ಕ್ರೈಸ್ತ ಪ್ರಾಮಾಣಿಕತೆ
ಪ್ರತಿಯೊಂದು ವ್ಯವಹಾರದಲ್ಲಿಯೂ ನಾವು ಬಹಳ ಪ್ರಾಮಾಣಿಕರಾಗಿರಬೇಕು, ಎಂತಹ ಶೋಧನೆಯೇ ಬರಲಿ. ಎಂತಹ ಚಿಕ್ಕ ವಿಷಯದಲ್ಲಿಯೇ ಆಗಲಿ, ಯಾರಿಗೂ ಮೋಸ ಮಾಡಬಾರದು ಅಥವಾ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಬಾರದು. ಕೆಲವು ವೇಳೆ ಸರಳವಾದ ಪ್ರಾಮಾಣಿಕ ಮಾರ್ಗ ಬಿಡಬೇಕೆಂಬ ಶೋಧನೆ ಬರುವುದು ಸಹಜ. ಆದರೆ ನಾವು ಎಂತಹ ಸಂದರ್ಭವೇ ಆಗಲಿ, ಅತ್ಯ್ಯಲ್ಪ ಪ್ರಮಾಣದಲ್ಲಾದರೂ ಸರಿಯೇ, ನಮ್ಮ ವ್ಯವಹಾರದಲ್ಲಿ ಪ್ರಾಮಾಣಿಕತೆ ಕಾಪಾಡಿಕೊಳ್ಳಬೇಕು. ನಿಮಗೆ ನಷ್ಟವಾದರೂ ಸರಿಯೇ, ಕ್ರೈಸ್ತ ಸಿದ್ಧಾಂತಗಳನ್ನು ಬಿಡಬಾರದು. ನೀವು ಮಾಡಿಕೊಂಡ ಒಪ್ಪಂದ ಮುರಿಯದೇ ಕಾಪಾಡಬೇಕು.KanCCh 69.2
ಸತ್ಯವೇದವು ಎಲ್ಲಾ ವಿಧವಾದ ಸುಳ್ಳು, ಕಪಟ, ಮೋಸ ವ್ಯವಹಾರ ಹಾಗೂ ಅಪ್ರಮಾಣಿಕತೆಯನ್ನು ಬಲವಾಗಿ ಖಂಡಿಸುತ್ತದೆ. ಯಾವುದು ಸರಿ, ಯಾವುದು ತಪ್ಪು ಎಂಬುದು ನೇರವಾಗಿ ಸತ್ಯವೇದದಲ್ಲಿ ತಿಳಿಸಲ್ಪಟ್ಟಿದೆ. ಆದರೆ ದೇವರ ಮಕ್ಕಳು ಸೈತಾನನೆಂಬ ವೈರಿಯ ಅಧೀನದಲ್ಲಿದ್ದು, ಅವನ ಶೋಧನೆಗಳಿಗೆ ಒಳಗಾಗಿ, ಅವನ ಕುತಂತ್ರಗಳನ್ನು ಅನುಸರಿಸುತ್ತಾ, ಕೊನೆಯಲ್ಲಿ ತಮ್ಮ ಸಂವೇದನಾ ಶಕ್ತಿ ಕಳೆದುಕೊಳ್ಳುವುದನ್ನು ಶ್ರೀಮತಿ ವೈಟಮ್ಮನವರು ದೇವದರ್ಶನದಲ್ಲಿ ನೋಡಿದರು. ಹಣಕಾಸಿನ ವ್ಯವಹಾರದಲ್ಲಿ ಲಾಭ ಅಥವಾ ನಷ್ಟದ ವಿಷಯಬಂದಾಗ, ಪ್ರಾಮಾಣಿಕತೆಯ ವಿಷಯದಲ್ಲಿ ಸ್ವಲ್ಪ ರಾಜಿಮಾಡಿಕೊಂದು ಸುಳ್ಳುಹೇಳುವುದು, ಅಂತಹ ದೊಡ್ಡ ಪಾಪವಲ್ಲವೆಂಬ ಭಾವನೆ ನಮ್ಮಲ್ಲಿಅನೇಕರಿಗಿದೆ. ಆದರೆ ಕೋಟ್ಯಾಧಿಪತಿಯಾಗಲಿ ಇಲ್ಲವೆ ಭಿಕ್ಷುಕನಾಗಲಿ- ಅವರು ಮಾಡಿದಪಾಪ, ಪಾಪವೇ ಹೌದು. ಮೋಸದ ಮಾರ್ಗದಿಂದ ಹಣ, ಆಸ್ತಿಪಾಸ್ತಿ ಮಾಡಿಕೊಳ್ಳುವವರುತಮಗೆ ದಂಡನೆ ತಂದುಕೊಳ್ಳುವರು, ಒಬ್ಬನು ಮೋಸ, ಅನ್ಯಾಯದಿಂದ ಹಣ ಗಳಿಸಿದಲ್ಲಿ,ಅದು ಅವನಿಗೆ ಶಾಪವಾಗಿ ಪರಿಣಮಿಸುವುದು.KanCCh 69.3
ವ್ಯಾಪಾರವ್ಯವಹಾರಗಳಲ್ಲಿ ಸುಳ್ಳು, ವಂಚನೆ ಅನುಸರಿಸುವವನು ತನ್ನ ಸ್ವಗೌರವವನ್ನುಕಳೆದುಕೊಳ್ಳುವನು. ತಾನು ಮಾಡುವ ಎಲ್ಲಾ ವ್ಯವಹಾರಗಳನ್ನು ದೇವರು ಗಮನಿಸುತ್ತಿದ್ದಾನೆಹಾಗೂ ಪರಿಶುದ್ಧ ದೇವದೂತರು ಅವನ ಉದ್ದೇಶಗಳನ್ನು ಮತ್ತು ಮಾತುಗಳನ್ನುಕೇಳುತ್ತಿದ್ದಾರೆಂದು ಅವನಿಗೆ ಅರಿವಾಗುವುದಿಲ್ಲ. ಅವನಿಗೆ ಬರುವ ಪ್ರತಿಫಲವು ಅವನಕೆಲಸಕ್ಕೆ ತಕ್ಕಂತಿರುವುದು. ತನ್ನ ಮೋಸವನ್ನು ಮನುಷ್ಯರ ಕಣ್ಣಿನಿಂದ ಮುಚ್ಚಿಟ್ಟುಕೊಳ್ಳಲುಅವನಿಗೆ ಸಾಧ್ಯವಾದಲ್ಲಿ, ಅವನ ಮನಸ್ಸು ಮತ್ತು ಸ್ವಭಾವವು ಅಗೌರವಕ್ಕೆ ಕಾರಣವಾಗುತ್ತದೆ.ಒಂದು ತಪ್ಪಿನಿಂದ ಒಬ್ಬನ ಸ್ವಭಾವವನ್ನು ನಿರ್ಧರಿಸಲಾಗದು, ಆದರೆ ಮುಂದೆ ಅವನುಶೋಧನೆಗೆ ಸುಲಭವಾಗಿ ಒಳಗಾಗುವುದಕ್ಕೆ ಇದು ಕಾರಣವಾಗುತ್ತದೆ. ಕೊನೆಯಲ್ಲಿವ್ಯಾಪಾರವ್ಯವಹಾರದಲ್ಲಿ ಅಪ್ರಮಾಣಿಕತೆ ಮತ್ತು ಉದ್ದೇಶ ಪೂರ್ವಕವಾಗಿ ಸುಳ್ಳು ಹೇಳುವಅಭ್ಯಾಸವು ಅವನಿಗೆ ರೂಢಿಯಾಗಿ ಅವನನ್ನು ಯಾರೂ ನಂಬುವುದಿಲ್ಲ.KanCCh 70.1
ತನ್ನ ಸೇವೆಮಾಡುವವರು ಖಂಡಿತವಾಗಿ ಪ್ರಾಮಾಣಿಕರೂ, ಆರೋಪ, ನಿಂದೆಗೆಅವಕಾಶಕೊಡದವರೂ ಮತ್ತು ಯಾವಾಗಲೂ ಸತ್ಯ ನುಡಿಯುವವರೂ ಆಗಿರಬೇಕೆಂದುದೇವರು ಬಯಸುತ್ತಾನೆ. ನಾಲಗೆಯನ್ನು ಬಿಗಿಯಾಗಿಟ್ಟು ಕೊಳ್ಳುವವರೂ ಹಾಗೂಅವರ ನಡೆನುಡಿಕ್ರಿಯೆಗಳು ದೇವರಿಗೆ ಮೆಚ್ಚುವಂತಿರಬೇಕು. “ನಿನ್ನಕೃತ್ಯಗಳನ್ನು ನಾನುಬಲ್ಲೆ“ಎಂದು ಗಂಭೀರವಾಗಿ ಹೇಳುವ ಪರಿಶುದ್ಧ ದೇವರ ದೃಷ್ಟಿಯಲ್ಲಿ ನಾವು ಜೀವಿಸುತ್ತಿದ್ದೇವೆ.ಆತನ ಕಣ್ಣುಗಳು ಯಾವಾಗಲೂ ನಮ್ಮನ್ನು ಗಮನಿಸುತ್ತವೆ. ನಾವು ಮಾಡುವ ಯಾವುದೇಅನ್ಯಾಯದ ವ್ಯವಹಾರಗಳು ದೇವರಕಣ್ಣಿಗೆ ಮರೆಯಾಗಿರುವುದಿಲ್ಲ. ನಮ್ಮ ಪ್ರತಿಯೊಂದುಕಾರ್ಯಕ್ಕೂ ದೇವರು ಸಾಕ್ಷಿಯಾಗಿದ್ದಾನೆಂಬುದು ಸತ್ಯ, ಆದರೆ ಅನೇಕರಿಗೆ ಅದುತಿಳಿದಿಲ್ಲ.KanCCh 70.2