Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಆತ್ಮಸಂಯಮವನ್ನು ದುರ್ಬಲಗೊಳಿಸುವುದು ಸೈತಾನನ ಉದ್ದೇಶ

    ತುಚ್ಛವಾದ ಕಾಮಾತುರತೆ ಪ್ರಾಮುಖ್ಯವಾದಲ್ಲಿ, ನೈತಿಕ ಸಾಮರ್ಥ್ಯಗಳು ಒಂದೇ ಸಮವಾಗಿ ದುರ್ಬಲಗೊಳ್ಳುತ್ತದೆಂದೂ ಹಾಗೂ ಅಂತವರ ಆತ್ಮೀಕ ಬೆಳವಣಿಗೆಯ ಬಗ್ಗೆ ನೀವು ಚಿಂತಿಸಬೇಕಾಗಿಲ್ಲವೆಂದು ಸೈತಾನನಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಅವನು ವಿವಾಹಿತರಲ್ಲಿ ಮದುವೆಯ ಪಾವಿತ್ರ್ಯತೆಯ ಮೌಲ್ಯವನ್ನು ಕಡಿಮೆಗೊಳಿಸಿ ಅವರ ಆತ್ಮಸಂಯಮ ಅಂದರೆ ತಮ್ಮ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಕೊಳ್ಳುವ ಸಾಮರ್ಥ್ಯವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಾನೆ. ಸ್ತ್ರೀಪುರುಷರೇ ಮುಂದೆ ಒಂದು ದಿನ ತುಚ್ಛವಾದ ಕಾಮಾಭಿಲಾಷೆ ಹಾಗೂ ಅದನ್ನು ತೃಪ್ತಿ ಪಡಿಸಿಕೊಳ್ಳುವುದರ ಫಲಿತಾಂಶವೇನು ಎಂಬುದನ್ನು ತಿಳಿದುಕೊಳ್ಳುವಿರಿ. ವಿವಾಹಕ್ಕೆ ಹೊರತಾದ ವ್ಯಭಿಚಾರದ ಸಂಬಂಧದಂತೆಯೇ ತುಚ್ಛವಾದ ಕಾಮಾಭಿಲಾಷೆಯು ಒಂದು ನೀಚವಾದ ಗುಣವಾಗಿದೆ.KanCCh 150.1

    ಇಂತಹ ಕೀಳು ಮಟ್ಟದ ಕಾಮಾತುರತೆಗೆ ಒಳಗಾಗುವುದರ ಫಲಿತಾಂಶವೇನು? ದೇವದೂತರು ಮೇಲ್ವಿಚಾರಕರಾಗಿ ಇರಬೇಕಾದ ಮಲಗುವ ಕೊಠಡಿಯು ಅಪವಿತ್ರವಾದ ಆಚರಣೆಯಿಂದ ಅಪವಿತ್ರವಾಗುವುದು. ನಾಚಿಕೆಗೆಟ್ಟಂತ ಮೃಗೀಯ ವರ್ತನೆಗಳು ಅಲ್ಲಿ ಕಂಡು ಬರುವುದರಿಂದ ಶರೀರಗಳು ಮಲಿನವಾಗುವವು. ಅಸಹ್ಯಕರವಾದ ಅಭ್ಯಾಸಗಳು ಹೇಸಿಗೆ ತರುವಂತ ಅಸಹ್ಯಕರ ರೋಗಗಳಿಗೆ ಕಾರಣವಾಗುವವು. ಆಶೀರ್ವಾದಕರವಾಗಲೆಂದು ಕೊಡಲ್ಪಟ್ಟ ಲೈಂಗಿಕತೆಯು ಶಾಪವಾಗಿ ಪರಿಣಮಿಸುವುದು.KanCCh 150.2

    ಅತ್ಯಧಿಕವಾದ ಕಾಮಾಭಿಲಾಷೆಯು ದೈವಭಕ್ತಿಯನ್ನು ಸಂಪೂರ್ಣ ಹಾಳುಮಾಡಿರುವುದಲ್ಲದೆ, ಶರೀರದ ವ್ಯವಸ್ಥೆಯ ಪೋಷಣೆಗೆ ಅಗತ್ಯವಾದ ಮೆದುಳಿನ ಸಾರವನ್ನು (Substance) ತೆಗೆದುಹಾಕಿ ಅತ್ಯಂತ ಪರಿಣಾಮಕಾರಿಯಾಗಿ ಅದರ ಉತ್ಸಾಹವನ್ನು ಕುಂದಿಸುತ್ತದೆ. ಪುರುಷನ ಇಂತಹ ಮೃಗೀಯ ವರ್ತನೆಗೆ ಹಾಗೂ ಆತ್ಮಸಂಯಮದ ನಾಶಕ್ಕೆ ಯಾವ ಪತ್ನಿಯೂ ಸಹಕರಿಸಬಾರದು. ಅವಳು ವಿವೇಕ ಹೊಂದಿದ್ದು, ತನ್ನ ಗಂಡನ ಬಗ್ಗೆ ನಿಜವಾದ ಪ್ರೀತಿಯಿದ್ದಲ್ಲಿ ಇದಕ್ಕೆ ಸಹಾಯ ಮಾಡುವುದಿಲ್ಲ. KanCCh 150.3

    ಮೃಗೀಯ ವರ್ತನೆ ಕಾಮಾತುರತೆಯು ಹೆಚ್ಚಾದಷ್ಟು ಅದು ಬಲಗೊಂಡು, ಅಂತಹ ತುಚ್ಛ ಬಯಕೆಯನ್ನು ತೃಪ್ತಿ ಪಡಿಸಿ ಕೊಳ್ಳುವುದರಲ್ಲಿ ಅವರು ಇನ್ನೂ ಹೆಚ್ಚಾಗಿ ಹಿಂಸಾವಿಧಾನ ಅನುಸರಿಸುವರು. ದೈವಭಕ್ತಿಯುಳ್ಳ ಗಂಡಹೆಂಡತಿಯರು ತಮ್ಮ ದಾಂಪತ್ಯ ಕರ್ತವ್ಯದ ಬಗ್ಗೆ ತಿಳಿದಿರಲಿ. ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರು ಇಂತಹ ಮೃಗೀಯ ವರ್ತನೆಯಿಂದಲೂ, ಆತ್ಮಸಂಯಮ ಇಲ್ಲದಿರುವುದರಿಂದಲೂ ನರಗಳ ಹಾಗೂ ಮೆದುಳಿನ ಪಾರ್ಶ್ವವಾಯುವಿಗೆ ತುತ್ತಾಗಿ ನರಳುತ್ತಿದ್ದಾರೆ.KanCCh 150.4