Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಕ್ರೈಸ್ತರು ಪರಲೋಕದ ವಿಷಯವಾಗಿ ಮಾತಾಡಬೇಕು

    ದೇವರು ಪರಲೋಕದ ಸರ್ವಸ್ವವೂ ಆಗಿದ್ದಾನೆ. ಅಲ್ಲಿ ಪರಿಶುದ್ಧತೆಯು ಅತ್ಯಂತ ಮಹತ್ವವಾಗಿದೆ. ದೇವರೊಂದಿಗೆ ಪರಿಪೂರ್ಣ ಸಾಮರಸ್ಯವನ್ನು ಹಾಳು ಮಾಡುವ ಯಾವುದೂ ಸಹ ಪರಲೋಕದಲ್ಲಿಲ್ಲ. ನಾವು ಅಲ್ಲಿಗೆ ಪ್ರಯಾಣಿಸುತ್ತಿದ್ದೇವೆ. ಆದರೆ ಈಗ ನಾವು ಪರಲೋಕದ ವಿಷಯಗಳ ಬಗ್ಗೆ ಆಲೋಚಿಸುವುದರಲ್ಲಿ ಸಂತೋಷಿಸದಿದ್ದಲ್ಲಿ ಹಾಗೂ ದೇವರ ಬಗ್ಗೆ ಜ್ಞಾನವನ್ನು ಹುಡುಕುವುದರಲ್ಲಿ ಆಸಕ್ತಿ ಹೊಂದಿರದಿದ್ದಲ್ಲಿ ಇಲ್ಲವೆ ಕ್ರಿಸ್ತನ ಸ್ವಭಾವವನ್ನು ಅನುಸರಿಸುವುದರಲ್ಲಿ ಆನಂದಿಸದಿದ್ದಲ್ಲಿ ಅಥವಾ ಕ್ರಿಸ್ತನ ಪರಿಶುದ್ಧತೆಯು ನಮಗೆ ಆಕರ್ಷಣೆಯಾಗದಿದ್ದಲ್ಲಿ- ಪರಲೋಕದ ಬಗ್ಗೆ ನಮ್ಮ ನಿರೀಕ್ಷೆಯು ವ್ಯರ್ಥವೆಂದು ಖಚಿತವಾಗಿ ತಿಳಿಯಬಹುದು.KanCCh 444.4

    ದೇವರಚಿತ್ತವನ್ನು ಸಂಪೂರ್ಣವಾಗಿ ಅನುಸರಿಸುವುದು ಕ್ರೈಸ್ತರ ಉನ್ನತ ಗುರಿಯಾಗಿರಬೇಕು. ಇದನ್ನು ಯಾವಾಗಲೂ ಗಮನದಲ್ಲಿಡಬೇಕು. ಇಂತಹ ಕ್ರೈಸ್ತರು ದೇವರು ಹಾಗೂ ಕ್ರಿಸ್ತನ ವಿಷಯವಾಗಿ ಮಾತಾಡಲು ಯಾವಾಗಲೂ ಇಷ್ಟಪಡುತ್ತಾರೆ. ಅಲ್ಲದೆ ತನ್ನನ್ನು ಪ್ರೀತಿಸುವವರಿಗಾಗಿ ದೇವರು ಸಿದ್ಧಪಡಿಸುತ್ತಿರುವ ಪರಲೋಕದ ಬಗ್ಗೆ ಮಾತಾಡಲು ಇವರು ಯಾವಾಗಲೂ ಬಯಸುತ್ತಾರೆ. ನಮ್ಮಹೃದಯಗಳು ದೇವರ ಭಾಗ್ಯಕರವೂ, ಆಶೀರ್ವಾದಕರವೂ ಆದ ಭರವಸೆಗಳಲ್ಲಿ ಆನಂದಪಡುವಾಗ ಈ ವಿಷಯಗಳ ಬಗ್ಗೆ ನಾವು ಆಲೋಚಿಸುತ್ತೇವೆ.KanCCh 445.1

    ಸೈತಾನನು ಮತ್ತು ಕ್ರಿಸ್ತನ ನಡುವಣ ಮಹಾಹೋರಾಟದ ಅಂತಿಮ ಘಟ್ಟದ ಕಾಲದಲ್ಲಿ ನಾವು ಜೀವಿಸುತ್ತಿದ್ದೇವೆ. ಸೈತಾನನು ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿ ಸುಳ್ಳಾದಅದ್ಭುತಗಳನ್ನು ಮಾಡಿ ಜನರನ್ನು ವಂಚಿಸಿ ದೇವರಸ್ವಭಾವವನ್ನು ತಪ್ಪಾಗಿ ತಿಳಿಸಲು ಕಾರ್ಯಮಾಡುತ್ತಿದ್ದಾನೆ. ಅಲ್ಲದೆ ಸಾಧ್ಯವಾದರೆ ದೇವರಾದುಕೊಂಡವರನ್ನೂ ಸಹ ಅವನು ಮೋಸಗೊಳಿಸುವನು. ಈ ಸಂಕಟದ ಸಮಯದಲ್ಲಿ ದೇವರು ಅಡ್ವೆಂಟಿಸ್ಟರನ್ನು ತನ್ನ ಪರಿಶುದ್ಧ ಆಜ್ಞೆಗಳನ್ನು ಕೈಕೊಂಡು ನಡೆದು ಜಗತ್ತಿನ ಮುಂದೆ ಆತನ ಗುಣಸ್ವಭಾವವನ್ನು ಸಮರ್ಥಿಸುವವರಾಗಿರಬೇಕೆಂದು ಕರೆದಿದ್ದಾನೆ. ಆದುದರಿಂದ ಅಡ್ವೆಂಟಿಸ್ಟರಿಗೆ ಸತತವಾಗಿ ಪರಲೋಕದ ಬೆಳಕು ಅಗತ್ಯವಾಗಿ ಬೇಕಾಗಿದೆ. ಇಂತಹ ಪವಿತ್ರವಾದ ಜವಾಬ್ದಾರಿ ಯಾರಿಗೆ ಕೊಡಲ್ಪಟ್ಟಿದೆಯೋ, ಅವರು ತಾವು ನಂಬಿದ್ದೇವೆಂದು ತಿಳಿದಿರುವ ಸತ್ಯದಿಂದ ಆತ್ಮೀಕವಾಗಿ ಉನ್ನತವಾಗಿರಬೇಕು.KanCCh 445.2

    Larger font
    Smaller font
    Copy
    Print
    Contents