ಸತ್ಯವೇದದ ಕಡೆಗೆ ಮನುಷ್ಯರ ಗಮನ ತಿರುಗಿಸಲು.....
ಬರೆಯಲ್ಪಟ್ಟ ಪ್ರವಾದನಾಆತ್ಮದ ಯೇಸುವಿನ ವಿಷಯವಾದ ಸಾಕ್ಷಿಗಳು ಹೊಸಬೆಳಕು ಕೊಡುವುದಿಲ್ಲ, ಬದಲಾಗಿ ಆಗಲೇ ತಿಳಿಸಲ್ಪಟ್ಟ ಪವಿತ್ರಾತ್ಮ ಪ್ರೇರಿತ ಸತ್ಯಗಳನ್ನು ನಮ್ಮ ಹೃದಯಗಳಲ್ಲಿ ಪರಿಣಾಮಕಾರಿಯಾಗಿ ಉಳಿಯುವಂತೆ ಮಾಡಲು ಕೊಡಲ್ಪಟ್ಟಿವೆ. ಮನುಷ್ಯರಾದ ನಾವು ದೇವರಿಗೆ ಮಾಡಬೇಕಾದ ಕರ್ತವ್ಯಗಳು ಮತ್ತು ಇತರರಿಗೆ ಮಾಡಬೇಕಾದ ಕರ್ತವ್ಯಗಳು ದೇವರವಾಕ್ಯದಲ್ಲಿ ವಿಶೇಷವಾಗಿ ತಿಳಿಸಲ್ಪಟ್ಟಿವೆ. ಆದರೂ ಕೊಡಲ್ಪಟ್ಟ ಬೆಳಕಿಗೆ ನಮ್ಮಲ್ಲಿ ಕೆಲವರು ಮಾತ್ರ ವಿಧೇಯರಾಗಿದ್ದೇವೆ. ಪ್ರವಾದನಾ ಆತ್ಮದ ಮೂಲಕ ಹೆಚ್ಚಿನ ಸತ್ಯವು ಕೊಡಲ್ಪಡಲಿಲ್ಲ, ಬದಲಾಗಿ ಯೇಸುವಿನ ವಿಷಯವಾದ ಸಾಕ್ಷಿಗಳ ಮೂಲಕ ಆಗಲೇ ಕೊಡಲ್ಪಟ್ಟಿರುವ ಮಹಾಸತ್ಯಗಳನ್ನು ದೇವರು ಸರಳಗೊಳಿಸಿದ್ದಾನೆ. ಅಲ್ಲದೆ ದೇವರು ತನ್ನದೇ ಆದ ಮಾರ್ಗದಿಂದ ಜನರಮುಂದೆ ಆ ಸತ್ಯಗಳನ್ನು ಪ್ರಕಟಗೊಳಿಸಿ ಅವುಗಳಿಂದ ಅವರ ಮನಸ್ಸಿನಲ್ಲಿ ಅಚ್ಚಳಿಯದ ಪ್ರಭಾವ ಉಂಟು ಮಾಡುತ್ತಾನೆ. ಇದರಿಂದ ಅವರಿಗೆ ಮುಂದೆ ನೆವಹೇಳುವುದಕ್ಕೆ ಯಾವುದೇ ಆಸ್ಪದವಿಲ್ಲ. ಪ್ರವಾದನಾ ಆತ್ಮದ ಮೂಲಕ ಕೊಡಲ್ಪಟ್ಟ ಯೇಸುವಿನ ವಿಷಯವಾದ ಸಾಕ್ಷಿಗಳು (ಪ್ರಕಟನೆ 19:10). ದೇವರವಾಕ್ಯವನ್ನು ಕೀಳಾಗಿ ಕಾಣುವುದಕ್ಕಲ್ಲ, ಬದಲಾಗಿ ಅದನ್ನು ಉನ್ನತಸ್ಥಾನಕ್ಕೇರಿಸಿ ಜನರ ಮನಸ್ಸನ್ನು ಆಕರ್ಷಿಸುವುದಕ್ಕೂ ಹಾಗೂ ಸುಂದರವಾಗಿಯೂ, ಸರಳವಾಗಿಯೂ ಎಲ್ಲರ ಮೇಲೆ ಪ್ರಭಾವ ಬೀರುತ್ತದೆ.KanCCh 83.3
ಸತ್ಯವೇದವನ್ನು ರದ್ದುಮಾಡುವುದಕ್ಕೆ ಅಥವಾ ತೆಗೆದುಹಾಕುವುದಕ್ಕೆ ಪರಿಶುದ್ಧಾತ್ಮನು ಕೊಡಲ್ಪಡಲಿಲ್ಲ, ಅಥವಾ ಎಂದಿಗೂ ಕೊಡಲ್ಪಡುವುದಿಲ್ಲ. ಎಲ್ಲಾ ವಿಧವಾದ ಬೋಧನೆಗಳು ಹಾಗೂ ನುಡಿಗಳನ್ನು, ಅನುಭವಗಳನ್ನು ದೇವರವಾಕ್ಯವೆಂಬ ಮಾನದಂಡದಿಂದ ಪರೀಕ್ಷಿಸಬೇಕೆಂದು ಸತ್ಯವೇದವು ಸ್ಪಷ್ಟವಾಗಿ ತಿಳಿಸುತ್ತದೆ. ಅಪೋಸ್ತಲನಾದ ಯೋಹಾನನು “ಪ್ರಿಯರೇ, ಅನೇಕ ಮಂದಿ ಸುಳ್ಳು ಪ್ರವಾದಿಗಳು ಲೋಕದೊಳಗೆ ಬಂದಿರುವುದರಿಂದ, ನೀವು ಆತ್ಮದ ಎಲ್ಲಾ ನುಡಿಗಳನ್ನು ನಂಬದೆ, ಆಯಾನುಡಿಗಳು ದೇವರಿಂದ ಪ್ರೇರಿತವಾದವುಗಳೋ, ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು” ಎಂದು ಹೇಳುತ್ತಾನೆ (1 ಯೋಹಾನನು 4:1). ಅಲ್ಲದೆ ಯೆಶಾಯ ಪ್ರವಾದಿಯೂ ಸಹ “ನ್ಯಾಯಪ್ರಮಾಣ ಮತ್ತು ಸಾಕ್ಷಿಯ ವಿಷಯದಲ್ಲಿ ಈ ವಾಕ್ಯದ ಪ್ರಕಾರ ಹೇಳದಿರುವುದು ಅವರಲ್ಲಿ ಬೆಳಕಿಲ್ಲದಿರುವುದರಿಂದಲೇ” ಎಂದು ಹೇಳುತ್ತಾನೆ (ಯೆಶಾಯ 8:20) (ಈ ವಾಕ್ಯವನ್ನು ಪವಿತ್ರ ಬೈಬಲ್‍ನಿಂದ ತೆಗೆದುಕೊಳ್ಳಲಾಗಿದೆ. ಪರಿಶುದ್ಧ ಸತ್ಯವೇದದಲ್ಲಿ ಈ ವಾಕ್ಯವು ಸರಿಯಾಗಿ ಅನುವಾದ ಮಾಡಲ್ಪಟ್ಟಿಲ್ಲ).KanCCh 83.4
ಶ್ರೀಮತಿ ವೈಟಮ್ಮನವರ ಕಾಲದಲ್ಲಿ ಒಬ್ಬ ವ್ಯಕ್ತಿಯು ಅವರಿಗೆ ಕೊಡಲ್ಪಟ್ಟ ಯೇಸುವಿನ ವಿಷಯವಾದ ಸಾಕ್ಷಿಯ ಪ್ರವಾದನಾಆತ್ಮವು ದೇವರವಾಕ್ಯವಾದ ಸತ್ಯವೇದಕ್ಕೆ ಹೆಚ್ಚಾಗಿ ಕೂಡಿಸಲ್ಪಟ್ಟಿದೆ ಎಂದು ಹೇಳಿ ತಪ್ಪಾಗಿ ಬೋಧಿಸುತ್ತಿದ್ದರು. ದೇವರ ವಾಕ್ಯಕ್ಕೆ ಯಾವುದನ್ನೂ ಹೆಚ್ಚಾಗಿ ಸೇರಿಸಬೇಕಿಲ್ಲ. ಯಾಕೆಂದರೆ ಅದರಲ್ಲಿ ಕೊಟ್ಟಿರುವಂತದ್ದು ಆತ್ಮೀಕವಾಗಿ ಎಂತಹ ಕತ್ತಲೆಯಲ್ಲಿ ಮುಳುಗಿರುವ ಮನಸ್ಸಿಗೂ ಸಹ ಜ್ಞಾನೋದಯದ ಬೆಳಕು ಕೊಡಲು ಶಕ್ತವಾಗಿದೆ. ಅಲ್ಲದೆ ಅದನ್ನು ಅರ್ಥ ಮಾಡಿಕೊಳ್ಳಬೇಕೆಂದು ಮನಃಪೂರ್ವಕವಾಗಿ ಬಯಸುವವರಿಗೆ, ಅರ್ಥವಾಗುತ್ತದೆ. ಆದಾಗ್ಯೂ, ದೇವರವಾಕ್ಯವು ಎಲ್ಲದಕ್ಕೂ ಮಾನದಂಡವೆಂದು ಹೇಳಿಕೊಳ್ಳುವ ಕೆಲವರು, ಅದರಲ್ಲಿರುವ ಸರಳ ಬೋಧನೆಗಳಿಗೆ ವಿರುದ್ಧವಾಗಿ ಜೀವಿಸುತ್ತಿದ್ದಾರೆ. ಈ ಕಾರಣದಿಂದ ಮನುಷ್ಯರು ಯಾವುದೇ ನೆಪ ಹೇಳಬಾರದೆಂಬ ಉದ್ದೇಶದಿಂದ ದೇವರು ಯೇಸುವಿನ ವಿಷಯವಾದ ಸಾಕ್ಷಿಯ ಪ್ರವಾದನಾ ಆತ್ಮವನ್ನು ಸರಳವಾದ ರೀತಿಯಲ್ಲಿ ಕೊಟ್ಟು ಅಂತವರು ಇದುವರೆಗೂ ನಿರೀಕ್ಷಿಸಿರುವ ದೇವರ ವಾಕ್ಯದ ಕಡೆಗೆ ಗಮನ ಕೊಡಬೇಕೆಂದು ಉದ್ದೇಶಿಸಿದ್ದಾನೆ. ನಮ್ಮ ದಿನನಿತ್ಯದ ಜೀವನದಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಅತ್ಯಗತ್ಯವಾದ ಸಾಮಾನ್ಯತತ್ವಗಳು ಸತ್ಯವೇದದಲ್ಲಿ ಹೇರಳವಾಗಿವೆ. ಶ್ರೀಮತಿ ವೈಟಮ್ಮನವರ ಮೂಲಕ ದೇವರು ನೀಡಿರುವ ಸಾಮಾನ್ಯವಾದ ಹಾಗೂ ವೈಯಕ್ತಿಕವಾದ ಯೇಸುವಿನ ವಿಷಯವಾದ ಸಾಕ್ಷಿಗಳು ಅಂತವರ ಗಮನವನ್ನು ವಿಶೇಷವಾಗಿ ಇಂತಹ ಸಾಮಾನ್ಯತತ್ವಗಳ ಕಡೆಗೆ ಸೆಳೆಯಲಿಕ್ಕಾಗಿ ಕೊಡಲ್ಪಟ್ಟಿದೆ.KanCCh 84.1
ಆದರೆ ನಮ್ಮಲ್ಲಿ ಅನೇಕರಿಗೆ ಶ್ರೀಮತಿ ವೈಟಮ್ಮನವರ ಮೂಲಕ ಕೊಡಲ್ಪಟ್ಟಿರುವ ಪ್ರವಾದನಾಆತ್ಮ ಅಂದರೆ ಯೇಸುವಿನ ವಿಷಯವಾದ ಸಾಕ್ಷಿಗಳಲ್ಲಿ ಏನಿದೆ ಎಂಬುದು ನಿಜವಾಗಿಯೂ ತಿಳಿದಿಲ್ಲ. ಅಂತವರು ಸತ್ಯವೇದವನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ. ಅಂತವರು ಸತ್ಯವೇದದ ಮಾನದಂಡವನ್ನು ಮುಟ್ಟಿ, ಕ್ರೈಸ್ತ ಸ್ವಭಾವದಲ್ಲಿ ಪರಿಪೂರ್ಣತೆ ಹೊಂದಬೇಕೆಂಬ ಬಯಕೆಯಿಂದ ದೇವರ ವಾಕ್ಯವನ್ನು ಅಧ್ಯಯನ ಮಾಡಿದಲ್ಲಿ, ಅವರಿಗೆ ಶ್ರೀಮತಿ ವೈಟಮ್ಮನವರು ಬರೆದ ಪುಸ್ತಕಗಳ ಅಗತ್ಯವಿಲ್ಲ. ಆದರೆ ಅಂತವರು ಪವಿತ್ರಾತ್ಮ ಪ್ರೇರಿತವಾದ ದೇವರ ಸತ್ಯವೇದವನ್ನು ಅಧ್ಯಯನಮಾಡಲು ಹಾಗೂ ಅದಕ್ಕೆ ವಿಧೇಯತೆ ತೋರಲು ನಿರಾಕರಿಸಿದ್ದರಿಂದ ಸರಳವಾದ ಹಾಗೂ ನೇರವಾದ ಪ್ರವಾದನಾ ಆತ್ಮನಿಂದ ಪ್ರೇರಿತವಾದ ಯೇಸುವಿನ ವಿಷಯವಾದ ಸಾಕ್ಷಿಗಳ ಮೂಲಕ ನಿಮ್ಮನ್ನು ತಲುಪುವುದಕ್ಕೆ ದೇವರು ಹುಡುಕುತ್ತಾನೆ ಹಾಗೂ ನಿಮ್ಮ ಜೀವನವನ್ನು ಪರಿಶುದ್ಧವಾದ ಹಾಗೂ ಉನ್ನತವಾದ ಈ ಬೋಧನೆಗಳ ಮೂಲಕ ರೂಪಿಸಿಕೊಳ್ಳಬೇಕೆಂದು ನಿಮ್ಮನ್ನು ಪ್ರೇರೇಪಿಸುತ್ತಾನೆ.KanCCh 84.2