ಪವಿತ್ರಾತ್ಮನ ವರ ಕೊಡಲು ದೇವರು ಬಯಸುತ್ತಾನೆ
ವಿಶ್ವಾಸಿಗಳಾದ ಕ್ರೈಸ್ತರು ವಾಸಿಸುವ ಸಮುದಾಯದಲ್ಲಿ, ಸುವಾರ್ತಾಸೇವಕರು ವಿಶೇಷ ಪ್ರಯತ್ನ ಮಾಡಿದಾಗ, ಅಲ್ಲಿ ಕರ್ತನ ಸುವಾರ್ತೆ ಸಾರಲ್ಪಡಲು ಅಗತ್ಯವಾದ ಮಾರ್ಗಗಳನ್ನು ತೆರೆಯಲು ಅಲ್ಲಿನ ವಿಶ್ವಾಸಿಗಳು ಎಲ್ಲಾ ವಿಧವಾದ ಗಂಭೀರವಾದ ಪ್ರಯತ್ನಗಳನ್ನು ಮಾಡಬೇಕು. ಅವರು ಪ್ರಾರ್ಥನಾಪೂರ್ವಕವಾಗಿ ತಮ್ಮ ಹೃದಯಗಳನ್ನು ಪರಿಶೋಧಿಸಿಕೊಂಡು, ಸಹೋದರರೊಂದಿಗೂ, ಮತ್ತು ದೇವರೊಂದಿಗೂ ಒಟ್ಟಾಗಿ ಸಹಕಾರನೀಡಲು ಅಡ್ಡಿಯಾಗಿರುವ ಎಲ್ಲಾ ಪಾಪಗಳನ್ನು ಬಿಡಬೇಕು.KanCCh 43.3
ಶ್ರೀಮತಿ ವೈಟಮ್ಮನವರು ಒಂದು ರಾತ್ರಿ ಕಂಡ ದರ್ಶನದಲ್ಲಿ, ದೇವಜನರ ಮಧ್ಯೆ ಒಂದು ಮಹಾ ಧಾರ್ಮಿಕಸುಧಾರಣೆ ಉಂಟಾದದ್ದನ್ನು ನೋಡಿದರು. ಅನೇಕ ಜನರುದೇವರನ್ನು ಸ್ತುತಿಸುತ್ತಿದ್ದರು. ರೋಗಿಗಳು ಗುಣ ಹೊಂದಿದರು ಮತ್ತು ಬಹಳಷ್ಟು ಅದ್ಭುತಕಾರ್ಯಗಳು ನಡೆದವು. ಪಂಚಾಶತ್ತಮ ಹಬ್ಬಕ್ಕೆ ಮೊದಲು ಶಿಷ್ಯರಲ್ಲಿ ಕಂಡುಬಂದಂತಸಹೋದರ ಪ್ರೀತಿ, ಐಕ್ಯತೆ, ಪ್ರಾರ್ಥನಾ ಜೀವಿತ ಇವೆಲ್ಲವನ್ನೂ ಶ್ರೀಮತಿ ವೈಟಮ್ಮನವರುದೇವದರ್ಶನದಲ್ಲಿ ನೋಡಿದರು. ಲಕ್ಷಾಂತರ ಜನರು ಮನೆಮನೆಗಳನ್ನು ಸಂಧಿಸಿ, ದೇವರವಾಕ್ಯ ಹೇಳುತ್ತಿದ್ದರು. ಪವಿತ್ರಾತ್ಮನ ಶಕ್ತಿಯಿಂದ ಅವರ ಹೃದಯಗಳಲ್ಲಿ ಪಾಪದ ಅರುಹುಉಂಟಾಯಿತು. ಯಥಾರ್ಥ ಪರಿವರ್ತನೆ ವಾಕ್ಯ ಕೇಳಿದವರಲ್ಲಿ ಉಂಟಾಯಿತು. ಸತ್ಯವನ್ನುಸಾರಲು ಎಲ್ಲಾ ಬಾಗಿಲುಗಳೂ ತೆರೆಯಲ್ಪಟ್ಟವು. ಪರಲೋಕದ ಮಹಾ ಬೆಳಕಿನಿಂದ ಈಲೋಕವು ಪ್ರಕಾಶಗೊಂಡಂತಾಯಿತು. ದೀನ ಮನಸ್ಸಿನ ದೇವರ ನಿಜವಾದ ಮಕ್ಕಳುಮಹಾ ಆಶೀರ್ವಾದ ಹೊಂದಿದರು. 1844ನೇ ಇಸವಿಯಲ್ಲಿ ಅಡ್ವೆಂಟಿಸ್ಟರು ದೇವರಎರಡನೇಬರೋಣಕ್ಕಾಗಿ ಕಾದುಕೊಂಡಿದ್ದಾಗ ಉಂಟಾಗಿದ್ದಂತ ಧಾರ್ಮಿಕ ಸುಧಾರಣೆಯುಕಂಡುಬಂದಿತು.KanCCh 43.4
ದೇವರು ತನ್ನ ಜನರನ್ನು ತನ್ನ ಪ್ರೀತಿಯಲ್ಲಿ ಹೊಸದಾಗಿ ದೀಕ್ಷಾಸ್ನಾನ ಮಾಡಿಸಿ, ಪವಿತ್ರಾತ್ಮನ ವರದಿಂದ ಚೈತನ್ಯಗೊಳಿಸಬೇಕೆಂದು ಬಯಸುತ್ತಾನೆ. ಸಭೆಯಲ್ಲಿ ಪವಿತ್ರಾತ್ಮನ ಶಕ್ತಿಯ ಯಾವುದೇ ಕೊರತೆ ಇರಬಾರದು. ಯೇಸುಸ್ವಾಮಿಯು ಪರಲೋಕಕ್ಕೆ ಏರಿಹೋದ ನಂತರ ಆತನು ವಾಗ್ದಾನ ಮಾಡಿದ್ದ ಸಹಾಯಕನಿಗಾಗಿ ಪ್ರಾರ್ಥನೆಯಿಂದಲೂ, ಐಕ್ಯತೆಯಿಂದಲೂ, ಒಂದೇ ಮನಸ್ಸಿನಿಂದ ಕಾದುಕೊಂಡಿದ್ದ ಶಿಷ್ಯರ ಮೇಲೆ ಪವಿತ್ರಾತ್ಮನು ಸುರಿಸಲ್ಪಟ್ಟನು. ಅದೇರೀತಿ ಕ್ರಿಸ್ತನ ಬರೋಣಕ್ಕೆ ಮೊದಲು ದೇವರ ಮಹಿಮೆಯಿಂದ ಈ ಲೋಕವು ಪ್ರಕಾಶಿಸುತ್ತದೆ. ಸತ್ಯದ ಮೂಲಕ ತಮ್ಮನ್ನು ಪರಿಶುದ್ಧಗೊಳಿಸಿಕೊಂಡವರಿಂದ ಈ ಲೋಕದಲ್ಲಿ ಪರಿಶುದ್ಧವಾದ ಒಂದು ಪ್ರಭಾವ ಕಂಡುಬರುತ್ತದೆ. ಜಗತ್ತು ಕೃಪೆಯ ವಾತಾವರಣದಿಂದ ಆವರಿಸಿಕೊಳ್ಳಲಿದೆ. ಪರಿಶುದ್ಧಾತ್ಮನು ಮಾನವರ ಹೃದಯಗಳಲ್ಲಿ ಕೆಲಸ ಮಾಡಿ, ದೇವರ ಸಂಗತಿಗಳನ್ನು ಅವರಿಗೆ ಮನವರಿಕೆ ಮಾಡುವನು.KanCCh 44.1
ತನ್ನಲ್ಲಿ ನಿಜವಾಗಿಯೂ ನಂಬಿಕೆಯಿಟ್ಟವರಲ್ಲಿ ಒಂದು ಮಹಾಕಾರ್ಯ ಮಾಡಬೇಕೆಂದು ದೇವರು ಇಚ್ಛಿಸುತ್ತಾನೆ. ಸಭೆಯ ಸಾಮಾನ್ಯ ಸದಸ್ಯರು ತಮಗೆ ಸಾಧ್ಯವಾದ ಕಾರ್ಯಗಳನ್ನು ಮಾಡಲು ಎಚ್ಚರಗೊಂಡಾಗ, ತಮ್ಮ ಸ್ವಂತಖರ್ಚಿನಲ್ಲಿ ಸುವಾರ್ತೆಯ ಯುದ್ಧಕ್ಕೆ ಹೋದಾಗ, ಕ್ರಿಸ್ತನಿಗಾಗಿ ಆತ್ಮಗಳನ್ನು ಗೆಲ್ಲಲು ತಾವು ಎಷ್ಟೊಂದು ಸಾಧಿಸಬಹುದೆಂದು ಧೈರ್ಯದಿಂದ ನಿಂತಾಗ, ಅನೇಕರು ಸೈತಾನನ ಮಾರ್ಗವನ್ನು ಬಿಟ್ಟು, ಕ್ರಿಸ್ತನ ಮಾರ್ಗಕ್ಕೆ ಬರುವರು. ಕ್ರೈಸ್ತ ವಿಶ್ವಾಸಿಗಳು ಶ್ರೀಮತಿವೈಟಮ್ಮನವರ ಮೂಲಕ ತಮಗೆ ಕೊಟ್ಟ ಬೆಳಕನ್ನು ಸುವಾರ್ತಾಸೇವೆಗಾಗಿ ಉಪಯೋಗಿಸಿದಲ್ಲಿ, ನಾವು ಖಂಡಿತವಾಗಿಯೂ ದೇವರ ರಕ್ಷಣೆಯನ್ನು ಕಾಣುವೆವು. ಅದ್ಭುತವಾದ ಧಾರ್ಮಿಕ ಸುಧಾರಣೆ ಉಂಟಾಗುವವು. ಪಾಪಿಗಳು ಮಾನಸಾಂತರ ಹೊಂದಿ, ಅನೇಕರು ಸಭೆಗೆ ಸೇರುವರು. ನಮ್ಮ ಹೃದಯವನ್ನು ಕ್ರಿಸ್ತನೊಂದಿಗೆ ಐಕ್ಯಗೊಳಿಸಿದಾಗ, ನಮ್ಮ ಜೀವನವು ಆತನ ಕಾರ್ಯದಲ್ಲಿ ಸಾಮರಸ್ಯ ಹೊಂದಿದಾಗ, ಪಂಚಾಶತ್ತಮ ದಿನದಲ್ಲಿ ಸುರಿಸಲ್ಪಟ್ಟ ಪವಿತ್ರಾತ್ಮನು ನಮ್ಮ ಮೇಲೆಯೂ ಸುರಿಸಲ್ಪಡುವನು.KanCCh 44.2