Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕುರ್ಚಿ, ಮೇಜು ಮುಂತಾದ ಸರಳವೂ ಮತ್ತು ಕಡಿಮೆ ಬೆಲೆಯುಳ್ಳವೂ ಆಗಿರಬೇಕು

    ಮನೆಯಲ್ಲಿರುವ ಪೀಠೋಪಕರಣಗಳು ಸರಳವಾಗಿಯೂ, ಸುಲಭವಾಗಿ ಶುಚಿ ಮಾಡುವಂತದ್ದು ಹಾಗೂ ಸಾಗಿಸುವಾಗ ಒಡೆದು ಹೋಗದಂತವೂ, ಮುರಿದು ಹೋಗದಂತವೂ ಆಗಿರಬೇಕು. ಕುಟುಂಬದಲ್ಲಿ ಸಂತೃಪ್ತಿ ಹಾಗೂ ಪ್ರೀತಿ ತುಂಬಿದ್ದಲ್ಲಿ, ಸಾಧಾರಣವಾದ ಮನೆಯನ್ನೂ ಸಹ ನಿಮ್ಮ ಅಭಿರುಚಿಗೆ ತಕ್ಕಂತೆ ಆಕರ್ಷಕವಾಗಿಯೂ ಮತ್ತು ಮನಸ್ಸಿಗೆ ಮುದ ನೀಡುವಂತೆಯೂ ಮಾಡಬಹುದು.KanCCh 173.1

    ತೋರಿಕೆಯ ಪ್ರದರ್ಶನದ ಮನೆಯಲ್ಲಿ ಸಂತೋಷ ಇರುವುದಿಲ್ಲ. ಒಪ್ಪ ಓರಣವುಳ್ಳ ಮನೆ ಸರಳವಾಗಿದ್ದಷ್ಟೂ, ಅಂತಹ ಮನೆಯಲ್ಲಿ ಹೆಚ್ಚಾಗಿ ಸಂತೋಷವಿರುತ್ತದೆ. ಮಕ್ಕಳು ತಮ್ಮ ಮನೆಯಲ್ಲಿ ಸಂತೋಷದಿಂದ ಸಂತೃಪ್ತಿಯಾಗಿರುವುದಕ್ಕೆ ಬೆಲೆಬಾಳುವ ಪರಿಸರವಾಗಲಿ ಅಥವಾ ಪೀಠೋಪಕರಣಗಳ ಅಗತ್ಯವಾಗಲಿ ಬೇಕಾಗಿಲ್ಲ. ಆದರೆ ಪ್ರೀತಿ ಮತ್ತು ಎಚ್ಚರಿಕೆಯ ಗಮನ ನೀಡುವುದು ಅವರ ಸಂತೋಷ, ಸಂತೃಪ್ತಿ ಅಗತ್ಯವಾಗಿದೆ.KanCCh 173.2

    ತಂದೆ-ತಾಯಿಯರು ಮನೆಯಲ್ಲಿ ಯಾವಾಗಲೂ ಸರಿಯಾದ ನಡವಳಿಕೆ, ಸಭ್ಯತೆ ಹಾಗೆ ಶಿಷ್ಟತೆಯ ಮಾದರಿಯಾಗಿರಬೇಕು. ಪರಲೋಕದಲ್ಲಿ ಯಾವುದೇ ರೀತಿಯ ಅವ್ಯವಸ್ಥೆ ಇರುವುದಿಲ್ಲವೆಂದು ನೆನಪಿರಲಿ. ಆದುದರಿಂದ ನಿಮ್ಮ ಮನೆಯು ಈ ಲೋಕದಲ್ಲಿ ಒಂದು ಮಾದರಿಯಾದ ಪರಲೋಕದಂತಿರಬೇಕು. ಪ್ರತಿದಿನವೂ ಮನೆಯಲ್ಲಿ ನೀವು ಸಣ್ಣಪುಟ್ಟ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುವಾಗ, ನೀವು ದೇವರೊಂದಿಗೆ ಸಹ ಕೆಲಸಗಾರರಾಗಿದ್ದು, ಕ್ರೈಸ್ತ ಸ್ವಭಾವಗಳನ್ನು ಪರಿಪೂರ್ಣಗೊಳಿಸುತ್ತೀರಿ ಎಂಬ ವಿಷಯ ನಿಮ್ಮ ನೆನಪಿರಲಿ.KanCCh 173.3

    ತಂದೆ-ತಾಯಿಯರೇ, ನಿಮ್ಮ ಅಭ್ಯಾಸಗಳು ಸರಿಯಾಗಿದ್ದಲ್ಲಿ, ನೀವು ನಿಮ್ಮ ಮಕ್ಕಳ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದೀರೆಂಬುದನ್ನು ನೆನಪಿನಲ್ಲಿಡಿ. ಮನೆಯಲ್ಲೇ ನೀತಿ, ಸುಸ್ವಭಾವ. ವ್ಯವಸ್ಥಿತವಾದ ಒಪ್ಪ ಓರಣ, ಕಂಡುಬಂದು ಆತ್ಮ ಪ್ರಾಣ ಜೀವ ಪರಿಶುದ್ಧವಾಗಿದ್ದಲ್ಲಿ, “ನೀವು ಲೋಕಕ್ಕೆ ಬೆಳಕಾಗಿದ್ದೀರಿ” ಎಂಬ ರಕ್ಷಕನ ಮಾತುಗಳಿಗೆ ವಿಧೇಯರಾಗಿರುತ್ತೀರಿ.KanCCh 173.4

    ಬಾಲ್ಯದಲ್ಲಿಯೇ ಮಕ್ಕಳು ತಮ್ಮ ಬಟ್ಟೆಗಳನ್ನು ಶುಭ್ರವಾಗಿಟ್ಟುಕೊಳ್ಳುವಂತೆ ಕಲಿಸಬೇಕು. ಕೆಲವು ತಂದೆ-ತಾಯಿಯರು ಮನೆಯ ವಸ್ತುಗಳನ್ನು ಮಕ್ಕಳು ಒಡೆದುನಾಶಮಾಡುವಾಗಲೂ ನೋಡಿಯೂ ನೋಡದಂತಿರುತ್ತಾರೆ. ಬೇರೆಯವರ ಮನೆಯ ವಸ್ತುಗಳನ್ನು ಮುಟ್ಟಬಾರದೆಂದು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಕಲಿಸಬೇಕು. ಕುಟುಂಬದ ಸಂತೋಷ, ಸಮಾಧಾನಕ್ಕಾಗಿ ಅವರು ಸಭ್ಯತೆ, ಶಿಷ್ಟಾಚಾರದ ನಿಯಮಗಳನ್ನು ಅನುಸರಿಸುವಂತೆ ತಿಳುವಳಿಕೆ ನೀಡಬೇಕು. ನೋಡಿದ್ದೆಲ್ಲವನ್ನೂ ಬೇಕೆಂದು ಕಣ್ಣೀರಿಟ್ಟು ಕೊಂಡುಕೊಂಡು ಬಲವಂತವಾಗಿ ಉಪಯೋಗಿಸಿದಾಗ ಮಕ್ಕಳು ಸಂತೋಷವಾಗಿರುವುದಿಲ್ಲ. ಅವರು ಮನೆಯ ವಸ್ತುಗಳ ಬಗ್ಗೆ ಹೊಣೆಗಾರಿಕೆ ಹೊಂದಿರುವಂತೆ ಶಿಕ್ಷಣ ನೀಡಬೇಕು. ಇಲ್ಲದಿದ್ದಲ್ಲಿ ಅವರು ಬೆಳೆದಾಗ ಯಾರ ಬಗ್ಗೆಯೂ ಕರುಣೆ ಇಲ್ಲದಂತೆ ವರ್ತಿಸುವ ಸ್ವಭಾವ ಬೆಳೆಸಿಕೊಳ್ಳುವರು. ಸುಲಭವಾಗಿ ಮುರಿಯುವಂತ ಆಟದ ಸಾಮಾನುಗಳನ್ನು ಮಕ್ಕಳಿಗೆ ಕೊಡಬಾರದು. ಈ ಸಲಹೆಯು ಪ್ರಾಮುಖ್ಯವಲ್ಲವೆಂದು ನಿಮಗೆ ಅನಿಸಿದರೂ, ಮಗುವಿನ ಬೆಳವಣಿಗೆಯಲ್ಲಿ ಮುಖ್ಯವಾಗಿದೆ.KanCCh 173.5

    *****