Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಬಿಡುಗಡೆಗಾಗಿ ಪ್ರಯತ್ನಿಸುತ್ತಿರುವವರು ಜಯಹೊಂದುತ್ತಾರೆ

    “ದೇವಜನರು ಬಲವಾಗಿ ಜರಡಿಹಿಡಿಯಲ್ಪಟ್ಟದ್ದನ್ನು ನಾನು ನೋಡಿದೆ. ಕೆಲವರು ದೃಢವಾದನಂಬಿಕೆಯಿಂದಲೂ ಹಾಗೂ ಬಹಳ ದುಃಖದಿಂದಲೂ ಕಣ್ಣೀರಿಡುತ್ತಾ ದೇವರಿಗೆ ಮೊರೆಯಿಡುವುದನ್ನು ಕಂಡೆನು” ಎಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. “ಆದರೆ ಬೇರೆಕೆಲವರು ದುಃಖದಿಂದ ಕಣ್ಣೀರಿಡುತ್ತಿರಲಿಲ್ಲ. ಅವರು ಉದಾಸೀನತೆ ಹಾಗೂ ನಿರ್ಲಕ್ಷ್ಯ ತೋರಿಸುತ್ತಿದ್ದರು. ತಮ್ಮ ಸುತ್ತಲಿರುವ ಅಂಧಕಾರವನ್ನು ಅವರು ವಿರೋಧಿಸುತ್ತಿರಲಿಲ್ಲವಾದ್ದರಿಂದ, ಕತ್ತಲೆಯು ಅವರನ್ನು ದಟ್ಟವಾದ ಕಪ್ಪುಮೋಡದಂತೆ ಮುಚ್ಚಿಬಿಟ್ಟಿತು. ದೇವದೂತರು ಇವರನ್ನು ಬಿಟ್ಟು ಹೋಗಿ, ತಮ್ಮೆಲ್ಲಾ ಶಕ್ತಿಮೀರಿ ಕೆಟ್ಟದೂತರನ್ನು ವಿರೋಧಿಸುತ್ತಿರುವ ಹಾಗೂ ದೇವರಸಹಾಯಕ್ಕಾಗಿ ಸತತವಾಗಿ ಬೇಡಿಕೊಳ್ಳುತ್ತಿದ್ದವರ ಬಳಿಗೆ ತ್ವರೆಯಿಂದ ಹೋಗುವುದನ್ನು ನಾನು ನೋಡಿದೆ. ಆದರೆ ದೇವರಸಹಾಯವನ್ನು ಯಾಚಿಸದವರನ್ನು ದೇವದೂತರು ಬಿಟ್ಟುಹೋದರು, ಅನಂತರ ನಾನು ಅವರನ್ನು ಮತ್ತೆ ಕಾಣಲಿಲ್ಲ. ಆದರೆ ಕಣ್ಣೀರಿಟ್ಟು ಸಹಾಯಕ್ಕಾಗಿ ದೇವರನ್ನು ಯಾಚಿಸುತ್ತಾ ಪ್ರಾರ್ಥಿಸುತ್ತಿದ್ದವರು ಕಳಕಳಿಯಿಂದ ಮೊರೆಯಿಡುವುದನ್ನು ಮುಂದುವರೆಸುತ್ತಿದ್ದರು. ಆಗ ಕ್ರಿಸ್ತನ ಬಳಿಯಿಂದ ಬೆಳಕಿನಕಿರಣವು ಆಗಾಗ ಅವರಿಗೆ ಕಾಣಿಸಿಕೊಂಡು ಅವರನ್ನು ಉತ್ತೇಜಿಸಿ, ಅವರ ಮುಖಗಳು ಹೊಳೆಯುವಂತೆ ಮಾಡುತ್ತಿತ್ತು” ಎಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ.KanCCh 432.3

    ಶ್ರೀಮತಿವೈಟಮ್ಮನವರು ತಮ್ಮ ದರ್ಶನದಲ್ಲಿ ದೇವಜನರು ನಂಬಿಕೆಯಲ್ಲಿ ಬಹಳವಾಗಿ ಕುಗ್ಗಿಹೋದದ್ದರ ಅರ್ಥವೇನೆಂದು ದೇವದೂತನನ್ನು ಕೇಳಿದರು. ಅದು ಸತ್ಯಸಾಕ್ಷಿಯಾಗಿರುವ ಯೇಸುವು ಲವೊದಿಕೀಯ ಸಭೆಗೆ ಧೈರ್ಯತುಂಬಲು ನೀಡಿದ ಸಲಹೆಯ ಪ್ರಾಮಾಣಿಕವಾದ ಸಾಕ್ಷ್ಯಾಧಾರಗಳಿಂದ ಉಂಟಾಗುವುದೆಂದು ಅವರಿಗೆ ತಿಳಿಸಲಾಯಿತು. ಇದು ಈ ಸಾಕ್ಷಿಯನ್ನು ಅಂಗೀಕರಿಸುವವನ ಹೃದಯದಲ್ಲಿ ಪರಿಣಾಮ ಬೀರುವುದರಿಂದ ಅವನು ಆ ಪ್ರಾಮಾಣಿಕವಾದ ಸತ್ಯವನ್ನು ಉನ್ನತಗೊಳಿಸುತ್ತಾನೆ. ಕೆಲವರಿಗೆ ಮಾಣಿಕವಾದ ಈ ಸತ್ಯವನ್ನು ತಡೆದುಕೊಳ್ಳಲಾಗದು. ಆದುದರಿಂದ ಅವರು ಅದರ ವಿರುದ್ಧವಾಗಿ ಏಳುವುದರಿಂದ ದೇವಜನರಲ್ಲಿ ದೇವರಮೇಲಿನ ನಂಬಿಕೆಯು ಕುಂದಿಹೋಗಿ ಅವರ ವಿಶ್ವಾಸ ಚಂಚಲಗೊಳ್ಳುತ್ತದೆ. ಸತ್ಯಸಾಕ್ಷಿಯಾಗಿರುವವನ ಸಾಕ್ಷಿಗೆ ಸಂಪೂರ್ಣ ಗಮನ ನೀಡಲಿಲ್ಲ. ಸಭೆಯ ಅಳಿವು ಉಳಿವು ಆಧಾರಗೊಂಡಿರುವ ಈ ಗಾಂಭೀರ್ಯವಾದ ಸಾಕ್ಷಿಯನ್ನು ಕ್ರೈಸ್ತಸಭೆಯು ಸಂಪೂರ್ಣವಾಗಿ ನಿರ್ಲಕ್ಷಿಸದಿದ್ದರೂ, ತಾತ್ಸಾರವಾಗಿ ಎಣಿಸಿತು. ಈ ಸಾಕ್ಷಿಯು ಅದನ್ನು ಕೇಳುವವರಲ್ಲಿ ತೀವ್ರ ಪಶ್ಚಾತ್ತಾಪ ಹುಟ್ಟಿಸಬೇಕು ಹಾಗೂ ಅದನ್ನು ಯಥಾರ್ಥವಾಗಿ ಅಂಗೀಕರಿಸುವವರು ಅದಕ್ಕೆ ವಿಧೇಯರಾಗುವರು ಮತ್ತು ಶುದ್ಧೀಕರಿಸಲ್ಪಡುವರು.KanCCh 433.1

    ದೇವದೂತನು ಶ್ರೀಮತಿವೈಟಮ್ಮನವರಿಗೆ “ಕೇಳು” ಎಂದು ಹೇಳಿದನು. ಅದರಂತೆ ಅವರು ಗಮನವಿಟ್ಟು ಕೇಳಿದಾಗ “ಅವರಿಗೆ ಅನೇಕ ವಾದ್ಯಗಳಿಂದ ಬಹಳ ಮಧುರವಾದ, ಶುಶ್ರಾವ್ಯವಾದ ಪರಿಪೂರ್ಣವಾದ ಧ್ವನಿಯಿಂದ ಒಂದು ಸ್ವರವು ಕೇಳಬಂದಿತು. ಶ್ರೀಮತಿವೈಟಮ್ಮನವರು ಇದುವರೆಗೂ ಕೇಳಿದ ಸಂಗೀತಕ್ಕಿಂತಲೂ ಈ ಸ್ವರವು ಅತ್ಯಂತ ಮಧುರವಾಗಿತ್ತು. ಆ ಸ್ವರವು ಕರುಣೆ, ಅನುಕಂಪ, ಪರಿಶುದ್ಧ ಸಂತೋಷದಿಂದ ತುಂಬಿದೆ ಎಂದು ಅವರಿಗೆ ಅನಿಸಿತು. ಶ್ರೀಮತಿವೈಟಮ್ಮನವರು ಸಂಪೂರ್ಣ ರೋಮಾಂಚನಗೊಂಡರು“.KanCCh 433.2

    ಅನಂತರ ದೇವದೂತನು ಶ್ರೀಮತಿವೈಟಮ್ಮನವರಿಗೆ ಮತ್ತೊಮ್ಮೆ `ಅಲ್ಲಿ ನೋಡು’ ಎಂದು ಹೇಳಿದನು. ಅದರಂತೆ ಅವರು ಮೊದಲುನೋಡಿದ್ದ ಬಹಳವಾಗಿ ಕುಂದಿಹೋಗಿ ವಿಶ್ವಾಸವು ಚಂಚಲಗೊಂಡಿದ್ದ ದೇವಜನರ ಗುಂಪಿನ ಕಡೆಗೆ ತಮ್ಮ ಗಮನಹರಿಸಿದರು. ಮೊದಲು ನೋಡಿದ್ದಾಗ ಕಣ್ಣೀರಿಡುತ್ತಾ ಬಹಳವಾಗಿ ವೇದನೆಯಿಂದ ಪ್ರಾರ್ಥಿಸುತ್ತಿದ್ದವರನ್ನು ತಿರುಗಿ ಶ್ರೀಮತಿ ವೈಟಮ್ಮನವರಿಗೆ ದೇವದೂತನು ತೋರಿಸಿದನು. ಅವರ ಸುತ್ತಲೂ ರಕ್ಷಣೆ ನೀಡುತ್ತಿದ್ದ ದೇವದೂತರ ಸಂಖ್ಯೆಯು ಈಗ ಎರಡರಷ್ಟಾಗಿತ್ತು ಹಾಗೂ ಅವರ ತಲೆಯಿಂದ ಕಾಲಿನವರೆಗೂ ರಕ್ಷಾಕವಚವು (Armour) ಆವರಿಸಿಕೊಂಡಿತ್ತು. ಅವರು ಶಿಸ್ತಿನಿಂದ, ದೃಢವಾಗಿ ಸೈನಿಕರಂತೆ ಹೋಗುತ್ತಿದ್ದರು. ಅವರ ಮುಖದಲ್ಲಿ ಅವರು ಎದುರಿಸಿದ ತೀವ್ರಹೋರಾಟ ಹಾಗೂ ಅಪಾರ ಯಾತನೆಯ ಸಂಘರ್ಷದ ಲಕ್ಷಣವು ವ್ಯಕ್ತವಾಗುತ್ತಿತ್ತು. ಆದಾಗ್ಯೂ ಅವರ ಮುಖವು ಈಗ ಪರಲೋಕದ ಮಹಿಮೆ ಹಾಗೂ ಬೆಳಕಿನಿಂದ ಹೊಳೆಯುತ್ತಿತ್ತು. ಅವರು ಎಲ್ಲಾವಿಧವಾದ ಶೋಧನೆ, ಹೋರಾಟಗಳ ವಿರುದ್ಧ ಜಯಹೊಂದಿದ್ದರು. ಇದರಿಂದ ಅವರು ದೇವರಿಗೆ ಪವಿತ್ರವಾದ ಸಂತೋಷದಿಂದ ಗಾಢವಾದ ಕೃತಜ್ಞತೆ ಹೊಂದಿದ್ದರು. KanCCh 434.1

    ಈ ಗುಂಪಿನ ಜನರ ಸಂಖ್ಯೆಯು ಕಡಿಮೆಯಾಗಿತ್ತು. ಕೆಲವರ ನಂಬಿಕೆಯು ಕುಂದಿಹೋಗಿದ್ದರಿಂದ ಅವರು ದೇವರಲ್ಲಿ ವಿಶ್ವಾಸಕಳೆದುಕೊಂಡು ಚಂಚಲರಾಗಿದ್ದರಿಂದ ಅವರು ಮಾರ್ಗಮಧ್ಯದಲ್ಲಿ ಈ ಗುಂಪಿನಿಂದ ಕಳೆದು ಹೋಗಿದ್ದರು. ಜಯ ಮತ್ತು ರಕ್ಷಣೆಯು ಬಹಳ ಅಮೂಲ್ಯವೆಂದು ಎಣಿಸಿ ಅದಕ್ಕಾಗಿ ಸತತವಾಗಿ ದೇವರಿಗೆ ಮೊರೆಯಿಡುತ್ತಾ, ಬಹುವ್ಯಥೆಯಿಂದ ಮೊರೆಯಿಡುತ್ತಿದ್ದವರ ಜೊತೆಯಲ್ಲಿ ಸೇರದೆ ಅದರ ವಿಷಯದಲ್ಲಿ ಉದಾಸೀನತೆಯಿಂದ ವರ್ತಿಸಿ ನಿರ್ಲಕ್ಷಿಸಿದವರು ರಕ್ಷಣೆ ಹೊಂದಲಿಲ್ಲ. ಇದರಿಂದ ಅವರು ಆತ್ಮೀಕವಾದ ಕತ್ತಲೆಯಲ್ಲಿ ಬಿಡಲ್ಪಟ್ಟರು. ಇವರು ದೇವರ ಎಚ್ಚರಿಕೆಯನ್ನು ಬಿಟ್ಟು ನಾಶವಾದರೂ, ಅಷ್ಟೇಸಂಖ್ಯೆಯಲ್ಲಿ ಸತ್ಯವನ್ನು ದೃಢವಿಶ್ವಾಸದಿಂದ ಅಂಗೀಕರಿಸಿದವರು ತಕ್ಷಣವೇ ಅವರ ಸ್ಥಾನ ತುಂಬುತ್ತಿದ್ದರು. ಆದಾಗ್ಯೂ ಸೈತಾನನ ಕೆಟ್ಟದೂತರು ಅವರಸುತ್ತಲೂ ಗುಂಪುಗೂಡಿ ನಿಂತಿದ್ದರು. ಆದರೆ ಆ ದೇವಜನರ ಮೇಲೆ ಇವರಿಗೆ ಯಾವ ಅಧಿಕಾರವೂ ಇರುವುದಿಲ್ಲ (ಎಫೆಸ 6:12-18ನೇ ವಚನಗಳನ್ನು ಓದಿರಿ). ಯಾಕೆಂದರೆ ಅವರು ದೇವರು ದಯಪಾಲಿಸಿದ ಸರ್ವಾಯುಧಗಳನ್ನು ಧರಿಸಿಕೊಂಡಿರುವರು.KanCCh 434.2

    ಈ ಸರ್ವಾಯುಧಗಳನ್ನು ಧರಿಸಿಕೊಂಡಿರುವವರು ಸತ್ಯವನ್ನು ಮಹಾ ಸಾಮರ್ಥ್ಯದಿಂದ ಸಾರುವುದನ್ನು ಶ್ರೀಮತಿ ವೈಟಮ್ಮನವರು ಕೇಳಿದರು. ಅದು ಬಹಳ ಪರಿಣಾಮಕಾರಿಯಾಗಿತ್ತು. ಕೆಲವರು ಕಟ್ಟಲ್ಪಟ್ಟಿರುವುದನ್ನು ಅಂದರೆ ಕೆಲವು ಪತ್ನಿಯರು ತಮ್ಮ ಗಂಡಂದಿರಿಂದ ಹಾಗೂ ಕೆಲವುಮಕ್ಕಳು ತಮ್ಮ ತಂದೆತಾಯಿಯರಿಂದ ಬಂಧಿಸಲ್ಪಟ್ಟಿರುವುದನ್ನು ಅವರು ನೋಡಿದರು. ಸತ್ಯವನ್ನು ಕೇಳದಂತೆ ತಡೆಯಲ್ಪಟ್ಟಿದ್ದವರು ಅಥವಾ ನಿರಾಕರಿಸಲ್ಪಟ್ಟವರು ಈಗ ಬಹಳ ಉತ್ಸಾಹದಿಂದ ಅದನ್ನು ಹಿಡಿದುಕೊಂಡಿರುವರು. ಅವರ ಬಂಧು ಬಳಗದವರು, ಸಂಬಂಧಿಗಳ ಬಗ್ಗೆ ಇದ್ದ ಭಯ ಇಲ್ಲದೆಹೋಗಿದೆ. ಸತ್ಯವು ಮಾತ್ರ ಅವರ ದೃಷ್ಟಿಯಲ್ಲಿ ಉನ್ನತವಾಗಿರುವುದು. ಜೀವಕ್ಕಿಂತಲೂ ಅದು ಹೆಚ್ಚು ಅಮೂಲ್ಯವೂ ಹಾಗೂ ಪ್ರೀತಿಯುಳ್ಳದ್ದೂ ಆಗಿದೆ. ಅವರು ಸತ್ಯಕ್ಕಾಗಿ ಹಸಿದು ಬಾಯಾರಿದ್ದರು. ಇದನ್ನು ಕಂಡ ಶ್ರೀಮತಿವೈಟಮ್ಮನವರು ದೇವದೂತನಿಗೆ ಈ ಮಹಾಬದಲಾವಣೆಗೆ ಕಾರಣವೇನೆಂದು ಕೇಳಿದರು. ಅದಕ್ಕುತ್ತರವಾಗಿ ದೇವದೂತನು ಕರ್ತನಾದ ದೇವರ ಸನ್ನಿಧಾನದಿಂದ ಸುರಿಸಲ್ಪಟ್ಟು ಹೊಸ ಚೈತನ್ಯನೀಡಿದ ಹಿಂಗಾರು ಮಳೆ ಹಾಗೂ ಮೂರನೇ ದೂತನು ಮಹಾಶಬ್ದದಿಂದ ಸಾರಿದ ವರ್ತಮಾನವೇ ಇದಕ್ಕೆ ಕಾರಣವೆಂದು ಹೇಳಿದನು. KanCCh 434.3

    ದೇವರಿಂದ ಆರಿಸಲ್ಪಟ್ಟ ಈ ಜನರಲ್ಲಿ ಮಹಾಶಕ್ತಿಯಿತ್ತು. ದೇವದೂತನು ಪ್ರವಾದಿನಿಯವರಾದ ಶ್ರೀಮತಿ ವೈಟಮ್ಮನವರಿಗೆ “ಅಲ್ಲಿ ನೋಡು” ಎಂದು ಹೇಳಿದನು. ಆಗ ಅವರ ಗಮನವು ದುಷ್ಟರು ಅಥವಾ ಅವಿಶ್ವಾಸಿಗಳ ಕಡೆಗೆ ಹರಿಯಿತು. ಅವರು ಉದ್ರಿಕ್ತರಾಗಿದ್ದರು. ದೇವಜನರ ಉತ್ಸಾಹ ಮತ್ತು ಶಕ್ತಿಯು ಈ ದುಷ್ಟರನ್ನು ರೊಚ್ಚಿಗೆಬ್ಬಿಸಿತ್ತು. ಎಲ್ಲಾ ಕಡೆಯೂ ಗಲಿಬಿಲಿ, ಗಲಿಬಿಲಿ, ದೇವರ ಬೆಳಕು ಹಾಗೂ ಸಾಮರ್ಥ್ಯ ಹೊಂದಿದ್ದ ಜನರ ವಿರುದ್ಧವಾಗಿ ಕಾನೂನು ಕ್ರಮ ತೆಗೆದುಕೊಂಡದ್ದನ್ನು ಶ್ರೀಮತಿವೈಟಮ್ಮನವರು ನೋಡಿದರು.KanCCh 435.1

    ಈ ದೇವಜನರ ಗುಂಪಿನ ಸುತ್ತಲೂ ದಟ್ಟವಾದ ಕತ್ತಲು ಆವರಿಸಿಕೊಂಡಿತ್ತು, ಆದರೂ ಅವರು ದೇವರಿಗೆ ಮೆಚ್ಚುಗೆಯಾಗಿ, ಆತನ ಮೇಲೆ ಬಲವಾದ ಭರವಸೆ ಹೊಂದಿದ್ದರು. ಅವರು ದಿಕ್ಕುತೋಚದಂತಾಗಿರುವುದನ್ನು ಹಾಗೂ ದೇವರಿಗೆ ಶ್ರದ್ಧಾಪೂರ್ವಕವಾಗಿ ಮೊರೆಯಿಡುವುದನ್ನು ಶ್ರೀಮತಿ ವೈಟಮ್ಮನವರು ನೋಡಿದರು. ಅವರು ಹಗಲಿರುಳು ಎಡೆಬಿಡದೆ ಆತನಿಗೆ ಮೊರೆಯಿಡುತ್ತಿದ್ದರು (ಲೂಕ 18:7,8, ಪ್ರಕಟನೆ 14:14,15). KanCCh 435.2

    “ಓ ದೇವರೇ, ನಿನ್ನ ಚಿತ್ತ ನೆರವೇರಲಿ. ಇದು ನಿನ್ನ ನಾಮವನ್ನು ಮಹಿಮೆ ಪಡಿಸುವುದಾದಲ್ಲಿ, ನಿನ್ನ ಜನರು ತಪ್ಪಿಸಿಕೊಳ್ಳುವಂತ ಒಂದು ಮಾರ್ಗ ಮಾಡು! ನಮ್ಮ ಸುತ್ತಲೂ ಮುತ್ತಿಕೊಂಡಿರುವ ಅನ್ಯರಿಂದ ನಮ್ಮನ್ನು ಬಿಡಿಸು! ಅವರು ನಮ್ಮನ್ನು ಕೊಲ್ಲಬೇಕೆಂದು ಕಾನೂನು ಕ್ರಮ ಕೈಗೊಂಡಿದ್ದಾರೆ: ಆದರೆ ನಿನ್ನ ಕೈ ಮಾತ್ರ ನಮಗೆ ರಕ್ಷಣೆ ನೀಡಬಲ್ಲದು“. ಈ ಮಾತುಗಳನ್ನು ಮಾತ್ರ ಶ್ರೀಮತಿ ವೈಟಮ್ಮನವರು ಕೇಳಿದರು ಹಾಗೂ ಅದು ಅವರ ಮನಸ್ಸಿನಲ್ಲಿ ಉಳಿಯಿತು. ಈ ದೇವಜನರಲ್ಲಿ ತಾವು ಅಯೋಗ್ಯರೆಂಬ ಭಾವನೆ ಬಲವಾಗಿ ಬೇರೂರಿತ್ತು ಮತ್ತು ಅವರು ದೇವರ ಚಿತ್ತಕ್ಕೆ ತಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಟ್ಟರು. ಆದರೂ ಅವರೆಲ್ಲರೂ ಯಾಕೋಬನಂತೆ ಶ್ರದ್ಧೆಯಿಂದ ದೇವರಿಗೆ ಅರಿಕೆ ಮಾಡುತ್ತಾ ಬಿಡುಗಡೆಗಾಗಿ ಬೇಡಿಕೊಳ್ಳುತ್ತಿದ್ದರು (ಆದಿಕಾಂಡ 32:24,26; ಹೋಶೇಯ 12:3,4).KanCCh 435.3

    ದೇವಜನರು ಶ್ರದ್ಧಾಪೂರ್ವಕವಾಗಿ ದೇವರಿಗೆ ಮೊರೆಯಿಡಲು ಆರಂಭಿಸಿದಾಗ, ದೇವದೂತರು ಅನುಕಂಪದಿಂದ ಅವರನ್ನು ದುಷ್ಟಜನರ ಕೈಯಿಂದ ಬಿಡಿಸಲಿಕ್ಕೆ ಹೋಗುವವರಿದ್ದರು. ಆದರೆ ದೇವದೂತರ ನಾಯಕನಾಗಿದ್ದ ಎತ್ತರವಾಗಿದ್ದ ಒಬ್ಬ ದೇವದೂತನು ಅವರನ್ನು ತಡೆದು “ದೇವರಚಿತ್ತವು ಇನ್ನೂ ನೆರವೇರಿಲ್ಲ; ಅವರು ಈ ಪಾತ್ರೆಯನ್ನು ಕುಡಿಯಬೇಕು. ಅವರು ಇಂತಹ ಅನುಭವದಿಂದ ಪರಿಶುದ್ಧರಾಗಬೇಕು” ಎಂದು ಹೇಳಿದನು. KanCCh 436.1

    ಆಗಲೇ ಶ್ರೀಮತಿವೈಟಮ್ಮನವರು ಭೂಮ್ಯಾಕಾಶಗಳನ್ನು ಕದಲಿಸುವಂತ ದೇವರ ಮಹಾಶಬ್ದವನ್ನು ಕೇಳಿದರು (ಯೋವೇಲ 3:16; ಇಬ್ರಿಯ 12:26; ಪ್ರಕಟನೆ 16:17). ಆಗ ಬಲವಾದ ಭೂಕಂಪವುಂಟಾಯಿತು. ದೊಡ್ಡ ದೊಡ್ಡ ಕಟ್ಟಡಗಳು ಅಲ್ಲಾಡುತ್ತಾ ಎಲ್ಲಾ ಕಡೆಯಲ್ಲಿಯೂ ಕುಸಿದುಬಿದ್ದವು. ಆಗ ಶ್ರೀಮತಿ ವೈಟಮ್ಮನವರಿಗೆ ಬಹಳ ಗಟ್ಟಿಯಾದ ಮತ್ತು ಸ್ಪಷ್ಟವಾದ ಆದರೆ ಸಂಗೀತದಂತ ಸ್ವರದಿಂದ ಹರ್ಷದ ಜಯಘೋಷವು ಕೇಳಿಸಿತು. ಸ್ವಲ್ಪ ಸಮಯದ ಹಿಂದೆ ಬಂಧನಕ್ಕೊಳಗಾಗಿ ಸಂಕಟಪಡುತ್ತಿದ್ದ ಈ ಗುಂಪನ್ನು ಅವರು ನೋಡಿದರು. ಈ ಗುಂಪಿನ ಜನರ ಮೇಲೆ ಮಹಿಮೆಯಿಂದ ಕೂಡಿದ ಬೆಳಕು ಹೊಳೆಯುತ್ತಿತ್ತು. ಅವರು ಸೆರೆಯಿಂದ ಮುಕ್ತರಾಗಿ ಸ್ವತಂತ್ರರಾಗಿದ್ದರು. ಅವರು ಎಷ್ಟೊಂದು ಸುಂದರವಾಗಿ ಕಾಣುತ್ತಿದ್ದರು! ಅವರ ಮುಖದ ಚಿಂತೆ, ದುಗುಡವೆಲ್ಲವೂ ಇಲ್ಲವಾಗಿತ್ತು. ಆ ಗುಂಪಿನ ಪ್ರತಿಯೊಬ್ಬರ ಮುಖದಲ್ಲಿ ಚೆಲುವು ಹಾಗೂ ಆರೋಗ್ಯ ಹೊರಹೊಮ್ಮುತ್ತಿತ್ತು. ಅವರ ಶತ್ರುಗಳಾದ ಅನ್ಯರು ಅವರ ಸುತ್ತಲೂ ಸತ್ತವರಂತೆ ಬಿದ್ದಿದ್ದರು. ಬಿಡುಗಡೆಗೊಂಡ ಆ ಪರಿಶುದ್ಧಗುಂಪಿನ ಜನರ ಮುಖದಲ್ಲಿ ಹೊಳೆಯುತ್ತಿದ್ದ ಬೆಳಕನ್ನು ದುಷ್ಟರು ನೋಡಲಾಗುತ್ತಿರಲಿಲ್ಲ. ಈ ಬೆಳಕು ಹಾಗೂ ಮಹಿಮೆಯು ಯೇಸುಸ್ವಾಮಿಯು ಮೇಘದಲ್ಲಿ ಬರುವ ತನಕ ಆ ನೀತಿವಂತರಾದ ಜನರ ಮುಖದ ಮೇಲೆ ಇರುತ್ತದೆ. ಆಗ ಶೋಧನೆಗೊಳಗಾದ ನಂಬಿಗಸ್ತರಾದ ಅವರು ಕಣ್ಣುರೆಪ್ಪೆ ಮುಚ್ಚುವಷ್ಟರಲ್ಲಿ ಕ್ಷಣಮಾತ್ರದಲ್ಲಿ ಮಹಿಮೆಯಿಂದ ಇನ್ನೂ ಹೆಚ್ಚಿನ ಮಹಿಮೆ ಹೊಂದಿ ಬದಲಾದರು. ಸಮಾಧಿಗಳು ತೆರೆಯಲ್ಪಟ್ಟವು, ಸತ್ತುಹೋಗಿದ್ದ ನೀತಿವಂತರು ಪುನರುತ್ಥಾನಗೊಂಡು ಅಮರತ್ವ ಹೊಂದಿ “ಮರಣವೇ, ನಿನ್ನ ಜಯವೆಲ್ಲಿ? ಮರಣವೇ ನಿನ್ನ ವಿಷದಕೊಂಡಿ ಎಲ್ಲಿ?” ಎಂದು ಹಾಡುತ್ತಿದ್ದರು (1 ಕೊರಿಂಥ 15:55). ಇವರು ಜೀವದಿಂದಿಳಿದಿರುವ ಭಕ್ತರೊಂದಿಗೆ ಸೇರಿ ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವುದಕ್ಕಾಗಿ ಮೇಘ ವಾಹನರಾಗಿ ಫಕ್ಕನೆ ಒಯ್ಯಲ್ಪಡುವರು (1 ಥೆಸಲೋನಿಕ 4:16,17) ಅಮರತ್ವ ಧರಿಸಿಕೊಂಡ ಇವರೆಲ್ಲರೂ ಮಹಿಮೆಯಿಂದ ಕೂಡಿ ಬಹಳ ಮಧುರವಾದ ಸ್ವರದಿಂದ ಒಟ್ಟಾಗಿ ಜಯಘೋಷಮಾಡುತ್ತಾರೆ.KanCCh 436.2

    Larger font
    Smaller font
    Copy
    Print
    Contents