Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ಭಿನ್ನಾಭಿಪ್ರಾಯಗಳು ಬಂದಾಗ

  ಗಂಡಹೆಂಡತಿಯರು ತಮ್ಮ ಕರ್ತವ್ಯಗಳನ್ನು ನ್ಯಾಯವಾದ ರೀತಿಯಲ್ಲಿ ನಿರ್ವಹಿಸಿದರೂ, ತಮ್ಮ ಹೃದಯಗಳನ್ನು ದೇವರಿಗೆ ಒಪ್ಪಿಸಿಕೊಡದಿದ್ದಲ್ಲಿ, ಕುಟುಂಬದ ಸಮಸ್ಯೆಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಗಂಡ ಹೆಂಡತಿಯರಲ್ಲಿ ಕುಟುಂಬ ಜೀವನಕ್ಕೆ ಸಂಬಂಧಪಟ್ಟಂತೆ ಭಿನ್ನಾಭಿಪ್ರಾಯಗಳು ಇರುವಾಗ, ಅದರಲ್ಲಿ ಪರಸ್ಪರ ಪ್ರೀತಿ ಹೇಗೆ ಕಂಡುಬರುತ್ತದೆ? ಕುಟುಂಬಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳಲ್ಲಿ ಅವರ ಅಭಿಪ್ರಾಯವು ಒಂದೇ ಆಗಿರಬೇಕು. ಕ್ರೈಸ್ತಳಾದ ಹೆಂಡತಿಯು ತನ್ನ ಗಂಡನು ತನ್ನ ಸಂಗಾತಿಯೆಂದು ಆಸಕ್ತಿ ತೋರಿಸಬೇಕು. ಯಾಕೆಂದರೆ ಗಂಡನು ಕುಟುಂಬದ ಯಜಮಾನನಾಗಿದ್ದಾನೆ. KanCCh 144.3

  ಪುರುಷರಾದ ನೀವು ಯಾವುದೇ ರೀತಿಯಲ್ಲಿಯೂ ವಿವೇಕದಿಂದ ವಿವೇಚಿಸದೆ ಮತ್ತು ನಿಮ್ಮ ಅಭಿಪ್ರಾಯಗಳು ಮುಂದೆ ಯಾವ ರೀತಿಯ ಪರಿಣಾಮ ಬೀರುತ್ತದೆಂದು ಪರಿಗಣಿಸದೆ, ನಿಮ್ಮ ಅಭಿಪ್ರಾಯವು ನಿಮ್ಮ ಪತ್ನಿಗೆ ಇಷ್ಟವಾಗುವುದಿಲ್ಲವೆಂದು ತಿಳಿದೂ, ಆಕೆಯೊಂದಿಗೆ ಪ್ರಾರ್ಥನಾ ಪೂರ್ವಕವಾಗಿ ಚರ್ಚಿಸದೆ ಸ್ವತಂತ್ರವಾದ ನಿರ್ಧಾರತೆಗೆದುಕೊಂಡಲ್ಲಿ, ಗಂಡಂದಿರಾದ ನಿಮ್ಮ ಮನೋಭಾವವು ತಪ್ಪು. ನಿಮ್ಮ ಪತ್ನಿಯ ಭಾವನೆಗಳನ್ನು ಗೌರವಿಸದೆ, ಭಿನ್ನಾಭಿಪ್ರಾಯದ ವಿಷಯಗಳನ್ನು ಸಭ್ಯರಂತೆ ತಡೆಯುವುದಕ್ಕೆ ಬದಲಾಗಿ, ಪುರುಷರಾದ ನೀವು ಸುತ್ತಲೂ ಯಾರಿದ್ದಾರೆಂದು ಗಮನಿಸದೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಬಾರದು. ತನ್ನ ಅಭಿಪ್ರಾಯ ಸರಿ, ಅದಕ್ಕೆ ವಿರುದ್ಧವಾಗಿ ಮಾತನಾಡಲು ಯಾರಿಗೂ ಹಕ್ಕಿಲ್ಲವೆಂದು ನೀವು ಭಾವಿಸಿದಲ್ಲಿ, ಪವಿತ್ರಾತ್ಮನ ಫಲವು ನಿಮ್ಮಲ್ಲಿ ಕಂಡುಬರುವುದಿಲ್ಲ.KanCCh 144.4

  ಸಹೋದರ, ಸಹೋದರಿಯರೇ, ಕ್ರಿಸ್ತನನ್ನು ಸ್ವೀಕರಿಸಲು ನಿಮ್ಮ ಹೃದಯಗಳನ್ನು ತೆರೆಯಿರಿ. ನಿಮ್ಮ ದೇಹವೆಂಬ ಆಲಯದ ಗರ್ಭಗುಡಿಗೆ ಆತನನ್ನು ಆಹ್ವಾನಿಸಿ, ವೈವಾಹಿಕ ಜೀವನದಲ್ಲಿ ಬರುವ ಅಡೆತಡೆಗಳನ್ನು ಜಯಿಸಲು ಒಬ್ಬರಿಗೊಬ್ಬರು ಸಹಾಯ ಮಾಡಿರಿ. ನಿಮ್ಮ ಎದುರಾಳಿಯಾದ ಸೈತಾನನನ್ನು ಜಯಿಸಬೇಕಾದಲ್ಲಿ ಭಯಂಕರ ಹೋರಾಟ ಮಾಡಬೇಕಾಗಿದೆ. ಈ ಹೋರಾಟದಲ್ಲಿ ದೇವರ ಸಹಾಯ ಬೇಕೆಂದು ನೀವು ನಿರೀಕ್ಷಿಸಿದಲ್ಲಿ, ಯಾವುದೇ ತಪ್ಪು ಮಾತುಗಳು ನಿಮ್ಮ ಬಾಯಲ್ಲಿ ಬಾರದಂತೆ ತುಟಿಗಳನ್ನು ಭದ್ರವಾಗಿಟ್ಟುಕೊಳ್ಳಬೇಕು ಮತ್ತು ದಂಪತಿಗಳಾದ ನೀವಿಬ್ಬರೂ ಸೇರಿ ಸೈತಾನನ ಮೇಲೆ ಜಯಹೊಂದಲು ನಿರ್ಧರಿಸಬೇಕು. ನೀವು ಮೊಣಕಾಲೂರಿ “ಕರ್ತನೇ, ನನ್ನ ಪ್ರಾಣ, ಆತ್ಮದ ವಿರೋಧಿಯಾದ ಸೈತಾನನನ್ನು ಗದರಿಸು” ಎಂದು ಪ್ರಾರ್ಥಿಸುವಾಗಲೂ ಯಾವ ಕೆಟ್ಟ ಮಾತು ನಿಮ್ಮಿಂದ ಬರಬಾರದು.KanCCh 145.1

  ದೇವರ ಚಿತ್ತವನ್ನು ನೆರವೇರಿಸಿದಲ್ಲಿ ಗಂಡಹೆಂಡತಿಯರು ಒಬ್ಬರಿಗೊಬ್ಬರು ಗೌರವಿಸಿ ಪ್ರೀತಿ ಹಾಗೂ ವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾರೆ. ಕುಟುಂಬದ ಶಾಂತಿ ಮತ್ತು ಐಕ್ಯತೆಯನ್ನು ಒಡೆಯುವ ಯಾವುದನ್ನಾದರೂ ನೀವು ದೃಢವಾಗಿ ದಮನ ಮಾಡಬೇಕು ಹಾಗೂ ದಯೆ ಮತ್ತು ಪ್ರೀತಿಯನ್ನು ಪೋಷಿಸಬೇಕು. ಯಾರುಕರುಣೆ, ಸಹನೆ ಹಾಗೂ ಪ್ರೀತಿಯ ಮನೋಭಾವ ತೋರಿಸುತ್ತಾರೋ, ಅದೇ ರೀತಿಯಾದ ಒಳ್ಳೆಯ ಗುಣಗಳನ್ನು ಇತರರೂ ಸಹ ಅವರಿಗೆ ತೋರಿಸುತ್ತಾರೆ. ದೇವರಾತ್ಮನು ಎಲ್ಲಿ ನೆಲೆಗೊಂಡಿರುತ್ತಾನೋ, ಅಲ್ಲಿ ಮದುವೆಯ ಸಂಬಂಧದಲ್ಲಿ ಹೊಂದಾಣಿಕೆ ಇರುತ್ತದೆ. ಆಗ ಮನೆಯಲ್ಲಿ ಐಕ್ಯತೆ ಹಾಗೂ ಪ್ರೀತಿ ಕಂಡುಬರುತ್ತದೆ. ಗಂಡ ಹೆಂಡತಿಯರ ಹೃದಯಗಳಲ್ಲಿ ಕ್ರಿಸ್ತನು ನೆಲೆಗೊಂಡಿದ್ದಲ್ಲಿ, ಅವರು ಕ್ರಿಸ್ತನು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡುತ್ತಿರುವ ಪರಲೋಕದ ಬಿಡಾರಗಳಿಗೆ ತಾವೂ ಸಹ ಒಟ್ಟಾಗಿ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಾರೆ.KanCCh 145.2

  ಮದುವೆ ಯಸಂಬಂಧವು ದೇವರಿಂದ ಬಂದ ಪರಿಶುದ್ಧ ಸಂಸ್ಕಾರವಾಗಿದೆ ಎಂದು ಭಾವಿಸುವವರು, ಆತನ ಪವಿತ್ರ ಆಜ್ಞೆಗಳಿಂದ ಸಂರಕ್ಷಿಸಲ್ಪಡುವ ರುಹಾ ಗೂವಿವೇಚನಾ ಶಕ್ತಿಯಿಂದ ನಿಯಂತ್ರಿಸಲ್ಪಡುವರು. ವೈವಾಹಿ ಕಜೀವನದಲ್ಲಿ ಕೆಲವು ವೇಳೆ ಗಂಡಹೆಂಡತಿಯರು ಅಶಿಸ್ತಿನಿಂದ ವರ್ತಿಸಿದರೆ ಅವರ ಮಕ್ಕಳು ಹಠಮಾರಿಗಳಾಗುತ್ತಾರೆ. ಅವರಿಬ್ಬರೂ ತಮ್ಮದೇ ಆದ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತಾರೆ ಹಾಗೂ ಇಬ್ಬರೂ ಸಹ ತಮ್ಮ ಹಠಬಿಡಲು ಸಿದ್ಧರಿಲ್ಲ. ಇದು ಕುಟುಂಬದಲ್ಲಿ ಹೆಚ್ಚಿನ ಅಸಂತೋಷಕ್ಕೆ ಕಾರಣವಾಗುತ್ತದೆ. ಗಂಡ ಹೆಂಡತಿಯರಿಬ್ಬರೂ ತಾವು ಹೇಳಿದ್ದೇ ಸರಿ ಎನ್ನುವ ಭಾವನೆ ಬಿಟ್ಟು ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸಬೇಕು. ಇಬ್ಬರೂ ತಮ್ಮ ಇಷ್ಟ ಬಂದಂತೆ ನಡೆದಲ್ಲಿ ಸಂತೋಷ ಇರುವ ಸಾಧ್ಯತೆ ಇಲ್ಲ.KanCCh 145.3

  ಗಂಡ ಹೆಂಡತಿಯರ ನಡುವೆ ಪರಸ್ಪರ ತಾಳ್ಮೆ ಹಾಗೂ ಪ್ರೀತಿ ಇರದಿದ್ದಲ್ಲಿ, ಜಗತ್ತಿನ ಯಾವ ಶಕ್ತಿಯೂ ಕ್ರೈಸ್ತ ಐಕ್ಯತೆಯಲ್ಲಿ ನಿಮ್ಮನ್ನು ಬಂಧಿಸಲು ಸಾಧ್ಯವಿಲ್ಲ. ಮದುವೆಯ ನಿಮ್ಮ ಸಂಬಂಧವು ಅತ್ಯಂತ ನಿಕಟವೂ, ಪರಿಶುದ್ಧವೂ ಹಾಗೂ ಉನ್ನತವೂ ಆಗಿರಬೇಕು. ಕರ್ತನು ಬಯಸುವಂತಹ ಸ್ಥಿತಿಯನ್ನು ನೀವು ಮುಟ್ಟಿದಾಗ, ಪರಲೋಕವು ನಿಮ್ಮ ಬಳಿಯಲ್ಲಿಯೂ ಹಾಗೂ ಕ್ರಿಸ್ತನು ನಿಮ್ಮ ಜೀವನದಲ್ಲಿಯೂ ಇರುತ್ತಾನೆ.KanCCh 146.1

  ಸಹೋದರ ಸಹೋದರಿಯರೇ, ದೇವರು ಪ್ರೀತಿಸ್ವರೂಪಿ ಎಂಬುದನ್ನು ನಿಮ್ಮ ನೆನಪಿನಲ್ಲಿಡಿ. ಆತನ ಕೃಪೆಯಿಂದ ನೀವು ಮದುವೆಯ ಸಮಯದಲ್ಲಿ ಮಾಡಿದಂತ ವಾಗ್ದಾನಗಳಂತೆ, ಪರಸ್ಪರ ಸಂತೋಷ ಪಡಿಸುವುದರಲ್ಲಿ ಯಶಸ್ಸು ಹೊಂದುವಿರಿ. ದೇವರಕೃಪೆಯಿಂದ ನೀವು ಅಹಂಕಾರ ಹಾಗೂ ಸ್ವಾರ್ಥಭಾವನೆ ಯಮೇಲೆ ಜಯ ಹೊಂದಬಹುದು. ಕ್ರಿಸ್ತನಂತೆ ಜೀವಿಸಿ, ಜೀವನದ ಪ್ರತಿಯೊಂದು ಹಂತದಲ್ಲಿಯೂ ತ್ಯಾಗ ಮನೋಭಾವ ದಿಂದಸಹಾಯದಲ್ಲಿರುವ ನಿಮ್ಮ ಸಂಗಾತಿಗೆ ನಿರಂತರವಾಗಿ ಅನುಕಂಪ ತೋರಿಸಿದಾಗ, ನೀವು ಜಯದ ಮೇಲೆ ಜಯಹೊಂದುವಿರಿ. ಪ್ರತಿದಿನವೂ ಸಹ ಉತ್ತಮವಾದ ರೀತಿಯಲ್ಲಿ ಹೇಗೆ ಅಹಂಕಾರ ಜಯಿಸುವುದು ಹಾಗೂ ನಿಮ್ಮಲ್ಲಿರುವ ಬಲಹೀನ ಸ್ವಭಾವಗಳನ್ನು ಹೇಗೆ ಬಲಪಡಿಸಿಕೊಳ್ಳಬಹುದೆಂದು ತಿಳಿದುಕೊಳ್ಳುವಿರಿ. ನೀವು ಕರ್ತನಾದ ಯೇಸುಕ್ರಿಸ್ತನ ಚಿತ್ತಕ್ಕೆ ನಿಮ್ಮ ಚಿತ್ತವನು ಒಪ್ಪಿಸಿಕೊಡುವುದರಿಂದ ಆತನೇ ನಿಮ್ಮ ಬೆಳಕು, ಬಲವೂ ಹಾಗೂ ಸಂತೋಷದ ಕಿರೀಟವೂಆಗಿರುವನು.KanCCh 146.2

  *****

  Larger font
  Smaller font
  Copy
  Print
  Contents