Loading...
Larger font
Smaller font
Copy
Print
Contents

ಪರ್ವತ ಪ್ರಸಂಗ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    “ತೀರ್ಪು ಮಾಡಬೇಡಿರಿ; ಹಾಗೆ ನಿಮಗೂ ತೀರ್ಪಾಗುವುದಿಲ್ಲ.”

    ಸ್ವಂತ ಕ್ರಿಯೆಗಳಿಂದ ರಕ್ಷಣೆಯನ್ನು ಹೊಂದಲು ಪ್ರಯತ್ನಿಸುವುದು, ಖಂಡಿ ತವಾಗಿಯೂ ಮಾನವ ಕಲ್ಪನೆಗಳನ್ನು ಪಾಪಕ್ಕೆದುರಾಗಿ ಅಡ್ಡಗಟ್ಟುವ ಸಾಧನವಾಗಿ ಒಡ್ಡುವಂತೆ ಮನುಷ್ಯರನ್ನು ಪ್ರೇರಿಸುತ್ತದೆ. ಯಾಕಂದರೆ ಧರ್ಮಶಾಸ್ತ್ರವನ್ನು ಅನುಸರಿಸಲು ಅವರು ತಪ್ಪುವವರಾದ್ದರಿಂದ, ತಮ್ಮದೇ ಆದ ವಿಧಿನಿಯಮಗಳನ್ನು ಕಲ್ಪಿಸಿ ಅವುಗಳನ್ನು ಅನುಸರಿಸಲು ತಮ್ಮನ್ನು ಒತ್ತಾಯಪಡಿಸುತ್ತಾರೆ. ಇವೆಲ್ಲಾ ಮನಸ್ಸನ್ನು ದೇವರ ಕಡೆಯಿಂದ ಸ್ವಾರ್ಥಕ್ಕೆ ತಿರುಗಿಸುವುದಾಗಿದೆ. ಆತನ ಪ್ರೀತಿಯು ಅವನ ಹೃದಯದಲ್ಲಿ ತಣ್ಣಗಾಗುತ್ತದೆ, ಅದರೊಡನೆ ಅವನ ನೆರೆಯವರ ಮೇಲಿನ ಪ್ರೀತಿಯೂ ನಶಿಸಿಹೋಗುತ್ತದೆ. ಮಾನವ ಕಲ್ಪನೆಯ ಕಟ್ಟುಪಾಡೆಲ್ಲಾ, ಅವರ ಅಗಣಿತ ಪ್ರಯತ್ನಗಳೊಡನೆ, ಮಾನವರ ವಿಧಿನಿಯಮಗಳಿಗೆ ಕೊರತೆ ಕಂಡುಬರುವವರನ್ನೂ ತೀರ್ಪುಮಾಡುವಂತೆ ಪ್ರೇರಿಸುತ್ತದೆ. ಸ್ವಾರ್ಥಪರತೆ ಮತ್ತು ಸೂಕ್ಷ್ಮಟಿಕೆಉಅ ಸನ್ನಿವೇಶವು ಶ್ರೇಷ್ಠವೂ ಉದ್ದಾತವೂ ಆದ ಮನೋಭಾವನೆಯನ್ನು ಕುಂದಿಸಿ ಮಾನವರು ಸ್ವವಿಚಾರಾಸಕ್ತರಾದ ನ್ಯಾಯಾಧೀಶರನ್ನಾಗಿಯೂ ಮತ್ತು ಪುಟ್ಟ ಬೇಹುಗಾರರನ್ನಾಗಿ ಮಾಡುತ್ತದೆ.MBK 123.4

    ಫರಿಸಾಯರು ಈ ದರ್ಜೆಯವರಾಗಿದ್ದರು. ತಮ್ಮ ನಿರ್ಬಲಾವಸ್ಥೆಯ ಪರಿಜ್ಞಾನವಿಲ್ಲದೆ ತಮ್ಮನ್ನು ತಗ್ಗಿಸಿಕೊಳ್ಳದೆಯೂ ಮತ್ತು ದೇವರು ಅವರಿಗೆ ಅನುಗ್ರಹಿಸಿರುವ ಮಹಾ ಸದವಕಾಶಗಳಿಗೂ ಕೃತಜ್ಞರಾಗಿರದೆಯೂ ತಮ್ಮ ಮತಶ್ರದ್ಧಾರಾಧೆನೆಯಿಮ್ದ ಕೂಡಿದವರಾಗಿದ್ದರು. ಆಧ್ಯಾತ್ಮಿಕ ಮದಾಂಧತೆಯಿಂದ ಕೂಡಿದವರಾಗಿ, “ನಾನು, ನನ್ನ ಆಲೋಚನೆಗಳು, ನನ್ನ ಜ್ಞಾನ, ನನ್ನ ಮಾರ್ಗಗಳು” ಎಂಬಿವೇ ಅವರ ಪ್ರಧಾನ ವಿಷಯಗಳಾಗಿದ್ದುವು. ಅವರ ಸ್ವಂತ ಸಾಧನೆಗಳೇ ಇತರರನ್ನೂ ತೀರ್ಪುಮಾಡುವ ಮಾನದಂಡವಾಯಿತು. ಸ್ವಗೌರವದ ವಸ್ತ್ರಭೂಷಿತರಾಗಿ, ಇತರರನ್ನು ಟೀಕಿಸುವುದಕ್ಕೂ, ದೂಷಿಸುವುದಕ್ಕೂ, ನ್ಯಾಯಾಸನವನ್ನೇರಿದರು.MBK 124.1

    ಜನರೂ ಕೂಡ ಇದೇ ರೀತಿಯಾದ ಮನಸ್ಸಿನಿಂದ ಕೂಡಿದವರಾಗಿ, ಮನಸ್ಸಾಕ್ಷಿಯನ್ನು ಅತಿಕ್ರಮಿಸಿ, ಆತ್ಮಕ್ಕೂ ದೇವರಿಗೂ ಸಂಬಂಧಿಸಿದ ವಿಷಯಗಳಲ್ಲಿ ಒಬ್ಬರನ್ನೊಬ್ಬರು ತೀರ್ಪುಮಾಡುವವರಾದರು. ಯೇಸುವು ಇಂಥಾ ಆತ್ಮವನ್ನೂ ಮತ್ತು ಅಭ್ಯಾಸವನ್ನೂ ಕುರಿತೇ “ತೀರ್ಪು ಮಾಡಬೇಡಿರಿ; ಹಾಗೆ ನಿಮಗೂ ತೀರ್ಪಾಗುವುದಿಲ್ಲ” ವೆಂದು ಹೇಳಿದ್ದು. ಅಂದರೆ ನೀವು ನಿಮ್ಮನ್ನು ಒಂದು ಮಾನದಂಡವನ್ನಾಗಿ ಮಾಡಬೇಡಿರಿ. ನಿಮ್ಮ ಆಲೋಚನೆಗಳನ್ನೂ, ಸೇವೆಯನ್ನೂ ಕುರಿತಾದ ನಿಮ್ಮ ಮನೋಭಾವನೆಯನ್ನೂ, ಸತ್ಯವೇದದ ನಿಮ್ಮ ವ್ಯಾಖ್ಯಾನವನ್ನೂ, ಇತರರನ್ನು ತೀರ್ಪುಮಾಡುವ ಒರೆಗಲ್ಲನ್ನಾಗಿ ಮಾಡಬೇಡಿರಿ, ಮತ್ತು ಅವರು ನಿಮ್ಮ ಭಾವನೆಗೆ ಅನುರೂಪವಾಗಿಲ್ಲದಿದ್ದರೆ ನಿಮ್ಮ ಮನಸ್ಸಿನಲ್ಲಿ ಅವರನ್ನು ದೂಷಿಸಬೇಡಿರಿ. ಇತರರನ್ನು ಆಧಾರವಿಲ್ಲದೆ ಟೀಕಿಸಬೇಡಿರಿ, ಮತ್ತು ತೀರ್ಪುಮಾಡಲು ಬೇಡಿರಿ.MBK 124.2

    “ಆದುದರಿಂದ ಕಾಲಕ್ಕೆ ಮೊದಲು ಯಾವುದನ್ನೂ ತೀರ್ಪುಮಾಡಬೇಡಿರಿ; ಕರ್ತನು ಬರುವ ತನಕ ತಡೆಯಿರಿ. ಆತನು ಕತ್ತಲೆಯಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು, “ಹೃದಯದ ಆಲೋಚನೆಗಳನ್ನು ಪ್ರತ್ಯಕ್ಷಪಡಿಸುವನು.” 1 ಕೊರಿಂಥ 4: 5. ನಾವು ಹೃದಯಗಳನ್ನು ಓದಲಾರೆವು. ನಾವೇ ತಪ್ಪಿತಸ್ಥರಾಗಿರುವುದರಿಂದ, ಇತರರನ್ನು ತೀರ್ಪುಮಾಡಲು ನಾವು ಅರ್ಹರಲ್ಲ. ಅಲ್ಪರಾದ ಮನುಷ್ಯರು ಹೊರಗಿನ ತೋರ್ಕೆಯಿಂದಲೇ ತೀರ್ಪುಮಾಡುತ್ತಾರೆ. ಎಲ್ಲಾ ಕ್ರಿಯೆಗಳ ಮೂಲದ ರಹಸ್ಯವನ್ನೂ ಬಲ್ಲಾತನೂ ಮತ್ತು ದಯೆಯಿಂದಲೂ ಕನಿಕರದಿಂದಲೂ ವರ್ತಿಸುವವನಿಗೆ ಮಾತ್ರ, ಪ್ರತಿಯೊಂದು ಆತ್ಮದ ವ್ಯವಹಾರವನ್ನೂ ನಿರ್ಧರಿಸುವ ಅಧಿಕಾರವು ಕೊಡಲ್ಪಟ್ಟಿದೆ.MBK 125.1

    “ಆದುದರಿಂದ ಎಲೈ ಮನುಷ್ಯನೇ, ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಯಾವನಾದರೂ ಸರಿಯೇ ಉತ್ತರ ಹೇಳುವುದಕ್ಕೆ ಮಾರ್ಗವಿಲ್ಲ. ಹೇಗೆಂದರೆ ಮತ್ತೊಬ್ಬರಲ್ಲಿ ದೋಷವೆಣಿಸುವುದರಿಂದ ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು. ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಆ ದೋಷಗಳನ್ನೇ ನಡಿಸುತ್ತೀಯಲ್ಲಾ” ರೋಮಾಯ 2: 1. ಹೀಗೆ ಇತರರನ್ನು ದೂಷಿಸುವ ಅಥವಾ ಟೀಕಿಸುವವರು, ತಾವೇ ಅಪರಾಧಿಗಳೆಂದು ವ್ಯಕ್ತಪಡಿಸುತ್ತಾರೆ; ಯಾಕಂದರೆ ಅದೇ ದೋಷಗಳನ್ನು ಅವರೂ ಮಾಡುವವರಾಗಿದ್ದಾರೆ. ಇತರರನ್ನು ತೆಗಳುವುದರಿಂದ, ತಮ್ಮ ಮೇಲೆಯೇ ಶಿಕ್ಷೆಯನ್ನು ವಿಧಿಸಿಕೊಳ್ಳುತ್ತಾರೆ, ಮತ್ತು ದೇವರು ಅವರಿಗಾದ ಶಿಕ್ಷೆಯು ನ್ಯಾಯವಾದದ್ದೆಂದು ಹೇಳುತ್ತಾನೆ. ಅವರಿಗೆ ವಿರುದ್ಧವಾದ ಅವರ ತೀರ್ಪನ್ನು ಆತನು ಅಂಗೀಕರಿಸಿಕೊಳ್ಳುತ್ತಾನೆ.MBK 125.2