Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರನ್ಯಾಯತೀರ್ಪುಗಳು

    ನಾವು ಅಂತ್ಯಕಾಲವು ಇನ್ನೇನು ಮುಕ್ತಾಯವಾಗುವ ಸಮಯದಲ್ಲಿದ್ದೇವೆ. ದೇವರ ಶಿಕ್ಷಾರೂಪವಾದ ನ್ಯಾಯತೀರ್ಪುಗಳು ಈಗಾಗಲೇದೇಶದಮೇಲೆ ಬಂದಿವೆಯೆಂದುಶ್ರೀಮ ತಿವೈಟಮ್ಮನವರಿಗೆ ದೇವರು ದರ್ಶನದಲ್ಲಿ ತೋರಿಸಿದ್ದಾನೆ. ಇನ್ನೇನು ನಡೆಯಲಿರುವ ಘಟನೆಗಳ ಬಗ್ಗೆ ದೇವರು ನಮಗೆ ಎಚ್ಚರಿಕೆಕೊಟ್ಟಿದ್ದಾನೆ. ಆತನ ವಾಕ್ಯದಿಂದ ಬೆಳಕುಪ್ರಕಾಶಿಸುತ್ತಿದೆ, ಆದಾಗ್ಯೂ ಕತ್ತಲು ಭೂಮಿಯನ್ನು ಆವರಿಸಿದೆ. ಅದಕ್ಕಿಂತಲೂ ಘೋರವಾದ ಕತ್ತಲು ಜನರನ್ನು ಆವರಿಸಿದೆ “ಸಮಾಧಾನವಾಗಿಯೂ, ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ, ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವ ವೇದನೆ ಬರುವ ಪ್ರಕಾರ ಬರುವುದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು” (1 ಥೆಸಲೋನಿಕ 5:3; ಮತ್ತಾಯ 24:38,39; ಲೂಕ 17:25; 21:34, 35). KanCCh 430.1

    ದೇವರು ತನ್ನ ಕೃಪಾಹಸ್ತವನ್ನು ಲೋಕದಿಂದ ಹಿಂದೆಗೆದುಕೊಳ್ಳುವನು. ಗಶೀಘ್ರದಲ್ಲಿಯೇ ಎಲ್ಲೆಲ್ಲಿಯೂ ನಾಶ,ಮರಣವುಂಟಾಗುವುದು, ಅಪರಾಧ, ಕೊಲೆಗಳು ಹೆಚ್ಚಾಗುವವು. ಮತ್ತು ಬಡವರನ್ನು ದಬ್ಬಾಳಿಕೆಯಿಂದ ನಡೆಸಿಕೊಳ್ಳುವ ಶ್ರೀಮಂತರ ವಿರುದ್ಧವಾಗಿ ಕ್ರೂರವಾದ ದುಷ್ಟಶಕ್ತಿಗಳು ಎದುರು ಬೀಳುವವು. ದೇವರ ರಕ್ಷಣೆ ಇಲ್ಲದಿರುವವರಿಗೆ ಯಾವ ಅಧಿಕಾರಸ್ಥಾನದಲ್ಲಿರಲಿ ಅಥವಾ ಯಾವಸ್ಥಳದಲ್ಲಿರಲಿ, ಈ ಸುರಕ್ಷತೆ ಇರುವುದಿಲ್ಲ. ಮನುಷ್ಯರು ಹೊಸಹೊಸ ಹಿಂಸಾವಿಧಾನಗಳನ್ನು ಕಂಡುಹಿಡಿದು ತಮ್ಮ ಸಾಮಥ್ರ್ಯವನ್ನು ಜನರನ್ನು ಹಾನಿಗೊಳಿಸುವುದಕ್ಕೂ ಮತ್ತು ಕೊಲ್ಲುವುದಕ್ಕೂ ಉಪಯೋಗಿಸುವರು. KanCCh 430.2

    ದೇವರತೀರ್ಪು ಈಗಾಗಲೇ ದೇಶದಮೇಲೆ ಬಂದಿದೆ. ಯುದ್ಧಗಳಾಗುವುದನ್ನು ಯುದ್ಧಗಳಾಗುವ ಸಂಭವ, ಪ್ರವಾಹ ಮತ್ತು ಬೆಂಕಿಯಿಂದಾಗುತ್ತಿರುವ ವಿನಾಶ- ಇವೆಲ್ಲವೂ ಅಂತ್ಯಕಾಲದವರೆಗೆ ಹೆಚ್ಚಾಗುವವು. ಅಲ್ಲದೆ ಸಂಕಟದ ಸಮಯವು ಶೀಘ್ರದಲ್ಲಿಯೇ ಬರಲಿದೆ ಎಂಬುದನ್ನು ಸ್ಪಷ್ಟವಾಗಿ ಇವು ತಿಳಿಸುತ್ತವೆ. KanCCh 430.3

    ದೇಶದೇಶಗಳ ನಡುವೆ ಬಹಳ ಕಷ್ಟಕರವಾದ ತೊಂದರೆ, ವಿಪತ್ತುಗಳು ಸಂಭವಿಸುವವು. ಯೇಸುಕ್ರಿಸ್ತನು ಎರಡನೇಸಾರಿ ಬರುವ ತನಕ ಈ ಕಷ್ಟಗಳು ನಿಲ್ಲುವುದಿಲ್ಲ. ಪರಲೋಕದ ಸಿಂಹಾಸನದಲ್ಲಿ ಆಸೀನರಾಗಿರುವಾತನೂ, ಸಮಸ್ತವನ್ನೂ ಆಳುವಾತನೂ ಆಗಿರುವ ಕ್ರಿಸ್ತನನ್ನು ನಾವೆಲ್ಲರೂ ಹಿಂದೆಂದಿಗಿಂತಲೂ ಒಟ್ಟಾಗಿ ಆರಾಧಿಸಬೇಕಾಗಿದೆ. ದೇವರು ತನ್ನ ಜನರನ್ನು ತ್ಯಜಿಸಿಲ್ಲ ಹಾಗೂ ನಾವು ಆತನನ್ನು ತೊರೆಯಬಾರದು. ಅದರಲ್ಲಿಯೇ ನಮ್ಮ ಬಲವು ಆಧಾರಗೊಂಡಿದೆ. KanCCh 431.1

    *****