Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-8 — ಸಭೆಯ ಪುಸ್ತಕ ಪ್ರಕಟಣೆಗಳು

    ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯ ಪುಸ್ತಕಪ್ರಕಟನಾ ಕಾರ್ಯವು ದೇವರ ಮಾರ್ಗದರ್ಶನದಿಂದಲೂ ಹಾಗೂ ಆತನ ವಿಶೇಷವಾದ ಮೇಲ್ವಿಚಾರಣೆಯಲ್ಲಿಯೂ ಸ್ಥಾಪನೆಯಾಯಿತು. ಒಂದು ವಿಶೇಷವಾದ ಉದ್ದೇಶ ನೆರವೇರಿಸುವುದಕ್ಕಾಗಿ ಅದು ಪ್ರಾರಂಭವಾಯಿತು. ಸೆವೆಂತ್ ಡೇ ಅಡ್ವೆಂಟಿಸ್ಟರು ಲೋಕದಿಂದ ಪ್ರತ್ಯೇಕಿಸಲ್ಪಟ್ಟವರಾಗಿ, ಒಂದು ವಿಶೇಷ ಜನಾಂಗವಾಗಿ ದೇವರಿಂದ ಆರಿಸಲ್ಪಟ್ಟವರು. ಸತ್ಯವೆಂಬ ಒಂದು ಮಹಾಸಾಧನದಿಂದ ಈ ಜಗತ್ತಿನಿಂದ ಅವರನ್ನು ಹೊರತಂದು ತನ್ನೊಂದಿಗೆ ಸೇರಿಸಿಕೊಂಡನು. ಸೆವೆಂತ್‍ಡೇ ಅಡ್ವೆಂಟಿಸ್ಟರನ್ನು ಆತನು ತನ್ನ ಪ್ರತಿನಿಧಿಗಳನ್ನಾಗಿ ಮಾಡಿಕೊಂಡನು. ಅಲ್ಲದೆ ಕೊನೆಯಕಾಲದಲ್ಲಿ ರಕ್ಷಣೆ ಎಂಬ ಸುವಾರ್ತೆಸಾರುವುದಕ್ಕಾಗಿ ಅವರನ್ನು ತನ್ನ ರಾಯಭಾರಿಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದಾನೆ. ಬೇರೆ ಯಾವ ಜನರಿಗೂ ಕೊಡದಂತ ಸತ್ಯವೆಂಬ ಮಹಾಸಂಪತ್ತನ್ನು ಅವರ ವಶಕ್ಕೆ ಕೊಟ್ಟದ್ದಲ್ಲದೆ, ಮಹಾ ಗಂಭೀರವಾದ ಹಾಗೂ ಭಯಾನಕವಾದ ಎಚ್ಚರಿಕೆಯನ್ನು ಜಗತ್ತಿಗೆ ಸಾರಬೇಕೆಂಬ ಆದೇಶವನ್ನೂ ಸಹ ದೇವರು ನಮ್ಮ ಸಭೆಗೆ ನೀಡಿದ್ದಾನೆ. ಈ ಮಹಾಕಾರ್ಯವನ್ನು ಸಾಧಿಸುವುದರಲ್ಲಿ ನಮ್ಮಸಭೆಯ ಪುಸ್ತಕ ಪ್ರಕಟಣಾಸಂಸ್ಥೆಗಳು ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮಗಳಾಗಿವೆ. ಇಲ್ಲಿಂದ ಹೊರಬರುವ ಪುಸ್ತಕಗಳು ಕ್ರಿಸ್ತನ ಎರಡನೇ ಬರೋಣದಲ್ಲಿ ಆತನನ್ನು ಎದುರುಗೊಳ್ಳುವುದಕ್ಕೆ ಎಲ್ಲರನ್ನೂ ಸಿದ್ಧ ಮಾಡಬೇಕಾಗಿವೆ.KanCCh 53.1

    ಜನರಿಗೆ ನಮ್ಮ ಪುಸ್ತಕಗಳು ಮುಟ್ಟುವಂತೆ ಮಾಡುವುದಕ್ಕಿಂತ ಪ್ರಾಮುಖ್ಯವಾದ ಕಾರ್ಯವು ಬೇರೆ ಯಾವುದೂಇಲ್ಲ. ಇದರಿಂದ ಅವರು ಸತ್ಯವೇದವನ್ನು ಶೋಧಿಸುವಂತೆ ಮಾಡಲು ಸಾಧ್ಯವಾಗುತ್ತದೆ. ನಮ್ಮ ಪ್ರಕಟಣಾಲಯಗಳು ಪ್ರಕಟಿಸಿದ ಪುಸ್ತಕಗಳನ್ನು ಕುಟುಂಬಗಳಿಗೆ ಪರಿಚಯಿಸುವುದು, ಅವರೊಂದಿಗೆ ಸಂಭಾಷಿಸುವುದು ಹಾಗೂ ಪ್ರಾರ್ಥಿಸುವುದು ಅತ್ಯಂತ ಉತ್ತಮವಾದ ಸೇವೆಯಾಗಿದೆ. ಇದರಿಂದ ಅವರಿಗೂ ಸಹ ಸುವಾರ್ತೆ ಸಾರಲು ತರಬೇತಿ ನೀಡಿದಂತಾಗುವುದು.KanCCh 53.2

    ನಮ್ಮ ಪುಸ್ತಕಗಳನ್ನು ಮಾರಾಟಮಾಡುವುದು ಒಂದು ಪ್ರಮುಖವಾದ ಮತ್ತು ಪ್ರಯೋಜನಕಾರಿಯಾದ ಸುವಾರ್ತಾಸೇವೆಯಾಗಿದೆ. ಎಲ್ಲಿ ಸಾರ್ವಜನಿಕವಾಗಿ ಸುವಾರ್ತಾಕೂಟಗಳನ್ನು ನಡೆಸಲು ಸಾಧ್ಯವಿಲ್ಲವೋ, ಅಲ್ಲಿಗೆ ಈ ಪುಸ್ತಕಗಳ ಮೂಲಕ ಹೋಗಲು ಸಾಧ್ಯ. ಅಂತಹ ಸ್ಥಳಗಳಲ್ಲಿ ನಂಬಿಗಸ್ತನಾದ ಸಾಹಿತ್ಯ ಸುವಾರ್ತಾಸೇವಕನು ಬೋಧಕ ಸ್ಥಾನ ಹೊಂದಿರುತ್ತಾನೆ. ಈ ಸೇವೆಯಿಂದ ಬೇರೆ ಮಾರ್ಗದ ಮೂಲಕ ತಲುಪಲಾಗದಂತ ಸಾವಿರಾರು ಜನರಿಗೆ ಸತ್ಯವನ್ನು ತಿಳಿಸಬಹುದು. ಸಾಹಿತ್ಯಸುವಾರ್ತಾಸೇವಕರು ದೇಶದ ಹಾಗೂ ರಾಜ್ಯದ ಎಲ್ಲಾ ಸ್ಥಳಗಳಿಗೂ ಹೋಗಬೇಕು. ಬೋಧಕರು ಮತ್ತು ಇತರರು ನೇರವಾಗಿ ಸುವಾರ್ತೆ ಸಾರುವಷ್ಟೇ, ಈ ಸೇವೆಯೂ ಸಹ ಪ್ರಾಮುಖ್ಯತೆ ಪಡೆದಿದೆ. ಜಗತ್ತಿಗೆ ಮೂರುದೂತರ ವರ್ತಮಾನವನ್ನು ಸಾರಬೇಕಾದ ಮಹಾಕಾರ್ಯ ನೆರವೇರಿಸುವುದಕ್ಕೆ ಬೋಧಕರು ಮತ್ತು ಮೌನವಾಗಿ ಸೇವೆ ಮಾಡುವ ಸಾಹಿತ್ಯ ಸುವಾರ್ತಾಸೇವಕರ ಅಗತ್ಯವಿದೆ. KanCCh 53.3

    ನಮ್ಮ ಪುಸ್ತಕಗಳಲ್ಲಿರುವ ಸತ್ಯವೆಂಬ ಬೆಳಕನ್ನು ಜನರ ಮುಂದೆ ಪ್ರಕಾಶಿಸುವಂತೆ ಮಾಡುವುದಕ್ಕಾಗಿ ದೇವರು ಈ ಸಾಹಿತ್ಯ ಸುವಾರ್ತಾಸೇವೆಯನ್ನು ಒಂದು ಸಾಧನವಾಗಿ ಪ್ರತಿಷ್ಠಿಸಿದ್ದಾನೆ. ಜನರಿಗೆ ಆತ್ಮೀಕಶಿಕ್ಷಣ ಮತ್ತು ಜ್ಞಾನೋದಯಕ್ಕಾಗಿ ಅಗತ್ಯವಾದ ಪುಸ್ತಕಗಳನ್ನು ಸಾಧ್ಯವಾದಷ್ಟು ಬೇಗನೆ ತಲುಪಿಸಬೇಕಾದ ಕಾರ್ಯದ ಪ್ರಾಮುಖ್ಯತೆಯನ್ನು ಸಾಹಿತ್ಯ ಸುವಾರ್ತಾಸೇವಕರು ತಿಳಿದಿರಬೇಕು. ಈ ಕೆಲಸವನ್ನು ತಾನೇ ಈ ಸಮಯದಲ್ಲಿ ಮಾಡಬೇಕೆಂದು ದೇವರು ಅಪೇಕ್ಷಿಸುತ್ತಾನೆ. ಸಾಹಿತ್ಯ ಸುವಾರ್ತಾಸೇವೆ ಮಾಡಲು ತಮ್ಮನ್ನು ದೇವರಿಗೆ ಪ್ರತಿಷ್ಠಿಸಿಕೊಂಡವರು, ಲೋಕಕ್ಕೆ ಕೊನೆಯ ಎಚ್ಚರಿಕೆಯ ಸಂದೇಶ ಕೊಡುವುದರಲ್ಲಿ ಸಹಾಯ ಮಾಡುವವರಾಗಿದ್ದಾರೆ. ಸಾಹಿತ್ಯ ಸುವಾರ್ತಾಸೇವಕರ ಪ್ರಯತ್ನದಿಂದ ಸಾವಿರಾರು ಮಂದಿ ಕೊನೆಯ ಕಾಲದ ಈ ಎಚ್ಚರಿಕೆಯ ಸಂದೇಶವನ್ನುಕೇಳಲಿದ್ದಾರೆ. ಇಲ್ಲದಿದ್ದಲ್ಲಿ ಅವರಿಗೆ ಸುವಾರ್ತಾ ಸಾರುವುದು ಸಾಧ್ಯವಾಗುತ್ತಿರಲಿಲ್ಲ.ಆದಾಗ್ಯೂ, ಈ ಸಾಹಿತ್ಯ ಸುವಾರ್ತಾಸೇವೆಯನ್ನು ಬಹಳ ಉನ್ನತವೆಂದು ಎಣಿಸಬಾರದು.KanCCh 54.1

    ಅಡ್ವೆಂಟಿಸ್ಟ್ ಸಭೆಯ ಪುಸ್ತಕಗಳು ಜಗತ್ತಿನ ಎಲ್ಲಾ ಕಡೆಯಲ್ಲಿಯೂ ಎಲ್ಲಾ ಭಾಷೆಗಳಲ್ಲಿಜನರಿಗೆ ತಲುಪಬೇಕು. ಈ ಮಾಧ್ಯಮ ಹಾಗೂ ಬೋಧಕರುಗಳ ಮೂಲಕಮೂರನೇದೇವದೂತನ ಸಂದೇಶವು ಸಾರಲ್ಪಡಬೇಕು. ಕೊನೆಯ ಕಾಲದ ಈ ಸತ್ಯದಲ್ಲಿನಂಬಿಕೆಯಿಟ್ಟಿರುವ ನೀವು ಎಚ್ಚರಗೊಳ್ಳಬೇಕು. ನಿಮ್ಮಲ್ಲಿ ಸಾಧ್ಯವಿರುವ ಎಲ್ಲಾಸಂಪನ್ಮೂಲಗಳನ್ನು, ತಲಾಂತುಗಳನ್ನು ಒಟ್ಟುಗೂಡಿಸಿ ಸತ್ಯವನ್ನು ಮನವರಿಕೆಮಾಡಿಕೊಳ್ಳುವವರಿಗೆ ಮೂರನೇದೂತನ ವರ್ತಮಾನವನ್ನು ಸಾರುವುದು ನಿಮ್ಮಕರ್ತವ್ಯವಾಗಿದೆ. ನಮ್ಮ ಪುಸ್ತಕಗಳ ಮಾರಾಟದಿಂದ ಬರುವ ಸ್ವಲ್ಪ ಹಣವನ್ನು, ಅವುಗಳನ್ನುಅಚ್ಚುಹಾಕಿಸಿ, ಪ್ರಕಟಿಸಲು ಉಪಯೋಗಿಸಬೇಕು. ಇವು ಆತ್ಮೀಕವಾಗಿ ಕುರುಡರಾಗಿರುವವರಕಣ್ಣುಗಳನ್ನು ತೆರೆಯುತ್ತದೆ ಹಾಗೂ ಕಠಿಣ ಹೃದಯವನ್ನು ಮೆದುಗೊಳಿಸುತ್ತದೆ.KanCCh 54.2

    ಸಭಾಪಾಲಕರಾದ ಬೋಧಕರು ಪ್ರಾಮಾಣಿಕವಾಗಿ ದೈವಸಂದೇಶ ನೀಡಿದರೂ,ಜನರು ಅದೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಳ್ಳಲಾರರು. ಆದುದರಿಂದ ಸಭಾಪಾಲಕರಜೊತೆಯಲ್ಲಿ ಸಾಹಿತ್ಯ ಸುವಾರ್ತಾಸೇವಕರು ಸಹಕಾರನೀಡಿ ಸಂದೇಶವನ್ನು ಸಾರಬೇಕೆಂದುಶ್ರೀಮತಿವೈಟಮ್ಮನವರಿಗೆ ದೇವರು ದರ್ಶನದಲ್ಲಿ ತಿಳಿಸಿದ್ದಾನೆ. ಈ ಕಾರಣದಿಂದಕೊನೆಯಕಾಲದ ಈ ಸತ್ಯದ ಪ್ರಾಮುಖ್ಯತೆಯ ಬಗ್ಗೆ ವಿಶ್ವಾಸಿಗಳನ್ನು ಎಚ್ಚರಿಸುವುದಕ್ಕೆಮಾತ್ರವಲ್ಲದೆ, ಅವರು ವಂಚನೆಗೆ ಬಲಿಯಾಗದಂತೆಯೂ ಮತ್ತು ಸತ್ಯದಲ್ಲಿ ಬಲವಾಗಿಬೇರೂರುವುದಕ್ಕಾಗಿಯೂ ಪುಸ್ತಕಗಳು ಅಗತ್ಯವಾಗಿವೆ. ಜನರಿಗೆ ಅಂತ್ಯಕಾಲದ ಸಂದೇಶವನ್ನುನಿರಂತರವಾಗಿ ಕೊಡುವುದಕ್ಕಾಗಿ ಕರಪತ್ರಗಳು ಹಾಗೂ ಪುಸ್ತಕಗಳು ದೇವರ ಸಾಧನಗಳಾಗಿವೆ.ಜನರನ್ನು ಸತ್ಯದಬೆಳಕಿನಲ್ಲಿ ನಡೆಸಿ, ಅದರಲ್ಲಿ ಬಲವಾಗಿ ಬೇರೂರುವಂತೆ ಮಾಡುವಲ್ಲಿದೇವರ ವಾಕ್ಯವನ್ನು ಸಾರುವುದಕ್ಕಿಂತಲೂ, ಪುಸ್ತಕಗಳು ಮಹತ್ತರವಾದ ಕಾರ್ಯಮಾಡುತ್ತವೆ.ನಮ್ಮ ಸಭೆಯ ಕರಪತ್ರಗಳು ಹಾಗೂ ಪುಸ್ತಕಗಳು ಮೌನವಾಗಿ ಸೇವೆ ಮಾಡುವಸಂದೇಶಕರಾಗಿವೆ. ಪ್ರತಿ ಮನೆಯಲ್ಲಿಯೂ ಜನರು ಇವುಗಳನ್ನು ಓದುವಾಗ, ಎಲ್ಲಾವಿಧದಲ್ಲಿಯೂ ಇದು ಸುವಾರ್ತಾಸೇವೆಯನ್ನು ಬಲಪಡಿಸುತ್ತದೆ. ದೇವರ ವಾಕ್ಯವನ್ನುಕೇಳುವವರ ಮನಸ್ಸಿನಲ್ಲಿ ಪವಿತ್ರಾತ್ಮನು ಹೇಗೆ ಪ್ರಭಾವ ಬೀರುವನೋ, ಅದೇ ರೀತಿಜನರು ಪುಸ್ತಕಗಳನ್ನು ಓದುವಾಗಲೂ ಆತನು ಅವರ ಮನಸ್ಸಿನಲ್ಲಿ ಪರಿಣಾಮ ಬೀರುತ್ತಾನೆ.ದೇವರ ಸೇವೆಮಾಡುವ ಸಭಾಪಾಲಕರೊಂದಿಗೆ ಇರುವ ಅದೇ ದೇವದೂತರು, ಸತ್ಯವನ್ನುಒಳಗೊಂಡಿರುವ ಪುಸ್ತಕಗಳ ಮೂಲಕ ಸಾಹಿತ್ಯ ಸುವಾರ್ತಾಸೇವೆ ಮಾಡುವವರ ಸಂಗಡಲೂಇರುತ್ತಾರೆ.KanCCh 54.3

    ವಿದ್ಯಾರ್ಥಿಗಳು ಸಾಹಿತ್ಯ ಸುವಾರ್ತಾಸೇವೆ ಮಾಡಬೇಕೆಂದು ಬಯಸಿದಲ್ಲಿ ಅವರು ತಮ್ಮ ಶಿಕ್ಷಣ ಮುಂದುವರಿಸಲು ಹಣಗಳಿಸುವ ಸಲುವಾಗಿ ವಿವೇಕಯುತವಾದ ಯೋಜನೆ ಹಾಕಿಕೊಳ್ಳಬೇಕು. ಇಂತಹ ವಿದ್ಯಾರ್ಥಿಗಳು ಅತ್ಯಂತ ಅಮೂಲ್ಯವಾದ ಪ್ರಾಯೋಗಿಕ ಅನುಭವ ಪಡೆದುಕೊಳ್ಳುತ್ತಾರೆ. ಇದರಿಂದ ಅವರು ಮುಂದೆ ದೇವರಸೇವೆಯಲ್ಲಿ ಉಪಯೋಗವಾಗುವಂತ ಅರ್ಹತೆ ಪಡೆದುಕೊಳ್ಳಲು ಸಹಾಯವಾಗುತ್ತದೆ. KanCCh 55.1

    ಸಭಿಕರು ನಮ್ಮ ಪುಸ್ತಕಗಳ ಪ್ರಸಾರದ ಪ್ರಾಮುಖ್ಯತೆ ಅರಿತಾಗ ಅವರು ತಮ್ಮ ಹೆಚ್ಚಿನ ಸಮಯವನ್ನು ಈ ಸೇವೆಗೆ ಮೀಸಲಿಡುತ್ತಾರೆ. ಎಲ್ಲಿಯವರೆಗೆ ಕೃಪೆಯ ಕಾಲವಿರುವುದೋ, ಅಲ್ಲಿಯ ತನಕ ಸಾಹಿತ್ಯ ಸುವಾರ್ತಾಸೇವಕರು ತಮ್ಮ ಸೇವೆಮಾಡಲು ಅವಕಾಶವಿರುತ್ತದೆ.KanCCh 55.2

    ಸಹೋದರ ಸಹೋದರಿಯರೇ, ನಿಮ್ಮ ಪ್ರಾರ್ಥನೆ, ಸಮಯ, ತಲಾಂತುಗಳು ಹಾಗು ಹಣದ ಸಹಾಯದ ಮೂಲಕ ಅಡ್ವೆಂಟಿಸ್ಟ್ ಸಭೆಯ ಪುಸ್ತಕಗಳ ಪ್ರಕಾಶನ ಸಂಸ್ಥೆಗಳನ್ನು ಮನಃಪೂರ್ವಕವಾಗಿ ಪೋಷಿಸಿ ಬೆಂಬಲಿಸಬೇಕು. ಇದರಿಂದ ದೇವರಿಗೆ ಸಂತೋಷವಾಗುವುದು. ಅವುಗಳ ಮೇಲೆ ದೇವರ ಆಶೀರ್ವಾದವು ಹೇರಳವಾಗಿ ಸುರಿಸಲ್ಪಡುವಂತೆ ಪ್ರತಿದಿನ ಬೆಳಿಗ್ಗೆ ಹಾಗೂ ಸಾಯಂಕಾಲ ನೀವು ಪ್ರಾರ್ಥಿಸಬೇಕು. ಯಾವುದೇ ರೀತಿಯ ಕಠಿಣವಾದ ಟೀಕೆ ಮತ್ತು ದೂರುಗಳಿಗೆ ಅವಕಾಶ ಕೊಡಬೇಡಿ. ನಮ್ಮ ಸಭೆಯ ಪುಸ್ತಕಗಳು ಹಾಗೂ ಕರಪತ್ರಗಳ ಬಗ್ಗೆ ನಿಮ್ಮ ಬಾಯಿಂದ ಯಾವುದೇ ದೂರುಗಳು ಅಥವಾ ಗುಣುಗುಟ್ಟುವಿಕೆ ಬರಬಾರದು. ದೇವದೂತರು ಈ ವಿಷಯದಲ್ಲಿ ನಿಮ್ಮ ಮಾತುಗಳನ್ನು ಗಮನವಿಟ್ಟು ಕೇಳುತ್ತಾರೆಂಬುದನ್ನು ನೆನಪಿನಲ್ಲಿಡಿ. ನಮ್ಮ ಪುಸ್ತಕ ಪ್ರಕಾಶನಾ ಸಂಸ್ಥೆಗಳು ದೇವರಿಂದ ಆರಂಭಿಸಲ್ಪಟ್ಟಿವೆ ಎಂಬುದು ಎಲ್ಲರಿಗೂ ತಿಳಿದಿರಲಿ. ತಮ್ಮ ಸ್ವಾರ್ಥ ಹಾಗೂ ಸ್ವಲಾಭಕ್ಕಾಗಿ ಇವುಗಳ ಬಗ್ಗೆ ಕೀಳಾಗಿ ಮಾತಾಡಿ ಕೆಟ್ಟಹೆಸರು ತರಲು ಪ್ರಯತ್ನಿಸುವವರು ದೇವರ ಮುಂದೆ ಲೆಕ್ಕಕೊಡಬೇಕು. ದೇವರಸೇವೆಗೆ ಸಂಬಂಧ ಹೊಂದಿದ ಎಲ್ಲವೂ ಪರಿಶುದ್ಧವೆಂದು ಎಣಿಸಬೇಕೆಂದು ಆತನು ಬಯಸುತ್ತಾನೆ. KanCCh 55.3

    *****