Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು

    ನಿಜವಾದ ಕಾಮಾಭಿಲಾಷೆಗೆ ದೇಹವು ಪ್ರಧಾನ ಸ್ಥಳವಾಗಿದ್ದು, ಅದರ ಮೂಲಕ ಕಾರ್ಯನಿರ್ವಹಿಸುತ್ತದೆ. ಶರೀರದ ಅಭಿಲಾಷೆಗಳನ್ನು ಪೂರೈಸಿಕೊಳ್ಳುವುದೇ ಇದಕ್ಕೆ ಮುಖ್ಯವಾಗಿರುತ್ತದೆ. ನಮ್ಮೆಲ್ಲಾ ಶರೀರಾಭಿಲಾಷೆಗಳೊಂದಿಗೆ ದೇಹವನ್ನು ಶಿಲುಬೆಗೆ ಹಾಕಬೇಕೆಂದು ದೇವರು ಆಜ್ಞಾಪಿಸಿದ್ದಾನೆ. ಇದನ್ನು ಹೇಗೆ ಮಾಡಬಹುದು? ನಮ್ಮ ಶರೀರವನ್ನು ಜಜ್ಜಿ ಗಾಯ ಮಾಡಿಕೊಳ್ಳುವುದರ ಮೂಲಕವೇ? ಇಲ್ಲ, ಪಾಪ ಮಾಡಲು ಕಾರಣವಾಗುವ ಶೋಧನೆಯನ್ನು ಶಿಲುಬೆಗೆ ಹಾಕಬೇಕು. ಮನಸ್ಸಿನ ಎಲ್ಲಾ ವಿಧವಾದ ಕೆಟ್ಟ ಆಲೋಚನೆಗಳನ್ನು ಹೊರದೂಡಿರಿ. ನಿಮ್ಮೆಲ್ಲಾ ಆಲೋಚನೆಗಳು ಯೇಸುಕ್ರಿಸ್ತನಿಗೆ ಒಳಪಡಲಿ. ಮೃಗೀಯವಾದ ಎಲ್ಲಾ ಬಯಕೆಗಳನ್ನು ಪವಿತ್ರಾತ್ಮನ ಉನ್ನತವಾದ ಶಕ್ತಿಯಿಂದ ಹತೋಟಿಯಲ್ಲಿಟ್ಟುಕೊಳ್ಳಬೇಕು. ಕರ್ತನ ಪ್ರೀತಿಯು ನಮ್ಮ ಮನಸ್ಸನ್ನು ಆಳಲಿ ಹಾಗೂ ಕ್ರಿಸ್ತನು ಅದನ್ನು ನಿಯಂತ್ರಿಸಲಿ, ನಮ್ಮ ಶರೀರವನ್ನು ಆತನು ಅಮೂಲ್ಯವಾದ ಕ್ರಯ ಕೊಟ್ಟು ಸಂಪಾದಿಸಿಕೊಂಡಿದ್ದಾನೆ. ಶರೀರದ ಎಲ್ಲಾ ಅಂಗಗಳು ಆತನ ನೀತಿಯನ್ನು ಪ್ರತಿಫಲಿಸುವ ಸಾಧನವಾಗಲಿ.KanCCh 153.1

    *****