Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಇಂದು ಧೈರ್ಯವಾಗಿ ಜೀವಿಸಿ

    ನೀವು ಸ್ವೀಕರಿಸಿದ ದೇವರ ಸತ್ಯವು ನಿಮ್ಮನ್ನು ರಕ್ಷಣೆಗೆ ಬಾಧ್ಯಸ್ಥರನ್ನಾಗಿ ಮಾಡುತ್ತದೆ. ಆ ಸತ್ಯವನ್ನು ನೀವು ನಂಬಿ ಅದಕ್ಕೆ ವಿಧೇಯರಾದರೆ, ಇಂದಿನ ಕರ್ತವ್ಯಗಳನ್ನು ನಿರ್ವಹಿಸುವುದಕ್ಕೂ ಮತ್ತು ಕಷ್ಟ ಶೋಧನೆಗಳನ್ನು ಎದುರಿಸಲು ಬೇಕಾದಷ್ಟು ಕೃಪೆ ದೊರೆಯುತ್ತದೆ. ನಾಳೆಗೆ ನಿಮಗೆ ಕೃಪೆಯ ಅಗತ್ಯವಿಲ್ಲ. ಇಂದಿಗೆ ಮಾತ್ರ ಕೃಪೆಯು ನಮಗೆ ಸಾಕು ಎಂದು ಭಾವಿಸಬೇಕು. ಇಂದು ಶೋಧನೆಗಳ ಮೇಲೆ ಜಯಗಳಿಸಿ, ಸ್ವಾರ್ಥವನ್ನು ತ್ಯಜಿಸಿ, ಇಂದು ಎಚ್ಚರವಾಗಿದ್ದು ಪ್ರಾರ್ಥಿಸಿ. ಇವುಗಳಲ್ಲಿ ಇಂದು ದೇವರಲ್ಲಿ ಜಯಪಡೆದುಕೊಳ್ಳಿ. ನಮ್ಮ ಸುತ್ತಮುತ್ತಲಿನ ಸನ್ನಿವೇಶ, ಸಂದರ್ಭಗಳು, ನಮ್ಮ ಸುತ್ತಲೂ ದಿನವೂ ಉಂಟಾಗುವ ಬದಲಾವಣೆಗಳು, ಎಲ್ಲವನ್ನೂ ವಿವೇಚಿಸಿ, ಒಳ್ಳೆಯದು ಅಥವಾ ಕೆಟ್ಟದ್ದು ಯಾವುದೆಂದು ಸಮರ್ಥಿಸುವ ದೇವರ ವಾಕ್ಯ- ಇವೆಲ್ಲವೂ ಪ್ರತಿದಿನವೂ ನಾವು ಮಾಡಬೇಕಾದ ಕರ್ತವ್ಯವನ್ನು ತಿಳಿಸುತ್ತವೆ. ಯಾವುದೇ ಪ್ರಯೋಜನವಿಲ್ಲದ ವ್ಯರ್ಥವಾದ ಆಲೋಚನೆಗಳಿಂದ ಚಿಂತಿಸುವುದಕ್ಕೆ ಬದಲಾಗಿ ಪ್ರತಿದಿನವೂ ದೇವರ ವಾಕ್ಯವನ್ನು ಅಧ್ಯಯನಮಾಡಿ ದಿನನಿತ್ಯದ ಕರ್ತವ್ಯಗಳನ್ನು ನಿರ್ವಹಿಸಬೇಕು.KanCCh 63.4

    ಅನೇಕರು ತಮ್ಮ ಸುತ್ತಲೂ ಕಂಡುಬರುವಂತ ಭಯಂಕರವಾದ ದುಷ್ಟತನ, ಧರ್ಮಭ್ರಷ್ಟತೆ, ಎಲ್ಲಾ ಕಡೆಗಳಲ್ಲಿರುವ ದೌರ್ಬಲ್ಯ ಬಲಹೀನತೆಗಳ ಬಗ್ಗೆ ಯಾವಾಗಲೂ ಮಾತಾಡುತ್ತಾರೆ. ಇದರಿಂದಾಗಿ ಕೊನೆಯಲ್ಲಿ ಅವರಲ್ಲಿ ದುಃಖ ಮತ್ತು ದೇವರ ಬಗ್ಗೆ ಸಂಶಯವುಂಟಾಗುತ್ತದೆ. ಅವರು ಯಾವಾಗಲೂ ಮಹಾ ಮೋಸಗಾರನಾದ ಸೈತಾನನ ಕೌಶಲದ ಕಾರ್ಯಗಳ ಬಗ್ಗೆ ಮಾತಾಡುತ್ತಾ ತಮ್ಮ ಅನುಭವದಲ್ಲಿ ಕಂಡುಬಂದ ನಿರಾಶೆಯ ವಿಷಯವಾಗಿಯೇ ಮಾತಾಡುತ್ತಾರೆ. ಆದರೆ ಅವರು ನಮ್ಮ ಪರಲೋಕದ ತಂದೆಯ ಮಹಾಶಕ್ತಿ ಹಾಗೂ ಅನುಪಮವಾದ ಪ್ರೀತಿಯನ್ನು ಮರೆಯುತ್ತಾರೆ. ಇವೆಲ್ಲವೂ ಸೈತಾನನ ಎಣಿಕೆಯಂತೆಯೇ ಆಗುತ್ತದೆ. ದೇವರ ಪ್ರೀತಿ ಹಾಗೂ ಆತನ ಸಾಮರ್ಥ್ಯದ ಬಗ್ಗೆ ಹೆಚ್ಚಾಗಿ ವಿಶ್ವಾಸವಿಡದೆ, ನೀತಿಯ ವೈರಿಯಾದ ಸೈತಾನನು ಮಹಾಶಕ್ತಿ ಹೊಂದಿದ್ದಾನೆಂದು ಯೋಚಿಸುವುದು ತಪ್ಪು. ಕ್ರಿಸ್ತನ ಮಹಾಸಾಮಥ್ರ್ಯದ ಬಗ್ಗೆ ನಾವು ಮಾತಾಡಬೇಕು. ನಾವು ನಮ್ಮ ಸ್ವಂತ ಬುದ್ಧಿ, ಬಲ, ಜ್ಞಾನ ಸಾಮರ್ಥ್ಯದಿಂದ ಸೈತಾನನ ಬಿಗಿಮುಷ್ಟಿಯಿಂದ ರಕ್ಷಿಸಿಕೊಳ್ಳುವುದಕ್ಕೆ ಸಂಪೂರ್ಣವಾಗಿ ಶಕ್ತಿಹೀನರಾಗಿದ್ದೇವೆ. ಆದರೆ ಅವನಿಂದ ತಪ್ಪಿಸಿಕೊಳ್ಳಲು ದೇವರು ಒಂದು ಮಾರ್ಗ ನೇಮಿಸಿದ್ದಾನೆ. ಉನ್ನತೋನ್ನತನಾದ ತಂದೆಯಾದ ದೇವರಮಗನಾದ ಕ್ರಿಸ್ತನು ನಮ್ಮಪರವಾಗಿ ಹೋರಾಡಲು ಬಲಹೊಂದಿದ್ದಾನೆ. ನಮ್ಮನ್ನು ಮೊದಲು ಪ್ರೀತಿಸಿದ ಆತನು ನಮಗಾಗಿ ಜಯ ಉಂಟುಮಾಡುತ್ತಾನೆ.KanCCh 64.1

    ನಮ್ಮ ಬಲಹೀನತೆ ಹಾಗೂ ಕ್ರೈಸ್ತ ವಿಶ್ವಾಸ ಬಿಟ್ಟು ಪುನಃ ಪಾಪಕ್ಕೆ ಬೀಳುವುದರಿಂದ ಮತ್ತು ಸೈತಾನನ ಶಕ್ತಿಯ ಬಗ್ಗೆ ಯಾವಾಗಲೂ ಕೊರಗುತ್ತಾ ಕೂರುವುದರಿಂದ ನಮಗೆ ಯಾವುದೇ ಆತ್ಮೀಕಬಲ ಸಿಕ್ಕುವುದಿಲ್ಲ. ಎಂತಹ ಕಡುಪಾಪಿಯೇ ಆಗಿರಲಿ ದೇವರ ಬಳಿಗೆ ಬಂದು ಆತನ ವಾಕ್ಯಕ್ಕೆ ವಿಧೇಯರಾದಲ್ಲಿ, ಅವರನ್ನು ಆತನು ಎಂದಿಗೂ ತಳ್ಳಿಬಿಡದೆ ರಕ್ಷಿಸುತ್ತಾನೆಂಬ ಮಹಾಸತ್ಯವನ್ನು ಯಾವಾಗಲೂ ನಮ್ಮ ಹೃದಯಗಳಲ್ಲಿಟ್ಟುಕೊಂಡಿರಬೇಕು. ದೇವರಚಿತ್ತಕ್ಕೆ ನಮ್ಮ ಚಿತ್ತ ಒಪ್ಪಿಸಿಕೊಡುವುದೇ ನಮ್ಮ ಕೆಲಸ. ಆಗ ನಾವು ಕ್ರಿಸ್ತನ ದೋಷಪರಿಹಾರಕ ರಕ್ತದ ಮೂಲಕ ಆತನ ದೈವೀಕ ಸ್ವಭಾವದಲ್ಲಿ ಪಾಲುಗಾರರಾಗುವೆವು. ಕ್ರಿಸ್ತನ ಮೂಲಕ ನಾವು ದೇವರ ಮಕ್ಕಳಾಗುತ್ತೇವೆ ಹಾಗೂ ದೇವರು ತನ್ನ ಮಗನನ್ನು ಪ್ರೀತಿಸಿದಂತೆಯೇ, ನಮ್ಮನ್ನೂ ಸಹ ಪ್ರೀತಿಸುತ್ತಾನೆಂಬ ಭರವಸೆ ಹೊಂದುತ್ತೇವೆ. ನಾವು ಕ್ರಿಸ್ತನೊಂದಿಗೆ ಒಂದಾಗಿದ್ದೇವೆ. ಆತನು ಹೇಳಿದ ಮಾರ್ಗದಲ್ಲಿ ನಡೆಯುತ್ತೇವೆ. ನಮ್ಮ ಮಾರ್ಗದಲ್ಲಿ ಸೈತಾನನು ತರುವ ಎಲ್ಲಾ ಅಂಧಕಾರವನ್ನು ಕ್ರಿಸ್ತನು ತೆಗೆದುಹಾಕುವ ಸಾಮರ್ಥ್ಯ ಹೊಂದಿದ್ದಾನೆ ಹಾಗೂ ಆತ್ಮೀಕ ಕತ್ತಲು ಮತ್ತು ನಿರಾಶೆಗೆ ಬದಲಾಗಿ ಆತನ ಮಹಿಮೆ ಎಂಬ ಬೆಳಕಿನ ಕಿರಣವು ನಮ್ಮ ಹೃದಯಗಳಲ್ಲಿ ಹೊಳೆಯುತ್ತದೆ.KanCCh 64.2

    ಸಹೋದರ, ಸಹೋದರಿಯರೇ, ನಾವು ಕ್ರಿಸ್ತನನ್ನು ದೃಷ್ಟಿಸಿ ನೋಡುವುದರಿಂದ ಬದಲಾಗುತ್ತೇವೆ. ತಂದೆಯಾದ ದೇವರ ಹಾಗೂ ನಮ್ಮರಕ್ಷಕನಾದ ಕ್ರಿಸ್ತನ ಪ್ರೀತಿಯಲ್ಲಿ ನೆಲೆಗೊಂಡಾಗ, ಆತನ ದೈವೀಕಸ್ವಭಾವದ ಪರಿಪೂರ್ಣತೆಯ ಬಗ್ಗೆ ಧ್ಯಾನಿಸುವಾಗ, ಹಾಗೂ ನಂಬಿಕೆಯಿಂದ ಆತನ ನೀತಿಯನ್ನು ನಾವು ಹೊಂದಿಕೊಂಡಾಗ, ಕ್ರಿಸ್ತನ ಸ್ವರೂಪಕ್ಕೆ ನಾವು ಬದಲಾಗುತ್ತೇವೆ. ಆದುದರಿಂದ ನಾವು ಪದೇಪದೇ ನಮ್ಮ ಅಪರಾಧ ಪಾಪಗಳು, ನಿರಾಶೆ, ಸೈತಾನನ ಶಕ್ತಿಯ ಸಾಕ್ಷ್ಯಾಧಾರಗಳು ಇವುಗಳ ಬಗ್ಗೆ ಮಾತಾಡಿ ದುಃಖಿಸುತ್ತಾ ನಿರಾಶೆಗೊಳಗಾಗಬಾರದು. ನಿರಾಶೆಗೊಳಗಾದವನು ಅಂಧಕಾರ ತುಂಬಿದವನಾಗಿದ್ದು, ತಾನು ಮಾತ್ರವಲ್ಲ, ಇತರರೂ ಸಹ ದೇವರ ಆತ್ಮೀಕ ಬೆಳಕನ್ನು ಪಡೆದುಕೊಳ್ಳುವುದಕ್ಕೆ ಅಡ್ಡಿಯಾಗಿದ್ದಾನೆ. ಜನರು ತನ್ನ ಸಾಮಥ್ರ್ಯದ ಬಗ್ಗೆ ಮಾತಾಡುವುದನ್ನು ಹಾಗೂ ಅದರಿಂದಾಗುವ ಪರಿಣಾಮಗಳನ್ನು ನೋಡುವುದಕ್ಕೂ ಮತ್ತು ಅವರು ದೇವರ ಮೇಲೆ ನಂಬಿಕೆ ಕಳೆದುಕೊಂಡು, ನಿರಾಶರಾಗುವುದನ್ನು ನೋಡಲು ಸೈತಾನನು ಸಂತೋಷಪಡುತ್ತಾನೆ.KanCCh 65.1