Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಭಾವಿಪತ್ನಿಯಲ್ಲಿ ಯುವಕನು ಕಂಡುಕೊಳ್ಳಬೇಕಾದ ಅರ್ಹತೆಗಳು

    ಜೀವನದ ಸುಖ ದುಃಖಗಳಲ್ಲಿ ಸಮಾನವಾಗಿ ಭಾಗಿಯಾಗಿರುವವಳೂ, ತನ್ನ ಪ್ರಭಾವದಿಂದ ಅವನ ಗುಣನಡತೆಯನ್ನು ಉನ್ನತಗೊಳಿಸಿ, ನಡೆನುಡಿಯನ್ನು ಉತ್ತಮಗೊಳಿಸಬಲ್ಲ ಹಾಗೂ ತನ್ನ ಪ್ರೀತಿಯಿಂದ ಅವನನ್ನು ಮುದಗೊಳಿಸುವಂತ ಯುವತಿಯನ್ನು ಮದುವೆಯಾಗಲಿರುವ ಯೌವನಸ್ಥರು ಆರಿಸಿಕೊಳ್ಳಬೇಕು. KanCCh 117.3

    “ಗುಣವತಿಯಾದ ಸತಿಯು ಎಲ್ಲಿ ಸಿಕ್ಕಾಳು? ವಿವೇಕಿಯಾದ ಹೆಂಡತಿಯದು ಯೆಹೋವನ ಅನುಗ್ರಹವೇ” (ಜ್ಞಾನೋಕ್ತಿ 19:14). “ಪತಿಯ ಹೃದಯವು ಆಕೆಯಲ್ಲಿ ಭರವಸವಿಡುವುದು... ಆಕೆಯ ಜೀವಮಾನದಲ್ಲೆಲ್ಲಾ ಅವನಿಗೆ ಅಹಿತವನ್ನುಮಾಡದೆ, ಹಿತವನ್ನೇ ಮಾಡುತ್ತಿರುವಳು” (ಜ್ಞಾನೋಕ್ತಿ 31:10-12). “ಬಾಯಿದೆರೆದು ಜ್ಞಾನವನ್ನು ತೋರ್ಪಡಿಸುವಳು; ಆಕೆಯ ನಾಲಿಗೆಯು ಬುದ್ಧಿಯನ್ನು ಪ್ರೀತಿಪೂರ್ವಕವಾಗಿ ಹೇಳುವುದು. ಸೋಮಾರಿತನದ ಅನ್ನವನ್ನು ತಿನ್ನದೆ, ಗೃಹಕೃತ್ಯಗಳನ್ನೆಲ್ಲಾ ನೋಡಿಕೊಳ್ಳುವಳು, ಮಕ್ಕಳು, ಎದ್ದುನಿಂತು ಆಕೆಯನ್ನು ಧನ್ಯಳು ಎಂದು ಹೇಳುವರು; ಪತಿಯು ಸಹ- ಬಹುಮಂದಿ ಸ್ತ್ರೀಯರು ಗುಣವತಿಯರಾಗಿ ನಡೆದಿದ್ದಾರೆ. ಅವರೆಲ್ಲರಿಗಿಂತಲೂ ನೀನೇ ಶ್ರೇಷ್ಠಳು ಎಂದುಕೊಂಡಾಡುವನು” (ಜ್ಞಾನೋಕ್ತಿ 31:26-29), ಇಂತಹ ಪತ್ನಿಯನ್ನು ದೊರಕಿಸಿಕೊಳ್ಳುವವನು ಯೆಹೋವನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ.KanCCh 117.4

    ನೀವು ವಿವಾಹವಾಗಲಿರುವ ಹುಡುಗಿಯು ನಿಮ್ಮ ಮನೆಗೆ ಸಂತೋಷ ತರುವಳೇ? ಹಣಕಾಸಿನ ವಿಷಯದಲ್ಲಿ ಹಿತಮಿತವಾಗಿರುತ್ತಾಳೆಯೋ? ಇಲ್ಲವೆ ಮದುವೆಯಾದ ನಂತರ ತನ್ನೆಲ್ಲಾ ಆದಾಯವನ್ನು ಮಾತ್ರವಲ್ಲದೆ, ನಿಮ್ಮ ಆದಾಯವನ್ನೂ ಸಹ ವ್ಯರ್ಥವಾದ ಪದಾರ್ಥಗಳಿಗಾಗಿ ಅನಾವಶ್ಯಕವಾಗಿ ಖರ್ಚುಮಾಡುವಂತವಳೇ? ಈ ವಿಷಯದಲ್ಲಿ ಅವಳ ಸಿದ್ಧಾಂತಗಳು ಸರಿಯಾಗಿವೆಯೇ? ಇಂತಹ ಪ್ರಶ್ನೆಗಳನ್ನು ಯೌವನಸ್ಥರು ಪರಿಗಣಿಸಬೇಕು. ಪ್ರೀತಿ, ಪ್ರಣಯದಿಂದ ಮೋಹಪಾಶಕ್ಕೆ ಒಳಗಾಗಿರುವ ಮತ್ತು ಮದುವೆಯ ಆಲೋಚನೆಗಳಿಂದ ಕೂಡಿರುವ ಯುವಕರಿಗೆ ಇಂತಹ ಪ್ರಶ್ನೆಗಳು ನಿರರ್ಥಕವೆಂದು ಕಂಡುಬಂದು ಅವುಗಳನ್ನು ನಿರ್ಲಕ್ಷಿಸುವವರು. ಆದರೆ ಈ ಪ್ರಶ್ನೆಗಳು ನಿಮ್ಮ ಭವಿಷ್ಯದ ಜೀವನದ ಮೇಲೆ ಪರಿಣಾಮ ಬೀರುವುದರಿಂದ, ಇವುಗಳನ್ನು ಉಚಿತ ರೀತಿಯಲ್ಲಿ ಪರಿಗಣಿಸಬೇಕು. ಭಾವಿಪತ್ನಿಯನ್ನು ಆರಿಸಿಕೊಳ್ಳುವ ಯೌವನಸ್ಥರು, ಮೊದಲು ಆಕೆಯ ಗುಣನಡತೆಯನ್ನು ಸಹ ತಿಳಿದುಕೊಂಡಿರಬೇಕು. ಆಕೆಯಲ್ಲಿ ತಾಳ್ಮೆ ಮತ್ತು ಕೆಲಸದ ವಿಷಯದಲ್ಲಿ ಶ್ರದ್ಧೆ ಹಾಗೂ ಜಾಗರೂಕ ಸ್ವಭಾವ ಕಂಡುಬರುತ್ತದೆಯೇ? ಅಥವಾ ನಿಮ್ಮ ತಂದೆ-ತಾಯಿಗಳ ವೃದ್ಧಾಪ್ಯದಲ್ಲಿ, ನಿಮ್ಮ ಸಹಾಯದ ಅಗತ್ಯ ಹೆಚ್ಚಾಗಿರುವಾಗ ಅವರನ್ನು ನಿರ್ಲಕ್ಷಿಸುವಳೇ? ಇಲ್ಲವೆ ಗಂಡನನ್ನು ಅವನ ತಂದೆ-ತಾಯಿಯರಿಂದ ದೂರ ಮಾಡಿ, ನನ್ನ ಸುಖಸಂತೋಷ ನೋಡಿಕೊಳ್ಳಲು ಅವರನ್ನು ಮನೆಯಿಂದ ಹೊರದೂಡುವಳೇ? ಇದರಿಂದಾಗಿ ನಿಮ್ಮ ತಂದೆ-ತಾಯಿಯರು ವಾತ್ಸಲ್ಯತೋರಿಸುವ ಮಗಳಿಗೆ ಸಮಾನಳಾದ ಸೊಸೆಯನ್ನು ಪಡೆದುಕೊಳ್ಳುವುದಕ್ಕೆ ಬದಲಾಗಿ, ಅವರು ಮಗನನ್ನು ಕಳೆದುಕೊಳ್ಳುವರೇ? ಇದೆಲ್ಲಾ ಪ್ರಶ್ನೆಗಳಿಗೆ ಯೌವನಸ್ಥರು ತಮ್ಮ ಭಾವಿಪತ್ನಿಯಲ್ಲಿ ಉತ್ತರ ಕಂಡುಕೊಳ್ಳಬೇಕು.KanCCh 118.1