ನ್ಯಾಯಸಮ್ಮತವಲ್ಲದ ಬೇಡಿಕೆಗಳಿಗೆ ಒತ್ತಾಯಿಸಿದಾಗ
ಈಗ ಪ್ರಶ್ನೆಯೊಂದನ್ನು ಇತ್ಯರ್ಥಗೊಳಿಸಬೇಕಾಗಿದೆ. ಪತ್ನಿಯು ತನ್ನ ಗಂಡನ ತುಚ್ಛವಾದ ಕಾಮಾತುರತೆಯ ಬೇಡಿಕೆಯನ್ನು ಮರುಮಾತಿಲ್ಲದೆ ಒಪ್ಪಿಕೊಂಡು ಪೂರೈಸಬೇಕೇ? ತನ್ನ ದೇಹವನ್ನು ದೇವರಿಗೆ ಮೆಚ್ಚಿಕೆಯಾಗಿರುವ ಸಜೀವ ಯಜ್ಞವಾಗಿ ಅರ್ಪಿಸಲು ಅದನ್ನು ಗೌರವವಾಗಿಯೂ, ಪರಿಶುದ್ಧತೆಯಿಂದಲೂ ಕಾಪಾಡಿಕೊಳ್ಳಬೇಕಾದ ತನ್ನ ದೇಹಕ್ಕೆ ಗಂಡನು ಹಾನಿ ಮಾಡುತ್ತಾನೆಂದು ತಿಳಿದಿದ್ದರೂ, ಹೆಂಡತಿಯು ಅವನಿಗೆ ತನ್ನನ್ನು ಸಂಪೂರ್ಣ ಶ್ರದ್ಧೆಯಿಂದ ಒಪ್ಪಿಸಿಕೊಡಬೇಕೇ?KanCCh 152.1
ಹೆಂಡತಿಯು ತನ್ನ ಆರೋಗ್ಯ ಮತ್ತು ಜೀವವನ್ನು ಪಣಕ್ಕಿಟ್ಟು ಗಂಡನ ಮೃಗೀಯವಾಗಿ ಬಯಕೆಯನ್ನು ತೃಪ್ತಿ ಪಡಿಸುವುದು ಯಥಾರ್ಥವಾದ ಹಾಗೂ ಪರಿಶುದ್ಧವಾದ ಪ್ರೀತಿಯಲ್ಲ. ಅವಳು ನಿಜವಾದ ಪ್ರೀತಿ ಮತ್ತು ವಿವೇಕ ಹೊಂದಿದ್ದಲ್ಲಿ, ಆಸಕ್ತಿಕರವಾದ ದೈವೀಕ ವಿಷಯಗಳ ಬಗ್ಗೆ ಅವನಿಗೆ ಅರಿವಾಗುವಂತೆ ಮಾಡಿ, ಅವರ ನೀಚವಾದ ಕಾಮಾಭಿಲಾಷೆಯ ಭಾವನೆಯಿಂದ ಅವನ ಮನಸ್ಸನ್ನು ಉನ್ನತವಾದ ಆತ್ಮೀಕಸಂಗತಿಗಳ ಕಡೆಗೆ ತಿರುಗಿಸುವಳು. ಗಂಡನಿಗೆ ಅಸಂತೋಷವಾದರೂ ಸರಿಯೇ, ವಿನಯದಿಂದ ಹಾಗೂ ಪ್ರೀತಿಯಿಂದ ತನ್ನ ಶರೀರವನ್ನು ಇಂತಹ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರಕ್ಕೆ ಒಳಪಡಿಸುವುದಿಲ್ಲವೆಂದು ಹೇಳಬೇಕು. ನನ್ನ ಸಂಪೂರ್ಣ ಶರೀರದ ಮೇಲೆ ಮೊದಲು ದೇವರು ಅಧಿಕಾರ ಹೊಂದಿರುವನೆಂದೂ, ಇಂತಹ ಲೈಂಗಿಕ ದೌರ್ಜನ್ಯಕ್ಕೆ ತಾನು ಒಪ್ಪಿಸಿಕೊಟ್ಟಲ್ಲಿ ನ್ಯಾಯತೀರ್ಪಿನ ದಿನದಲ್ಲಿ ದೇವರಿಗೆ ಲೆಕ್ಕ ಕೊಡಬೇಕಾಗಿದೆ ಎಂದು ಹೆಂಡತಿಯು ಗಂಡನಿಗೆ ಕರುಣೆಯಿಂದಲೇ ತಿಳಿಸಿ ಹೇಳಬೇಕು.KanCCh 152.2
ಪತ್ನಿಯು ಪರಿಶುದ್ಧತೆಯಿಂದಲೂ ಮತ್ತು ಗೌರವದಿಂದಲೂ ಸುಸಂಸ್ಕೃತವಾದ ನಡವಳಿಕೆಯಿಂದ ತನ್ನ ಘನತೆ, ಗಾಂಭೀರ್ಯ ಕಾಪಾಡಿಕೊಂಡಲ್ಲಿ, ತನ್ನ ಗಂಡನನ್ನು ಪರಿಶುದ್ಧಗೊಳಿಸುವಲ್ಲಿ ವಿವೇಚನೆಯುಳ್ಳ ಪ್ರಭಾವ ಬೀರಿ, ಪತ್ನಿಯಾಗಿ ತನ್ನ ಉನ್ನತವಾದ ಉದ್ದೇಶ ನೆರವೇರಿಸುವಳು. ಈ ರೀತಿ ಮಾಡಿದಾಗ ಅವಳು ತನ್ನನ್ನು ಹಾಗೂ ತನ್ನ ಗಂಡನನ್ನೂ ರಕ್ಷಿಸುವಳು. ಬಹಳ ಸೂಕ್ಷ್ಮವೂ ಮತ್ತು ಕಷ್ಟಕರವೂ ಆದ ಈ ವಿಷಯವನ್ನು ನಿರ್ವಹಿಸಲು ಹೆಂಡತಿಗೆ ಹೆಚ್ಚು ವಿವೇಕ, ತಾಳ್ಮೆ, ನೈತಿಕ ಧೈರ್ಯ ಹಾಗೂ ಸ್ಥೈರ್ಯದ ಅಗತ್ಯವಿದೆ. ದೇವರಲ್ಲಿ ಹೆಚ್ಚಾಗಿ ಪ್ರಾರ್ಥಿಸುವುದರಿಂದ ಅವಳು ಕೃಪೆ ಮತ್ತು ಬಲ ಹೊಂದಿಕೊಳ್ಳಬಹುದು. ನಿಷ್ಕಳಂಕವಾದ ಹಾಗೂ ಪ್ರಾಮಾಣಿಕವಾದ ಪ್ರೀತಿಯು ಹೃದಯದ ತತ್ವವಾಗಿರಬೇಕು. ದೇವರ ಮೇಲೆ ಪ್ರೀತಿ ಮತ್ತು ಗಂಡನ ಮೇಲೆ ಪ್ರೀತಿ- ಇದು ಮಾತ್ರ ಹೆಂಡತಿಯ ಕಾರ್ಯದ ಸುಭದ್ರ ನೆಲೆಯಾಗಿರಬೇಕು.KanCCh 152.3
ಹೆಂಡತಿಯು ಗಂಡನ ಎಲ್ಲ ವಿಧವಾದ ಮೃಗೀಯ ವರ್ತನೆಗೆ, ತುಚ್ಛವಾದ ಕಾಮಾತುರತೆಗೆ ತನ್ನ ಗಾಂಭೀರ್ಯ, ವ್ಯಕ್ತಿತ್ವ ಮತ್ತು ಮನಸ್ಸಾಕ್ಷಿ ಎಲ್ಲವನ್ನೂ ಬಿಟ್ಟು ತನ್ನಶರೀರ ಹಾಗೂ ಮನಸ್ಸನ್ನು ಒಪ್ಪಿಸಿಕೊಟ್ಟಲ್ಲಿ, ಅವನ ಮೇಲೆ ಬಲವಾದ ಪ್ರಭಾವ ಬೀರಿ ಅವರ ಆಲೋಚನೆಗಳನ್ನು ಉನ್ನತ ಸ್ಥಿತಿಗೆ ತರುವಂತೆ ಒಂದು ಅವಕಾಶ ಕಳೆದುಕೊಳ್ಳುವಳು. ಗಂಡನ ಕಠಿಣ, ಸ್ವಭಾವವನ್ನು ಹೆಂಡತಿಯು ಮೆದುಗೊಳಿಸಬಲ್ಲಳು. ಅವರ ಪರಿಶುದ್ಧ ಪ್ರಭಾವವು ಗಂಡನ ಮೇಲೆ ಪರಿಣಾಮ ಬೀರಿ ಅವಳ ನಡವಳಿಕೆಯು ಸುಸಂಸ್ಕೃತವಾಗಿ ಅವನು ಆತ್ಮೀಕ ಮನಸ್ಸನ್ನು ಹೊಂದಿ ತನ್ನ ಮೃಗೀಯ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಮನಃ ಪೂರ್ವಕವಾಗಿ ಪ್ರಯತ್ನಿಸುವಂತೆ ಮಾಡಬಹುದು. ಈ ರೀತಿಯಲ್ಲಿ ಅವರು ದುಷ್ಟತನವು ತುಂಬಿರುವ ಈ ಲೋಕದ ಭ್ರಷ್ಟತೆಯಿಂದ ಪಾರಾಗಿ ದೈವೀಕ ಸ್ವಭಾವದಲ್ಲಿ ಒಟ್ಟಾಗಿ ಪಾಲುಗಾರರಾಗಬಹುದು. ಗಂಡನ ಪ್ರೀತಿಯು ಮೃಗೀಯ ವರ್ತನೆಯ ಮೇಲೆ ಆಧಾರಗೊಂಡಿದ್ದು ಅದರಿಂದ ಅವನು ನಿಯಂತ್ರಿಸಲ್ಪಡುತ್ತಿರುವಾಗ, ಹೆಂಡತಿಯು ತನ್ನ ಗಂಡನನ್ನು ತೃಪ್ತಿಪಡಿಸುವುದು ತನ್ನ ಕರ್ತವ್ಯವೆಂದು ಭಾವಿಸಿ ಅವನ ಮಟ್ಟಕ್ಕೆ ತಾನು ಇಳಿದಲ್ಲಿ, ಅವಳು ದೇವರನ್ನು ಅಸಮಾಧಾನಪಡಿಸಿ ಕೋಪಗೊಳಿಸುತ್ತಾಳೆ. ಆ ಹೆಂಡತಿಯು ಅವನ ಮೇಲೆ ಪರಿಶುದ್ಧವಾದ ಪ್ರಭಾವ ಬೀರಲು ವಿಫಲಳಾಗುತ್ತಾಳೆ. ಅವಳು ತನ್ನ ಗಂಡನ ಮೃಗೀಯ ವರ್ತನೆಗೆ ಯಾವುದೇ ಪ್ರತಿಭಟನೆ ತೋರಿಸದೆ ಒಪ್ಪಿಸಿಕೊಂಡಲ್ಲಿ, ಪತ್ನಿಯಾಗಿ ಅವಳು ತನ್ನ ಗಂಡನಿಗೂ ಮತ್ತು ದೇವರಿಗೂ ತನ್ನ ಕರ್ತವ್ಯವೇನೆಂದು ಅರ್ಥಮಾಡಿಕೊಳ್ಳಲಾರಳು.KanCCh 152.4