Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ-63 — ಮಹಾಯಾಜಕನಾದ ಯೆಹೋಶುವನು ಮತ್ತು ದೇವದೂತನು

    ಕಣ್ಣಿಗೆ ಕಾಣುವುದನ್ನು ಕಾಣದಿರುವ ಲೋಕದಿಂದ ಬೇರ್ಪಡಿಸುವ ತೆರೆಯು ಒಂದುವೇಳೆ ತೆರೆಯಲ್ಪಟ್ಟಲ್ಲಿ ಮಾನವನ ಬಿಡುಗಡೆಗಾಗಿ ಕ್ರಿಸ್ತನು ಹಾಗೂ ಪವಿತ್ರ ದೇವದೂತರು ಮತ್ತು ಸೈತಾನನು ಹಾಗೂ ಅವನ ದುಷ್ಟದೂತರ ನಡುವೆ ನಡೆಯುತ್ತಿರುವ ಮಹಾಹೋರಾಟವು ಕಂಡುಬರುವುದು. ಇದನ್ನು ದೇವರಮಕ್ಕಳು ದೃಷ್ಟಿಸಿ, ಪಾಪದ ದಾಸತ್ವದಿಂದ ಮನುಷ್ಯರನ್ನುರಕ್ಷಿಸಲು ದೇವರುಮಾಡುತ್ತಿರುವ ಅದ್ಭುತ ಕಾರ್ಯವನ್ನು ಅರ್ಥಮಾಡಿಕೊಂಡಲ್ಲಿ, ಮನುಷ್ಯರು ಸೈತಾನನ ದುಷ್ಟ ತಂತ್ರೋಪಾಯಗಳನ್ನು ಎದುರಿಸಲು ಇನ್ನೂ ಹೆಚ್ಚಾಗಿ ಸಿದ್ಧತೆ ಮಾಡಿಕೊಳ್ಳುವರು. ಅವರು ರಕ್ಷಣಾ ಯೋಜನೆಯ ಅಗಾಧತೆ ಹಾಗೂ ಪ್ರಾಮುಖ್ಯತೆ ಮತ್ತು ಕ್ರಿಸ್ತನ ಜೊತೆಕೆಲಸಗಾರರಾಗಿ ತಾವು ಮಾಡಬೇಕಾದ ಕೆಲಸದ ಮಹತ್ವವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರು. ತಮ್ಮ ರಕ್ಷಣೆಗಾಗಿ ಸಮಸ್ತ ಪರಲೋಕವೇ ಆಸಕ್ತಿಹೊಂದಿದೆ ಎಂದು ಅರಿತುಕೊಂಡ ಮನುಷ್ಯರು ಬಹಳ ಉತ್ತೇಜನಗೊಳ್ಳುವರು.KanCCh 452.1

    ಸೈತಾನನ ಅತ್ಯಂತ ಸಶಕ್ತವಾದ ಹಾಗೂ ಪರಿಣಾಮಕಾರಿಯಾದ ದೃಷ್ಟಾಂತ ಮತ್ತು ತನ್ನ ಜನರ ಮೇಲೆ ಆಪಾದನೆ ಹೊರಿಸುವವನನ್ನು ಪರಾಜಯಗೊಳಿಸುವ ನಮ್ಮ ಮಧ್ಯಸ್ಥಗಾರನಾಗಿರುವ ಕ್ರಿಸ್ತನ ಕಾರ್ಯ ಹಾಗೂ ಶಕ್ತಿಯ ಉದಾಹರಣೆಯು ಜೆಕರ್ಯನ ಪ್ರವಾದನೆಯಲ್ಲಿ ಕೊಡಲ್ಪಟ್ಟಿದೆ. ಒಂದು ಪವಿತ್ರ ದರ್ಶನದಲ್ಲಿ ಪ್ರವಾದಿಯಾದ ಜೆಕರ್ಯನು ಮಹಾಯಾಜಕನಾದ ಯೆಹೋಶುವನು ಕೊಳೆಬಟ್ಟೆಯನ್ನು ಧರಿಸಿಕೊಂಡು ಯೆಹೋವನದೂತನ ಮುಂದೆ ನಿಂತಿರುವುದನ್ನು ಕಂಡನು. ಮಹಾಯಾಜಕನು ಮಹಾಸಂಕಟದಲ್ಲಿರುವ ತನ್ನ ಜನರಾದ ಇಸ್ರಾಯೇಲ್ಯರಪರವಾಗಿ ದೇವರಕರುಣೆಯನ್ನು ದೈನ್ಯದಿಂದ ಬೇಡಿಕೊಳ್ಳುತ್ತಿದ್ದನು. ಸೈತಾನನು ಅದನ್ನು ಪ್ರತಿರೋಧಿಸಲು ಯೆಹೋಶುವನ ಬಲಗಡೆಯಲ್ಲಿ ಪ್ರತಿಕಕ್ಷಿಯಾಗಿ ನಿಂತಿದ್ದನು (ಜೆಕರ್ಯ 3:1-5) ಸೈತಾನನ ಆಪಾದನೆಗಳು ಸುಳ್ಳೆಂದು ಮಹಾಯಾಜಕನಾಗಲಿ ಅಥವಾ ಜನರಾದ ಇಸ್ರಾಯೇಲ್ಯರಾಗಲಿ ಸಮರ್ಥಿಸಿಕೊಳ್ಳಲು ಸಾಧ್ಯವಿರಲಿಲ್ಲ. ಇಸ್ರಾಯೇಲ್ಯರು ದೋಷಿಗಳಲ್ಲವೆಂದೂ ಸಹ ಅವನು ಹೇಳಿಕೊಳ್ಳಲಿಲ್ಲ. ಅವರ ಪಾಪಗಳನ್ನು ಸಾಂಕೇತಿಕವಾಗಿ ಸೂಚಿಸುವ ಕೊಳೆಯಾದ ಬಟ್ಟೆಗಳನ್ನು ಧರಿಸಿಕೊಂಡಿದ್ದ ಯೆಹೋಶುವನು ಇಸ್ರಾಯೇಲ್ಯರ ಪ್ರತಿನಿಧಿಯಾಗಿ ನಿಂತುಕೊಂಡು, ಯೆಹೋವನ ದೂತನ ಮುಂದೆ ಅವರ ಪಾಪದೋಷಗಳನ್ನು ಅರಿಕೆ ಮಾಡಿಕೊಳ್ಳುತ್ತಿದ್ದನು. ಆದಾಗ್ಯೂ ತನ್ನಜನರು ಪಶ್ಚಾತ್ತಾಪಪಟ್ಟು ತಮ್ಮನ್ನು ತಗ್ಗಿಸಿಕೊಂಡಿರುವುದನ್ನು ಸೂಚಿಸಿ ಪಾಪಗಳನ್ನು ಕ್ಷಮಿಸುವ ರಕ್ಷಕನಮೇಲೆ ಆತುಕೊಂಡು ದೇವರ ವಾಗ್ದಾನಗಳನ್ನು ನಂಬಿಕೆಯಿಂದ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಂದು ತಿಳಿಸುತ್ತಾನೆ.KanCCh 452.2

    ಅನಂತರ ಯೆಹೋವನ ದೂತನೂ, ಪಾಪಿಗಳ ರಕ್ಷಕನೂ ಆದ ಯೇಸುಕ್ರಿಸ್ತನು ತನ್ನ ಜನರ ಮೇಲೆ ಆಪಾದನೆ ಹೊರಿಸುತ್ತಿದ್ದ ಆಪಾದಕ ದೂತನಾದ ಸೈತಾನನಿಗೆ “ಯೆಹೋವನು ನಿನ್ನನ್ನು ಖಂಡಿಸಲಿ, ಹೌದು, ಯೆರೂಸಲೇಮನ್ನು ಆರಿಸಿಕೊಂಡಿರುವ ಯೆಹೋವನು ನಿನ್ನನ್ನು ಖಂಡಿಸಲಿ. ಅದು ಉರಿಯಿಂದ ಎಳೆದ ಕೊಳ್ಳಿಯಾಗಿದೆಯಲ್ಲಾ” ಎಂದು ಹೇಳಿದನು. ಮಹಾಯಾಜಕನಾದ ಯೆಹೋಶುವನು ತನ್ನಜನರಾದ ಇಸ್ರಾಯೇಲ್ಯರ ಪರವಾಗಿ ಮಾಡಿದ ಪ್ರಾರ್ಥನೆಯು ಅಂಗೀಕರಿಸಲ್ಪಟ್ಟ ತರುವಾಯ ಕ್ರಿಸ್ತನು ತನ್ನ ಸೇವಕರಿಗೆ “ಇವನ ಕೊಳೆಬಟ್ಟೆಯನ್ನು ತೆಗೆದು ಬಿಡಿರಿ” ಎಂದು ಅಪ್ಪಣೆಕೊಟ್ಟನು. ಅನಂತರ ಆತನು ಯೆಹೋಶುವನಿಗೆ “ಇಗೋ, ನಿನ್ನ ದೋಷವನ್ನು ನಿನ್ನಿಂದ ತೊಲಗಿಸಿದ್ದೇನೆ, ನಿನಗೆ ಶ್ರೇಷ್ಠವಸ್ತ್ರವನ್ನು ತೊಡಿಸುವೆನು ಎಂದು ಹೇಳಿದನು. ಇವನ ತಲೆಗೆ ಶುಭ್ರವಾದ ಮುಂಡಾಸನವನ್ನು ಸುತ್ತಿರಿ ಎಂದು ಅವನು (ಕ್ರಿಸ್ತನು) ಅಪ್ಪಣೆ ಕೊಡಲು ಅವರು ಅವನ ತಲೆಗೆ ಶುಭ್ರವಾದ ಮುಂಡಾಸನವನ್ನು ಸುತ್ತಿ ಅವನಿಗೆ ವಸ್ತ್ರಗಳನ್ನು ಹಾಕಿದರು” (ಜೆಕರ್ಯ 3:4,5). ಯೆಹೋಶುವನ ಹಾಗೂ ಅವನ ಜನರಾದ ಇಸ್ರಾಯೇಲ್ಯರ ಪಾಪಗಳು ಕ್ಷಮಿಸಲ್ಪಟ್ಟವು. ಇಸ್ರಾಯೇಲ್ ಜನಾಂಗಕ್ಕೆ ಶುಭ್ರವಾದ ವಸ್ತ್ರಗಳನ್ನು ತೊಡಿಸಲಾಯಿತು, ಅಂದರೆ ಕ್ರಿಸ್ತನು ನೀತಿಯು ಅವರಿಗೆ ಕೊಡಲ್ಪಟ್ಟಿತು. KanCCh 453.1

    ಸೈತಾನನು ಯೆಹೋಶುವನು ಹಾಗೂ ಅವನ ಜನರಾದ ಇಸ್ರಾಯೇಲ್ಯರ ಮೇಲೆ ಆಪಾದನೆಮಾಡಿದಂತೆ, ಎಲ್ಲಾ ಕಾಲದಲ್ಲಿಯೂ ಅವನು ದೇವರ ದಯೆ, ಕೃಪೆ ಹೊಂದಲು ಪ್ರಯತ್ನಿಸುವವರ ಮೇಲೆ ದೇವರ ಮುಂದೆ ಆಪಾದನೆ ಹೊರಿಸುತ್ತಾನೆ. ಯೇಸುವಿನಶಿಷ್ಯನಾದ ಯೋಹಾನನು ಸೈತಾನನ ಬಗ್ಗೆ “ಹಗಲಿರುಳು ನಮ್ಮಸಹೋದರರ ಮೇಲೆ ನಮ್ಮದೇವರ ಮುಂದೆ ದೂರು ಹೇಳಿದ ದೂರುಗಾರನು” ಎಂದು ತಿಳಿಸುತ್ತಾನೆ (ಪ್ರಕಟನೆ 12:10). ದುಷ್ಟನಾದ ಸೈತಾನನ ಕೈಯಿಂದ ರಕ್ಷಿಸಲ್ಪಟ್ಟು, ಯಾರ್ಯಾರಹೆಸರುಗಳು ಯಜ್ಞದ ಕುರಿಯಾದಾತನ ಜೀವಬಾಧ್ಯರ ಪಟ್ಟಿಯಲ್ಲಿ ಬರೆಯಲ್ಪಟ್ಟಿವೆಯೋ, ಅವರೆಲ್ಲರ ಮೇಲೆ ಅವನು ಆಪಾದನೆ ಮಾಡುತ್ತಾನೆ. ಸೈತಾನನನ್ನು ಬಿಟ್ಟು ಕ್ರಿಸ್ತನನ್ನು ಅಂಗೀಕರಿಸಿಕೊಂಡವರೆಲ್ಲರೂ, ಅವನ ಪ್ರತಿರೋಧ, ಶೋಧನೆಯನ್ನು ಖಂಡಿತವಾಗಿ ಎದುರಿಸುತ್ತಾರೆ.KanCCh 453.2

    ದೇವರನ್ನು ಅಂಗೀಕರಿಸುವವರ ವಿರುದ್ಧವಾಗಿ ಸೈತಾನನು ಮಾಡುವ ಆಪಾದನೆಯು ಅವರ ಪಾಪಗಳ ಬಗ್ಗೆ ಅವನು ಅಸಂತೋಷ ವ್ಯಕ್ತಪಡಿಸುತ್ತಾನೆಂಬ ಕಾರಣದಿಂದಲ್ಲ. ಬದಲಾಗಿ ಅವರ ಪಾಪ ದೋಷಗಳ ಬಗ್ಗೆ ಅವನು ಪರಮಾನಂದ ಪಡುತ್ತಾನೆ. ದೇವರ ಆಜ್ಞೆಗಳನ್ನು ಅವರು ಮೀರಿದಾಗ ಮಾತ್ರ ಸೈತಾನನು ಅವರಮೇಲೆ ತನ್ನ ಅಧಿಕಾರ ಹೊಂದಲು ಸಾಧ್ಯ. ಕ್ರಿಸ್ತನಮೇಲಣ ವಿರೋಧತೆಯ ಏಕೈಕ ಕಾರಣದಿಂದ ಅವನು ದೇವರಮಕ್ಕಳ ವಿರುದ್ಧವಾಗಿ ಆಪಾದನೆ ಮಾಡುತ್ತಾನೆ. ರಕ್ಷಣಾ ಯೋಜನೆಯ ಮೂಲಕ ಯೇಸುಸ್ವಾಮಿಯು ಮಾನವರ ಮೇಲೆ ಸೈತಾನನಿಗಿರುವ ಹಿಡಿತವನ್ನು ಮುರಿದು ತನ್ನ ಸಾಮಥ್ರ್ಯದಿಂದ ಅವರನ್ನು ರಕ್ಷಿಸುತ್ತಾನೆ. ಕ್ರಿಸ್ತನ ಪರಮಾಧಿಕಾರ ಹಾಗೂ ಶ್ರೇಷ್ಠತೆಯನ್ನು ನೋಡಿದಾಗ, ಮುಖ್ಯ ದಂಗೆಕೋರನಾದ ಸೈತಾನನ ಬದ್ಧದ್ವೇಷ ಹಾಗೂ ಹಗೆತನವು ಕೆರಳುತ್ತದೆ. ತನ್ನ ಪೈಶಾಚಿಕ ಶಕ್ತಿ ಹಾಗೂ ಕುತಂತ್ರದ ಮೂಲಕ ಕ್ರಿಸ್ತನ ರಕ್ಷಣೆಯನ್ನು ಅಂಗೀಕರಿಸಿದ ಉಳಿದವರನ್ನೂ ಸಹ ಆತನ ಮೇಲಣ ನಂಬಿಕೆಯಿಂದ ಬೇರ್ಪಡಿಸಿ ತನ್ನಕಡೆಗೆ ಎಳೆದುಕೊಳ್ಳಲು ಸೈತಾನನು ತನ್ನೆಲ್ಲಾ ಪ್ರಯತ್ನಮಾಡುತ್ತಾನೆ. KanCCh 453.3

    ಸೈತಾನನು ಜನರು ಸಂದೇಹವಾದಿಗಳಾಗುವಂತೆ ಮಾಡಿ, ಅವರು ದೇವರಲ್ಲಿ ಭರವಸೆ ಕಳೆದುಕೊಂಡು ಆತನ ಪ್ರೀತಿಯಿಂದ ದೂರವಾಗುವಂತೆ ಮಾಡುತ್ತಾನೆ. ಅಲ್ಲದೆ ದೇವರಾಜ್ಞೆಗಳನ್ನು ಮೀರುವಂತೆ ಅವರನ್ನು ಶೋಧನೆಗೆ ಒಳಪಡಿಸಿ, ಅನಂತರ ಅವರನ್ನು ತನ್ನ ಸೆರೆಯಾಳುಗಳನ್ನಾಗಿ ಮಾಡಿ, ಕ್ರಿಸ್ತನಿಗೆ ಅವರ ಮೇಲೆ ಅಧಿಕಾರವಿಲ್ಲವೆಂದು ವಾದಿಸುತ್ತಾನೆ. ಯಾರು ಮನಃಪೂರ್ವಕವಾಗಿ ದೇವರನ್ನು ಬೇಡಿಕೊಳ್ಳುವರೋ, ಅವರು ಕ್ಷಮೆ ಹಾಗೂ ಕೃಪೆಯನ್ನು ಹೊಂದಿಕೊಳ್ಳುವರೆಂದು ಸೈತಾನನಿಗೆ ತಿಳಿದಿದೆ. ಆದುದರಿಂದ ಜನರ ಪಾಪಗಳನ್ನು ಅವರ ಗಮನಕ್ಕೆ ತಂದು ಅವರನ್ನು ನಿರಾಶೆಗೊಳಿಸಲು ಪ್ರಯತ್ನಿಸುತ್ತಾನೆ. ದೇವರಿಗೆ ವಿಧೇಯರಾಗಲು ಪ್ರಯತ್ನಿಸುವವರನ್ನು ಶೋಧನೆಗೆ ಒಳಪಡಿಸಲು ಸೈತಾನನು ಸತತವಾಗಿ ಅವಕಾಶಗಳನ್ನು ಹುಡುಕುತ್ತಾನೆ. ಅವರ ಅತ್ಯಂತ ಶ್ರೇಷ್ಠವಾದ ಹಾಗೂ ಅಂಗೀಕಾರಾರ್ಹವಾದ ಎಲ್ಲಾ ಸೇವೆಗಳು ಅಪ್ರಮಾಣಿಕವಾಗಿ ಕಂಡು ಬರುವಂತೆ ಅವನು ಪ್ರಯತ್ನಿಸುತ್ತಾನೆ. ಅತ್ಯಂತ ಕ್ರೂರವಾದ ಹಾಗೂ ಅತ್ಯಂತ ಚಮತ್ಕಾರವಾದ ಅಸಂಖ್ಯಾತ ತಂತ್ರೋಪಾಯಗಳ ಮೂಲಕ ದೇವರ ಮಕ್ಕಳು ಅಪರಾಧಿಗಳೆಂದು ನಿರ್ಣಯಿಸಲ್ಪಡುವುದಕ್ಕಾಗಿ ಸೈತಾನನು ಪ್ರಯತ್ನಿಸುತ್ತಾನೆ.KanCCh 454.1

    ಸೈತಾನನ ಈ ಆಪಾದನೆಗಳು ಹಾಗೂ ತಂತ್ರೋಪಾಯಗಳನ್ನು ಮಾನವರಾದ ನಾವು ಸ್ವತಃ ಎದುರಿಸಲು ಎಂದಿಗೂ ಸಾಧ್ಯವಿಲ್ಲ. ಪಾಪ ತುಂಬಿದ ಅನೀತಿಯ ವಸ್ತ್ರಗಳನ್ನು ಧರಿಸಿ ಮಾನವರು ತಮ್ಮ ಅಪರಾಧ ಪಾಪಗಳನ್ನು ಅರಿಕೆ ಮಾಡುತ್ತಾ, ದೇವರ ಮುಂದೆ ನಿಂತಿದ್ದಾರೆ. ಯಾರು ತಮ್ಮ ಪಾಪಗಳಿಗೆ ಮನಃಪೂರ್ವಕವಾಗಿ ಪಶ್ಚಾತ್ತಾಪ ಪಟ್ಟು ನಂಬಿಕೆಯಿಂದ ದೇವರ ಮೇಲೆ ಭರವಸವಿಟ್ಟಿದ್ದಾರೋ, ಅಂತವರ ಪರವಾಗಿ ನಮ್ಮ ಮಧ್ಯಸ್ಥಗಾರನೂ, ವಕೀಲನೂ ಆದ ಯೇಸುಸ್ವಾಮಿಯು ದೇವರ ಮುಂದೆ ಪರಿಣಾಮಕಾರಿಯಾಗಿ ಪ್ರತಿವಾದಮಾಡುತ್ತಾನೆ. ಅವರಪರವಾಗಿ ವಾದ ಮಾಡುತ್ತಾ ಕಲ್ವಾರಿಯಲ್ಲಿ ತಾನು ಸುರಿಸಿದ ರಕ್ತದಮೂಲಕ ನಮ್ಮಮೇಲೆ ದೂರು ಹೇಳುವ ಸೈತಾನನ ಎಲ್ಲಾ ಆಪಾದನೆಗಳನ್ನು ಕ್ರಿಸ್ತನು ತಳ್ಳಿ ಹಾಕುತ್ತಾನೆ. ಶಿಲುಬೆಯ ಮೇಲೆ ಮರಣಹೊಂದುವಷ್ಟರ ಮಟ್ಟಿಗೂ ದೇವರಾಜ್ಞೆಗಳಿಗೆ ಪರಿಪೂರ್ಣವಾಗಿ ವಿಧೇಯತೆ ತೋರಿಸಿದ ಕಾರಣದಿಂದ ಕ್ರಿಸ್ತನಿಗೆ ಭೂಪರಲೋಕಗಳಲ್ಲಿ ಎಲ್ಲಾ ಅಧಿಕಾರ ಕೊಡಲ್ಪಟ್ಟಿದೆ. ಈ ಮೂಲಕ ಆತನು ಪಾಪಿಯಾದ ಮನುಷ್ಯನಿಗೆ ದಯೆ ತೋರಿಸಿ ಅವನನ್ನು ತಿರುಗಿ ಸ್ವೀಕರಿಸಬೇಕೆಂದು ತಂದೆಗೆ ಮನವಿ ಮಾಡುತ್ತಾನೆ. ತನ್ನ ಜನರಿಗೆ ಆಪಾದನೆ ಮಾಡುವ ಸೈತಾನನಿಗೆ “ಯೆಹೋವನು ನಿನ್ನನ್ನು ಖಂಡಿಸಲಿ, ಇವರು ನನ್ನ ರಕ್ತದಿಂದ ಕೊಳ್ಳಲ್ಪಟ್ಟವರು, ಉರಿಯಿಂದ ಎಳೆದ ಕೊಳ್ಳಿಯಾಗಿದ್ದಾರಲ್ಲಾ” ಎಂದು ಹೇಳುತ್ತಾನೆ (ಜೆಕರ್ಯ 3:2) ದೇವರ ಮೇಲೆ ನಂಬಿಕೆಯಿಂದ ಆತುಕೊಂಡವರು “.... ಇಗೋ, ನಿಮ್ಮ ದೋಷವನ್ನು ನಿಮ್ಮಿಂದ ತೊಲಗಿಸಿದ್ದೇನೆ. ನಿಮಗೆ ಶ್ರೇಷ್ಠ ವಸ್ತ್ರಗಳನ್ನು ತೊಡಿಸುವೆನು” ಎಂಬ ಸಾಂತ್ವನದ ಭರವಸೆ ಹೊಂದುವರು (ಜೆಕರ್ಯ 3:4 ಕೊನೆಯ ಭಾಗ). KanCCh 454.2

    ಕ್ರಿಸ್ತನ ನೀತಿಯೆಂಬ ವಸ್ತ್ರಗಳನ್ನು ಧರಿಸಿಕೊಂಡವರೆಲ್ಲರೂ ಆತನ ಮುಂದೆ ಆರಿಸಲ್ಪಟ್ಟವರೂ, ನಂಬಿಗಸ್ತರೂ ಹಾಗೂ ಸತ್ಯವಂತರೂ ಆಗಿ ನಿಲ್ಲುವರು. ಕ್ರಿಸ್ತನಕೈಯಿಂದ ಅವರನ್ನು ಕಸಿದುಕೊಳ್ಳಲು ಸೈತಾನನಿಗೆ ಶಕ್ತಿಯಿಲ್ಲ. ಪಶ್ಚಾತ್ತಾಪಪಟ್ಟು ನಂಬಿಕೆಯಿಂದ ದೇವರರಕ್ಷಣೆಯನ್ನು ಆಶ್ರಯಿಸಿಕೊಂಡ ಯಾರನ್ನೂ ಸಹ ಕ್ರಿಸ್ತನು ಸೈತಾನನವಶಕ್ಕೆ ಕೊಡುವುದಿಲ್ಲ. “ಬೇಡವಾದರೆ ನನ್ನ ಶತ್ರುಗಳು ನನ್ನ ಬಲವನ್ನು ಶರಣು ಹೊಂದಲಿ, ನನ್ನ ಸಂಗಡ ಸಮಾಧಾನಕ್ಕೆ ಬರಲಿ. ನನ್ನೊಡನೆ ಸಂಧಿಮಾಡಿಕೊಳ್ಳಲಿ” ಎಂದು ದೇವರ ವಾಕ್ಯವು ಹಾರೈಸುತ್ತದೆ (ಯೆಶಾಯ 27:5). ಮಹಾಯಾಜಕನಾದ ಯೆಹೋಶುವನಿಗೆ ದೇವರು “ನೀನು ನನ್ನ ಮಾರ್ಗಗಳಲ್ಲಿ ನಡೆದು ನಾನುನಿನಗೆ ವಹಿಸಿದ ಪಾರುಪತ್ಯವನ್ನು ನೆರವೇರಿಸಿದರೆ... ಈ ಸನ್ನಿಧಾನ ದೂತರ ನಡುವೆ ಪ್ರವೇಶಿಸುವ ಹಕ್ಕನ್ನು ನಿನಗೆ ಕೊಡುವೆನು” (ಜೆಕರ್ಯ 3:7) ಎಂಬ ವಾಗ್ದಾನ ನೀಡಿದನು. ಇದು ಎಲ್ಲರಿಗೂ ಎಲ್ಲಾಕಾಲದಲ್ಲಿಯೂ ಅನ್ವಯಿಸುತ್ತದೆ. ಈ ಲೋಕದಲ್ಲಿಯೂ ಸಹ ದೇವದೂತರು ಅಂತವರ ಎಡಬಲಗಳಲ್ಲಿ ನಡೆಯುವರು. ಕೊನೆಯಲ್ಲಿ ಅವರು ದೇವರಸಿಂಹಾಸನದ ಸುತ್ತಲೂ ಇರುವ ದೇವದೂತರೊಂದಿಗೆ ನಿಂತುಕೊಳ್ಳುವರು.KanCCh 455.1

    ದೇವರ ಜನರೆಂದು ಅನಿಸಿಕೊಂಡವರು ಆತನ ಮುಂದೆ ಕೊಳೆಯಾದ ಬಟ್ಟೆಗಳನ್ನು ಧರಿಸಿ ನಿಂತುಕೊಂಡಿದ್ದಾರೆಂಬ ಅಂಶವು, ಅಂತವರು ನಮ್ರತೆಯಿಂದ ತಮ್ಮ ಹೃದಯಗಳನ್ನು ಪರಿಶೋಧಿಸಿಕೊಳ್ಳಬೇಕು. ಸತ್ಯಕ್ಕೆ ವಿಧೇಯರಾಗಿ ತಮ್ಮನ್ನು ಶುದ್ಧಿಪಡಿಸಿಕೊಂಡವರು, ತಮ್ಮನ್ನುತಾವೇ ನಮ್ರತೆಯಿಂದ ದೇವರ ಮುಂದೆ ತಗ್ಗಿಸಿಕೊಳ್ಳುತ್ತಾರೆ. ಕ್ರಿಸ್ತನ ಕಳಂಕರಹಿತವಾದ ಸ್ವಭಾವವನ್ನು ಅವರು ಅತ್ಯಂತ ನಿಕಟವಾಗಿ ನೋಡಿದಷ್ಟೂ, ಆತನ ಸ್ವರೂಪಕ್ಕೆ ಅನುಗುಣವಾಗಿರಬೇಕು ಹಾಗೂ ಅಂತಹ ಸ್ವಭಾವ ಹೊಂದಿಕೊಳ್ಳಬೇಕೆಂಬ ಬಯಕೆ ಅವರಲ್ಲಿ ಬಲವಾಗಿರುತ್ತದೆ ಹಾಗೂ ತಮ್ಮ ಪರಿಶುದ್ಧತೆಯ ಬಗ್ಗೆ ಅವರು ಹೆಚ್ಚು ಗಮನ ಕೊಡುವುದಿಲ್ಲ. ನಮ್ಮ ಪಾಪದ ಸ್ಥಿತಿಗತಿಯನ್ನು ನಾವು ಅರಿತುಕೊಂಡಾಗ, ಕ್ರಿಸ್ತನು ನಮ್ಮ ನೀತಿಯೂ, ನಮ್ಮ ಪರಿಶುದ್ಧತೆಯೂ ಹಾಗೂ ವಿಮೋಚಕನೂ ಆಗಿದ್ದಾನೆಂದು ಆತನ ಮೇಲೆ ಬಲವಾಗಿ ಆತುಕೊಳ್ಳಬೇಕು. ಸೈತಾನನು ನಮ್ಮ ವಿರುದ್ಧವಾಗಿ ಮಾಡುವ ಆಪಾದನೆಗಳಿಗೆ ನಾವು ಉತ್ತರಕೊಡಲಾಗದು. ಕ್ರಿಸ್ತನು ಮಾತ್ರ ನಮ್ಮ ಪರವಾಗಿ ದೇವರ ಮುಂದೆ ಪರಿಣಾಮಕಾರಿಯಾದ ಪ್ರತಿವಾದ ಮಾಡುತ್ತಾನೆ. ಕ್ರಿಸ್ತನು ನಮ್ಮ ಅರ್ಹತೆಯ ಆಧಾರದಿಂದಲ್ಲ, ಬದಲಾಗಿ ತನ್ನ ಅರ್ಹತೆಯಿಂದ ನಮ್ಮಮೇಲೆ ಆಪಾದನೆಹೊರಿಸುವ ಸೈತಾನನ ಬಾಯಿಮುಚ್ಚಿಸುವನು.KanCCh 455.2

    Larger font
    Smaller font
    Copy
    Print
    Contents