Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-19 — ಮದುವೆ

    ದೇವರು ಪುರುಷನಿಂದ ಸ್ತ್ರೀಯನ್ನು ಉಂಟುಮಾಡಿದ್ದಾನೆ. ಆಕೆಯು ಅವನಿಗೆ ಸರಿ ಬೀಳುವ ಸಂಗಾತಿಯು, ಸುಖದುಃಖಗಳಲ್ಲಿ ಪಾಲ್ಗೊಳ್ಳುವ ಒಡನಾಡಿಯು ಹಾಗೂ ಅವರೊಂದಿಗಿದ್ದು ಅವನನ್ನು ಸಂತೋಷಗೊಳಿಸಿ ಉತ್ತೇಜಿಸುವವಳಾಗಿರಬೇಕಿದೆ. ಪುರುಷನು ಸ್ತ್ರೀಗೆ ಬಲವಾದ ಸಹಾಯಕನಾಗಿರಬೇಕು. ಪವಿತ್ರ ಉದ್ದೇಶದಿಂದ ಮದುವೆಯಾಗುವ ಎಲ್ಲರೂ ಮೇಲೆ ತಿಳಿಸಿರುವ ಉದ್ದೇಶಗಳನ್ನು ಪರಸ್ಪರ ಪೂರೈಸಬೇಕು. ಗಂಡನು ಹೆಂಡತಿಯ ಪರಿಶುದ್ಧ ಪ್ರೀತಿ ಯನ್ನು ಗಳಿಸಬೇಕು ಹಾಗೂ ಆಕೆಯು ತನ್ನ ಗಂಡನ ಸ್ವಭಾವವನ್ನು ಪರಿಪೂರ್ಣತೆಗೆ ತರಲು ಸಹಕರಿಸಬೇಕು.KanCCh 136.1

    ಕ್ರಿಸ್ತನು “ಮದುವೆ” ಎಂಬ ಈ ಪವಿತ್ರ ಸಂಸ್ಕಾರವನ್ನು ನಾಶಗೊಳಿಸಲು ಬರಲಿಲ್ಲ, ಬದಲಾಗಿ ಏದೆನ್‌ತೋಟದಲ್ಲಿದ್ದ ಮೊದಲಿನ ಪ್ರಾವಿತ್ರ್ಯತೆ ಹಾಗೂ ಉದಾತ್ತತೆಯನ್ನು ಪುನಃ ಸ್ಥಾಪಿಸಲು ಬಂದನು. ದೇವರ ನೈತಿಕ ಸ್ವರೂಪವನ್ನು ಮನುಷ್ಯನಲ್ಲಿ ಪುನರ್ ಸ್ಥಾಪಿಸುವುದು ಆತನ ಉದ್ದೇಶವಾಗಿತ್ತು. ಕ್ರಿಸ್ತನು ಮದುವೆಯ ಪವಿತ್ರ ಸಂಬಂಧಕ್ಕೆ ತನ್ನ ಒಪ್ಪಿಗೆ ಕೊಡುವುದರ ಮೂಲಕ ತನ್ನ ಸೇವೆ ಆರಂಭಿಸಿದನು.KanCCh 136.2

    ಆದಾಮನಿಗೆ ಏದೆನ್‌ತೋಟದಲ್ಲಿ ಅವಳನ್ನು ಸಂಗಾತಿಯನ್ನಾಗಿ ಕೊಟ್ಟ ಕ್ರಿಸ್ತನು ಕಾನಾ ಊರಿನಲ್ಲಿ ನಡೆದ ಮದುವೆ ಉತ್ಸವದಲ್ಲಿ ತನ್ನ ಮೊದಲನೇ ಅದ್ಭುತ ಕಾರ್ಯಮಾಡಿದನು. ಸ್ನೇಹಿತರು, ಬಂಧುಬಾಂಧವರು ಒಟ್ಟಾಗಿ ಸಂಭ್ರಮ ಪಡುವಂತ ವಿವಾಹ ಸಮಾರಂಭದಲ್ಲಿ ಕ್ರಿಸ್ತನು ಸಾರ್ವಜನಿಕವಾಗಿ ತನ್ನ ಸುವಾರ್ತಾಸೇವೆ ಆರಂಭಿಸಿದನು. ಈ ವಿಧವಾಗಿ ಆತನು ಸ್ವತಃ ತಾನೇ ಸ್ಥಾಪಿಸಿದ ಮದುವೆ ಎಂಬ ಸಂಸ್ಕಾರವನ್ನು ಗೌರವಿಸಿ ಸಮ್ಮತಿ ನೀಡಿದನು. ಪುರುಷರು ಹಾಗೂ ಸ್ತ್ರೀಯರು ಪವಿತ್ರವಾದ ವಿವಾಹ ಸಂಬಂಧದಲ್ಲಿ ಒಂದಾಗಿ ಮಕ್ಕಳಿಗೆ ಜನ್ಮ ಕೊಟ್ಟು ಕುಟುಂಬವನ್ನು ಸಲಹಬೇಕು. ಈ ಕುಟುಂಬದ ಸದಸ್ಯರು ಗೌರವಾನ್ವಿತರಾಗಿ ಪರಲೋಕದ ಕುಟುಂಬದ ಸದಸ್ಯರೆಂದು ಪರಿಗಣಿಸಲ್ಪಡಬೇಕು.KanCCh 136.3