Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-58 — ಸೈತಾನನ ಕಪಟತನದ ಅದ್ಭುತಗಳು

    ಆಧುನಿಕ ಪ್ರೇತಸಂಪರ್ಕಸಿದ್ಧಾಂತಕ್ಕೆ (Spiritualism, ಮೃತರ ಆತ್ಮಗಳು ಅರ್ಹಮಧ್ಯವರ್ತಿಗಳ ಮೂಲಕ ಬದುಕಿರುವ ಬಂಧುಮಿತ್ರರೊಡನೆ ಮಾತಾಡುವುದಲ್ಲದೆ, ಅವರಿಗೆ ಪ್ರತ್ಯಕ್ಷವೂ ಆಗುವವೆಂಬ ನಂಬಿಕೆ) ವಿಶೇಷವಾಗಿ ಅನ್ವಯವಾಗುವ ಕೊಲೊಸ್ಸೆ 2:8ನೇವಚನಕ್ಕೆ ಗಮನಕೊಡುವಂತೆ ದೇವರು ದರ್ಶನದಲ್ಲಿ ಶ್ರೀಮತಿವೈಟಮ್ಮನವರಿಗೆ ತಿಳಿಸಿದನು. ಆ ವಚನವು ಹೀಗೆ ತಿಳಿಸುತ್ತದೆ : “ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ, ಪ್ರಾಪಂಚಿಕ ಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ“. ಸಾವಿರಾರುಜನರು ಕಪಾಲ ಸಾಮುದ್ರಿಕ ತತ್ವಶಾಸ್ತ್ರ (Phrenology, ತಲೆಬುರುಡೆಯ ಹೊರರೂಪವು ವ್ಯಕ್ತಿಯ ಶೀಲ ಮತ್ತು ಬುದ್ಧಿಸಾಮರ್ಥ್ಯಗಳನ್ನು ಸೂಚಿಸುತ್ತದೆಂದು ನಂಬಿ ಅದನ್ನು ಪರೀಕ್ಷಿಸಿ ಅಧ್ಯಯನ ಮಾಡುವ ಒಂದು ಶಾಸ್ತ್ರ) ಮತ್ತು ವಶೀಕರಣ ಅಂದರೆ ಸಮ್ಮೋಹನಕ್ಕೊಳಗಾದ ಸ್ಥಿತಿಯ ಮೂಲಕ (Mesmerism, Magnetism, ರೋಗಿಯ ಇಚ್ಛಾಶಕ್ತಿಯ ಮತ್ತು ನರವ್ಯೂಹದ ಮೇಲೆ ಬೀರುವ ಪ್ರಭಾವದಿಂದ, ನೋವಿನ ಅರಿವಿಲ್ಲದಂತಾಗಿ ಮಾಂಸಖಂಡಗಳು ಸೆಡೆತುಕೊಳ್ಳುವ ಸ್ಥಿತಿ) ಮೂಲಕ ನಾಶವಾಗಿ ಕ್ರೈಸ್ತಧರ್ಮದಲ್ಲಿ ವಿಶ್ವಾಸಕಳೆದುಕೊಂಡು ನಾಸ್ತಿಕರಾಗಿದ್ದಾರೆ. ನಮ್ಮ ಮನಸ್ಸು ಈ ದಿಕ್ಕಿನಲ್ಲಿ ಆಲೋಚಿಸಲು ತೊಡಗಿದ್ದಲ್ಲಿ, ಅದು ತನ್ನ ಸಮತೋಲನವನ್ನು ಕಳೆದುಕೊಳ್ಳುವುದು ಹೆಚ್ಚು ಕಡಿಮೆ ಖಚಿತವಾಗಿದ್ದು, ದೆವ್ವದಿಂದ ನಿಯಂತ್ರಿಸಲ್ಪಡುತ್ತದೆ. ಮೋಸವಾದ ನಿರರ್ಥಕತತ್ವಜ್ಞಾನವು ಇಂತಹ ಜನರ ಮನಸ್ಸಿನಲ್ಲಿ ತುಂಬಿಕೊಳ್ಳುತ್ತದೆ. ಮಹಾಕಾರ್ಯಗಳನ್ನು ಮಾಡಲು ಬೇಕಾದ ಸಾಮರ್ಥ್ಯವು ತಮ್ಮಲ್ಲಿಯೇ ಇದೆಯೆಂದು ಅವರು ನೆನಸುವುದಲ್ಲದೆ, ದೇವರ ಉನ್ನತ ಶಕ್ತಿಯ ಅಗತ್ಯವಿಲ್ಲವೆಂದು ತಿಳಿದುಕೊಳ್ಳುತ್ತಾರೆ. ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳು, ಪ್ರಾಪಂಚಿಕ ಬಾಲಬೋಧೆಯು ಅವರ ಸಿದ್ಧಾಂತಗಳೂ ಹಾಗೂ ನಂಬಿಕೆಯೂ ಆಗಿದೆ.KanCCh 418.1

    ಯೇಸುಕ್ರಿಸ್ತನು ಅವರಿಗೆ ಇಂತಹ ಸಿದ್ಧಾಂತಗಳನ್ನು ಬೋಧಿಸಲಿಲ್ಲ. ಆತನ ಬೋಧನೆಯಲ್ಲಿ ಇಂತಹಯಾವುದೇ ವಿಷಯಗಳು ಕಂಡುಬರುವುದಿಲ್ಲ. ಕ್ರಿಸ್ತನು ಆ ಬಡಪಾಯಿ ಜನರ ಮನಸ್ಸನ್ನು ಅವರಲ್ಲಿರುವ ಸಾಮರ್ಥ್ಯದಕಡೆಗೆ ಗಮನಹರಿಸುವಂತೆ ತಿಳಿಸಲಿಲ್ಲ. ಬದಲಾಗಿ ಈ ವಿಶ್ವದ ಸೃಷ್ಟಿಕರ್ತನೂ, ತಮ್ಮ ಬಲ ಹಾಗೂ ಜ್ಞಾನವಿವೇಕದ ಮೂಲನೂ ಆಗಿರುವಾತನ ಕಡೆಗೆ ಅವರ ಮನಸ್ಸನ್ನು ಯಾವಾಗಲೂ ತಿರುಗಿಸಬೇಕೆಂದು ಹೇಳಿದನು. ಕೊಲೊಸ್ಸೆ 2:18ನೇ ವಚನದಲ್ಲಿ ಇದರಬಗ್ಗೆ ವಿಶೇಷವಾದ ಎಚ್ಚರಿಕೆನೀಡಲಾಗಿದೆ : “ಕೆಲವರು ಅತಿವಿನಯದಲ್ಲಿಯೂ, ದೇವದೂತರ ಪೂಜೆಯಲ್ಲಿಯೂ ಆಸಕ್ತರಾಗಿದ್ದಾರೆ. ತಮಗೆKanCCh 418.2

    ದರ್ಶನಗಳಾಗವೆಂದು ಕೊಚ್ಚಿಕೊಳ್ಳುತ್ತಾರೆ ಮತ್ತು ಪ್ರಾಪಂಚಿಕ ಬುದ್ಧಿಯಿಂದ ನಿರಾಧಾರವಾಗಿ ಉಬ್ಬಿಕೊಂಡಿದ್ದಾರೆ“.KanCCh 419.1

    ಪ್ರೇತಸಂಪರ್ಕಸಿದ್ಧಾಂತ ಬೋಧಿಸುವವರು ನಮ್ಮನ್ನು ಮೋಸಗೊಳಿಸಲು ಸಂತೋಷದ ಸಂತೃಪ್ತ ಭಾವದಿಂದಲೂ, ಸಮ್ಮೋಹನಗೊಳಿಸುವ ರೀತಿಯಿಂದಲೂ ಬರುತ್ತಾರೆ. ಒಂದುವೇಳೆ ನಾವು ಅವರ ಕಲ್ಪನಾಕತೆಗಳಿಗೆ ಗಮನಕೊಟ್ಟಲ್ಲಿ ನಮ್ಮ ಶತ್ರುವಾದ ಸೈತಾನನಿಂದ ಭ್ರಮೆಗೊಳಗಾಗಿ ಮೋಸಹೋಗುತ್ತೇವೆ. ಆಗ ನಾವು ಪರಲೋಕವೆಂಬ ಪ್ರತಿಫಲವನ್ನು ಕಳೆದುಕೊಳ್ಳುತ್ತೇವೆ. ಮಹಾವಂಚಕನಾದ ಸೈತಾನನ ಮೋಹಗೊಳಿಸುವ ಪ್ರಭಾವಕ್ಕೆ ನಾವು ಒಂದುಸಾರಿ ಒಳಗಾದಲ್ಲಿ, ನಮ್ಮ ಮನಸ್ಸು ಹಾಳಾಗುವುದಲ್ಲದೆ, ಅದರ ಮಾರಣಾಂತಿಕವಾದ ಪರಿಣಾಮದಿಂದ ಕ್ರಿಸ್ತನು ದೇವರಮಗನೆಂಬ ನಮ್ಮ ನಂಬಿಕೆಯೂ ಸಹ ಹಾಳಾಗುತ್ತದೆ. ಆಗ ಆತನ ರಕ್ತದ ಶ್ರೇಷ್ಠತೆ ಹಾಗೂ ಹಿರಿಮೆಯಲ್ಲಿ ನಾವು ಆತುಕೊಳ್ಳುವುದಿಲ್ಲ. ಇಂತಹ ಕುತರ್ಕ, ತತ್ವಶಾಸ್ತ್ರಗಳಿಂದ ಮೋಸಗೊಳ್ಳುವವರು ಸೈತಾನನ ವಂಚನೆಗಳ ಮೂಲಕ ಪರಲೋಕವನ್ನು ಕಳೆದುಕೊಳ್ಳುತ್ತಾರೆ. ಪ್ರೇತಸಂಪರ್ಕ ಹೊಂದಿರುವವರು ತಮ್ಮದೇ ಆದ ಅರ್ಹತೆಯಲ್ಲಿ ಭರವಸೆ ಇಡುವುದಲ್ಲದೆ, ತೋರಿಕೆಯ ನಮ್ರತೆ ತೋರಿಸುತ್ತಾರೆ. ಅಲ್ಲದೆ ತ್ಯಾಗಮಾಡುವುದಕ್ಕೂ ಸಿದ್ಧರಾಗಿ ತಮ್ಮನ್ನು ತಾವೇ ಕೀಳುಮಟ್ಟಕ್ಕೆ ಇಳಿಸಿಕೊಂಡು ಸತ್ತುಹೋದ ತಮ್ಮ ಗೆಳೆಯರೊಂದಿಗೆ ಸಂಪರ್ಕ ಹೊಂದಿದ್ದೇವೆಂದು ನಂಬಿಕೊಂಡು ಅವಿವೇಕದ ಹಾಗೂ ವಿವೇಚನೆ ಇಲ್ಲದ ವಿಷಯಗಳನ್ನು ಸ್ವೀಕರಿಸಿ ತಮ್ಮ ಮನಸ್ಸುಗಳನ್ನು ತಾವೇ ಮೂರ್ಖತನದಿಂದ ಕೆಡಿಸಿಕೊಳ್ಳುತ್ತಾರೆ. ಸೈತಾನನು ಅವರನ್ನು ಆತ್ಮೀಕವಾಗಿ ಕುರುಡರನ್ನಾಗಿ ಮಾಡಿ ಅವರ ವಿವೇಚನಾಶಕ್ತಿಯನ್ನು ಎಷ್ಟೊಂದು ವಿರೂಪಗೊಳಿಸಿದ್ದಾನೆಂದರೆ, ಅವರು ಕೆಟ್ಟತನವನ್ನು ನೋಡಲಾರರು ಹಾಗೂ ಗ್ರಹಿಸಿಕೊಳ್ಳಲಾರರು. ಅಲ್ಲದೆ ಸತ್ತು ಹೋಗಿರುವ ತನ್ನ ಸ್ನೇಹಿತರು ಈಗ ದೇವದೂತರಾಗಿ ಉನ್ನತ ಸ್ಥಾನದಲ್ಲಿದ್ದಾರೆಂದು ಹೇಳಿಕೊಂಡು, ಅವರ ಸಲಹೆಸೂಚನೆಗಳನ್ನು ಹಿಂಬಾಲಿಸುತ್ತಾರೆ. KanCCh 419.2

    ಇಂತಹ ಪ್ರೇತಸಂಪರ್ಕಸಿದ್ಧಾಂತಗಳ ವಿರುದ್ಧವಾಗಿ ನಾವು ಎಲ್ಲಾ ರೀತಿಯಿಂದಲೂ ಎಚ್ಚರಿಕೆ ವಹಿಸಬೇಕು ಮತ್ತು ಸತತವಾದ ದೃಢಪ್ರಯತ್ನದಿಂದ ಸೈತಾನನ ಇಂತಹ ಹೀನಾಯಕರವೂ ರಹಸ್ಯವೂ ಆದ ಪರೋಕ್ಷ ಸೂಚನೆಗಳನ್ನು ಹಾಗೂ ವಂಚನೆಗಳನ್ನು ಎದುರಿಸಬೇಕು ಅವನು ಸ್ವತಃ ಬೆಳಕಿನದೂತನಂತೆ ವೇಷಧರಿಸಿಕೊಂಡು ಲಕ್ಷಾಂತರಜನರನ್ನು ಮೋಸಗೊಳಿಸಿ ತನ್ನ ಸೆರೆಯಾಳುಗಳನ್ನಾಗಿ ಮಾಡಿಕೊಳ್ಳುತ್ತಾನೆ (2 ಕೊರಿಂಥ 11:14). ವಿಜ್ಞಾನ ಮತ್ತು ಮನುಷ್ಯರ ಮನಸ್ಸನ್ನು ಅವನು ಎಷ್ಟರಮಟ್ಟಿಗೆ ದುರುಪಯೋಗಪಡಿಸಿ ಕೊಳ್ಳುತ್ತಾನೆಂದರೆ, ಅದು ಭಯ ಹಾಗೂ ಆಶ್ಚರ್ಯಗೊಳಿಸುವಷ್ಟು ಅತ್ಯದ್ಭುತವಾಗಿರುತ್ತದೆ. ಕಪಾಲ ಸಾಮುದ್ರಿಕ ಶಾಸ್ತ್ರ (Phrenology) ಮನಃಶಾಸ್ತ್ರ ಹಾಗೂ ವಶೀಕರಣ (Mesmerism) ಮುಂತಾದ ವಿಜ್ಞಾನಗಳ ಮಾಧ್ಯಮಗಳ ಮೂಲಕ ಅವನು ಈ ತಲೆಮಾರಿನವರೊಂದಿಗೆ ನೇರವಾಗಿ ಕಾರ್ಯ ಮಾಡುತ್ತಾನೆ ಮತ್ತು ಕ್ರಿಸ್ತನು ಬರುವುದಕ್ಕೆ ಮೊದಲು, ಕೃಪೆಯ ಕಾಲ ಮುಗಿಯುವ ಸಮಯದಲ್ಲಿ ಮಹಾಸಾಮರ್ಥ್ಯದಿಂದ ತನ್ನ ಪ್ರಯತ್ನಗಳನ್ನು ಮಾಡುತ್ತಾನೆ.KanCCh 419.3