Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರಆಲಯವನ್ನುಕೆಡಿಸಬಾರದು

    ಈ ಕೊನೆಯ ಕಾಲದಲ್ಲಿ ಯೌವನಸ್ಥರ ಮನಸ್ಸಿನ ಮೇಲೆ ಹತೋಟಿ ಹೊಂದಿ ಅವರ ಆಲೋಚನೆಗಳನ್ನು ಮಲಿನಗೊಳಿಸಿ, ಲೌಕಿಕ ಸುಖಭೋಗಗಳ ಮೇಲಣ ಮೋಹವನ್ನು ಹೆಚ್ಚುವಂತೆ ಮಾಡಬೇಕೆನ್ನುವುದು ಸೈತಾನನ ವಿಶೇಷ ಕಾರ್ಯವಾಗಿದೆ. ಈ ರೀತಿ ಮಾಡುವುದರಿಂದ ಯೌವನಸ್ಥರು ಅಶುದ್ಧ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಮನಸ್ಸಿನ ಉನ್ನತವಾದ ಎಲ್ಲಾ ಸಾಮರ್ಥ್ಯವು ಕೀಳುಮಟ್ಟಕ್ಕಿಳಿದಲ್ಲಿ, ತನ್ನ ಉದ್ದೇಶವನ್ನು ನೆರವೇರಿಸಲು ತಕ್ಕಂತೆ ಅವರನ್ನು ನಿಯಂತ್ರಿಸಬಹುದೆಂದು ಸೈತಾನನಿಗೆ ಚೆನ್ನಾಗಿ ತಿಳಿದಿದೆ.KanCCh 109.3

    ದಿನದಿಂದ ದಿನಕ್ಕೆ ನೈತಿಕವಾಗಿ, ಆತ್ಮೀಕವಾಗಿ ಅವನತಿ ಹೊಂದುತ್ತಿರುವ ಈ ಕಾಲದಲ್ಲಿ ಇಂತಹ ಗುಣ ಸ್ವಭಾವ ಬೆಳೆಸಿಕೊಳ್ಳುತ್ತಿರುವ ಯೌವನಸ್ಥರಿಗಾಗಿಯೂ ಹಾಗೂ ಅವರ ಪೋಷಕರಿಗಾಗಿಯೂ ನನ್ನ ಮನಸ್ಸು ದುಃಖಿತವಾಗಿದೆ ಎಂದು ಶ್ರೀಮತಿ ವೈಟಮ್ಮನವರು ತಿಳಿಸುತ್ತಾರೆ. ಪೋಷಕರು ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸುವುದು ತಮ್ಮ ಕರ್ತವ್ಯವೆಂದು ತಿಳಿದುಕೊಳ್ಳುವುದಕ್ಕೆ ಅವರ ಬಗ್ಗೆ ನನಗೆ ತಳಮಳದಿಂದ ದಿಗಿಲುಂಟಾಗಿದೆ ಎಂದು ಶ್ರೀಮತಿ ವೈಟಮ್ಮನವರು ದುಃಖ ವ್ಯಕ್ತಪಡಿಸುತ್ತಾರೆ. ಯೌವನಸ್ಥರ ಬಗ್ಗೆ ಅಲಕ್ಷ್ಯ ತೋರುವ ಹಾಗೂ ಸಲಿಗೆಯಿಂದಲೂ, ಪ್ರೀತಿಯಿಂದಲೂ ತಪ್ಪುಗಳನ್ನು ಉದಾರವಾಗಿ ಕ್ಷಮಿಸುವ ಇಂತಹ ತಂದೆ ತಾಯಿಗಳು ಮುಂದೆ ತಮ್ಮ ಮಕ್ಕಳು ಎದುರಿಸಲಿರುವ ಅಪಾಯಗಳ ಬಗ್ಗೆ ಅಜ್ಞಾನಿಗಳಾಗುತ್ತಾರೆ. ಆದರೆ ಯೌವನಸ್ಥರು ನೈತಿಕವಾಗಿಯೂ ಮತ್ತು ಆತ್ಮೀಕವಾಗಿಯೂ ತಮ್ಮ ದುರಾಭ್ಯಾಸಗಳಿಂದ ನಾಶವಾಗುತ್ತಾರೆ. ಮಕ್ಕಳು ಹೊರಬೇಕಾದ ಭಾರವನ್ನು ಅವರ ತಂದೆ ತಾಯಿಯರು ಹೊರುತ್ತಾರೆ.KanCCh 110.1

    ಅತಿಯಾಗಿ ಕೆಲಸ ಮಾಡುವುದು ಕೆಟ್ಟದ್ದು, ಆದರೆ ಸೋಮಾರಿತನದಿಂದ ಆಗುವ ಪರಿಣಾಮಗಳ ಬಗ್ಗೆ ನೀವು ಹೆಚ್ಚು ಭಯಪಡಬೇಕಾಗಿದೆ. ಸೋಮಾರಿತನವು ಕೆಟ್ಟ ಅಭ್ಯಾಸಗಳನ್ನು ತೃಪ್ತಿ ಪಡಿಸಿಕೊಳ್ಳಲು ಮಾರ್ಗ ಮಾಡಿಕೊಡುತ್ತದೆ. ಆತ್ಮನಿಂದೆ ಅಂದರೆ ತನ್ನನ್ನು ತಾನೇ ಬೈದುಕೊಳ್ಳುವಂತ ವಿನಾಶಕಾರಿ ಅಭ್ಯಾಸವು ಬಹಳ ಕೆಟ್ಟದ್ದು, ಆಯಾಸಕರವೂ ಆಗಿದೆಯೇ ಹೊರತು, ಕಾರ್ಯಶೀಲವಲ್ಲ. ನಿಮ್ಮ ಮಕ್ಕಳಿಗೆ ದೈಹಿಕ ಕೆಲಸಮಾಡುವಂತೆ ಹೇಳಿ. ಇದರಿಂದ ಅವರ ನರಗಳಿಗೂ, ಸ್ನಾಯುಗಳಿಗೂ ವ್ಯಾಯಾಮ ಸಿಕ್ಕುತ್ತದೆ. ಇಂತಹ ದೈಹಿಕ ಕಾರ್ಯದಲ್ಲಿ ನಿರತರಾದಾಗ, ಯೌವನಸ್ಥರು ಕೆಟ್ಟ ಚಟಗಳನ್ನು ರೂಢಿಸಿಕೊಳ್ಳುವುದು ಎಷ್ಟೋ ಕಡಿಮೆಯಾಗುತ್ತದೆ. ಅಶುದ್ಧ ಆಲೋಚನೆಗೆ ಕಾರಣವಾಗುವಂತದ್ದನ್ನು ಓದಬಾರದು ಹಾಗೂ ನೋಡಬಾರದು. ಬದಲಾಗಿ ಯೌವನಸ್ಥರು ನೈತಿಕ ಮತ್ತು ಬೌದ್ಧಿಕ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು.KanCCh 110.2

    ನಿಮ್ಮ ಆಲೋಚನೆಗಳನ್ನು ಮಾತ್ರವಲ್ಲ, ಸುಖಭೋಗ ಕಾಮನೆಗಳು ಹಾಗೂ ಮನೋಭಾವನೆಗಳನ್ನು ಸಹ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂದು ದೇವರು ಬಯಸುತ್ತಾನೆ. ಇವುಗಳ ಮೇಲೆ ನೀವು ಯಾವ ರೀತಿ ಹತೋಟಿಗೆ ಹೊಂದಿದ್ದೀರೆಂಬುದರ ಮೇಲೆ ನಿಮ್ಮ ರಕ್ಷಣೆ ಆಧಾರಗೊಂಡಿದೆ, ಸುಖಭೋಗ ತೃಪ್ತಿಗೊಳಿಸಬೇಕೆಂಬ ಕಾಮನೆಗಳು ಮತ್ತು ಮನೋಭಾವವು ಪ್ರಬಲವಾದ ಪರಿಣಾಮ ಉಂಟುಮಾಡುವ ಭಾವನೆಗಳಾಗಿವೆ. ಇವುಗಳನ್ನು ಜೀವನದಲ್ಲಿ ತಪ್ಪಾಗಿ ಅಳವಡಿಸಿಕೊಂಡಲ್ಲಿ, ತಪ್ಪಾದ ಗುರಿ ಸಾಧಿಸುವುದಕ್ಕಾಗು ಅನುಸರಿಸಿದಲ್ಲಿ ಇವು ನಿಮ್ಮನ್ನು ನಾಶಗೊಳಿಸುವುದು ಮಾತ್ರವಲ್ಲದೆ, ದೇವರ ಬಗ್ಗೆ ಯಾವ ನಿರೀಕ್ಷೆಯೂ ಇಲ್ಲದಂತೆ ಮಾಡಿ ದುರವಸ್ಥೆಗೆ ದೂಡುತ್ತದೆ.KanCCh 110.3

    ನಿಮ್ಮ ಮನಸ್ಸಿನಲ್ಲಿ ವ್ಯರ್ಥವಾದ ಕಲ್ಪನೆಗಳು ಮತ್ತು ಅಶುದ್ಧ ವಿಷಯಗಳ ಬಗ್ಗೆ ಆಲೋಚಿಸುವಲ್ಲಿ, ಒಂದು ವಿಧದಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತಂದಷ್ಟೇ ಅಪರಾಧಿಗಳಾಗಿ ದೇವರ ಮುಂದೆ ಕಾಣಿಸಿಕೊಳ್ಳುವಿರಿ. ನಿಮಗೆ ಅವಕಾಶವಿಲ್ಲದ್ದರಿಂದ ಮನಸ್ಸಿನಲ್ಲಿ ಬರುವ ವ್ಯರ್ಥವಾದ ಹಾಗೂ ಅಶುದ್ಧ ಆಲೋಚನೆಗಳನ್ನು ನೀವು ಕಾರ್ಯರೂಪಕ್ಕೆ ತರಲಾಗುತ್ತಿಲ್ಲ. ಹಗಲು-ರಾತ್ರಿ ಎನ್ನದೆ ಕನಸಿನಲ್ಲಿ ಗಾಳಿಗೋಪುರ ಕಟ್ಟುವುದು, ಕಲ್ಪನೆ ಮಾಡುವುದು ಕೆಟ್ಟದ್ದು ಮತ್ತು ಅತಿ ಅಪಾಯಕಾರಿಯಾದ ಅಭ್ಯಾಸವಾಗಿದೆ. ಒಂದು ಸಾರಿ ಇಂತಹ ಅಭ್ಯಾಸ ನಮ್ಮಲ್ಲಿ ಬಲವಾಗಿ ಬೇರೂರಿದಲ್ಲಿ. ಅವುಗಳಿಂದ ಬಿಡಿಸಿ ಕೊಳ್ಳುವುದು ಅಸಾಧ್ಯ. ಮಾತ್ರವಲ್ಲದೆ ನಮ್ಮ ಆಲೋಚನೆಗಳು ನಿರ್ಮಲವಾಗಿಯೂ, ಪರಿಶುದ್ಧವಾಗಿಯೂ ಮತ್ತು ಉನ್ನತವಾಗಿಯೂ ಇರಲು ಸಾಧ್ಯವಿಲ್ಲ. ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟು ನಿಮ್ಮ ಹೃದಯವನ್ನು ಅಪವಿತ್ರಗೊಳಿಸುವಂತ ವ್ಯರ್ಥವಾದ ಹಾಗೂ ಕೆಟ್ಟ ಆಲೋಚನೆಗಳನ್ನು ತಡೆಗಟ್ಟಬೇಕಾದಲ್ಲಿ, ಕಣ್ಣು, ಕಿವಿ... ಮುಂತಾದ ಪಂಚೇಂದ್ರಿಯಗಳನ್ನು ನೀವು ನಂಬಿಗಸ್ತನಾದ ಕಾವಲುಗಾರನಂತೆ ಕಾಯ್ದುಕೊಳ್ಳಬೇಕು. ಅತ್ಯಂತ ಅಪೇಕ್ಷಣೀಯವಾದ ಈ ಕಾರ್ಯವನ್ನು ದೇವರ ಕೃಪೆಯಿಂದ ಮಾತ್ರ ಸಾಧಿಸಬಹುದು.KanCCh 111.1

    ಅತಿಯಾಗಿ ಓದುವುದರಿಂದ ಮೆದುಳಿಗೆ ರಕ್ತ ಸಂಚಾರ ಹೆಚ್ಚಾಗುವುದು. ಅಲ್ಲದೆ ಅನಾರೋಗ್ಯಕರವಾದ ಉದ್ದೇಶ ಉಂಟುಮಾಡುವುದರಿಂದ ಸ್ವನಿಯಂತ್ರಣ ಶಕ್ತಿ ದುರ್ಬಲಗೊಳ್ಳುವುದು. ಇದರಿಂದಾಗಿ ಅಂತವರಲ್ಲಿ ತಿಕ್ಕಲು ಸ್ವಭಾವ ಅಂದರೆ ಯಾವುದೇ ಕಾರಣವಿಲ್ಲದೆ ಬುದ್ಧಿಯಲ್ಲಿ ಅಥವಾ ನಡವಳಿಕೆಯಲ್ಲಿ ಹಠಾತ್ ಬದಲಾವಣೆ ಉಂಟಾಗುವುದು. ಇದು ಅಶುದ್ಧತೆಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ದೈಹಿಕ ಶಕ್ತಿಯನ್ನು ಉಪಯೋಗಿಸಿಕೊಳ್ಳುವುದು ಅಥವಾ ದುರುಪಯೋಗ ಪಡಿಸಿಕೊಳ್ಳುವುದು ಜಗತ್ತಿನಲ್ಲಿ ವ್ಯಾಪಕವಾಗಿ ಹರಡಿರುವ ನೈತಿಕ ಭ್ರಷ್ಟತೆಗೆ ಪ್ರಮುಖ ಕಾರಣವಾಗಿದೆ. ಲೋಟ, ಅಬ್ರಹಾಮರ ಕಾಲದಲ್ಲಿ ಸೊದೋಮ್ ಪಟ್ಟಣವು ನಾಶವಾಗುವುದಕ್ಕೆ ಹೆಮ್ಮೆ, ಅಪರಿಮಿತ ಸಂಪತ್ತು ಮತ್ತು ಸೋಮಾರಿತನವು ಕಾರಣವಾಯಿತು. ಅದೇ ರೀತಿ ಈ ಕಾರಣಗಳು ಇಂದೂ ಸಹ ಮನುಷ್ಯನ ಅಭಿವೃದ್ಧಿಗೆ ಮಾರಣಾಂತಿಕ ಶತ್ರುಗಳಾಗಿವೆ.KanCCh 111.2

    ನೀಚವಾದ ಮನೋಕಾಮನೆಗಳನ್ನು ತೃಪ್ತಿಪಡಿಸುವುದರಲ್ಲಿ ನಿರತರಾದವರು, ತಮ್ಮ ಪಾಪಗಳು ತಿಳಿದುಬರಬಹುದೆಂಬ ಭಯದಿಂದ ದೈವೀಕ ಬೆಳಕಿಗೆ ಗಮನ ಕೊಡುವುದಿಲ್ಲ. ಯಾಕೆಂದರೆ ಈ ಪಾಪಗಳನ್ನು ತ್ಯಜಿಸಲು ಅವರಿಗೆ ಇಷ್ಟವಿರುವುದಿಲ್ಲ. ಮನಸ್ಸು ಮಾಡಿದಲ್ಲಿ ಎಲ್ಲರೂ ಸಹ ತಮ್ಮ ಪಾಪಗಳನ್ನು ಅರಿಯಬಹುದು. ಆದರೆ ದೈವೀಕ ಬೆಳಕಿಗೆ ಬದಲಾಗಿ ಕತ್ತಲೆಯನ್ನು ಆರಿಸಿಕೊಂಡಲ್ಲಿ, ಅದೂ ಸಹ ಅಪರಾಧವಾಗುತ್ತದೆ.KanCCh 111.3

    ದೇವರಾಜ್ಞೆಗಳಿಗೆ ಅಗೌರವ ತೋರುವುದು ಅಥವಾ ಅದನ್ನು ಮೀರಿ ನಡೆಯುವುದಕ್ಕೆ ಬದಲಾಗಿ ಮರಣವು ಲೇಸು ಎಂಬುದು ಪ್ರತಿಯೊಬ್ಬ ಕ್ರಿಸ್ತನ ಗುರಿಯಾಗಿರಬೇಕು. ಧಾರ್ಮಿಕ ಸುಧಾರಕರೆಂದು ಹೇಳಿಕೊಳ್ಳುವ ಮತ್ತು ಅತ್ಯಂತ ಗಂಭೀರವಾದ ಹಾಗೂ ಪರಿಶುದ್ಧಗೊಳಿಸುವ ದೇವರ ವಾಕ್ಯವನ್ನು ಅಮೂಲ್ಯವೆಂದು ಎಣಿಸುವ ಅಡ್ವೆಂಟಿಸ್ಪರಾದ ನಾವು ಅದರ ಮಾನದಂಡವನ್ನು ಈಗಿರುವುದಕ್ಕಿಂತಲೂ ಇನ್ನೂ ಹೆಚ್ಚಿನ ಉನ್ನತ ಮಟ್ಟಕ್ಕೇರಿಸಬೇಕು. ಸಭೆಯಲ್ಲಿರುವ ಪಾಪ ಹಾಗೂ ಪಾಪಿಗಳು ಮೇಲೆ ಇತರರು ದಾರಿತಪ್ಪದಂತ ರೀತಿಯಲ್ಲಿ ಪ್ರಾಮಾಣಿಕವಾಗಿ ಕ್ರಮತೆಗೆದುಕೊಳ್ಳಬೇಕು. ಶೀನಾರ್‌ದೇಶದ ಉತ್ತಮ ವಸ್ತುಗಳನ್ನು ಕದ್ದು ಇಸ್ರಾಯೇಲ್ಯರನ್ನು ಶಾಪಕ್ಕೆ ಗುರಿ ಮಾಡಿದಂತ ಆಕಾನನಂತವರು ಸಭೆಯಲ್ಲಿದ್ದಾರೆ (ಯೆಹೋಶುವ 7:20,21) ಇಂತವರನ್ನು ಸಂಪೂರ್ಣವಾಗಿ ಶುದ್ಧೀಪಡಿಸುವುದಕ್ಕೆ ಹೆಚ್ಚು ಜಾಗರೂಕರಾಗಿ ಕಾರ್ಯ ಮಾಡಲು ಸತ್ಯ ಹಾಗೂ ಪರಿಶುದ್ಧತೆಯ ಅಗತ್ಯವಿದೆ. ಜವಾಬ್ದಾರಿಯುತ ಸ್ಥಾನಗಳಲ್ಲಿರುವ ಅಧಿಕಾರಿಗಳು ಕ್ರೈಸ್ತ ಸಹೋದರರ ಪಾಪವನ್ನು ಸಹಿಸಿಕೊಳ್ಳಬಾರದು. ಅವರು ತಮ್ಮ ಪಾಪಗಳನ್ನು ಬಿಡಬೇಕು ಅಥವಾ ಸಭೆಯಿಂದ ಹೊರಹೋಗಬೇಕೆಂದು ದೃಢವಾಗಿ ಹೇಳಬೇಕು.KanCCh 112.1

    ಸೈತಾನನ ಅತ್ಯಂತ ಪ್ರಬಲವಾದ ಶೋಧನೆಗಳೂ ಸಹ ನಿಷ್ಠೆಯನ್ನು ಬದಲಾಯಿಸಲಾರದಂತ ದೃಢ ತತ್ವಗಳನ್ನು ಯೌವನಸ್ಥರು ಹೊಂದಿರಬಹುದು. ಬಾಲಕನಾಗಿದ್ದ ಸಮುವೇಲನ ಸುತ್ತಲಿನ ವಾತಾವರಣವು ಅತ್ಯಂತ ಕೆಟ್ಟ ಪ್ರಭಾವ ಬೀರುವಂತಿತ್ತು. ಹೃದಯಕ್ಕೆ ವೇದನೆ ಉಂಟುಮಾಡುವಂತ ವಿಷಯಗಳನ್ನು ಅವನು ನೋಡಿದನು ಹಾಗೂ ಕೇಳಿದನು. ದೇವದರ್ಶನ ಗುಡಾರದಲ್ಲಿ ಅತ್ಯಂತ ಪರಿಶುದ್ಧವಾದ ಯಾಜಕ ಸೇವೆ ಮಾಡುತ್ತಿದ್ದ ಮಹಾಯಾಜಕನಾದ ಏಲಿಯ ಮಕ್ಕಳು ಸೈತಾನನ ಹತೋಟಿಯಲ್ಲಿದ್ದರು. ಇವರು ತಮ್ಮ ಸುತ್ತಲಿನ ಎಲ್ಲಾ ವಾತಾವರಣವನ್ನು ಮಲಿನಗೊಳಿಸಿದ್ದರು. ಅಲ್ಲಿದ್ದ ಸ್ತ್ರೀಪುರುಷರು ಪ್ರತಿದಿನ ತಪ್ಪು ಪಾಪಗಳನ್ನು ಮಾಡುತ್ತಿದ್ದರು. ಆದರೂ ಸಮುವೇಲನು ನಿಷ್ಕಳಂಕನಾಗಿದ್ದನು. ಅವನ ಗುಣಸ್ವಭಾವವೆಂಬ ವಸ್ತ್ರಗಳು ಕಳಂಕರಹಿತವಾಗಿದ್ದವು. ಇಸ್ರಾಯೇಲ್ಯರು ಅನುಸರಿಸುತ್ತಿದ್ದ ಯಾವುದೇ ಪಾಪದಲ್ಲಿ ಅವನು ಭಾಗಿಯಾಗಲಿಲ್ಲ ಅಥವಾ ಸಂತೋಷಿಸಲಿಲ್ಲ. ಸಮುವೇಲನು ದೇವರನ್ನು ಪ್ರೀತಿಸಿದನು. ಅವನು ಪರಲೋಕದೊಂದಿಗೆ ನಿಕಟ ಸಂಪರ್ಕ ಹೊಂದಿದ್ದನು. ಈ ಕಾರಣದಿಂದ ಪರಲೋಕದಿಂದ ಬಂದ ದೇವದೂತನು ಮಹಾಯಾಜಕ ಏಲಿಯ ಮಕ್ಕಳ ಪಾಪ, ದುರಾಚಾರಗಳು, ಅವರಿಗೆ ಇರುವ ಶಿಕ್ಷೆಯ ಬಗ್ಗೆ ಸಮುವೇಲನಿಗೆ ಮುಂದಾಗಿಯೇ ತಿಳಿಸಿದನು. ಏಲಿಯ ಮಕ್ಕಳ ಪಾಪಗಳು ಇಸ್ರಾಯೇಲ್ಯರನ್ನು ನೀತಿ ಭ್ರಷ್ಟರನ್ನಾಗಿ ಮಾಡಿತ್ತು.KanCCh 112.2