ಅಧ್ಯಾಯ-59 — ಮುಂದೆ ಬರಲಿರುವ ಸಂಕಟದ ಸಮಯ
ದೇವರಾಜ್ಞೆಗಳನ್ನು ತಿರಸ್ಕರಿಸಿ ಅಗೌರವ ತೋರಿಸುವುದು ಹೆಚ್ಚಾಗಿ ಕಂಡುಬಂದಾಗ, ಅವುಗಳನ್ನು ಕೈಕೊಂಡುನಡೆಯುವವರು ಮತ್ತು ಜಗತ್ತಿನ ನಡುವಣ ವಿಭಜನೆಯು ಹೆಚ್ಚು ಸ್ಪಷ್ಟವಾಗಿ ತಿಳಿದುಬರುತ್ತದೆ. ಒಂದು ಗುಂಪಿನವರು ದೈವೀಕಆಜ್ಞೆಗಳನ್ನು ತಿರಸ್ಕರಿಸಿದಷ್ಟೂ, ಮತ್ತೊಂದು ಗುಂಪಿನವರು ಅವುಗಳನ್ನು ಪ್ರೀತಿಸುವುದು ಅಷ್ಟೇ ಹೆಚ್ಚಾಗುತ್ತದೆ. ಸಂಕಟದ ಕಾಲವು ಶೀಘ್ರವಾಗಿ ಬರಲಿದೆ. ಲೋಕದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ ದೇವರ ದಂಡನೆಯ ದಿನವು ಇನ್ನೇನು ಬರಲಿದೆ ಎಂದು ತಿಳಿದುಬರುತ್ತದೆ. ಮನುಷ್ಯರನ್ನು ಶಿಕ್ಷಿಸುವುದು ದೇವರಿಗೆ ಇಷ್ಟವಿಲ್ಲ, ಆದಾಗ್ಯೂ ಶೀಘ್ರದಲ್ಲಿಯೇ ಆತನು ಅವರನ್ನು ದಂಡಿಸಲಿದ್ದಾನೆ.KanCCh 424.1
ದೇವರು ಮುಯ್ಯಿತೀರಿಸುವ ದಿನವು ನಮ್ಮಮೇಲೆ ಇನ್ನೇನು ಬರಲಿದೆ ಲೋಕದಲ್ಲಿ ನಡೆಯುತ್ತಿರುವ ಅಸಹ್ಯಕಾರ್ಯಗಳನ್ನು ಕಂಡು ನಿಟ್ಟುಸಿರಿನಿಂದ ಮೊರೆಯಿಡುವವರ ಹಣೆಯಲ್ಲಿ ಮಾತ್ರ ದೇವರ ಮುದ್ರೆಯು ಹಾಕಲ್ಪಡುವುದು. ಲೋಕದ ಸುಖಭೋಗದಲ್ಲಿ ಮುಳುಗಿ ಕುಡುಕರೊಂದಿಗೆ ಉಣ್ಣುತ್ತಾ, ತಿನ್ನುತ್ತಾ ಇರುವವರು ದುಷ್ಟರೊಂದಿಗೆ ಸೇರಿ ಖಂಡಿತವಾಗಿಯೂ ನಾಶವಾಗುವರು. ಯಾಕೆಂದರೆ ಕರ್ತನು ನೀತಿವಂತರನ್ನು ಕಟಾಕ್ಷಿಸುತ್ತಾನೆ. ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ. ಕೆಡುಕರಿಗೋ ಕರ್ತನುಕೋಪದ ಮುಖವುಳ್ಳವನಾಗಿರುವನು” (1 ಪೇತ್ರನು 3:12). KanCCh 424.2
ನಮ್ಮ ನಡೆನುಡಿಗಳು ನಾವು ಜೀವಸ್ವರೂಪನಾದ ದೇವರ ಮುದ್ರೆಯನ್ನು ಹೊಂದುತ್ತೇವೆಯೋ ಇಲ್ಲವೆ ಸೈತಾನನ ಗುರುತನ್ನು ಹೊಂದಿ ಆತನ ಉಗ್ರಕೋಪದ ಬೆಂಕಿಯಿಂದ ನಾಶವಾಗುತ್ತೇವೆಯೋ ಎಂದು ನಿರ್ಧರಿಸುತ್ತದೆ. ಈಗಾಗಲೇ ಈ ಲೋಕದ ಮೇಲೆ ದೇವರ ಕೋಪವು ಅಲ್ಪಪ್ರಮಾಣದಲ್ಲಿ ಕಂಡುಬಂದಿದೆ. ಆದರೆ ದೇವರು ಏಳುಉಪದ್ರವಗಳನ್ನು ಸುರಿಸಿ ತನ್ನ ಉಗ್ರಕೋಪವನ್ನು ಪ್ರಕಟಿಸುವಾಗ, ಪಶ್ಚಾತ್ತಾಪಪಡಲು ಸಾಧ್ಯವೇ ಇಲ್ಲವಾಗಿದ್ದು, ದುಷ್ಟರು ಆತನ ಕೃಪೆಯ ಆಶ್ರಯ ಪಡೆದುಕೊಳ್ಳಲು ಸಮಯವು ಮೀರಿ ಹೋಗಿರುತ್ತದೆ. ದೋಷ ಪರಿಹಾರಾರ್ಥವಾದ ಯಾವ ರಕ್ತವೂ ಅಂತವರ ಪಾಪದಕಲೆಯನ್ನು ಅಳಿಸಲಾಗದು.KanCCh 424.3
ಸಬ್ಬತ್ತನ್ನು ಕೈಕೊಳ್ಳುವವರೆಲ್ಲರೂ ದೇವರ ಮುದ್ರೆ ಹೊಂದುವುದಿಲ್ಲ. ಇತರರಿಗೆ ಸಬ್ಬತ್ತು ಹಾಗೂ ಸತ್ಯವನ್ನು ಬೋಧಿಸುವವರಲ್ಲಿಯೂ ಸಹ ಅನೇಕರು ತಮ್ಮ ಹಣೆಯ ಮೇಲೆ ದೇವರ ಮುದ್ರೆ ಹೊಂದುವುದಿಲ್ಲ. ಅವರಿಗೆ ಸತ್ಯದ ಬೆಳಕು ಕೊಡಲ್ಪಟ್ಟಿತ್ತು. ಕರ್ತನ ಚಿತ್ತವೇನೆಂದು ಅವರು ತಿಳಿದಿದ್ದರು ಹಾಗೂ ನಮ್ಮ ನಂಬಿಕೆಯ ಎಲ್ಲಾಅಂಶಗಳನ್ನೂ ಅವರು ಮನವರಿಕೆ ಮಾಡಿಕೊಂಡಿದ್ದರು. ಆದರೆ ಅವರ ಕ್ರಿಯೆಗಳು ಅವರು ಬೋಧಿಸಿದ ಬೊಧನೆಗೆ ಅನುಗುಣವಾಗಿರಲಿಲ್ಲ. ಪ್ರವಾದನೆಗಳ ಹಾಗೂ ದೈವೀಕ ಜ್ಞಾನದ ಭಂಡಾರದ ಬಗ್ಗೆ ಬಹಳಷ್ಟು ತಿಳಿದು ಕೊಂಡಿರುವವರು ಅದನ್ನು ನಂಬಿಕೆಯ ಮೂಲಕ ತೋರಿಸಬೇಕಾಗಿತ್ತು. ಅವರು ತಮ್ಮ ಕುಟುಂಬವನ್ನು ಅಧೀನದಲ್ಲಿಟ್ಟುಕೊಂಡು ಸ್ವಂತ ಮನೆಯನ್ನು ಚೆನ್ನಾಗಿ ಆಳುವವರಾಗಿರಬೇಕಾಗಿತ್ತು (1 ತಿಮೊಥೆ 3:3,4). ಇಂತಹ ಶಿಸ್ತಿನ ಕುಟುಂಬದಿಂದ ಅವರು ಸತ್ಯದ ಪರಿಣಾಮವೇನೆಂದು ಜಗತ್ತಿಗೆ ಸಾರಿ ಹೇಳಬೇಕಾಗಿತ್ತು.KanCCh 424.4
ಆದರೆ ಸಬ್ಬತ್ತನ್ನುಕೈಕೊಳ್ಳುವವರು ಹಾಗೂ ಅದರ ಸತ್ಯವನ್ನು ಬೋಧಿಸುವವರಲ್ಲಿ ಅನೇಕರು ದೈವಭಕ್ತಿಹೊಂದಿರುವುದಿಲ್ಲ. ಧಾರ್ಮಿಕವಾಗಿ ಉನ್ನತಮಟ್ಟ ಮುಟ್ಟುವುದರಲ್ಲಿ ಅವರು ವಿಫಲರಾದ್ದರಿಂದ, ಇತರರೂ ಸಹ ಅವರ ಸ್ಥಿತಿಯೇ ಸಾಕು ಎಂಬ ಸಂತೃಪ್ತಭಾವ ಹೊಂದುವಂತೆ ಮಾಡಿ ಅವರಿಗೂ ಸಹ ರಕ್ಷಣೆ ದೊರೆಯದಂತೆ ಮಾಡಿದರು. ದೇವರ ವಾಕ್ಯವನ್ನು ತಮಗೆ ಸಾರಿದ ಇಂತವರ ಮಾದರಿಯನ್ನು ಅನುಸರಿಸುವುದು ತಮ್ಮ ಆತ್ಮೀಕರಕ್ಷಣೆಗೆ ಅಪಾಯವೆಂದು ಜನರು ತಿಳಿದುಕೊಳ್ಳಲಿಲ್ಲ. ಕ್ರಿಸ್ತನು ತಾನೇ ನಮಗೆ ನಿಜವಾದ ಮಾದರಿಯಾಗಿದ್ದಾನೆ. ಪ್ರತಿಯೊಬ್ಬರು ಸಹ ನಮ್ರತೆಯಿಂದ ತಮ್ಮನ್ನು ತಗ್ಗಿಸಿಕೊಂಡು ಮೊಣಕಾಲೂರಿ ಪ್ರಾರ್ಥಿಸುತ್ತಾ ದೇವರವಾಕ್ಯ ಅಧ್ಯಯನಮಾಡಿ, ದೇವರು ತನ್ನಿಂದ ಏನು ಅಪೇಕ್ಷಿಸುತ್ತಾನೆಂದು ತಿಳಿದುಕೊಳ್ಳಬೇಕು. ದೇವರ ದೃಷ್ಟಿಯಲ್ಲಿ ಒಬ್ಬ ಸೇವಕನು ಎಷ್ಟೇ ಉನ್ನತಸ್ಥಾನದಲ್ಲಿರಲಿ, ತನಗೆ ಕೊಡಲ್ಪಟ್ಟ ಸತ್ಯದ ಬೆಳಕನ್ನು ಅನುಸರಿಸಲು ನಿರ್ಲಕ್ಷಿಸಿದಲ್ಲಿ, ಹಾಗೂ ಮಗುವಿನಂತ ಮುಗ್ಧ ಮನಸ್ಸಿನಿಂದ ಸತ್ಯವನ್ನು ಅರಿಯಲು ನಿರಾಕರಿಸಿದಲ್ಲಿ, ಅವನು ಆತ್ಮೀಕ ಅಂಧಕಾರದಲ್ಲಿ ಸಿಲುಕುವುದಲ್ಲದೆ, ಸೈತಾನನ ಭ್ರಮೆಗೆ ಒಳಗಾಗಿ ಇತರರನ್ನು ಸಹ ಅದೇ ಕೆಟ್ಟಮಾರ್ಗದಲ್ಲಿ ನಡೆಸುವನು.KanCCh 425.1
ನಮ್ಮ ಗುಣಸ್ವಭಾವದಲ್ಲಿ ಕೇವಲ ಒಂದೇಒಂದು ಕಳಂಕ ಅಥವಾ ದೋಷವಿದ್ದಲ್ಲಿ ನಮ್ಮಲ್ಲಿ ಒಬ್ಬರೂಸಹ ದೇವರ ಮುದ್ರೆ ಹೊಂದುವುದಿಲ್ಲ. ನಮ್ಮ ಸ್ವಭಾವದಲ್ಲಿರುವ ಎಲ್ಲಾ ತಪ್ಪುದೋಷಗಳನ್ನು ಸರಿಪಡಿಸುವ ಹಾಗೂ ದೇಹವೆಂಬ ಗರ್ಭಗುಡಿಯನ್ನು ಎಲ್ಲಾವಿಧವಾದ ಕಳಂಕದಿಂದ ಶುದ್ಧೀಕರಿಸುವುದನ್ನು ನಾವೇ ಮಾಡಬೇಕಾಗಿದೆ. ಆಗ ಪಂಚಾಶತ್ತಮ ಹಬ್ಬದ ದಿನದಲ್ಲಿ ಶಿಷ್ಯರ ಮೇಲೆ ಮುಂಗಾರುಮಳೆ ಸುರಿದಂತೆ ನಮ್ಮ ಮೇಲೆ ಹಿಂಗಾರು ಮಳೆ ಸುರಿಸಲ್ಪಡುವುದು. KanCCh 425.2
ನನ್ನ ಆತ್ಮೀಕಸ್ಥಿತಿಯು ಬಹಳ ನಿರಾಶಾದಾಯಕವಾಗಿದೆ ಹಾಗೂ ತಾನು ಪರಿಪೂರ್ಣವಾದ ಕ್ರೈಸ್ತನಂತೆ ಜೀವಿಸಲು ಸಾಧ್ಯವಿಲ್ಲವೆಂದು ಯಾರೂ ಹೇಳಬಾರದು. ಕ್ರಿಸ್ತನ ಮರಣದಿಂದ ಎಲ್ಲರಿಗೂ ಸಾಕಷ್ಟು ಪೂರ್ವಸಿದ್ಧತೆ ಮಾಡಲಾಗಿದೆ. ಅಗತ್ಯದ ಸಮಯದಲ್ಲಿ ಆತನು ಸದಾಕಾಲವೂ ನಮ್ಮೊಂದಿಗಿರುವ ಸಹಾಯಕನಾಗಿದ್ದಾನೆ. ನಂಬಿಕೆಯಿಂದ ಆತನನ್ನು ನಾವು ಕರೆಯುವಾಗ, ನಮ್ಮ ಬೇಡಿಕೆಗಳನ್ನು ಕೇಳಿ ಅದಕ್ಕೆ ಸದುತ್ತರ ದಯಪಾಲಿಸುವೆನೆಂದು ಕ್ರಿಸ್ತನು ವಾಗ್ದಾನ ಮಾಡಿದ್ದಾನೆ.KanCCh 425.3
ನಾವು ಜೀವಿಸುವುದಕ್ಕೆ ಕ್ರಿಯಾತ್ಮಕವಾದ ನಂಬಿಕೆ ಬೇಕು! ಅದರ ಅಗತ್ಯ ನಮಗಿದೆ ಹಾಗೂ ನಾವು ಅದನ್ನು ಹೊಂದಿಕೊಳ್ಳಬೇಕು. ಇಲ್ಲದಿದ್ದಲ್ಲಿ ಶೋಧನೆಯ ಸಮಯದಲ್ಲಿ ನಾವು ಎದೆಗುಂದಿ ಸೋತುಹೋಗುತ್ತೇವೆ. ಆ ಸಮಯದಲ್ಲಿ ನಮ್ಮ ಹಾದಿಯಲ್ಲಿರುವ ಆತ್ಮೀಕಕತ್ತಲೆಯು ನಮ್ಮನ್ನು ನಿರಾಶೆ ಅಥವಾ ಹತಾಶೆಗೊಳಿಸಬಾರದು, ದೇವರು ನಮಗೆ ತನ್ನ ಹೇರಳವಾದ ಆಶೀರ್ವಾದ ಕೊಡಲು ಬರುವಾಗ, ತನ್ನ ಮಹಿಮೆಯನ್ನು ಮರೆಮಾಡಿಕೊಳ್ಳುವ ಪರದೆಯು ಅದಾಗಿದೆ. ನಮ್ಮ ಹಿಂದಿನ ಅನುಭವಗಳಿಂದ ಇದನ್ನು ತಿಳಿದುಕೊಳ್ಳಬೇಕು. ದೇವರು ತನ್ನ ಜನರೊಂದಿಗೆ ವಾದವಿವಾದ ಮಾಡುವಾಗ, ಈ ಅನುಭವವು ನಮಗೆ ಆದರಣೆ ಹಾಗೂ ನಿರೀಕ್ಷೆಯ ಆಧಾರವಾಗಿದೆ.KanCCh 426.1
ಈಗ ನಾವು ನಮ್ಮನ್ನು ಹಾಗೂ ನಮ್ಮಮಕ್ಕಳನ್ನು ಈ ಲೋಕದ ಮಲಿನತೆಯಿಂದ ದೂರವಿರಿಸಬೇಕಾಗಿದೆ. ಈಗ ನಾವು ಕ್ರಿಸ್ತನ ರಕ್ತದಿಂದ ನಮ್ಮ ಗುಣಸ್ವಭಾವಗಳೆಂಬ ವಸ್ತ್ರಗಳನ್ನು ತೊಳೆದು ನೀತಿವಂತರಾಗಬೇಕಾಗಿದೆ. ನಮ್ಮ ಅಹಂಕಾರ, ಲೋಕದಮೇಲಿನ ವ್ಯಾಮೋಹ, ಆವೇಶ, ಉದ್ವೇಗ, ರೋಷ ಹಾಗೂ ಆತ್ಮೀಕ ಸೋಮಾರಿತನವನ್ನು ಜಯಿಸಬೇಕಾದ ಸಮಯವು ಇದೇ ಆಗಿದೆ. ನಾವು ಆತ್ಮೀಕ ನಿದ್ರೆಯಿಂದ ಎಚ್ಚೆತ್ತು ನಮ್ಮ ಗುಣಸ್ವಭಾವದಲ್ಲಿ ಸಾಮರಸ್ಯ ಹೊಂದಲು ಪ್ರಯತ್ನಮಾಡಬೇಕಾದ ಸಮಯವು ಈಗಲೇ ಬಂದಿದೆ. “ನೀವು ಈ ಹೊತ್ತು ದೇವರಶಬ್ದಕ್ಕೆ ಕಿವಿಗೊಟ್ಟರೆ.... ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ” ಎಂದು ದೇವರು ಹೇಳುತ್ತಾನೆ (ಇಬ್ರಿಯ 3:15). KanCCh 426.2
ಬರಲಿರುವ ಸಂಕಟಗಳನ್ನು ಎದುರಿಸಲಿಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾದ ಸಮಯವು ಇದೇ ಆಗಿದೆ. ಅಪರಿಶುದ್ಧ ಮಹಿಳೆ ಅಥವಾ ಪುರುಷನ ಹಣೆಯ ಮೇಲೆ ದೇವರಮುದ್ರೆಯು ಎಂದಿಗೂ ಹಾಕಲ್ಪಡುವುದಿಲ್ಲ. ಮಹತ್ವಾಕಾಂಕ್ಷೆಯುಳ್ಳ, ಲೋಕವನ್ನು ಹಾಗೂ ಅದರ ವೈಭೋಗವನ್ನು ಪ್ರೀತಿಸುವವರು, ಸುಳ್ಳು ನಾಲಿಗೆ ಅಥವಾ ವಂಚನೆಯ ಹೃದಯವುಳ್ಳ ಯಾರೂ ಸಹ ದೇವರ ಮುದ್ರೆ ಹೊಂದಲಾಗುವುದಿಲ್ಲ. ದೇವರ ಮುದ್ರೆಯನ್ನು ಹೊಂದುವ ಎಲ್ಲರೂ ಸಹ ಪರಲೋಕಕ್ಕೆ ಹೋಗುವವರಾಗಿರುವುದರಿಂದ, ಅವರು ದೇವರ ಮುಂದೆ ಕಳಂಕವಿಲ್ಲದವರಾಗಿರಬೇಕು- “ನನ್ನ ಸಹೋದರ ಸಹೋದರಿಯರೇ, ನಂಬಿಕೆಯಿಂದ ಮುನ್ನುಗ್ಗಿ ಹಾಗೂ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಲು ನಿಮ್ಮ ಗಮನಹರಿಸಬೇಕು. ಈ ಸಂಕಟ ಸಮಯದ ಭಯಾನಕವಾದ ಗಂಭೀರತೆಯು ನಿಮಗೆ ಮನವರಿಕೆಯಾಗಬೇಕಾದರೆ, ನೀವೇ ಸ್ವತಃ ಸತ್ಯವೇದವನ್ನು ಅಧ್ಯಯನ ಮಾಡಿ.KanCCh 426.3