Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನವವಿವಾಹಿತರಿಗೆ ಸಲಹೆಗಳು

    ನನ್ನ ಪ್ರೀತಿಯ ಸಹೋದರಸಹೋದರಿಯರಾದ ನವದಂಪತಿಗಳೇ, ನೀವು ಒಂದು ದೀರ್ಘಕಾಲದ ಒಪ್ಪಂದದೊಡನೆ ಒಟ್ಟಾಗಿ ಸೇರಿದ್ದೀರಿ. ವೈವಾಹಿಕ ಜೀವನದ ನಿಮ್ಮ ಶಿಕ್ಷಣವು ಇದೀಗ ಆರಂಭವಾಗಿದೆ. ಈ ಜೀವನದ ಮೊದಲನೇ ವರ್ಷವು ಅನುಭವದ ವರ್ಷವಾಗಿದೆ. ಒಂದು ಮಗುವು ಶಾಲೆಯಲ್ಲಿ ಪಾಠಗಳನ್ನು ಕಲಿಯುವಂತೆ, ಗಂಡ ಹೆಂಡತಿಯರು ಪ್ರತಿಯೊಬ್ಬರಲ್ಲಿರುವ ವಿವಿಧ ರೀತಿಯ ವಿಶೇಷವಾದ ಗುಣಸ್ವಭಾವಗಳನ್ನು ಪರಸ್ಪರ ಅರಿತುಕೊಳ್ಳುವ ವರ್ಷವು ಇದಾಗಿದೆ. ವೈವಾಹಿಕ ಜೀವನದ ಈ ಮೊದಲನೇ ವರ್ಷದಲ್ಲಿ ನಿಮ್ಮ ಭವಿಷ್ಯದ ಸಂತೋಷವನ್ನು ಹಾಳು ಮಾಡುವ ಯಾವ ಘಟನೆಗಳು ನಡೆಯಬಾರದು.KanCCh 137.3

    ಮದುವೆಯ ಸಂಬಂಧವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದು ಜೀವಮಾನವೆಲ್ಲಾ ನಡೆಯುವ ಕಾರ್ಯವಾಗಿದೆ. ನವವಿವಾಹಿತರು ಈ ಜೀವನದಲ್ಲಿ ಎಂದೆಂದಿಗೂ ಕಲಿಯಲಾಗದಂತ ಒಂದು ಶಾಲೆಗೆ ಪ್ರವೇಶ ಪಡೆಯುತ್ತೀರಿ. ಮದುಮಗನೇ, ನಿನ್ನ ಹೆಂಡತಿಯ ಸಮಯ, ಮನೋಬಲ ಮತ್ತು ಸಂತೋಷವು ಈಗ ನಿನ್ನ ಸಮಯ, ಮನೋಬಲ, ಸಂತೋಷದೊಂದಿಗೆ ಬಂಧಿಸಲ್ಪಟ್ಟಿದೆ. ಆಕೆಯ ಮೇಲಿನ ನಿನ್ನ ಪ್ರಭಾವವು ಜೀವನ ಪರ್ಯಂತ ಘಮಘಮಿಸುವ ಸುಗಂಧದಂತಿರಬಹುದು ಅಥವಾ ಮರಣದ ಪರ್ಯಂತ ಮರಣದ ಅನುಭವವಾಗಿರಬಹುದು. ಆದುದರಿಂದ ಸಹೋದರನೇ, ನಿನ್ನ ಪತ್ನಿಯ ಜೀವನವನ್ನು ಹಾಳು ಮಾಡಬಾರದು ಎಂದು ಶ್ರೀಮತಿ ವೈಟಮ್ಮನವರು ಮದುಮಗನಿಗೆ ಹೇಳುತ್ತಾರೆ.KanCCh 138.1

    ನವವಿವಾಹಿತಳಾದ ಮದುಮಗಳೇ, ಈಗ ನೀನು ವೈವಾಹಿಕ ಜೀವನದ ಜವಾಬ್ದಾರಿಗಳಿಗೆ ಸಂಬಂಧಪಟ್ಟಂತೆ, ಪ್ರಾಯೋಗಿಕವಾಗಿ ಮೊದಲ ಪಾಠಗಳನ್ನು ಕಲಿಯಲಿರುವಿ. ಈ ಪಾಠಗಳನ್ನು ದಿನದಿನವೂ ಪ್ರಾಮಾಣಿಕತೆಯಿಂದ ಖಂಡಿತವಾಗಿ ಕಲಿಯಬೇಕು. ಅತೃಪ್ತಿ, ಅಸಮಾಧಾನ ಅಥವಾ ಸಿಡುಕುವುದಕ್ಕೆ ಅವಕಾಶ ಕೊಡಬೇಡ. ಸೋಮಾರಿತನದ ಸುಖಜೀವನವನ್ನು ಬಯಸಬೇಡ. ಎಂದಿಗೂ ಸ್ವಾರ್ಥಿಯಾಗದಂತೆ ಎಚ್ಚರಿಕೆಯಿಂದಿರಬೇಕೆಂದು ಮದುಮಗಳಿಗೆ ಶ್ರೀಮತಿ ವೈಟಮ್ಮನವರು ಸಲಹೆ ನೀಡುತ್ತಾರೆ.KanCCh 138.2

    ನವದಂಪತಿಗಳೇ, ವೈವಾಹಿಕ ಜೀವನದಲ್ಲಿ ನಿಮ್ಮ ಮನೋಭಾವ, ಒಲವು. ಸೌಹಾರ್ದತೆಗಳು ಪರಸ್ಪರ ಸಂತೋಷಕ್ಕೆ ಪೂರಕವಾಗಿರಬೇಕು. ನೀವು ಇತರರ ಸಂತೋಷಕ್ಕಾಗಿ ಕಾರ್ಯ ಮಾಡಬೇಕು. ಇದು ನವದಂಪತಿಗಳಿಗೆ ದೇವರ ಆಶಯವಾಗಿದೆ. ನೀವು ಒಂದೇ ಶರೀರವಾಗಿ ಜೊತೆಯಾದರೂ, ನಿಮ್ಮ ವ್ಯಕ್ತಿತ್ವಗಳನ್ನು ಇತರರಲ್ಲಿ ಕಳೆದುಕೊಳ್ಳಬಾರದು. ದೇವರು ನಿಮ್ಮ ವ್ಯಕ್ತಿತ್ವದ ಒಡೆಯನಾಗಿದ್ದಾನೆ. ಯಾವುದು ಸರಿ? ಯಾವುದು ತಪ್ಪು? ಎಂಬುದನ್ನು ಆತನಲ್ಲಿ ನೀವು ಕೇಳಬೇಕು. ದೇವರು ನನ್ನನ್ನು ಸೃಷ್ಟಿಸಿದ ಉದ್ದೇಶವನ್ನು ನಾನು ಉತ್ತಮವಾಗಿ ಹೇಗೆ ನೆರವೇರಿಸಬಹುದು? “ನೀವು ನಿಮ್ಮ ಸ್ವಂತ ಸ್ವತ್ತಲ್ಲ, ನೀವು ಕ್ರಯಕ್ಕೆ ಕೊಲ್ಲಲ್ಪಟ್ಟವರು. ಆದಕಾರಣ ನಿಮ್ಮ ದೇಹದಲ್ಲಿ ದೇವರ ಪ್ರಭಾವವನ್ನು ಪ್ರಕಾಶ ಪಡಿಸಿರಿ” (1 ಕೊರಿಂಥ 6:20). ನಿಮಗಿಂತಲೂ ಹೆಚ್ಚಾಗಿ ದೇವರನ್ನು ಪ್ರೀತಿಸುವುದಕ್ಕೆ ನೀವು ಆದ್ಯತೆ ನೀಡಬೇಕು. ನಿಮಗಾಗಿ ನನ್ನ ಪ್ರಾಣವನ್ನು ಕೊಟ್ಟಾತನಿಗೆ ನಿಮ್ಮೆಲ್ಲಾ ಪ್ರೀತಿ, ವಾತ್ಸಲ್ಯವು ಹರಿಯಬೇಕು. ನೀವು ದೇವರಿಗಾಗಿ ಜೀವಿಸುವಾಗ, ನಿಮ್ಮ ಹೃದಯವು ದೇವರಿಗೆ ಅತ್ಯುತ್ತಮವೂ, ಉನ್ನತವೂ ಆದ ವಾತ್ಸಲ್ಯ, ಪ್ರೀತಿಯನ್ನು ತೋರಿಸುತ್ತದೆ. ನಿಮ್ಮ ಉದಾತ್ತವಾದ ಪ್ರೀತಿಯು ನಿಮಗಾಗಿ ತನ್ನ ಪ್ರಾಣಕೊಟ್ಟ ಕ್ರಿಸ್ತನಿಗೆ ಮೀಸಲಾಗಿದೆಯೇ? ಹಾಗಿದ್ದಲ್ಲಿ ನವದಂಪತಿಗಳಾದ ನಿಮ್ಮಿಬ್ಬರ ಪ್ರೀತಿಯು ಪರಲೋಕ ವಿಧಾನದಲ್ಲಿ ಇರುತ್ತದೆ.KanCCh 138.3

    ನಿಮ್ಮ ಪ್ರೀತಿ, ವಾತ್ಸಲ್ಯ, ಸ್ನೇಹವು ಸ್ಪಟಿಕದಂತೆ ಸ್ಪಷ್ಟವಾಗಿ ಮತ್ತು ಪರಿಶುದ್ಧತೆಯಲ್ಲಿ ಮೋಹಕವಾಗಿದ್ದರೂ, ಇದು ಪರೀಕ್ಷೆಗೆ ಹಾಗೂ ಶೋಧನೆಗೆ ಒಳಪಟ್ಟಿಲ್ಲದಿರುವುದರಿಂದ ಮೇಲು ತೋರಿಕೆಯದ್ದಾಗಿರಬಹುದು. ಎಲ್ಲದರಲ್ಲಿಯೂ ಕ್ರಿಸ್ತನು ಮೊದಲನೆಯವನೂ, ಕಡೆಯವನೂ ಹಾಗೂ ಶ್ರೇಷ್ಠನನ್ನಾಗಿಯೂ ಮಾಡಿಕೊಳ್ಳಿ. ಯಾವಾಗ ಆತನನ್ನು ದೃಷ್ಟಿಸಿ, ನಿಮ್ಮ ಪ್ರೀತಿಯು ಪರೀಕ್ಷೆಗೂ, ಶೋಧನೆಗೂ ಒಳಗಾದಾಗ, ಅದು ಹೆಚ್ಚು ಗಾಢವೂ ಬಲಿಷ್ಠವಾಗಿಯೂ ಆಗುವುದು. ದೇವರ ಮೇಲೆ ನಿಮ್ಮ ಪ್ರೀತಿ ಹೆಚ್ಚಾದಾಗ, ನವದಂಪತಿಗಳಾದ ನಿಮ್ಮ ಪ್ರೀತಿ ಹೆಚ್ಚು ಗಾಢವಾಗಿಯೂ, ಬಲಿಷ್ಠವಾಗಿಯೂ ಆಗುತ್ತದೆ. “ನಾವೆಲ್ಲರೂ ಮುಸುಕು ತೆಗೆದಿರುವ ಮುಖದಿಂದ ಕರ್ತನ ಪ್ರಭಾವವನ್ನು ದರ್ಪಣದಲ್ಲಿ ಕಾಣಿಸುತ್ತದೋ ಎಂಬಂತೆ ದೃಷ್ಟಿಸುವವರಾಗಿದ್ದು, ಪ್ರಭಾವದಿಂದ ಅಧಿಕ ಪ್ರಭಾವಕ್ಕೆ ಹೋಗುತ್ತಾ, ಆ ಪ್ರಭಾವದ ಸಾರೂಪ್ಯವುಳ್ಳವರೇ ಆಗುತ್ತೇವೆ” (2 ಕೊರಿಂಥ 3:18).KanCCh 139.1

    ಮದುವೆಗೆ ಮೊದಲು ಮಾಡದಿದ್ದಂತ ಕೆಲಸಗಳನ್ನು ನವವಿವಾಹಿತರು ಈಗ ಮಾಡಬೇಕು. “.... ಕನಿಕರ, ದಯೆ, ದೀನ ಭಾವ, ಸಾತ್ವಿಕತ್ವ, ದೀರ್ಘ ಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ” (ಕೊಲೊಸ್ಸೆ 3:12). “ಕ್ರಿಸ್ತನ ನಿಮ್ಮನ್ನು ಪ್ರೀತಿಸಿ... ಸಮರ್ಪಿಸಿಕೊಂಡ ಪ್ರಕಾರ ನೀವು ಪ್ರೀತಿಯಲ್ಲಿ ನಡೆದುಕೊಳ್ಳಿರಿ” (ಎಫೆಸ 5:2). ಕ್ರಿಸ್ತನು ಪೌಲನ ಮೂಲಕ ಕೊಟ್ಟಂತ ಕೆಳಗೆ ತಿಳಿಸಿರುವ ಸಲಹೆಗಳನ್ನು ಎಚ್ಚರಿಕೆಯಿಂದ ಗಮನಿಸಿ ‘ಸ್ತ್ರೀಯರೇ. ನೀವು ಕರ್ತನಿಗೆ ಹೇಗೋ ಹಾಗೆಯೇ, ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ, ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ, ಗಂಡನು ಹೆಂಡತಿಗೆ ತಲೆಯಾಗಿದ್ದಾನೆ... ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೇ, ಹಾಗೆಯೇ ಸ್ತ್ರೀಯರು ತಮ್ಮ ತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು“. KanCCh 139.2

    “ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ, ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪ್ರತಿಷ್ಠೆಪಡಿಸುವುದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು” (ಎಫೆಸ 5:22-26).KanCCh 139.3

    ಮದುವೆಯು ಗಂಡು ಹೆಣ್ಣು ಜೀವನಪರ್ಯಂತ ಒಂದಾಗಿ ಇರುವಂತ ಸಂಬಂಧವಾಗಿದೆ ಹಾಗೂ ಕ್ರಿಸ್ತನು ಮತ್ತು ಆತನ ಸಭೆಯ ನಡುವಿರುವ ಸಂಬಂಧದ ಸಂಕೇತವಾಗಿದೆ. ಕ್ರಿಸ್ತನು ಸಭೆಗೆ ತೋರಿಸುವಂತ ಪ್ರೀತಿಯನ್ನೇ ಗಂಡ ಹೆಂಡತಿಯರು ಒಬ್ಬರಿಗೊಬ್ಬರು ತೋರಿಸಬೇಕು. ಗಂಡನಾಗಲಿ ಅಥವಾ ಹೆಂಡತಿಯಾಗಲಿ ಇನ್ನೊಬ್ಬರ ಮೇಲೆ ಆಳ್ವಿಕೆ ಮಾಡಬಾರದು. ಈ ವಿಷಯದಲ್ಲಿ ಮಾರ್ಗದರ್ಶನ ನೀಡುವಂತ ತತ್ವಗಳನ್ನು ದೇವರು ಕೊಟ್ಟಿದ್ದಾನೆ. ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ಗಂಡನು ತನ್ನ ಹೆಂಡತಿಯನ್ನು ಪ್ರೀತಿಸಬೇಕು. ಹೆಂಡತಿಯು ತನ್ನ ಗಂಡನನ್ನು ಗೌರವಿಸಿ ಪ್ರೀತಿಸಬೇಕು. ಇಬ್ಬರೂ ಸಹ ಕನಿಕರ ಕರುಣೆ, ದಯೆ ಮುಂತಾದ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು. ಹಾಗೂ ಒಬ್ಬರನ್ನು ಮತ್ತೊಬ್ಬರು ದುಃಖಪಡಿಸಬಾರದು ಅಥವಾ ಮನನೋಯಿಸುವಂತೆ ವರ್ತಿಸಬಾರದು.KanCCh 139.4

    ಸಹೋದರ, ಸಹೋದರಿಯರೇ ನಿಮ್ಮಿಬ್ಬರಲ್ಲೂ ಬಲವಾದ ಇಚ್ಛಾಶಕ್ತಿಯಿದೆ. ಈ ಶಕ್ತಿಯನ್ನು ನಿಮಗಾಗಲಿ ಅಥವಾ ನಿಮ್ಮ ನೆರೆಹೊರೆಯವರಿಗೆ ಒಂದು ದೊಡ್ಡ ಆಶೀರ್ವಾದ ಅಥವಾ ಶಾಪವಾಗಿ ಮಾಡಿಕೊಳ್ಳಲು ಉಪಯೋಗಿಸಬಹುದು. ನೀವು ಹೇಳಿದಂತೆಯೇ ಮಾಡಬೇಕೆಂದು ನಿಮ್ಮ ಸಂಗಾತಿಯನ್ನು ಒತ್ತಾಯಿಸಬಾರದು. ನೀವು ಹೇಳಿದಂತೆಯೇ ಕೇಳಬೇಕೆಂದಲ್ಲಿ, ಪರಸ್ಪರ ಪ್ರೀತಿಯನ್ನು ಉಳಿಸಿಕೊಳ್ಳಲಾಗದು. ತನ್ನಿಷ್ಟದಂತೆಯೇ ಎಲ್ಲವೂ ನಡೆಯಬೇಕೆಂಬ ಹಠಮಾರಿತನವು ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿಯನ್ನು ಹಾಳು ಮಾಡುತ್ತದೆ. ನಿಮ್ಮ ವೈವಾಹಿಕ ಜೀವನವು ಕಿತ್ತಾಟ, ವಿವಾದಗಳಿಂದ ಕೂಡಿರಬಾರದು. ಈ ರೀತಿಯಿದ್ದಲ್ಲಿ ಗಂಡ ಹೆಂಡತಿ ಇಬ್ಬರೂ ಸಂತೋಷವಾಗಿರಲಾರರು. ನಿಮ್ಮ ಸ್ವಂತ ಆಪೇಕ್ಷೆಯನ್ನು ಬಿಟ್ಟು ನಡೆನುಡಿಯಲ್ಲಿ ಕರುಣೆ ಹಾಗೂ ಸೌಮ್ಯ ಸ್ವಭಾವವನ್ನು ತೋರಿಸಿ. ನಿಮ್ಮ ಮಾತುಗಳು ಒಳ್ಳೆಯದಕ್ಕಾಗಲಿ ಅಥವಾ ಕೆಟ್ಟದ್ದಕ್ಕಾಗಲಿ ಬಲವಾದ ಪರಿಣಾಮ ಬೀರುವುದರಿಂದ ಎಚ್ಚರಿಕೆಯಿಂದ ಮಾತಾಡಬೇಕು. ಚುಚ್ಚು ಮಾತುಗಳನ್ನು ಆಡಬಾರದು. ನಿಮ್ಮ ವೈವಾಹಿಕ ಜೀವನದಲ್ಲಿ ಕ್ರಿಸ್ತನ ಸ್ವರೂಪಕ್ಕೆ ಹೋಲಿಕೆಯಾದಂತ ಸುಗಂಧವಿರಲಿ. ಪುರುಷರು ಮದುವೆಯಂತ ನಿಕಟ ಸಂಬಂಧಕ್ಕೆ ಕಾಲಿಡುವ ಮುನ್ನ ತಮ್ಮನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದನ್ನು ಮತ್ತು ಇತರರೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ಕಲಿತುಕೊಳ್ಳಬೇಕು.KanCCh 140.1

    ಪುರುಷರೇ, ನೀವು ಕರುಣೆ, ತಾಳ್ಮೆ ಹಾಗೂ ದೀರ್ಘ ಶಾಂತಿ ಉಳ್ಳವರೂ ಆಗಿರಿ. ನಿಮ್ಮ ಪತ್ನಿಯ ನಿಮ್ಮನ್ನು ಆಕೆಯ ಮೇಲೆ ಆಳ್ವಿಕೆ ಮಾಡುವುದಕ್ಕಲ್ಲ. ಬದಲಾಗಿ ನೀವು ಆಕೆಗೆ ಸಹಾಯಕನಾಗಿರಬೇಕೆಂಬ ಉದ್ದೇಶದಿಂದ ಒಪ್ಪಿಕೊಂಡರೆಂಬುದು ನಿಮಗೆ ನೆನಪಿನಲ್ಲಿರಲಿ. ಆಕೆಯ ಮೇಲೆ ಎಂದಿಗೂ ದಬ್ಬಾಳಿಕೆ ಮಾಡಬಾರದು. ನಿಮ್ಮ ಪತ್ನಿಯು ನೀವು ಹೇಳಿದಂತೆಯೇ ಕೇಳಬೇಕೆಂದು ನಿಮ್ಮ ಬಲವಾದ ಇಚ್ಛಾಶಕ್ತಿಯ ಮೂಲಕ ಆಕೆಯನ್ನು ಒತ್ತಾಯಿಸಬೇಡಿ. ಅವಳಿಗೂ ಸಹ ತನ್ನದೇ ಆದ ಇಚ್ಛೆಯಿದ್ದು, ನೀವು ನಿಮ್ಮ ಆಪೇಕ್ಷೆಯನ್ನು ನೆರವೇರಿಸಿಕೊಳ್ಳುವಂತೆ, ಆಕೆಯೂ ಸಹ ತನ್ನದೇ ಆದ ಮಾರ್ಗದಲ್ಲಿ ನಡೆಯಬೇಕೆಂದು ಬಯಸುತ್ತಾಳೆಂದು ನೆನಪಿಡಿ, ಪುರುಷರೇ, ನಿಮ್ಮ ಹೆಚ್ಚಿನ ಅನುಭವದಿಂದ ನಿಮಗೆ ಹೆಚ್ಚಿನ ಅನುಕೂಲಗಳಿವೆ. ಆದುದರಿಂದ ಸೂಕ್ಷ್ಮವಾಗಿ ಆಲೋಚಿಸುವವರೂ, ನಮ್ರತೆಯುಳ್ಳವರೂ ಆಗಿರಿ. ‘ಮೇಲಣಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂತದ್ದು, ಕರುಣೆ ಮುಂತಾದ ಒಳ್ಳೆ ಫಲಗಳಿಂದ ತುಂಬಿರುವಂತದ್ದೂ ಆಗಿದೆ (ಯಾಕೋಬನು 3:17).KanCCh 140.2

    ಸಹೋದರ, ಸಹೋದರಿಯರೆ, ದೇವರು ಪ್ರೀತಿ ಸ್ವರೂಪಿ ಹಾಗೂ ಮದುವೆಯಲ್ಲಿ ನೀವು ಮಾಡಿದ ಪ್ರತಿಜ್ಞೆ ಯಂತೆ, ಆತನ ಕೃಪೆಯಿಂದ ಮಾತ್ರ ನೀವು ಒಬ್ಬರನ್ನೊಬ್ಬರು ಸಂತೋಷಗೊಳಿಸಲು ಸಾದ್ಯ. ವಿಮೋಚಕನ ಬಲದಿಂದ ಮತ್ತು ಜ್ಞಾನ, ವಿವೇಕದಿಂದ ತೃಪ್ತಿಕರವಿಲ್ಲದ ಜೀವನವನ್ನು ನೀವು ದೇವರಲ್ಲಿ ಸರಿಪಡಿಸಿಕೊಳ್ಳಬಹುದು. ಕ್ರಿಸ್ತನಿಗೆ ಅಸಾಧ್ಯವಾದದ್ದು ಯಾವುದಾದರೂ ಇದೆಯೇ? ಆತನು ನೀತಿ, ಜ್ಞಾನ ಹಾಗೂ ಪ್ರೀತಿಯಲ್ಲಿ ಪರಿಪೂರ್ಣನಾಗಿದ್ದಾನೆ. ನಿಮ್ಮ ಸಂಗಾತಿಗೆ ಮಾತ್ರ ನಿಮ್ಮೆಲ್ಲಾ ಪ್ರೀತಿಯನ್ನು ತೋರಿಸುವುದರಲ್ಲಿ ಮಾತ್ರ ತೃಪ್ತಿ ಹೊಂದಬಾರದು. ನಿಮ್ಮ ಸುತ್ತಲಿರುವವರನ್ನೂ ಸಂತೋಷಪಡಿಸುವಂತೆ ಎಲ್ಲಾ ಅವಕಾಶಗಳನ್ನು ಉಪಯೋಗಿಸಿಕೊಂಡು ಅವರಿಗೂ ಸಹ ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಿ, ಕರುಣೆಯ ಮಾತು, ಅನುಕಂಪದ ನೋಟ, ಮೆಚ್ಚುಗೆ ವ್ಯಕ್ತಪಡಿಸುವುದರ ಮೂಲಕ ಒಂಟಿಗರಾಗಿ ಅನೇಕ ಸಮಸ್ಯೆ ಎದುರಿಸುತ್ತಿರುವವರಿಗೆ ಬಿಸಿಲಿನಿಂದ ಬಳಲಿದವರಿಗೆ ಇದರಿಂದ ಒಂದು ಲೋಟ ತಣ್ಣೀರುಕೊಟ್ಟಂತಾಗುವುದು. ಉತ್ತೇಜನಗೊಳಿಸುವ ಸಂತೋಷದ ಮಾತುಗಳು, ಕರುಣೆಯಕಾರ್ಯ, ಕಷ್ಟದುಃಖದಿಂದ ಭಾರಹೊತ್ತಿರುವವರ ಹೊರೆಯನ್ನು ಹಗುರಗೊಳಿಸದಂತಾಗುವುದು. ನಿಸ್ವಾರ್ಥ ಸೇವೆಯಿಂದ ನಿಜ ಸಂತೋಷ ದೊರೆಯುತ್ತದೆ. ಅಂತಹ ಸೇವೆಯ ಮೂಲಕ ಮಾಡಿದ ಪ್ರತಿಯೊಂದು ಕಾರ್ಯ ಮತ್ತು ಮಾತುಗಳು, ಕ್ರಿಸ್ತನಿಗೆ ಮಾಡಿದಂತೆಯೇ ಎಂದು ಪರಲೋಕದ ಪುಸ್ತಕಗಳಲ್ಲಿ ಬರೆಯಲ್ಪಡುವುದು.KanCCh 141.1

    “ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ, ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” (ಮತ್ತಾಯ 25:40).KanCCh 141.2

    ರಕ್ಷಕನ ಪ್ರೀತಿಯ ಬೆಳಕಿನಲ್ಲಿ ಜೀವಿಸಿ. ಆಗ ನಿಮ್ಮ ಪ್ರಭಾವವು ಜಗತ್ತಿಗೆ ಆಶೀರ್ವಾದಕರವಾಗಿರುವುದು. ದೇವರ ಆತ್ಮನು ನಿಮ್ಮನ್ನು ನಿಯಂತ್ರಿಸಲಿ. ಕರುಣೆಯ ನಿಯಮವು ಯಾವಾಗ ನಿಮ್ಮ ಮನಸ್ಸಿನಲ್ಲಿರಲಿ. ದೀರ್ಘಶಾಂತಿ ಹಾಗೂ ನಿಸ್ವಾರ್ಥವು, ಹೊಸದಾಗಿ ಹುಟ್ಟಿದವರ ನಡೆನುಡಿಗಳಲ್ಲಿ ಕಂಡುಬರುವುದು. ಆಗ ಅವರು ಕ್ರಿಸ್ತನಲ್ಲಿ ಹೊಸಬರಾಗಿ ಜೀವಿಸುವರು.KanCCh 141.3

    *****