Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮದುವೆಯ ವಿಶೇಷ ಸೌಲಭ್ಯಗಳು

    ಕ್ರೈಸ್ತರೆನಿಸಿಕೊಳ್ಳುವವರು ಮದುವೆಯ ಸಂಬಂಧದ ಪ್ರತಿಯೊಂದು ಫಲಿತಾಂಶವನ್ನು ಯೋಗ್ಯವಾದ ರೀತಿಯಲ್ಲಿ ಪರಿಗಣಿಸಬೇಕು ಹಾಗೂ ಪವಿತ್ರವಾದ ತತ್ವವು ನಿಮ್ಮ ಎಲ್ಲ ಕಾರ್ಯಗಳ ಆಧಾರವಾಗಿರಬೇಕು. ಅನೇಕ ಪ್ರಕರಣಗಳಲ್ಲಿ ತಂದೆ-ತಾಯಿಯರು ಮದುವೆಯ ಸೌಲಭ್ಯಗಳನ್ನು ದುರುಪಯೋಗಿಸಿಕೊಂಡು, ಸುಖ ಭೋಗದಲ್ಲಿ ತೃಪ್ತಿ ಪಡುವುದರಿಂದ ಅವರಲ್ಲಿ ಮೃಗೀಯ ಭಾವನೆಗಳು ಬಲಗೊಳ್ಳುವವು. ನ್ಯಾಯಸಮ್ಮತವಾಗಿರುವುದರಲ್ಲಿಯೂ ಸಹ ಮರ್ಯಾದೆ ಮೀರಿದ ನಡವಳಿಕೆ, ದೌರ್ಜನ್ಯ ತೋರಿಸುವುದೂ ಸಹ ಘೋರವಾದ ಪಾಪವಾಗಿದೆ.KanCCh 148.1

    ಅನೇಕ ತಂದೆ ತಾಯಿಯರು ವೈವಾಹಿಕ ಜೀವನದಲ್ಲಿ ಇರಬೇಕಾದಂತ ಜ್ಞಾನವನ್ನು ಪಡೆದುಕೊಂಡಿರುವುದಿಲ್ಲ. ಸೈತಾನನು ಇದರ ಪ್ರಯೋಜನ ಪಡೆದುಕೊಂಡು ಇವರ ಮನಸ್ಸು ಮತ್ತು ಜೀವನಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳದಂತೆ ಇವರು ತಮ್ಮನ್ನು ಸಂರಕ್ಷಿಸಿಕೊಳ್ಳುವುದಿಲ್ಲ. ತಮ್ಮ ವೈವಾಹಿಕ ಜೀವನವನ್ನು ಎಲ್ಲಾ ವಿಧವಾದ ದೌರ್ಜನ್ಯ ಹಾಗೂ ಮರ್ಯಾದೆ ಮೀರಿದ ನಡವಳಿಕೆಗಳಿಂದ ಹತೋಟಿಯಲ್ಲಿಟ್ಟುಕೊಳ್ಳಬೇಕೆಂದು ದೇವರು ಬಯಸುತ್ತಾನೆಂದು ಅವರು ತಿಳಿದುಕೊಳ್ಳುವುದಿಲ್ಲ. ಅವರು ತಮ್ಮದೇ ಆದ ಉದ್ದೇಶದಿಂದ ಮದುವೆ ಮಾಡಿಕೊಂಡು, ತಮ್ಮ ತುಚ್ಛವಾದ ಕಾಮುಕ ಭಾವನೆಗಳನ್ನು ತೃಪ್ತಿಪಡಿಸಿಕೊಳ್ಳುವುದೇ ತಮ್ಮ ಸಂಬಂಧವನ್ನು ಪವಿತ್ರಗೊಳಿಸುತ್ತದೆಂದು ಭಾವಿಸುತ್ತಾರೆ. ಇಂತಹ ಭಾವನೆಯಿಂದ ಮದುವೆಯಾಗುವ ಸ್ತ್ರೀ ಪುರುಷರು ಇದಕ್ಕೆ ನಾವು ದೇವರಿಗೆ ಲೆಕ್ಕಕೊಡಬೇಕೆಂಬ ವಿಚಾರ ಮರೆಯುತ್ತಾರೆ. ಇದು ಅವರ ನೈತಿಕ ದೈಹಿಕ, ಮಾನಸಿಕ ಸಾಮರ್ಥ್ಯವನ್ನು ಕುಂದಿಸಿ, ಸಂಪೂರ್ಣ ಶಾರೀರಿಕ ವ್ಯವಸ್ಥೆಯನ್ನು ನಿತ್ರಾಣಗೊಳಿಸುತ್ತದೆ. ಕೆಲವರು ಮಾತ್ರ ವೈವಾಹಿಕ ಜೀವನದಲ್ಲಿ ದೌರ್ಜನ್ಯ ಹಾಗೂ ಮರ್ಯಾದೆ ಮೀರಿದ ನಡವಳಿಕೆಯ ಮೃಗೀಯ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಧಾರ್ಮಿಕ ಕರ್ತವ್ಯವೆಂದು ಭಾವಿಸುತ್ತಾರೆ.KanCCh 148.2