Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ತಾಯಿಯ ಸಾಮರ್ಥ್ಯವು ಒಳ್ಳೆಯದಕ್ಕಾಗಿ ಮಾತ್ರ

    ತಾಯಿಯ ಕಾರ್ಯವ್ಯಾಪ್ತಿಯು ಕಡಿಮೆಯಾಗಿರಬಹುದು, ಆದರೆ ಗಂಡನೊಂದಿಗೆ ಒಂದಾಗಿಸೇರಿದ ಆಕೆಯ ಪ್ರಭಾವವು ನಿತ್ಯತ್ವದಂತೆ ನೆಲೆಯಾಗಿರುವುದು. ದೇವರನ್ನು ಬಿಟ್ಟು, ಎಲ್ಲರ ಒಳ್ಳೆಯದಕ್ಕೆ ಮಾತ್ರ ತನ್ನ ಸಾಮರ್ಥ್ಯ ಉಪಯೋಗಿಸುವ ತಾಯಿಯು ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಮಹಿಳೆಯಾಗಿರುವಳು.KanCCh 165.1

    ಕ್ರೈಸ್ತ ತಾಯಿ ತನ್ನ ಮಕ್ಕಳು ಎದುರಿಸಲಿರುವ ಅಪಾಯಗಳನ್ನು ಗ್ರಹಿಸುವುದರಲ್ಲಿ ಸದಾಕಾಲ ಎಚ್ಚರದಿಂದಿರುವಳು. ಆಕೆ ತನ್ನ ಮನಸ್ಸು ಹಾಗೂ ಹೃದಯವನ್ನು ನಿರ್ಮಲವಾದ ಹಾಗೂ ಶುದ್ಧವಾದ ಮನೋಧರ್ಮದಿಂದ ಕಾಪಾಡಿಕೊಳ್ಳಬೇಕು. ದೇವರ ವಾಕ್ಯದಿಂದ ಆಕೆ ತನ್ನ ಆಚಾರ ವಿಚಾರಗಳು ಮತ್ತು ಕೋಪಗೊಳ್ಳುವ ಸ್ವಭಾವವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಅಲ್ಲದೆ ಕ್ಷುಲ್ಲಕವಾದ ಶೋಧನೆಗಳಿಗೆ ಒಳಗಾಗದೆ, ತನ್ನ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು.KanCCh 165.2

    ಮಕ್ಕಳು ಶೀಘ್ರವಾಗಿ ಗ್ರಹಿಸುವ ಶಕ್ತಿ ಹೊಂದಿರುತ್ತಾರೆ. ತಾಳ್ಮೆ ಮತ್ತು ಪ್ರೀತಿ ತುಂಬಿದ ಸ್ವರ ಯಾವುವು ಮತ್ತು ಅಸಹನೆಯಿಂದ ಕೂಡಿದ ಕೋಪದ ಮಾತುಗಳು ಯಾವುದು ಎಂದು ಅವರು ತಿಳಿದುಕೊಳ್ಳುತ್ತಾರೆ. ಆವೇಶ ಮತ್ತು ಅಸಹನೆ ಮಕ್ಕಳ ಹೃದಯದಲ್ಲಿ ಪ್ರೀತಿ, ವಾತ್ಸಲ್ಯದ ಸೆಲೆಯನ್ನು ಬತ್ತಿಸುತ್ತದೆ. ಯಥಾರ್ಥ ಕ್ರೈಸ್ತಳಾದತಾಯಿ ಎಂದಿಗೂಸಹ ಕೋಪ, ಸಿಡಿಮಿಡಿಗುಟ್ಟುವ ಸ್ವಭಾವ ಹಾಗೂ ನಿಷ್ಕರುಣಿಯಾಗಿರುವುದಿಲ್ಲ. ಅವಳು ಎಂದಿಗೂ ಸಹ ತನ್ನ ಕೆಟ್ಟ ವರ್ತನೆಯಿಂದ ಮಕ್ಕಳನ್ನು ದೂರಮಾಡುವುದಿಲ್ಲ.KanCCh 165.3

    ತಾಯಂದಿರೇ, ನಿಮ್ಮ ಪ್ರಭಾವ ಮತ್ತು ಮಾದರಿಯು ಮಕ್ಕಳ ಸ್ವಭಾವ ಮತ್ತು ಭವಿಷ್ಯದ ಮೇಲೆ ಪರಿಣಾಮವುಂಟು ಮಾಡುತ್ತದೆಂದು ತಿಳಿದಿರಬೇಕು. ನೀವು ಕುಟುಂಬದಲ್ಲಿ ಮಕ್ಕಳ ಏಳಿಗೆಯ ದೊಡ್ಡ ಜವಾಬ್ದಾರಿ ಹೊಂದಿರುವುದರಿಂದ ಯಾವಾಗಲೂ ನಿಮ್ಮ ಮನಸ್ಸನ್ನು ಸ್ತೀಮಿತದಲ್ಲಿಟ್ಟುಕೊಂಡು ಉತ್ತಮವಾದದ್ದನ್ನೇ ನಿಮ್ಮ ನಡೆನುಡಿಗಳಲ್ಲಿ ತೋರಿಸಬೇಕು.KanCCh 165.4

    ಮನೆಯಲ್ಲಿ ಹೆಂಡತಿ ಹಾಗೂ ತಾಯಿಯಾಗಿರುವ ಮಹಿಳೆ ಯಾವಾಗಲೂ ಗುಣುಗುಟ್ಟುವವಳೂ, ಗಂಡ ಹಾಗೂ ಮಕ್ಕಳನ್ನು ಬಯ್ಯುವವಳೂ ಆಗಿದ್ದಲ್ಲಿ ಅವರಿಗೆಮನೆಯಲ್ಲಿ ಸಮಾಧಾನ, ಆಕರ್ಷಣೆ ಇರುವುದಿಲ್ಲ. ಆಗ ಅವರು ಅಡ್ಡ ದಾರಿ ಹಿಡಿದು ಅದರಲ್ಲಿ ಸಂತೋಷ, ಮನರಂಜನೆ ಕಂಡುಕೊಳ್ಳುವರು. ಕುಟುಂಬದ ಕೆಲಸಕಾರ್ಯಗಳ ಭಾರದ ಹೊಣೆಹೊತ್ತಿರುವ ಹೆಂಡತಿ ಹಾಗೂ ತಾಯಿಯೂ ಆದ ಸ್ತ್ರೀ, ಅನೇಕ ಸಂದರ್ಭಗಳಲ್ಲಿ ಗಂಡ ಹಾಗೂ ಮಕ್ಕಳಿಗೆ ಹಿತಕರವಾದ ಸೌಜನ್ಯವನ್ನು ತೋರಿಸದೆ, ಅವಿವೇಕತನದಿಂದ ವರ್ತಿಸುವಳು. ಆಕೆಯು ಮನೆಯಲ್ಲಿ ಅಡುಗೆ ಮಾಡುವುದು ಅಥವಾ ಇನ್ನಿತರ ಕೆಲಸಗಳಲ್ಲಿ ತೊಡಗಿರುವಾಗ, ಗಂಡ ಹಾಗೂ ಮಕ್ಕಳು ಮನೆಯಲ್ಲಿ ಪ್ರೀತಿ ಸಿಕ್ಕದಿರುವುದರಿಂದ ಅಪರಿಚಿತರಂತೆ ಬಂದು ಹೋಗುವರು. ತಾಯಿಯು ಮನೆಯಲ್ಲಿರುವಾಗ ಒಪ್ಪ ಓರಣವಿಲ್ಲದ ಕೊಳಕಾದ ಬಟ್ಟೆ ಹಾಕಿಕೊಂಡಿದ್ದಲ್ಲಿ, ಆಕೆಯ ಮಕ್ಕಳೂ ಸಹ ಅದೇ ಕೊಳಕಾದರೀತಿ ಅನುಸರಿಸುವರು. ಮನೆಯಲ್ಲಿ ಎಂತಹ ಬಟ್ಟೆ ಹಾಕಿದ್ದರೂ, ಏನೂ ತೊಂದರೆಯಿಲ್ಲವೆಂದು ಅನೇಕ ತಾಯಂದಿರು ಭಾವಿಸುತ್ತಾರೆ. ಆದರೆ ಅವರು ಶೀಘ್ರವಾಗಿ ಮನೆಯಲ್ಲೇ ತಮ್ಮ ಪ್ರಭಾವ ಕಳೆದುಕೊಳ್ಳುವರು. ಮಕ್ಕಳು ತಮ್ಮ ತಾಯಿಯ ಬಟ್ಟೆಗಳನ್ನು, ಇತರರು ಹಾಕಿಕೊಳ್ಳುವ ಶುಭ್ರವಾದ ಬಟ್ಟೆಗಳೊಂದಿಗೆ ಹೋಲಿಸಿ ನೋಡಿದಾಗ ತಮ್ಮ ತಾಯಿಯ ಬಗ್ಗೆ ಗೌರವ ಕಮ್ಮಿಯಾಗುವುದು.KanCCh 165.5

    ಯಥಾರ್ಥವಾದ ಹೆಂಡತಿ ಹಾಗೂ ತಾಯಿ ತನ್ನ ಕರ್ತವ್ಯಗಳನ್ನು ಗೌರವದಿಂದಲೂ ಮತ್ತು ಸಂತೋಷದಿಂದಲೂ ನಿರ್ವಹಿಸುವಳು. ತನ್ನ ಮನೆಯನ್ನು ಒಪ್ಪವಾಗಿ, ಓರಣವಾಗಿ ಇಟ್ಟುಕೊಳ್ಳುವುದರಲ್ಲಿ ಯಾವ ಕೆಲಸವೂ ಅವಮಾನಕರವಲ್ಲವೆಂದು ಅವಳು ಭಾವಿಸುವರು.KanCCh 166.1