Go to full page →

“ಪ್ರಾರ್ಥನೆ ಮಾಡುವಾಗ ಅಜ್ಞಾನಿಗಳ ಹಾಗೆ ಹೇಳಿದ್ದನ್ನೇ ಸುಮ್ಮ ಸುಮ್ಮನೆ ಹೇಳಬೇಡ.” MBK 89

ತಮ್ಮ ಪ್ರಾರ್ಥನೆಗಳಲ್ಲಿ ಪಾಪಕ್ಕೆ ಪ್ರಾಯಶ್ಚಿತ್ತ ಕೊಡುವ ಯೋಗ್ಯತೆ ಇದೆಯೆಂದು ಅಜ್ಞಾನಿಗಳು ತಿಳಿದರು. ಇದರಿಂದ ಪ್ರಾರ್ಥನೆಗಳು ಉದ್ದವಾದಷ್ಟೂ ಅರ್ಹತೆಯೂ ಹೆಚ್ಚಾಗಿರುವುದು. ಅವರು ತಮ್ಮ ಪ್ರಯಾಸದಿಂದ ಪವಿತ್ರರಾಗುವುದಿದ್ದರೆ, ಅವರು ಹೆಚ್ಚಳಪಡಲೂ ಮತ್ತು ಹೊಗಳಿಕೊಳ್ಳಲೂ ಅವರಿಗೆ ಮಾರ್ಗವಿತ್ತು. ಇಂಥ ಪ್ರಾರ್ಥನೆಯ ಗ್ರಹಿಕೆಯು ಎಲ್ಲಾ ಸುಳ್ಳುಮತಗಳ ಆಧಾರವಾಗಿರುವ ಸ್ವತಃ ಪ್ರಾಯಶ್ಚಿತ್ತವನ್ನುಂಟುಮಾಡಿಕೊಳ್ಳುವ ತತ್ವದ ಪ್ರಯಾಸವಾಗಿದೆ. ಪರಿಸಾಯರು ಈ ಅಜ್ಞಾನಿಗಳ ಪ್ರಾರ್ಥನೆಯ ಭಾವನೆಯನ್ನು ಅವಲಂಬಿಸಿದ್ದರು, ಈ ನಮ್ಮ ಕಾಲದಲ್ಲೂ ಕ್ರೈಸ್ತರೆನಿಸಿಕೊಳ್ಳುವವರಲ್ಲಿಯು ಈ ಅಭ್ಯಾಸವು ಇಲ್ಲದೆ ಇಲ್ಲ. ಹೃದಯವು ದೇವರ ಅವಶ್ಯಕತೆಯನ್ನೊಲ್ಲದಿರುವಾಗ ಯಾವಾಗಲೂ ವಾಡಿಕೆಯಾದವುಗಳ ಪುನರೋಚ್ಚಾರಣೆಯು ಅಜ್ಞಾನಿಗಳಂತೆ “ಹೇಳಿದ್ದನ್ನೇ ಸುಮ್ಮಸುಮ್ಮನೆ” ಹೇಳುವ ಗುಣವುಳ್ಳದ್ದಾಗಿದೆ. MBK 89.1

ಪ್ರಾರ್ಥನೆಯು ಪಾಪಕ್ಕೆ ಪ್ರಾಯಶ್ಚಿತ್ತವಲ್ಲ; ಅಂಥ ಅರ್ಹತೆಯನ್ನಾದರೂ ಅಥವಾ ಸದ್ಗುಣವನ್ನಾದರೂ ಅದು ಹೊಂದಿಲ್ಲ. ನಮಗೆ ಬೇಕಾದಾಗ ಉಪಯೋಗಿಸಿಕೊಳ್ಳಬಹುದಾದ ಅಲಂಕಾರಭರಿತ ಮಾತುಗಳೆಲ್ಲಾ ಒಂದೇ ಒಂದು ಪವಿತ್ರ ಕೋರಿಕೆಗೆ ಎಣೆಯಲ್ಲ, ಹೃದಯದ ಯಥಾರ್ಥವಾದ ಭಾವನೆಯನ್ನು ವ್ಯಕ್ತಪಡಿಸದಿದ್ದರೆ ಅತಿ ವಾಗ್ವೈಕರಿಯುಳ್ಳ ಪ್ರಾರ್ಥನೆಗಳೂ ಅಪ್ರಯೋಜಕವಾದ ಮಾತುಗಳಾಗಿವೆ. ಆದರೆ ಆಸಕ್ತಿಯುಳ್ಳ ಹೃದಯದಿಂದ ಹೊರಡುವ ಪ್ರಾರ್ಥನೆಯು, ಆತ್ಮದ ಸಾಮಾನ್ಯ ಅವಶ್ಯಕತೆಗಳನ್ನು, ಭೂಲೋಕದ ಮಿತ್ರನೊಬ್ಬನಲ್ಲಿ ಒಂದು ಸಹಾಯವನ್ನು ಕೇಳುವಂತೆ ವ್ಯಕ್ತಪಡಿಸಿ, ಅದನ್ನು ಹೊಂದಲು ನಿರೀಕ್ಷಿಸುವುದು-ಇದೇ ನಂಬಿಕೆಯಿಂದ ಕೂಡಿದ ಪ್ರಾರ್ಥನೆಯಾಗಿದೆ. ದೇವರು ನಮ್ಮ ಆಚಾರ ಉಪಚಾರೋಕ್ತಿಯನ್ನು ಇಚ್ಛಿಸುವುದಿಲ್ಲ; ಆದರೆ ಹೃದಯದ ಎಣೆಯಿಲ್ಲದ, ಪಾಪದ ಮತ್ತು ದೌರ್ಬಲ್ಯದ ಅರುಹಿನಿಂದ ಜಜ್ಜಲ್ಪಟ್ಟು ನಿಗ್ರಹಿಸಲ್ಪಟ್ಟ ಮೊರಯೇ ಕೃಪಾಪೂರ್ಣನಾದ ದೇವರ ಬಳಿಗೆ ಮಾರ್ಗವನ್ನು ಕಂಡುಕೊಳ್ಳುವುದು. MBK 89.2