Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅನುಚಿತವಾದ ನಡವಳಿಕೆ

    ಯುವತಿಯರೊಂದಿಗೆ ಪ್ರೇಮ ಪ್ರೀತಿಯೆಂದು ಚೆಲ್ಲಾಟವಾಡಿ ಮೋಸಗೊಳಿಸುವುದು ದೇವರ ದೃಷ್ಟಿಯಲ್ಲಿ ದೊಡ್ಡ ಅಪರಾಧವಾಗಿದೆ. ಆದಾಗ್ಯೂ ಅನೇಕ ಯುವಕರು ತಮ್ಮ ಪ್ರೀತಿಯ ಬಲೆಯಲ್ಲಿ ಯುವತಿಯನ್ನು ಬೀಳಿಸಿ, ಚೆಲ್ಲಾಟವಾಡಿ, ಅನಂತರ ತಾವು ಹೇಳಿದ ಮಾತುಗಳನ್ನು ಮತ್ತು ಅವುಗಳಿಂದ ಯುವತಿಯರ ಮನಸ್ಸಿನ ಮೇಲೆ ಆಗುವ ಪರಿಣಾಮಗಳನ್ನು ಮರೆತು ಅವರನ್ನು ಮೋಸಗೊಳಿಸುತ್ತಾರೆ. ಇಂತವರು ಒಬ್ಬಳನ್ನು ಬಿಟ್ಟು ಮತ್ತೊಬ್ಬಳನ್ನು ಆಕರ್ಷಿಸಿ, ಅವಳಿಗೂ ಸಹ ಮೊದಲಿನವಳಿಗೆ ಹೇಳಿದಂತಹ ಆಕರ್ಷಕ ಮಾತುಗಳಿಂದಲೇ ಮರುಳುಗೊಳಿಸುತ್ತಾರೆ.KanCCh 126.2

    ಇಂತವರ ಸ್ವಭಾವವು ಮದುವೆಯಾದ ನಂತರವೂ ಮುಂದುವರಿಯುತ್ತದೆ. ವೈವಾಹಿಕ ಸಂಬಂಧವು ಯಾವಾಗಲೂ ಚಂಚಲ ಮನಸ್ಸುಳ್ಳವರನ್ನು ಅಚಲರಾಗುವಂತೆಯೂ, ಅಸ್ಥಿರ ಮನಸ್ಸುಳ್ಳವರನ್ನು ದೃಢವಾಗುವಂತೆಯೂ ಮಾಡಿ ಅವರನ್ನು ದಾಂಪತ್ಯಜೀವನದ ಸಿದ್ಧಾಂತಗಳಿಗೆ ಬದ್ಧರನ್ನಾಗಿ ಮಾಡುವುದಿಲ್ಲ. ನಿಷ್ಠೆಯವಿಷಯದಲ್ಲಿ ಅವರಿಗೆ ಆಸಕ್ತಿ ಇರುವುದಿಲ್ಲ ಮತ್ತು ಅಪವಿತ್ರ ಆಲೋಚನೆಗಳು ಅವರ ಅಪವಿತ್ರ ಕ್ರಿಯೆಗಳಲ್ಲಿ ಕಂಡುಬರುತ್ತವೆ. ಆದುದರಿಂದ ಯೌವನಸ್ಥರು ತಮ್ಮ ನಡುಕಟ್ಟಿಕೊಂಡು ಸಿದ್ಧಮನಸ್ಸುಳ್ಳವರಾಗಿ ಸೈತಾನನು ಮೋಸದಿಂದ ಅವರನ್ನು ನೀತಿಯ ಮಾರ್ಗದಿಂದ ಕದಲಿಸದಂತೆ ತಮ್ಮ ಗುಣನಡತೆಯನ್ನು ಕಾಪಾಡಿಕೊಳ್ಳುವುದು ಎಷ್ಟೋ ಅಗತ್ಯವಾಗಿದೆಯಲ್ಲವೇ?KanCCh 126.3

    ಒಬ್ಬ ಯುವಕನು ಯುವತಿಯ ತಂದೆ-ತಾಯಿಯರಿಗೆ ತಿಳಿಯದಂತೆ, ಅವಳ ಸ್ನೇಹದಲ್ಲಿ ಸಂತೋಷಪಡುತ್ತಿದ್ದಲ್ಲಿ, ಅಂತವನು ಆಕೆಗಾಗಲಿ ಅಥವಾ ಆಕೆಯ ತಂದೆ-ತಾಯಿಯರಿಗಾಗಲಿ ಉದಾತ್ತವಾದ ಕ್ರೈಸ್ತ ವಿಶ್ವಾಸಿಯಂತೆ ವರ್ತಿಸುವುದಿಲ್ಲ. ಅವರಿಗೆ ತಿಳಿಯದಂತೆ ಆಕೆಯೊಂದಿಗೆ ಅವನು ರಹಸ್ಯವಾಗಿ ಭೇಟಿ ಮಾಡಿ ಸಂಪರ್ಕ ಹೊಂದಿರುವುದರಿಂದ, ಆಕೆಯ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಬರುವಂತೆ ಮಾಡಬಹುದು. ಆದರೆ ಹೀಗೆ ಮಾಡುವುದರಿಂದ ಅವನು ದೇವರ ಪ್ರತಿಯೊಬ್ಬ ಮಕ್ಕಳು ಹೊಂದಿರುವಂತ ಉದಾತ್ತಸ್ವಭಾವ ಮತ್ತು ಪ್ರಾಮಾಣಿಕತೆಯನ್ನು ತೋರಿಸುವುದರಲ್ಲಿ ವಿಫಲನಾಗುತ್ತಾನೆ. ಅವರಿಬ್ಬರೂ ತಮ್ಮ ಬಯಕೆ ತೀರಿಸಿಕೊಳ್ಳಲು ಸತ್ಯವೇದದ ತತ್ವದ ಪ್ರಕಾರ ನೇರ ನಡೆನುಡಿ ಹೊಂದಿರುವುದಿಲ್ಲ. ಈ ಕಾರಣದಿಂದ ಅವರು ತಮ್ಮನ್ನು ಪ್ರೀತಿಸುವವರಿಗೆ ದ್ರೋಹ ಮಾಡುತ್ತಾರೆ. ಇಂತಹ ಹಿನ್ನೆಲೆಯಿಂದ ಮದುವೆಯಾದಲ್ಲಿ, ಅದು ದೇವರವಾಕ್ಯದ ಪ್ರಕಾರ ಇರುವುದಿಲ್ಲ. ತಂದೆ ತಾಯಿಯರನ್ನು ಸನ್ಮಾನಿಸಬೇಕೆಂಬ ದೇವರ ಆಜ್ಞೆಗೆ ಒಬ್ಬ ಹುಡುಗಿ ಅವಿಧೇಯತೆ ಹಾಗೂ ಅಗೌರವ ತೋರುವಂತೆ ಮಾಡುವ ವ್ಯಕ್ತಿಯು, ಅವಳನ್ನು ಮದುವೆಯಾದರೂ, ಅವನು ಮದುವೆಯ ವಾಗ್ದಾನಗಳಿಗೆ ಯಥಾರ್ಥವಾಗಿ ನಡೆದುಕೊಳ್ಳುವುದಿಲ್ಲ.KanCCh 127.1

    `ಕದಿಯಬಾರದು’ ಎಂಬ ಆಜ್ಞೆಯನ್ನು ದೇವರು ಸ್ವತಃ ತನ್ನ ಕೈಯಿಂದಲೇ ಎರಡು ಹಲಿಗೆಗಳ ಮೇಲೆ ಬರೆದನು. ಆದಾಗ್ಯೂ ರಹಸ್ಯವಾಗಿ ಯುವತಿಯ ಪ್ರೀತಿಯನ್ನು ಕದಿಯುವುದು ಮತ್ತು ಅದರಿಂದ ತಪ್ಪಿಸಿಕೊಳ್ಳುವುದು ಇನ್ನೂ ಎಷ್ಟೊಂದು ನಡೆಯುತ್ತಿದೆಯಲ್ಲವೇ! ಕದ್ದುಮುಚ್ಚಿ ಅವರು ಪರಸ್ಪರ ಭೇಟಿ ಮಾಡುವುದು, ಕೆಲವು ಕಾಲದ ನಂತರ ಯುವತಿಯ ಮೇಲಿನ ಅವನ ಪ್ರೀತಿಯು ತಣ್ಣಗಾಗಿ ಹೋಗುವುದು. ಈ ಮೂಲಕ ಅವನು ಆಕೆಯ ನಿಷ್ಕಳಂಕ ಪ್ರೀತಿಗೆ ತನ್ನನ್ನು ಅಯೋಗ್ಯನನ್ನಾಗಿ ಮಾಡಿಕೊಳ್ಳುತ್ತಾನೆ. ಸತ್ಯವೇದವು ಎಲ್ಲಾ ವಿಧವಾದ ಅಪ್ರಾಮಾಣಿಕತೆಯನ್ನು ಬಲವಾಗಿ ಖಂಡಿಸುತ್ತದೆ.KanCCh 127.2

    ಪ್ರಾಮಾಣಿಕರಾದ ಕ್ರೈಸ್ತರೂ ಸಹ ಇಂತಹ ಸಂದರ್ಭದಲ್ಲಿ ದೊಡ್ಡ ತಪ್ಪು ಮಾಡುತ್ತಾರೆ. ಅವರು ಮಾನವ ಭಾವನೆಗಳು ಹಾಗೂ ಪ್ರಚೋದನೆಗಳಿಗೆ ಎಷ್ಟೊಂದು ಮರುಳಾಗುತ್ತಾರೆಂದರೆ, ಸತ್ಯವೇದವನ್ನು ಓದಿ ದೇವರೊಂದಿಗೆ ಆತ್ಮೀಯ ಸಂಬಂಧ ಹೊಂದುವುದಕ್ಕೆ ಅವರಿಗೆ ಮನಸ್ಸಿರುವುದಿಲ್ಲ. ಸ್ತ್ರೀಗೆ ಇರಬೇಕಾದ ಸಹಜವಾದ ಲಜ್ಜೆ. ಮಾನ ಮರ್ಯಾದೆಯ ಮಿತಿಯನ್ನು ಮೀರಿದಾಗ, ಲೈಂಗಿಕ ಸಂಬಂಧವು ಅವರಿಗೆ ಘೋರ ಪಾಪವೆಂದು ಅನಿಸುವುದಿಲ್ಲ. ಅಯ್ಯೋ! ಇಂದು ಲೋಕದಲ್ಲಿ ಸ್ತ್ರೀಯರ ಸೌಂದರ್ಯ, ವ್ಯಾಮೋಹವು ಎಂತಹ ದುಷ್ಟತನಕ್ಕೆ ಕಾರಣವಾಗಿದೆಯಲ್ಲವೇ! ಸವಿ ಮಾತನಾಡುವ ಪರಸ್ತ್ರೀಯರ ಆಕರ್ಷಣೆಯ ಬಲೆಯಿಂದ ಸಾವಿರಾರು ಜನರು ಸೆರೆಮನೆಯಲ್ಲಿ ಕೊಳೆಯುತ್ತಿದ್ದಾರೆ. ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಹಾಗೂ ಅನೇಕರು ಇತರರನ್ನು ಕೊಲೆ ಮಾಡಿ ಅವರ ಆಯುಷ್ಯವನ್ನು ಕಡಿಮೆ ಮಾಡುತ್ತಿದ್ದಾರೆ. “ಅವಳ ಮನೆಯುಪಾತಾಳದ ದಾರಿ, ಇದು ಮೃತ್ಯುವಿನ ಅಂತಃಪುರಕ್ಕೆ ಇಳಿದು ಹೋಗುತ್ತದೆ” ಎಂದು ಜ್ಞಾನಿಯಾದ ಸೊಲೊಮೋನನು ಪವಿತ್ರಾತ್ಮ ಪ್ರೇರಿತವಾಗಿ ಹೇಳಿರುವುದು ಎಷ್ಟೊಂದು ಸತ್ಯವಲ್ಲವೇ? (ಜ್ಞಾನೋಕ್ತಿ 7:27). KanCCh 127.3

    ಅಪಾಯಕರವಾದ, ನಿಷೇಧಿಸಲ್ಪಟ್ಟ ಸ್ಥಳಕ್ಕೆ ಜನರು ಹೋಗುವುದನ್ನು ತಡೆಯಲು ಜೀವನಮಾರ್ಗದ ಎಲ್ಲಾ ಕಡೆಯಲ್ಲಿಯೂ ಎಚ್ಚರಿಕೆಯ ದಾರಿದೀಪ ಇಡಲ್ಪಟ್ಟಿದೆ. ಆದಾಗ್ಯೂ ಜನರು ತಮ್ಮ ವಿವೇಚನಾ ಶಕ್ತಿಗೆ ವಿರುದ್ಧವಾಗಿ, ದೇವರಾಜ್ಞೆಗಳನ್ನು ಕಡೆಗಣಿಸಿ ಮರಣ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. KanCCh 128.1

    ಶಾರೀರಿಕ ಆರೋಗ್ಯ, ಕ್ರಿಯಾಶೀಲ ಬೌದ್ಧಿಕತೆ ಮತ್ತು ಸ್ವಸ್ಥ ನೈತಿಕತೆ ಉಳಿಸಿಕೊಳ್ಳಬೇಕೆಂದು ಬಯಸುವ ಯೌವನಸ್ಥರು “ಯೌವನದ ಇಚ್ಛೆಗಳಿಗೆ ದೂರವಾಗಿರಬೇಕು” (2 ತಿಮೊಥೆಯ 2:22). ಲೋಕದಲ್ಲಿ ದುಷ್ಟತನವನ್ನು ತಡೆಯಬೇಕೆಂದು ಉತ್ಸಾಹದಿಂದ ದೃಢನಿರ್ಧಾರ ಮಾಡುವವರನ್ನು ಕೆಟ್ಟವರು ದ್ವೇಷಿಸುತ್ತಾರೆ ಮತ್ತು ಸುಳ್ಳು ಅಪವಾದ ಹೊರಿಸಿ ಹೆಸರು. ಕೆಡಿಸುತ್ತಾರೆ. ಆದರೆ ಅವರು ದೇವರಿಂದ ಗೌರವಿಸಲ್ಪಟ್ಟು, ಆತನ ಬರೋಣದಲ್ಲಿ ತಕ್ಕ ಪ್ರತಿಫಲ ಹೊಂದುವರು.KanCCh 128.2

    *****