಡುವ ತತ್ವಗಳಿಂದ ನಿಮ್ಮಜೀವನವೆಲ್ಲಾ ಶ್ರಮಿಸಿದ ಕೆಲಸವನ್ನು ಹಾಳುಮಾಡಿಕೊಳ್ಳಬಾರದೆಂದು ಶ್ರೀಮತಿವೈಟಮ್ಮನವರು ತಿಳಿಸುತ್ತಾರೆ.KanCCh 414.1