Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಚಹಾ ಮತ್ತು ಕಾಫಿ ಸೇವನೆಯು ಶರೀರವನ್ನು ಪೋಷಣೆ ಮಾಡುವುದಿಲ್ಲ

  ಚಹಾ ಸೇವನೆಯು ಉದ್ದೀಪನಗೊಳಿಸುವ ಮಾದಕ ಪದಾರ್ಥವಾಗಿದ್ದು, ಅಲ್ಪ ಪ್ರಮಾಣದಲ್ಲಿ ಅಮಲು ಬರಿಸುತ್ತದೆ. ಕಾಫಿ ಹಾಗೂ ಇತರ ಜನಪ್ರಿಯ ಪಾನೀಯಗಳ ಪರಿಣಾಮವೂ ಇದೇ ರೀತಿಯಿದೆ. ಮೊದಲ ಬಾರಿಗೆ ಇವುಗಳನ್ನು ಕುಡಿದಾಗ, ಮನಸ್ಸಿಗೆ ಆಹ್ಲಾದ ಉಂಟುಮಾಡುತ್ತದೆ, ಜಠರದ ನರಗಳು ಉದ್ರೇಕಗೊಂಡು ಮೆದುಳಿಗೆ ಪ್ರಚೋದನಕಾರಿ ಸೂಚನೆ ನೀಡುತ್ತವೆ. ಇದರಿಂದಾಗಿ ಹೃದಯದಲ್ಲಿ ಕ್ರಿಯೆಗಳು ಹೆಚ್ಚಾಗುವುದರಿಂದ, ಶರೀರಕ್ಕೆ ಕ್ಷಣಿಕ ಮಾತ್ರದ ಶಕ್ತಿ ದೊರೆಯುತ್ತದೆ. ದಣಿವು ಮರೆಯಾಗಿ ಬಲ ಹೆಚ್ಚಿದಂತೆ ಕಂಡುಬರುವುದು. ಬೌದ್ಧಿಕ ಶಕ್ತಿ ಪ್ರಚೋದಿಸಲ್ಪಟ್ಟು, ಕಲ್ಪನಾಶಕ್ತಿಯು ಕಣ್ಣಿಗೆ ಕಟ್ಟುವಂತೆ ಸುವ್ಯಕ್ತವಾಗಿ ಕಂಡುಬರುವುದು.KanCCh 104.2

  ಈ ಎಲ್ಲಾ ಫಲಿತಾಂಶಗಳಿಂದ ಕಾಫಿ ಮತ್ತು ಚಹಾ ಸೇವನೆಯು ತಮ್ಮ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆಂದು ಅನೇಕರು ಭಾವಿಸುತ್ತಾರೆ. ಆದರೆ ಇದೊಂದು ತಪ್ಪು ಅಭಿಪ್ರಾಯವಾಗಿದೆ. ಚಹಾ ಮತ್ತು ಕಾಫಿ ಶರೀರಕ್ಕೆ ಯಾವುದೇ ಪೋಷಣೆ. ನೀಡುವುದಿಲ್ಲ. ಇವುಗಳ ಸೇವನೆಯ ಪರಿಣಾಮವು ಆಹಾರವು ಜೀರ್ಣಗೊಳ್ಳುವುದಕ್ಕೂ ಹಾಗೂ ರಕ್ತದಲ್ಲಿ ಮಿಳಿತಗೊಳ್ಳುವುದಕ್ಕೂ ಮೊದಲು ಉಂಟಾಗುವುದು. ಕಾಫಿ ಮತ್ತು ಚಹಾ ಕುಡಿದ ನಂತರ ಬಲ ಬಂದಿತೆಂದು ಕಂಡುಬರುತ್ತದೆ ನರಗಳ ಪ್ರಚೋದನೆಯೇ ಹೊರತು ಬೇರೆಯಲ್ಲ. ಈ ಪ್ರಚೋದನೆಯ ಪ್ರಭಾವವು ಇಳಿದು ಹೋದ ನಂತರ, ಅಸಹಜವಾದ ಶಕ್ತಿ ಕಡಿಮೆಯಾಗುವುದು ಇದರ ಫಲಿತಾಂಶವಾಗಿ ನಿಶ್ಯಕ್ತಿ, ಜಡತೆ ಮತ್ತು ನಿರಾಸಕ್ತಿ ಉಂಟಾಗುತ್ತದೆ.KanCCh 104.3

  ಚಹಾ ಮತ್ತು ಕಾಫಿಯನ್ನು ಯಾವಾಗಲೂ ಹೆಚ್ಚಾಗಿ ಕುಡಿಯುವುದರಿಂದ ತಲೆನೋವು. ನಿದ್ರೆಯಿಲ್ಲದಿರುವುದು, ಹೃದಯದ ಬಡಿತ ಹೆಚ್ಚಾಗುವುದು. ಅಜೀರ್ಣತೆ, ನಡುಗುವಿಕೆ ಮತ್ತು ಇತರ ಹಾನಿಕರ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆಯಾಸಗೊಂಡ ನರಗಳಿಗೆ ಪ್ರಚೋದನೆ ಅಥವಾ ಅಧಿಕ ಕೆಲಸ ಬೇಕಾಗಿಲ್ಲ. ಬದಲಾಗಿ ಅವುಗಳಿಗೆ ವಿಶ್ರಾಂತಿಯ ಅಗತ್ಯವಿದೆ. ಆರೋಗ್ಯದ ನಿಯಮಗಳನ್ನು ಮೀರಿದವರ ಮನಸ್ಸು ಜಡವಾಗುವುದು ಮತ್ತು ಅವರು ದೇವರಾಜ್ಞೆಗಳನ್ನು ಮೀರಿನಡೆಯುವರು.KanCCh 105.1