Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಜಯ ಹೊಂದುವ ವಾಗ್ದಾನ

    ಈ ಅಂತ್ಯಕಾಲದಲ್ಲಿ ನಾವು ಮಾಡಬೇಕಾದ ಸೇವೆಯು ನಮ್ಮ ಪ್ರಾಣ, ಆತ್ಮ ಶರೀರಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿರಲೆಂದು ಮನಃಪೂರ್ವಕವಾಗಿ ಪ್ರಾರ್ಥಿಸಬೇಕು. ಗಲಿಬಿಲಿಯ ಪರಿಸ್ಥಿತಿ ಹೆಚ್ಚಾಗುತ್ತದೆ. ಆದರೆ ದೇವರಲ್ಲಿ ವಿಶ್ವಾಸವಿಟ್ಟಿರುವ ನಾವು ಸಹೋದರರನ್ನು ಪರಸ್ಪರ ಉತ್ತೇಜಿಸಬೇಕು. ನಾವು ನಂಬಿರುವ ಸಿದ್ಧಾಂತಗಳಿಗೆ ರಾಜಿಮಾಡಿಕೊಳ್ಳದೆ, ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆದ ಕ್ರಿಸ್ತನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡಬೇಕಾಗಿದೆ (ಇಬ್ರಿಯ 12:2). ಸಿದ್ಧಾಂತಗಳನ್ನು ಪ್ರಾಮಾಣಿಕವಾಗಿ ಉನ್ನತವಾಗಿ ಎತ್ತಿಹಿಡಿಯೋಣ. ಶ್ರೀಮತಿ ವೈಟಮ್ಮನವರು ರಾತ್ರಿಯಲ್ಲಿ ತಮಗೆ ನಿದ್ರೆ ಬಾರದಿದ್ದಲ್ಲಿ, ದೇವರಿಗೆ ಪ್ರಾರ್ಥಿಸಿದಾಗ, ಆತನು ನನ್ನನ್ನು ಬಲಪಡಿಸುತ್ತಾನೆ ಹಾಗೂ ಎಲ್ಲ ದೇಶ, ಜನಾಂಗಗಳಲ್ಲಿ ಸೇವೆ ಮಾಡುತ್ತಿರುವ ತನ್ನ ಮಕ್ಕಳ ಜೊತೆಯಲ್ಲಿದ್ದೇನೆಂದು ಅವರಿಗೆ ದೇವರು ಭರವಸೆ ನೀಡಿದನು. ಇಸ್ರಾಯೇಲ್ಯರ ದೇವರು ತನ್ನಜನರಿಗೆ ಇನ್ನೂ ಮಾರ್ಗದರ್ಶನ ನೀಡುತ್ತಾ, ಯುಗದ ಸಮಾಪ್ತಿಯವರೆಗೂ ಅವರೊಂದಿಗಿರುತ್ತೇನೆಂಬ ಭರವಸೆಯನ್ನು ಶ್ರೀಮತಿ ವೈಟಮ್ಮನವರಿಗೆ ನೀಡಿದಾಗ, ಅವರಿಗೆ ಮನಸ್ಸಮಾಧಾನವಾಯಿತು.KanCCh 463.1

    ಮೂರುದೂತರ ವರ್ತಮಾನವನ್ನು ಇನ್ನೂ ಹೆಚ್ಚಾದ ಸಾಮರ್ಥ್ಯದಿಂದ ಸಾರಬೇಕೆನ್ನುವುದು ಕರ್ತನ ಬಯಕೆಯಾಗಿದೆ. ಎಲ್ಲಾ ಕಾಲದಲ್ಲಿಯೂ ತನ್ನ ಜನರಿಗೆ ಜಯಕೊಡಲು ಆತನು ಕಾರ್ಯಮಾಡಿದ ಹಾಗೆ, ಈ ಕಾಲದಲ್ಲಿಯೂ ಸಹ ತನ್ನಸಭೆಗೆ ತನ್ನ ಉದ್ದೇಶಗಳನ್ನು ನೆರವೇರಿಸಿ ಜಯಕೊಡಲು ಆತನು ಕಾತರದಿಂದ ಬಯಸುತ್ತಾನೆ. ತನ್ನಲ್ಲಿ ಭಕ್ತಿಯಿಟ್ಟಿರುವ ದೇವಜನರೆಲ್ಲರೂ ವಿಶ್ವಾಸದಿಂದ ಒಟ್ಟಾಗಿ ಹೆಚ್ಚಿನ ಬಲಹೊಂದಿ, ಸತ್ಯದಲ್ಲಿ ನೀತಿಯಲ್ಲಿ ಭರವಸೆ ಹೊಂದಬೇಕೆಂದು ಕರೆಯುತ್ತಾನೆ. KanCCh 463.2

    ಪ್ರತಿಯೊಂದು ಹೊಸ ಅನುಭವ ಎದುರಿಸಲು ನಮಗೆ ಬಲನೀಡಲು ದೇವರು ನಮ್ಮೊಂದಿಗಿದ್ದಾನೆಂದು ನೆನಪಿನಲ್ಲಿಟ್ಟುಕೊಂಡು ದೇವರವಾಕ್ಯದ ಸಿದ್ಧಾಂತಗಳಿಗೆ ನಾವು ಬಂಡೆಯಂತೆ ದೃಢವಾಗಿ ನಿಲ್ಲಬೇಕು. ದೇವರ ಹೆಸರಿನಲ್ಲಿ ಹೆಚ್ಚಿನಬಲವನ್ನು ಹೊಂದಿ ಮುನ್ನಡೆಯಲು ನಾವು ನಮ್ಮ ಜೀವನದಲ್ಲಿ ಕ್ರಿಸ್ತನನೀತಿಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮ ಆರಂಭದ ಅನುಭವದಿಂದ ಇಂದಿನವರೆಗೂ ಪರಿಶುದ್ಧಾತ್ಮನ ಸಲಹೆ ಹಾಗೂ ಸಮ್ಮತಿಯಿಂದ ರುಜುವಾತಾಗಿರುವ ನಂಬಿಕೆಯನ್ನು ಬಹಳ ಪವಿತ್ರವೆಂದು ಕಾಪಾಡಿಕೊಳ್ಳಬೇಕು. ದೇವರುಆಜ್ಞೆಗಳನ್ನು ಕೈಕೊಂಡುನಡೆಯುವ ತನ್ನಜನರ ಮೂಲಕ ಮುಂದುವರಿಸುತ್ತಿರುವ ಕಾರ್ಯವು ಬಹಳ ಅಮೂಲ್ಯವೆಂದು ನಾವು ಪಾಲಿಸಬೇಕು ಹಾಗೂ ಈ ಕಾರ್ಯವು ಆತನ ಕೃಪೆಯಬಲದಿಂದ ಕಾಲವು ಮುಂದುವರಿದಂತೆ ಹೆಚ್ಚು ಬಲವಾಗಿಯೂ ಹಾಗೂ ಹೆಚ್ಚು ಫಲಕಾರಿಯಾಗಿಯೂ ಬೆಳೆಯುವುದು. ವೈರಿಯಾದ ಸೈತಾನನು ದೇವಜನರ ವಿವೇಚನಾ ಶಕ್ತಿಯನ್ನು ಮಂಕುಗೊಳಿಸಿ, ಅವರ ಸಾಮರ್ಥ್ಯವನ್ನು ದುರ್ಬಲಗೊಳಿಸಲು ಪ್ರಯತ್ನಿಸುವನು. ಆದರೆ ಅವರು ದೇವರ ಪವಿತ್ರಾತ್ಮನ ಮಾರ್ಗದರ್ಶನದಲ್ಲಿ ಆತನ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದಲ್ಲಿ, ಹೊಸ ಅವಕಾಶಗಳ ಬಾಗಿಲುಗಳನ್ನು ಆತನು ತೆರೆಯುವನು. ಕರ್ತನಾದ ದೇವರು ಪರಲೋಕದಿಂದ ಮಹಾಬಲದಿಂದಲೂ, ಮಹಾಮಹಿಮೆಯಿಂದಲೂ ತನ್ನ ಅಂತಿಮ ವಿಜಯದ ಮುದ್ರೆಯನ್ನು ತನಗೆ ಪ್ರಾಮಾಣಿಕರಾದವರಿಗೆ ಹಾಕುವವರೆಗೆ, ಅವರ ಆತ್ಮೀಕ ಅನುಭವವು ನಿರಂತರವಾಗಿ ಬೆಳವಣಿಗೆ ಹೊಂದುವುದು.KanCCh 463.3

    ನಮ್ಮ ಮುಂದಿರುವ ಕಾರ್ಯವನ್ನು ಸಾಧಿಸಲು ಮಾನವರಾದ ನಮ್ಮೆಲ್ಲರ ಸಾಮರ್ಥ್ಯದ ಅಗತ್ಯವಿದೆ. ಕೆಲವು ಸಂದರ್ಭಗಳಲ್ಲಿ ನಾವು ಎದುರಿಸಲಿರುವ ಸಮಸ್ಯೆಗಳು ನಮ್ಮನ್ನು ಹೆಚ್ಚು ಎದೆಗುಂದಿಸಿ ಹತಾಶೆಗೊಳಿಸುತ್ತವೆ. ಮುಂದೆ ಮಾಡಬೇಕಾದ ಕೆಲಸದ ಅಗಾಧತೆಯು ನಮ್ಮನ್ನು ಗಾಬರಿಗೊಳಿಸುತ್ತದೆ. ಆದಾಗ್ಯೂ ದೇವರ ಸಹಾಯದಿಂದ ಆತನ ಸೇವಕರು ಅಂತಿಮವಾಗಿ ಜಯಹೊಂದುವರು. ಆದುದರಿಂದ ನನ್ನ ಸಹೋದರರೇ, ನಿಮ್ಮ ಮುಂದಿರುವ ಶೋಧನೆ ತರುವ ಅನುಭವಗಳ ಬಗ್ಗೆ ನೀವು ಧೈರ್ಯಗೆಡಬಾರದು. ಯೇಸುವು ನಿಮ್ಮೊಂದಿಗಿದ್ದಾನೆ. ಆತನು ತನ್ನ ಪವಿತ್ರಾತ್ಮನಿಂದ ದಾರಿ ಸಿದ್ಧಪಡಿಸುತ್ತಾನೆ ಹಾಗೂ ಆತನು ನಿಮ್ಮೆಲ್ಲರ ಸಂಕಟದ ಸಮಯದಲ್ಲಿ ನಮಗೆ ಸಹಾಯಕನಾಗಿರುವನು. “ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯಪ್ರಕಾರ ನಾವು ಬೇಡುವುದಕ್ಕಿಂತಲೂ, ಯೋಚಿಸುವುದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ ಸಭೆಯಲ್ಲಿಯೂ, ಕ್ರಿಸ್ತಯೇಸುವಿನಲ್ಲಿಯೂ ತಲಾತಲಾಂತರಕ್ಕೂ ಯುಗಯುಗಾಂತರಕ್ಕೂ ಸ್ತೋತ್ರ” ಆಮೆನ್ (ಎಫೆಸ 3:20,21).KanCCh 464.1

    ಶ್ರೀಮತಿ ವೈಟಮ್ಮನವರು ಒಂದು ರಾತ್ರಿಯಲ್ಲಿ ಕಂಡ ದರ್ಶನದ ದೃಶ್ಯಗಳಿಂದ ಅವರಿಗೆ ಬಹಳ ಸಂತೋಷವಾಯಿತು. ಅನೇಕ ಸ್ಥಳಗಳಲ್ಲಿ ಪುನರುಜ್ಜೀವನದ ಮಹಾಚಳವಳಿಯು ಮುಂದುವರೆಯುತ್ತಿರುವುದನ್ನು ಅವರು ಕಂಡರು. ದೇವರ ಕರೆಗೆ ಉತ್ತರವಾಗಿ ಅಡ್ವೆಂಟಿಸ್ಟರು ನೇರಮಾರ್ಗದಲ್ಲಿ ನಡೆಯುತ್ತಿದ್ದರು. ನನ್ನ ಸಹೋದರರೇ ಕರ್ತನು ನಮಗೆ ಮಾತಾಡುತ್ತಿರುವಾಗ, ಆತನ ಸ್ವರಕ್ಕೆ ನಾವು ಕಿವಿಗೊಡಬಾರದೇ, ನಾವು ನಮ್ಮ ಆರತಿಗಳನ್ನು ಸಿದ್ಧ ಮಾಡಿಕೊಂಡು ತಮ್ಮ ಕರ್ತನಿಗಾಗಿ ಕಾದುಕೊಂಡಿರುವವರಂತಿರಬಾರದೇ? ಈಗ ನಾವು ಕ್ರಿಯೆಯ ಮೂಲಕ ನಮ್ಮ ಆತ್ಮೀಕ ಬೆಳಕನ್ನು ಇತರರಿಗೆ ಪ್ರಕಾಶಿಸುವ ಸಮಯ ಬಂದಿದೆ. KanCCh 464.2

    “ನೀವು ದೇವರಿಂದ ಕರೆಯಲ್ಪಟ್ಟವರಾದ ಕಾರಣ ಯೋಗ್ಯರಾಗಿ ನಡೆದುಕೊಳ್ಳಬೇಕೆಂದು.... ನಾನು ನಿಮ್ಮನ್ನು ಪ್ರಬೋಧಿಸುತ್ತೇನೆ. ನೀವು ಪೂರ್ಣ ವಿನಯ, ಸಾತ್ವಿಕತ್ವಗಳಿಂದಲೂ, ದೀರ್ಘಶಾಂತಿಯಿಂದಲೂ ಕೂಡಿದವರಾಗಿ ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ” (ಎಫೆಸ 4:1-3). KanCCh 464.3

    Larger font
    Smaller font
    Copy
    Print
    Contents