Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಎರಡು ಸೈನ್ಯಗಳು

    ದರ್ಶನದಲ್ಲಿ ಶ್ರೀಮತಿವೈಟಮ್ಮನವರು ಎರಡು ಸೈನ್ಯಗಳು ಭಯಂಕರ ಹೋರಾಟ ಮಾಡುವುದನ್ನು ನೋಡಿದರು. ಈ ಲೋಕದ ಲಾಂಛನವುಳ್ಳ (Insignia) ಧ್ವಜ ಹಿಡಿದವರು ಒಂದು ಸೈನ್ಯವನ್ನು ಮುನ್ನಡೆಸುತ್ತಿದ್ದರು. ಮತ್ತೊಂದು ಸೈನ್ಯದವರು ರಕ್ತಸಿಕ್ತವಾದ ಇಮ್ಮಾನುವೇಲ್ ರಾಜನ ಲಾಂಛನದಿಂದ ಮುನ್ನಡೆಸಲ್ಪಡುತ್ತಿದ್ದರು. ಕರ್ತನ ಸೈನ್ಯದಲ್ಲಿದ್ದವರು ತಂಡತಂಡವಾಗಿ ಅದನ್ನು ಬಿಟ್ಟು ವೈರಿಯಾದ ಸೈತಾನನ ಸೈನ್ಯಸೇರಿದರು. ಆದರೆ ಸೈತಾನನ ಸೈನ್ಯದಲ್ಲಿದ್ದ ದೊಡ್ಡಗುಂಪಿನ ಜನರು ಅದನ್ನು ಬಿಟ್ಟು ಆಜ್ಞೆಗಳನ್ನು ಕೈಕೊಂಡು ನಡೆಯುವ ದೇವಜನರೊಂದಿಗೆ ಸೇರಿದರು. ಆಕಾಶದ ಮಧ್ಯದಲ್ಲಿ ಹಾರಾಡುತ್ತಿದ್ದ ಒಬ್ಬ ದೇವದೂತನು ಇಮ್ಮಾನುವೇಲನಾದ ಕ್ರಿಸ್ತನ ರಕ್ತಸಿಕ್ತ ಧ್ವಜವನ್ನು ಅನೇಕ ಜನರ ಕೈಗೆ ಕೊಟ್ಟನು. ಅದೇ ಸಮಯದಲ್ಲಿ ಮಹಾಬಲಿಷ್ಠನಾದ ಸೈನ್ಯಾಧಿಕಾರಿ ದೇವದೂತನು ಮಹಾಶಬ್ದದಿಂದ ಎಲ್ಲರೂ ಸಾಲಾಗಿ ನಿಲ್ಲಿರಿ. ದೇವರಾಜ್ಞೆ ಕೈಕೊಂಡು ನಡೆದು ಯೇಸುವಿನ ಸಾಕ್ಷಿಗೆ ನಿಷ್ಠರಾಗಿರುವವರು ಈಗ ದೃಢನಿರ್ಧಾರ ತೆಗೆದುಕೊಳ್ಳಿರಿ. ವೈರಿಗಳ ಮಧ್ಯದಿಂದ ಹೊರಗೆ ಬಂದು ಪ್ರತ್ಯೇಕವಾಗಿರಿ. ಅಶುದ್ಧರನ್ನು ಮುಟ್ಟಬೇಡಿ. ನಾನು ನಿಮ್ಮನ್ನು ಸ್ವೀಕರಿಸಿ ನಿಮಗೆ ತಂದೆಯಾಗಿರುವೆನು. ನೀವು ನನ್ನ ಮಕ್ಕಳಾಗಿರುವಿರಿ ಎಂದು ಕೂಗಿ ಹೇಳಿದನು. KanCCh 437.1

    ಈಗ ಕ್ರೈಸ್ತಸಭೆಯು ಯುದ್ಧ ನಿರತವಾಗಿದೆ. ಹೆಚ್ಚುಕಡಿಮೆ ಸಂಪೂರ್ಣವಾಗಿ ವಿಗ್ರಹಾರಾಧನೆಯಲ್ಲಿ ಮುಳುಗಿರುವ, ಆತ್ಮೀಕವಾಗಿ ಮಧ್ಯರಾತ್ರಿಯ ಅಂಧಕಾರದಲ್ಲಿರುವ ಲೋಕದೊಂದಿಗೆ ನಾವು ಈಗ ಎದುರಾಗಿದ್ದೇವೆ. ಆದರೆ ಯುದ್ಧ ಮಾಡಬೇಕಾದ, ಜಯಹೊಂದಬೇಕಾದ ದಿನವು ಬರಲಿದೆ. ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲಿಯೂ ಸಹ ದೇವರ ಚಿತ್ತವು ನೆರವೇರಬೇಕಾಗಿದೆ. ಆಗ ಎಲ್ಲಾ ಜನಾಂಗಗಳು ಪರಲೋಕದ ಆಜ್ಞೆಗಳನ್ನು ಅನುಸರಿಸಬೇಕು. ಎಲ್ಲರೂ ಸಹ ಕ್ರಿಸ್ತನ ನೀತಿಯನ್ನು ಧರಿಸಿಕೊಂಡು ಸಂತೋಷದಿಂದ ಒಂದೇ ಕುಟುಂಬವಾಗಿ ಕೃತಜ್ಞತೆಯಿಂದ ಆತನನ್ನು ಸುತ್ತಿಸುವೆವು. ತನ್ನ ಉತ್ಕೃಷ್ಟವೂ, ರಮ್ಯವೂ ಆದ ಸೊಬಗಿನಿಂದ ಪ್ರಕೃತಿಯೆಲ್ಲವೂ ದೇವರನ್ನು ನಿರಂತರವಾಗಿ ಸ್ತುತಿಸುವುದು. ಈ ಜಗತ್ತು ಪರಲೋಕದ ಬೆಳಕಿನಿಂದ ತುಂಬಿರುವುದು, ವರ್ಷಗಳು ಹರ್ಷದಿಂದ ಉರುಳುವವು. ಚಂದ್ರನ ಬೆಳಕು ಸೂರ್ಯನಂತಿರುವುದು, “ಇನ್ನು ಮೇಲೆ ಹಗಲಿನಲ್ಲಿ ನಿನಗಿರುವ ಪ್ರಕಾಶವು ಸೂರ್ಯನದಲ್ಲ; ಚಂದ್ರನು ನಿನ್ನ ಬೆಳಕಿಗಾಗಿ ಎಂದಿಗೂ ಕಳೆಗೊಳ್ಳನು. ಯೆಹೋವನೇ ನಿನ್ನ ನಿತ್ಯ ಪ್ರಕಾಶವು; ನಿನ್ನ ದೇವರೇ ನಿನಗೆ ತೇಜಸ್ಸು.... ಯೆಹೋವನೇ ನಿನಗೆ ನಿತ್ಯ ಪ್ರಕಾಶವಾಗಿರುವನು” (ಯೆಶಾಯ 60:19,20).KanCCh 437.2

    “ಮುಂಜಾನೆ ನಕ್ಷತ್ರಗಳು ಒಟ್ಟಾಗಿ ಉತ್ಸಾಹ ಧ್ವನಿಯೆತ್ತುತ್ತಾ, ದೇವಕುಮಾರರೆಲ್ಲರೂ ಆನಂದಘೋಷ ಮಾಡುತ್ತಿರುವಾಗ... (ಯೋಬನು 38:6) ತಂದೆಯಾದ ದೇವರು ಹಾಗೂ ಯೇಸುಕ್ರಿಸ್ತನು ಒಟ್ಟಾಗಿ “ಇನ್ನು ಪಾಪವಾಗಲಿ, ಮರಣವಾಗಲಿ ಇರುವುದಿಲ್ಲ” ಎಂದು ಘೋಷಿಸುವರು (ಪ್ರಕಟನೆ 21:4; ಯೆಶಾಯ 25:8).KanCCh 438.1

    ಈ ದೃಶ್ಯವನ್ನು ಶ್ರೀಮತಿವೈಟಮ್ಮನವರಿಗೆ ತೋರಿಸಲಾಯಿತು. ಆದರೆ ಸಭೆಯು ಕಣ್ಣಿಗೆ ಕಾಣಿಸುವ ಹಾಗೂ ಕಣ್ಣಿಗೆ ಕಾಣಿಸದಿರುವ ಶತ್ರುಗಳ ವಿರುದ್ಧ ಹೋರಾಡಬೇಕಾಗಿದೆ. ಸೇನಾಧೀಶ್ವರನಾದ ಯೆಹೋವನನ್ನು ವಿರೋಧಿಸಲು ಜನಾಂಗವು ಒಟ್ಟಾಗಿದೆ. ಕ್ರಿಸ್ತನು ನಮಗೂ, ತಂದೆಯಾದ ದೇವರಿಗೂ ಮಧ್ಯಸ್ಥನಾಗಿ ಕೃಪಾಸನದ ಮುಂದೆ ಮಾಡುತ್ತಿರುವ ಕಾರ್ಯವನ್ನು ಮುಕ್ತಾಯಗೊಳಿಸಿ, ಸೇಡು ತೀರಿಸಿಕೊಳ್ಳುವ ದಿನದವರೆಗೂ ಜನರ ಈ ದುಷ್ಟಮೈತ್ರಿಯು ಮುಂದುವರಿಯುವುದು. ಸೈತಾನನ ಪರವಾಗಿ ಕೆಲಸ ಮಾಡುವವರು ಪ್ರತಿಯೊಂದು ಊರಿನಲ್ಲಿಯೂ ಮನುಷ್ಯರ ರೂಪದಲ್ಲಿದ್ದು, ದೇವರಾಜ್ಞೆಗಳನ್ನು ವಿರೋಧಿಸುವವರನ್ನು ಒಟ್ಟುಗೂಡಿಸಲು ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿದ್ದಾರೆ. ದೇವಭಕ್ತರೆಂದು ಹೇಳಿಕೊಳ್ಳುವವರು ಮತ್ತು ತಮಗೆ ಕ್ರಿಸ್ತನಲ್ಲಿ ವಿಶ್ವಾಸವಿಲ್ಲವೆಂದು ಸ್ಪಷ್ಟವಾಗಿ ಒಪ್ಪಿಕೊಂಡಿರುವವರು ಅವರೊಂದಿಗೆ ಸೇರಿಕೊಳ್ಳುವರು. ದೇವರಮಕ್ಕಳು ಆತ್ಮೀಕವಾಗಿ ದುರ್ಬಲರಾಗಿರಲು ಇನ್ನು ಸಮಯವಿಲ್ಲ. ಕ್ಷಣಮಾತ್ರವಾದರೂ ನಾವು ಸೈತಾನನ ಆಕ್ರಮಣದ ವಿರುದ್ಧ ಎಚ್ಚರ ತಪ್ಪಬಾರದು..KanCCh 438.2

    *****