Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಭಾವಿಪತಿಯಲ್ಲಿ ಕಂಡುಕೊಳ್ಳಬೇಕಾದ ಅರ್ಹತೆಗಳು

    ಮದುವೆಯಾಗುವುದಕ್ಕೆ ಮೊದಲೇ, ಪ್ರತಿಯೊಬ್ಬ ಯುವತಿಯೂ ತಾನು ಕೈ ಹಿಡಿಯಲಿರುವ ಭಾವಿಪತಿಯು ಯೋಗ್ಯನೇ ಎಂದು ವಿಚಾರಿಸಿ ತಿಳಿದುಕೊಳ್ಳಬೇಕು. ಅವನ ಹಿಂದಿನ ಜೀವಿತ ಹೇಗಿತ್ತು? ಅವನ ಜೀವನವು ಪರಿಶುದ್ಧವಾಗಿತ್ತೇ? ಅವನು ವ್ಯಕ್ತಪಡಿಸುವ ಪ್ರೀತಿಯ ಭಾವನೆಯು ಉದಾತ್ತವೂ, ಶ್ರೇಷ್ಠವೂ ಆಗಿದೆಯೇ? ಅಥವಾ ಭಾವೋದ್ವೇಗದ ಹೆಚ್ಚು ಭರವಸೆಯ ಕಾಮುಕ ಭಾವನೆಯೇ? ಅವನಲ್ಲಿ ನಿಮ್ಮನ್ನು ಸಂತೋಷಪಡಿಸುವಂತ ಸುಶೀಲ ಸ್ವಭಾವವಿದೆಯೇ? ಅವನ ಪ್ರೀತಿ, ವಾತ್ಸಲ್ಯದಲ್ಲಿ ನಿಮಗೆ ನಿಜವಾದ ಸಮಾಧಾನ ಹಾಗೂ ಹರ್ಷ ಉಂಟಾಗುವುದೇ? ಭಾವಿಪತಿಯನ್ನು ಮದುವೆಯಾದಲ್ಲಿ ನಾನು ಸ್ವತಂತ್ರ ವ್ಯಕ್ತಿತ್ವ ಕಳೆದುಕೊಳ್ಳುವೆನೇ? ಅಥವಾ ತನ್ನೆಲ್ಲಾ ನಿರ್ಣಯ ಮತ್ತು ಮನಸ್ಸಾಕ್ಷಿಯನ್ನು ಅವನ ಅಧೀನಕ್ಕೆ ಒಪ್ಪಿಸಿ ಗುಲಾಮಳಾಗುವೆನೇ? ರಕ್ಷಕನಚಿತ್ತವೇ ಶ್ರೇಷ್ಠವೆಂದು ಭಾವಿಪತ್ನಿಯಾದ ನೀವು ಗೌರವಿಸಬೇಕು. ಆತ್ಮ, ಪ್ರಾಣ, ಶರೀರ, ಉದ್ದೇಶ, ಆಲೋಚನೆಗಳನ್ನು ಮದುವೆಯ ನಂತರ ನಿರ್ಮಲವೂ ಪರಿಶುದ್ಧವೂ ಆಗಿ ಸಂರಕ್ಷಿಸಿಕೊಳ್ಳಬಹುದೇ? ಇವೆಲ್ಲಾ ಪ್ರಶ್ನೆಗಳು ಮದುವೆಯಾಗಲಿರುವ ಯುವತಿಯರ ವೈವಾಹಿಕ ಸಂಬಂಧದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಭಾವಿಪತಿಯ ಗುಣಸ್ವಭಾವದ ಬಗ್ಗೆ ಮೊದಲು ಚೆನ್ನಾಗಿ ತಿಳಿದುಕೊಂಡು, ಯೋಗ್ಯವಾದ ನಿರ್ಣಯ ತೆಗೆದುಕೊಳ್ಳಲು ಯುವತಿಯರು ಮರೆಯಬಾರದು.KanCCh 118.2

    ಮದುವೆಯ ನಂತರ ದುಃಖ, ವಿಷಾದಕ್ಕೆ ಒಳಗಾಗದೆ, ಸಮಾಧಾನಕರ ಹಾಗೂ ಸಂತೋಷಕರ ದಾಂಪತ್ಯ ಜೀವನ ನಡೆಸಬೇಕು ಎಂದು ಬಯಸುವ ಯುವತಿಯು ತನ್ನ ಭಾವಿಪತಿಯು ತಾಯಿಯಂತ ವಾತ್ಸಲ್ಯವನ್ನು ತನ್ನಲ್ಲಿ ತೋರಿಸುವನೇ? ಪತಿಯಾಗಿ ತನ್ನ ಕರ್ತವ್ಯ ನಿಭಾಯಿಸುವನೇ? ತಮ್ಮ ಬಯಕೆಗಳನ್ನು ಪೂರೈಸಲು, ಸಂತೋಷಪಡಿಸಲು ಗಮನಹರಿಸುವನೇ? ಎಂಬುದರ ಬಗ್ಗೆ ಯುವತಿಯರಾದ ನೀವು ಬಹಳ ಎಚ್ಚರಿಕೆಯಿಂದ ತಿಳಿದುಕೊಂಡಿರಬೇಕು. ಭಾವಿಪತಿಯಾಗಿರುವವನು ತನ್ನ ತಾಯಿಯನ್ನು ಗೌರವಿಸದಿದ್ದಲ್ಲಿ, ತನ್ನ ಪತ್ನಿಗೆ ಗಮನ ನೀಡಿ, ದಯೆ, ಪ್ರೀತಿ ತೋರಿಸಿ ಗೌರವಿಸುವನೇ? ಎಂಬುದನ್ನು ನೀವು ಕೂಲಂಕುಶವಾಗಿ ಪರಿಶೀಲಿಸಬೇಕು. ಮದುವೆಯ ಹೊಸತನದ ರಸನಿಮಿಷಗಳು ಕಳೆದುಹೋದ ನಂತರವೂ, ನಿಮ್ಮನ್ನು ಮೊದಲಿನಂತೆಯೇ ಪ್ರೀತಿಸುವನೇ? ನೀವು ತಪ್ಪು ಮಾಡಿದಾಗ ತಾಳ್ಮೆ ತೋರಿಸುವನೇ? ಅಥವಾ ಕಟು ಮಾತುಗಳಿಂದ ಖಂಡಿಸಿ ಅಧಿಕಾರ ತೋರಿಸುವಂತ ದರ್ಪಿಷ್ಟನೂ, ಸರ್ವಾಧಿಕಾರಿ ಮನೋಭಾವ ಹೊಂದಿರುವವನೂ ಆಗಿದ್ದಾನೆಯೇ? ನಿಜವಾದ ಪ್ರೀತಿ ಅನೇಕ ತಪ್ಪುಗಳನ್ನು ಮುಚ್ಚುತ್ತದೆ (1 ಕೊರಿಂಥ 13ನೇ ಅಧ್ಯಾಯ), ಯುವತಿಯರು ನೇರ ನಡೆನುಡಿಯುಳ್ಳವರೂ, ಕೆಲಸದಲ್ಲಿ ಶ್ರದ್ಧೆಯುಳ್ಳವರೂ, ಪ್ರಾಮಾಣಿಕರೂ, ಪರಿಶುದ್ಧ ನಡತೆಯುಳ್ಳವರೂ ಆಗಿದ್ದು, ದೇವರಲ್ಲಿ ಪ್ರೀತಿ ಹಾಗೂ ಭಯಭಕ್ತಿಯುಳ್ಳವರೂ ಆಗಿರುವ ಯುವಕರನ್ನು ಜೀವನ ಸಂಗಾತಿಗಳನ್ನಾಗಿ ಆರಿಸಿಕೊಳ್ಳಬೇಕು.KanCCh 119.1

    ದೇವರಲ್ಲಿ ಭಯ, ಗೌರವವಿಲ್ಲದವರು, ಸೋಮಾರಿಗಳು ಮತ್ತು ಪರಿಶುದ್ಧ ವಿಷಯಗಳ ಬಗ್ಗೆ ಅಪಹಾಸ್ಯ ಮಾಡುವಂತವರನ್ನು ಯುವತಿಯರು ತಿರಸ್ಕರಿಸಬೇಕು. ಕೆಟ್ಟ ಮಾತುಗಳನ್ನು ಆಡುವವರು ಮತ್ತು ಕೇವಲ ಒಂದೇ ಗ್ಲಾಸು ಮದ್ಯಪಾನಕ್ಕೆ ಗುಲಾಮರಾಗಿರುವಂತವರನ್ನು ನಿರಾಕರಿಸಿ. ದೇವರ ಬಗ್ಗೆ ತನ್ನ ಜವಾಬ್ದಾರಿ ಏನೆಂದು ತಿಳಿದಿರುವಂತ ಗಂಡನನ್ನು ಬೇಡವೆಂದು ದೂರವಿಡಿ; ನಿನ್ನನ್ನು ಪರಿಶುದ್ಧಗೊಳಿಸುವ ಯಥಾರ್ಥ ಸತ್ಯವು ದೇವರಲ್ಲಿ ಭಯಭಕ್ತಿ, ಪ್ರೀತಿಯನ್ನಿಡದ ಮತ್ತು ನಿಜವಾದ ನೀತಿವಂತಿಕೆಯ ಸಿದ್ಧಾಂತಗಳ ಬಗ್ಗೆ ಏನೂ ತಿಳಿಯದಂತವರನ್ನು ನಿರಾಕರಿಸುವಂತ ನೈತಿಕ ಧೈರ್ಯವನ್ನು ನಿಮಗೆ ಕೊಡುವುದು. ಒಬ್ಬ ಸ್ನೇಹಿತನ ಅಜ್ಞಾನ, ಬಲಹೀನತೆಗಳನ್ನು ಸಹಿಸಿಕೊಳ್ಳಬಹುದೇ ಹೊರತು, ಅವನ ಕೆಟ್ಟ ಗುಣಗಳನ್ನು ಎಂದಿಗೂ ಸಹಿಸಬಾರದು.KanCCh 119.2