Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನೈತಿಕ ಮಾಲಿನ್ಯದ ಫಲಿತಾಂಶಗಳು

    ಆತ್ಮನಿಂದ ಅಂದರೆ ತನ್ನನ್ನು ತಾನೇ ಬೈದುಕೊಳ್ಳುವುದು ಒಂದು ಪಾಪ. ಉನ್ನತ ಹುದ್ದೆಯಲ್ಲಿರುವ ಅನೇಕರು ಇದರ ಖಚಿತ ಫಲಿತಾಂಶಗಳನ್ನು ತಿಳಿದುಕೊಂಡಿಲ್ಲ. ದೀರ್ಘಕಾಲದಿಂದಿರುವ ದುರಭ್ಯಾಸಗಳು ಅವರ ತಿಳುವಳಿಕೆಯನ್ನು ಮಂಕುಗೊಳಿಸಿದೆ. ಅಗೌರವವೂ, ಅವಮಾನಕರವೂ ಆದ ಈ ಪಾಪವು ಎಷ್ಟೊಂದು ಅಧಿಕವಾದ ದುಷ್ಟತನದಿಂದ ಕೂಡಿದೆ ಎಂಬುದನ್ನು ಅವರು ತಿಳಿಯಲಾರರು. ಆತ್ಮನಿಂದೆಯು ನಮ್ಮ ದೇಹದ ನರವ್ಯೂಹ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಮೆದುಳಿನ ನರಗಳ ಸಾಮರ್ಥ್ಯವನ್ನು ನಾಶಮಾಡುತ್ತದೆ. ದೀರ್ಘಕಾಲದಿಂದ ನಮ್ಮಲ್ಲಿ ಬೇರೂರಿರುವ ದುರಭ್ಯಾಸಗಳೊಂದಿಗೆ ಹೋರಾಡಲು ನೈತಿಕ ತತ್ವಗಳು ಬಹಳ ಬಲಹೀನವಾಗಿರುತ್ತವೆ. ಪರಲೋಕದಿಂದ ಬಂದ ದೈವಸಂದೇಶವು ಬಲವಂತವಾಗಿ ಇಂತವರ ಹೃದಯದಲ್ಲಿ ಯಾವುದೇ ಪ್ರಭಾವ ಬೀರುವುದಿಲ್ಲ. ಮೆದುಳಿನ ಸೂಕ್ಷ್ಮವಾದ ನರಗಳು ಪಂಚೇಂದ್ರಿಯಗಳ ಅಸಹಜವಾದ ಬಯಕೆಗಳನ್ನು ತೃಪ್ತಿಪಡಿಸಲು ರೋಗಗ್ರಸ್ಥ ಉದ್ದೇಶಕ್ಕೆ ಒಳಗಾಗಿರುವುದರಿಂದ ಅವುಗಳು ತಮ್ಮ ಆರೋಗ್ಯಕರ ದೇಹಸ್ಥಿತಿಯನ್ನು ಕಳೆದುಕೊಂಡಿರುತ್ತವೆ.KanCCh 112.3

    ಮಾನವರ ನೈತಿಕ ಅವನತಿಗೆ ಇತರೆಲ್ಲಾ ಕೆಟ್ಟತನಕ್ಕಿಂತ ನೈತಿಕ ಮಾಲಿನ್ಯವು ಹೆಚ್ಚು ಕಾರಣವಾಗಿದೆ. ಇದು ಅಪಾಯಕರ ರೀತಿಯಲ್ಲಿ ಎಲ್ಲಾ ಕಡೆಯೂ ಹರಡಿಕೊಂಡಿದ್ದು, ಹೊಸ ಹೊಸ ರೀತಿಯ ರೋಗಗಳಿಗೆ ಕಾರಣವಾಗುತ್ತದೆ. ಈ ನೀತಿಭ್ರಷ್ಟತೆಯ ಬಗ್ಗೆ ತಮ್ಮ ಮಕ್ಕಳು ಏನೂ ಅರಿತಿಲ್ಲವೆಂದು ತಂದೆ-ತಾಯಿಯರು ಸಾಮಾನ್ಯವಾಗಿ ಸಂದೇಹ ವ್ಯಕ್ತಪಡಿಸುತ್ತಾರೆ. ಇಂತಹ ಅನೇಕ ಪ್ರಕರಣಗಳಲ್ಲಿ ತಂದೆ-ತಾಯಿಯರೇ ನಿಜವಾದ ಪಾಪಿಗಳಾಗಿರುತ್ತಾರೆ. ಅವರು ತಮ್ಮ ಮದುವೆಯ ಸೌಲಭ್ಯ ಮತ್ತು ಸ್ವಾತಂತ್ರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಹಾಗೂ ತಮ್ಮ ಕಾಮನೆಗಳನ್ನು ತೃಪ್ತಿಪಡಿಸುವ ಮೂಲಕ ತಮ್ಮಲ್ಲಿರುವ ಮೃಗೀಯಗುಣಗಳನ್ನು ಬಲಪಡಿಸಿಕೊಳ್ಳುತ್ತಾರೆ. ಇವುಗಳು ಬಲಗೊಂಡಾಗ ತಂದೆ-ತಾಯಿಯರ ನೈತಿಕ ಮತ್ತು ಬೌದ್ಧಿಕ ಸಾಮರ್ಥ್ಯಗಳು ಬಲಹೀನವಾಗುತ್ತವೆ. ಮೃಗದಂತ ನಿರ್ದಯತ್ವವು ದೈವಿಕತೆಯನ್ನು ಕ್ರೂರವಾಗಿ ಮೆಟ್ಟಿ ಹಾಕುತ್ತದೆ. ಇಂತಹ ಮೃಗೀಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವ ಮಕ್ಕಳು, ತಂದೆ- ತಾಯಿಯರ ಗುಣಸ್ವಭಾವ ಅನುಸರಿಸುತ್ತಾರೆ. ಇಂತಹ ತಂದೆ-ತಾಯಿಯರಿಗೆ ಹುಟ್ಟಿದ ಮಕ್ಕಳು ಸಹಜವಾಗಿಯೇ ಅಸಹ್ಯವಾದ ಕಾರ್ಯಗಳನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಆ ತಂದೆಯ-ತಾಯಿಯರ ಪಾಪಗಳು ಮಕ್ಕಳ ಮೇಲೆಯೂ ಸಹ ಶಾಪ ತರುತ್ತದೆ.KanCCh 113.1

    ಆತ್ಮ, ಪ್ರಾಣ, ಶರೀರಗಳನ್ನು ನಾಶಮಾಡುವಂತಹ ದುಷ್ಟತನದಲ್ಲಿ ಸಂಪೂರ್ಣವಾಗಿ ಬೇರೂರಿರುವಂತವರು, ತಮ್ಮ ಸಂಗಡಿಗರಿಗೂ ಸಹ ಈ ದುಷ್ಟತನವನ್ನು ಕಲಿಸುತ್ತಾರೆ. ಕುತೂಹಲ ಕೆರಳಿ, ಈ ದುಷ್ಟತನದ ಜ್ಞಾನವನ್ನು ಮಕ್ಕಳಿಂದ ಮಕ್ಕಳಿಗೆ, ಯೌವನಸ್ಥರಿಂದ ಯೌವನಸ್ಥರಿಗೆ ದಾಟಿಸಲಾಗುತ್ತದೆ. ರಹಸ್ಯವಾದ ದುರಭ್ಯಾಸಗಳನ್ನು ಅನುಸರಿಸುವುದು ಖಂಡಿತವಾಗಿಯೂ ನಮ್ಮ ಶರೀರದ ವ್ಯವಸ್ಥೆಯ ಪ್ರಮುಖ ಅಂಗಗಳನ್ನು ನಾಶಮಾಡುತ್ತದೆ. ಯುವಕರಲ್ಲಿ ಅತ್ಯಂತ ಪ್ರಮುಖ ಅಂಗವಾದ ಮೆದುಳಿಗೆ, ಚಿಕ್ಕವಯಸ್ಸಿನಲ್ಲಿಯೇ ತೀವ್ರವಾದ ಒತ್ತಡ ಉಂಟಾಗುವುದರಿಂದ ಇದಕ್ಕೆ ಸಾಕಷ್ಟು ಕೊರತೆಮತ್ತು ಸಂಪೂರ್ಣ ನಿತ್ರಾಣ ಉಂಟಾಗುತ್ತದೆ. ಇದರಿಂದ ದೇಹಕ್ಕೆ ಅನೇಕ ವಿಧವಾದ ರೋಗಗಳು ಬರುವುದಕ್ಕೆ ಮಾರ್ಗವಾಗುತ್ತದೆ.KanCCh 113.2

    ಯೌವನಸ್ಥರಲ್ಲಿ ಇಂತಹ ದುಷ್ಪ ಅಭ್ಯಾಸಗಳು 15ನೇ ವಯಸ್ಸಿನಿಂದ ಮುಂದುವರಿದಲ್ಲಿ, ದೇಹದ ಪ್ರಕೃತಿ ಇಂತಹ ದುರುಪಯೋಗದ ವಿರುದ್ಧ ಪ್ರತಿಭಟಿಸುತ್ತದೆ. ಇದಕ್ಕೆ ಅವರು ಗಮನ ನೀಡದೆ ತಮ್ಮ ಕೆಟ್ಟ ಅಭ್ಯಾಸಗಳನ್ನು ಇನ್ನೂ ಮುಂದುವರಿಸಿದಲ್ಲಿ ದೇಹದ ಆರೋಗ್ಯದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರು ತಕ್ಕ ದಂಡನೆ ಅನುಭವಿಸುತ್ತಾರೆ. 30-45 ವಯಸ್ಸಿನಲ್ಲಿ ಅವರ ದೇಹದಲ್ಲಿ ವಿವಿಧ ರೀತಿಯ ನೋವು, ಪಿತ್ತಜನಕಾಂಗ ಮತ್ತು ಶ್ವಾಸಕೋಶಗಳಲ್ಲಿ ತೊಂದರೆ, ಸಂಧಿವಾತ, ತಲೆ ಮತ್ತು ಮುಖದಲ್ಲಿ ಪದೇಪದೇ ಕಾಣಿಸಿಕೊಳ್ಳುವ ತೀವ್ರನೋವು, ಬೆನ್ನೆಲುಬಿನ ತೊಂದರೆ, ಮೂತ್ರಪಿಂಡದ ತೊಂದರೆ ಮತ್ತು ಕ್ಯಾನ್ಸರ್ ರೋಗಲಕ್ಷಣಗಳು ಕಂಡುಬರುತ್ತವೆ. ದೇಹದ ಉತ್ತಮ ಅಂಗಗಳು ವಿಫಲಗೊಂಡು, ಇತರ ಅಂಗಗಳು ಅವುಗಳ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದರಿಂದ ದೈಹಿಕ ಪ್ರಕೃತಿಯ ಅತ್ಯುತ್ತಮ ವ್ಯವಸ್ಥೆಯು ಅವ್ಯವಸ್ಥೆಗೊಂಡು ಶರೀರದ ಅಂಗಗಳು ಇದ್ದಕ್ಕಿದ್ದಂತೆ ವಿಫಲವಾಗಿ ಮರಣ ಸಂಭವಿಸುತ್ತದೆ.KanCCh 114.1

    ಒಂದೇ ಸಾರಿ ಪ್ರಾಣತೆಗೆದುಕೊಳ್ಳುವುದಕ್ಕಿಂತಲೂ, ನಿಧಾನವಾಗಿ ಆದರೆ ಖಚಿತವಾಗಿ ಅದನ್ನು ನಾಶ ಮಾಡುವುದು ಪರಲೋಕದ ದೃಷ್ಟಿಯಲ್ಲಿ ಮಹಾ ಪಾಪವಾಗಿದೆ. ತಮ್ಮ ಪಾಪಮಯ ಜೀವಿತದಿಂದ ಸ್ವತಃ ನಾಶವನ್ನು ತಂದುಕೊಂಡವರು ಈ ಲೋಕದಲ್ಲಿ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸುವರು. ಅವರಲ್ಲಿ ಸಂಪೂರ್ಣ ಪಶ್ಚಾತ್ತಾಪ ಕಂಡುಬರದಿದ್ದಲ್ಲಿ, ಅವರು ಪರಲೋಕ ಸೇರಲಾರರು. KanCCh 114.2

    ಶಾರೀರಿಕವಾಗಿ ಬಲಹೀನವಾಗಿರುವ ಎಲ್ಲಾ ಯೌವನಸ್ಥರೂ, ತಮ್ಮ ದುರಭ್ಯಾಸಗಳ ದೋಷಿಗಳೆಂದು ಹೇಳಲಾಗದು. ಅವರು ಶುದ್ಧ ಮನಸ್ಸುಳ್ಳವರೂ, ಆತ್ಮಸಾಕ್ಷಿಯಂತೆ ನೀತಿಬದ್ಧರಾಗಿ ನಡೆಯುವವರೂ ಆಗಿದ್ದಾರೆ. ಆದರೆ ಅವರ ತಮ್ಮದಲ್ಲದ ತಪ್ಪಿನಿಂದ ಶಾರೀರಿಕವಾಗಿ ಅನೇಕ ಕಾಯಿಲೆಗಳಿಂದ ನರಳುತ್ತಿರಬಹುದು.KanCCh 114.3

    ರಹಸ್ಯವಾದ ಕೆಟ್ಟಪಾಪಗಳು ಉನ್ನತವಾದ ಉದ್ದೇಶ, ಪ್ರಾಮಾಣಿಕ ಪ್ರಯತ್ನ ಮತ್ತು ಉತ್ತಮ ಧಾರ್ಮಿಕ ಸ್ವಭಾವ ಬೆಳೆಸಿಕೊಳ್ಳುವ ಬಲವಾದ ಸಂಕಲ್ಪವನ್ನು ನಾಶಮಾಡುತ್ತವೆ. ಕ್ರಿಸ್ತನ ಶಿಷ್ಯರಂತೆಯೇ, ಆತನ ಹಿಂಬಾಲಕರಾದ ನಾವೂ ಸಹ ನಮ್ಮೆಲ್ಲಾ ಶಾರೀರಿಕ, ಮಾನಸಿಕ ಸಾಮರ್ಥ್ಯಗಳು ಮತ್ತು ಎಲ್ಲಾ ಮನೋಕಾಮನೆಗಳನ್ನು ದೇವರ ಚಿತ್ತಕ್ಕೆ ಸಂಪೂರ್ಣವಾಗಿ ಒಪ್ಪಿಸಿಕೊಡಬೇಕು. ತಮ್ಮ ಶಾರೀರಿಕ ಆಸೆಗಳಿಗೆ ದಾಸರಾದವರು ಕ್ರಿಸ್ತನ ಅನುಯಾಯಿಗಳಾಗಲು ಸಾಧ್ಯವಿಲ್ಲ. ಅವರು ಎಲ್ಲಾ ಕೆಟ್ಟದ್ದಕ್ಕೂ ಮೂಲಕಾರಣನಾಗಿರುವ ತಮ್ಮ ಒಡೆಯನಾದ ಸೈತಾನನ ಸೇವೆಯಲ್ಲಿ ಶ್ರದ್ಧೆಯಿಂದ- ನಿರತರಾಗಿದ್ದಾರೆ. ಈ ಕಾರಣದಿಂದ ಅವರು ತಮ್ಮ ದುರಭ್ಯಾಸಗಳನ್ನು ಬಿಡುವುದಿಲ್ಲ ಮತ್ತು ಕ್ರಿಸ್ತನನ್ನು ಅನುಸರಿಸುವುದಕ್ಕೆ ಇಷ್ಟಪಡುವುದಿಲ್ಲ.KanCCh 114.4

    ಯೌವನಸ್ಥರು ತಮ್ಮ ದುಷ್ಟ ಅಭ್ಯಾಸಗಳನ್ನು ಆಗಲೇ ಬೆಳೆಸಿಕೊಂಡಲ್ಲಿ, ಅವರಲ್ಲಿ ಎಂದಿಗೂ ಸಹ ಶಾರೀರಿಕ, ಬೌದ್ಧಿಕ ಮತ್ತು ನೈತಿಕ ಸ್ವಭಾವಗಳು ಪರಿಪೂರ್ಣವಾಗಿ ಬೆಳವಣಿಗೆ ಹೊಂದುವುದಿಲ್ಲ. ಈ ಲೋಕದಲ್ಲಿ ಉತ್ತಮ ಆರೋಗ್ಯ ಇರಬೇಕು ಮತ್ತು ಮುಂದೆ ಪರಲೋಕಕ್ಕೆ ಹೋಗಬೇಕೆಂದು ಬಯಸುವವರು ತಮ್ಮ ಕೆಟ್ಟ ಅಭ್ಯಾಸಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಅದು ಮಾತ್ರ ಅವರ ಏಕೈಕ ಖಚಿತವಾಗಿ ರಕ್ಷಣೆಯಾಗಿದೆ. ಆತನ ಸ್ವರವನ್ನು ಅವರು ಕೇಳಿದರೆ, ಎಲ್ಲಾ ಅಪಾಯ ಮತ್ತು ಕೆಟ್ಟತನಗಳಿಂದ ಅವರನ್ನು ರಕ್ಷಿಸಿ ಕಾಪಾಡುವನು “ನನ್ನ ಕುರಿಗಳು ನನ್ನ ಸ್ವರವನ್ನು ಕೇಳುತ್ತವೆ.... ಅವು ನನ್ನ ಹಿಂದೆ ಬರುತ್ತದೆ’ ಎಂದು ಯೇಸು ಹೇಳಿದ್ದಾನೆ (ಯೋಹಾನ 10:1-13). ಕ್ರಿಸ್ತನಲ್ಲಿ ಈ ಕುರಿಗಳು ಹಸಿರುಗಾವಲನ್ನು ಕಂಡುಕೊಳ್ಳುತ್ತವೆ. ಬಲ ಮತ್ತು ನಿರೀಕ್ಷೆ ಹೊಂದುತ್ತದೆ. ಅವು ವಿಶ್ರಾಂತಿಕರವಾದ ನೀರುಗಳ ಬಳಿ ಬರುತ್ತವೆ. ಇವರು ಅಮೂಲ್ಯವಾದ ಬಹುಬೆಲೆಯುಳ್ಳ ಮುತ್ತನ್ನು ಕಂಡುಕೊಂಡಿದ್ದಾರೆ. ಮತ್ತು ಅವರ ಮನಸ್ಸು ಸಮಾಧಾನಕರವಾದ ವಿಶ್ರಾಂತಿಯಿಂದಿರುವುದು. ಅವರ ಸಂತೋಷವು ಪರಿಶುದ್ಧವೂ ಸಮಾಧಾನಕರವೂ, ಉನ್ನತವೂ ಆದ ಪರಲೋಕ ದೈವಿಕ ಸ್ವಭಾವದಲ್ಲಿರುತ್ತವೆ. ಅವರಲ್ಲಿ ಯಾವುದೇ ದುಃಖ, ನೋವು ಇರುವುದಿಲ್ಲ. ಇಂತಹ ಸಂತೋಷವು ಆರೋಗ್ಯಕ್ಕೆ ಹಾನಿಕರವಲ್ಲ ಅಥವಾ ಮನಸ್ಸನ್ನು ಖಿನ್ನಗೊಳಿಸುವುದಿಲ್ಲ. ಬದಲಾಗಿ ಸಹಜವಾಗಿಯೇ ಆರೋಗ್ಯಕರವಾಗಿರುತ್ತದೆ.KanCCh 115.1

    *****