Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರ ವಾಕ್ಯದ ಮೇಲಿನ ಪ್ರೀತಿ ಹಾಗೂ ಜ್ಞಾನವೇ ನಮ್ಮ ದೃಢವಾದ ಭರವಸೆ

    ಬಹಳಕಾಲದಿಂದ ಸತ್ಯದಲ್ಲಿ ನಡೆದಿರುವವರ ಮನಸ್ಸಿನಲ್ಲಿ ಕಠಿಣವಾದ ಮತ್ತು ತೀರ್ಪು ಮಾಡುವಂತ ಮನೋಭಾವನೆ ಉಂಟಾಗಿದೆ. ಅವರು ತೀಕ್ಷ್ಣವಾಗಿ ಖಂಡಿಸುವುದಲ್ಲದೆ ತಪ್ಪು ಹುಡುಕುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಒಪ್ಪದವರಿಗೆ ಅವರು ನ್ಯಾಯಪೀಠದಲ್ಲಿ ಕುಳಿತುಕೊಂಡು ತೀರ್ಪುಮಾಡುತ್ತಾರೆ. ಅಂತವರು ತಮ್ಮ ಅಹಂಕಾರವನ್ನು ಬಿಟ್ಟು ತಮ್ಮ ಪಾಪಗಳನ್ನು ಒಪ್ಪಿ ಅರಿಕೆ ಮಾಡಿಕೊಂಡು ಪಶ್ಚಾತ್ತಾಪ ಪಡಬೇಕೆಂದು ದೇವರು ಹೇಳುತ್ತಾನೆ. ಅಂತವರಿಗೆ ಆತನು “ಆದರೆ ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟುಬಿಟ್ಟಿದ್ದೀಯೆಂದು ನಾನು ನಿನ್ನ ಮೇಲೆ ತಪ್ಪು ಹೊರಿಸಬೇಕಾಗುತ್ತದೆ. ಆದುದರಿಂದ ನೀನು ಎಲ್ಲಿಂದ ಬಿದ್ದಿದ್ದೀಯೋ, ಅದನ್ನು ನಿನ್ನ ನೆನಪಿಗೆತಂದುಕೊಂಡು ದೇವರಕಡೆಗೆ ತಿರುಗಿಕೋ. ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು, ನೀನು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ, ನಾನು ಬಂದು ನಿನ್ನದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದು ಹಾಕುವೆನು” ಎಂದು ಹೇಳುತ್ತಾನೆ (ಪ್ರಕಟನೆ 2:4,5). ಅವರು ಎಲ್ಲದರಲ್ಲಿಯೂ ಮೊದಲಿಗರಾಗಬೇಕೆಂದು ಶ್ರಮಿಸುತ್ತಾರೆ ಹಾಗೂ ತಮ್ಮ ನಡೆನುಡಿಗಳಿಂದ ಅನೇಕರ ಹೃದಯಗಳಿಗೆ ನೋವುಂಟುಮಾಡುತ್ತಾರೆ.KanCCh 416.1

    ತನ್ನಮಕ್ಕಳು ತನ್ನವಾಕ್ಯವನ್ನು ನಂಬಿ ಅದನ್ನು ಅನುಸರಿಸಬೇಕೆಂದು ಕ್ರಿಸ್ತನು ಅವರನ್ನು ಕರೆಯುತ್ತಾನೆ. ಅಂತವರು ದೇವರಬಲದಿಂದ ಇನ್ನೂ ಅಧಿಕವಾಗಿ ಆತ್ಮೀಕವಾಗಿ ಬಲಗೊಳ್ಳುತ್ತಾರೆ. ಅವರ ನಂಬಿಕೆಯು ಪರಲೋಕದಿಂದ ಬಂದದ್ದೆಂದು ಕಂಡುಬರುತ್ತದೆ. ಅವರು ಕ್ರಿಸ್ತಮಾರ್ಗದಿಂದ ಬೇರೆಯಾಗುವುದಿಲ್ಲ. ಅವರ ಮನಸ್ಸು ಪ್ರಚೋದನೆ ಕೆರಳಿಸುವ ಹಾಗೂ ಭಾವಾತಿರೇಕದ ಪ್ರದರ್ಶನ (Sentimentalism) ಧರ್ಮದ ಕಡೆತಿರುಗುವುದಿಲ್ಲ. ದೇವದೂತರು ಮತ್ತು ಜನರ ಮುಂದೆ ಅವರು ಬಲವಾದ ಹಾಗೂ ದೃಢವಾದ ಕ್ರೈಸ್ತಸ್ವಭಾವ ಹೊಂದಿದವರಾಗಿ ನಿಲ್ಲುವರು.KanCCh 416.2

    ಕ್ರಿಸ್ತನ ಬೋಧನೆಗಳಲ್ಲಿರುವ ಬಂಗಾರದಂತ ಅಮೂಲ್ಯವಾದ ಸತ್ಯವು ಜನರಮನಸ್ಸನ್ನು ತಪ್ಪೋಪ್ಪಿಕೊಳ್ಳುವಂತೆ ಮಾಡಿ ಬದಲಾಯಿಸುತ್ತದೆ. ಯೇಸುಕ್ರಿಸ್ತನು ಹೇಳಿರದಂತ ಅಥವಾ ಸತ್ಯವೇದದಲ್ಲಿ ಇಲ್ಲದಿರುವಂತ ತತ್ವಗಳನ್ನು ಎಂದಿಗೂ ಜನರಿಗೆ ಬೋಧಿಸಬಾರದು. ಗಂಭೀರವಾದ ಸತ್ಯವನ್ನು “ಸತ್ಯವೇದದಲ್ಲಿ ಬರೆದಿದೆ” ಎಂದು ತಿಳಿಸುವ ಮೂಲಕ ಜನರಿಗೆ ಹೇಳಬೇಕು.KanCCh 416.3

    ನಮಗೆ ಮಾರ್ಗದರ್ಶನ ನೀಡಲು ದೇವರ ವಾಕ್ಯವು ಆಧಾರವಾಗಿದೆ. “ಕರ್ತನಾದ ಯೆಹೋವನು ಇಂತೆನ್ನುತ್ತಾನೆ” ಎಂದು ಹೇಳಿರುವುದನ್ನು ಮಾತ್ರ ನಾವು ನಂಬಬೇಕು. ಸಾಕಷ್ಟು ಮನುಷ್ಯ ವಿಧಾನಗಳಿವೆ. ಈ ಲೋಕದ ವಿಜ್ಞಾನದಲ್ಲಿ ತರಬೇತಿ ಪಡೆದ ಮನಸ್ಸು ದೇವರ ವಿಷಯಗಳನ್ನು ಮನವರಿಕೆ ಮಾಡಿಕೊಳ್ಳಲು ವಿಫಲವಾಗುತ್ತದೆ. ಆದರೆ ಅದೇಮನಸ್ಸು ಬದಲಾವಣೆಗೊಂಡು ಶುದ್ಧೀಕರಿಸಲ್ಪಟ್ಟು ಪವಿತ್ರವಾದಾಗ, ದೇವರವಾಕ್ಯದಲ್ಲಿ ದೈವೀಕಶಕ್ತಿಯನ್ನು ಕಂಡುಕೊಳ್ಳುತ್ತದೆ. ಪವಿತ್ರಾತ್ಮನ ಬಲದಿಂದ ಪರಿಶುದ್ಧಗೊಳಿಸಲ್ಪಟ್ಟ ಶುದ್ಧವಾದ ಮನಸ್ಸು ಹಾಗೂ ಹೃದಯಗಳು ಪರಲೋಕದ ಸಂಗತಿಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳುತ್ತದೆ.KanCCh 417.1