Go to full page →

ಧಾರ್ಮಿಕ ನಾಯಕರು ಬಹಳ ಆಶಾಭಾವದಿಂದಿರುವರು ಕೊಕಾಘ 135

ತತ್ವಶಾಸ್ತ್ರದ ವಿವೇಚನೆಯು ದೇವರನ್ಯಾಯತೀರ್ಪಿನ ಭಯವನ್ನು ಜನರ ಮನಸ್ಸಿನಿಂದ ತೆಗೆದು ಹಾಕಿದಾಗ, ಧಾರ್ಮಿಕ ಪಂಡಿತರು ಜಗತ್ತಿನಲ್ಲಿ ಬಹಳ ಕಾಲ ಸಮಾಧಾನ, ಸುರಕ್ಷತೆ ಹಾಗೂ ಸುಭಿಕ್ಷೆ ಇರುವುದೆಂದು ಹೇಳುತ್ತಿರುವಾಗ, ಜನರು ಉಣ್ಣುತ್ತಾ, ಕುಡಿಯುತ್ತಾ ಸಂತೋಷದಿಂದಿರುವಾಗ, ತಮ್ಮ ವ್ಯಾಪಾರ ವ್ಯವಹಾರ ಹಾಗೂ ಮೋಜಿನಲ್ಲಿ ಮಗ್ನರಾಗಿ ದೇವರ ಎಚ್ಚರಿಕೆಯನ್ನು ತಿರಸ್ಕರಿಸಿ ಆತನ ಸಂದೇಶಕರನ್ನು ಅಪಹಾಸ್ಯ ಮಾಡುವಾಗ - ಅವರು ತಪ್ಪಿಸಿಕೊಳ್ಳಲಾಗದಂತೆ ನಾಶವು ಅವರ ಮೇಲೆ ತಕ್ಷಣದಲ್ಲೇ ಬರುವುದು (ಪೇಟ್ರಿಯಾರ್ಕ್ ಅಂಡ್ ಪ್ರಾಫೆಟ್ಸ್ ಪುಟ 104, 1890). ಕೊಕಾಘ 135.5

ಕರ್ತನ ದಿನವು ಎಂದಾದರೂ ಬರಲಿ, ಭಕ್ತಿಹೀನರ ಮೇಲೆ ಆ ದಿನವು ಇದಕ್ಕಿದಂತೆ ಬರುವುದು. ಜೀವನವು ಮೊದಲಿನಂತೆ ಸಾಗುತ್ತಿರುವಾಗ, ಜನರು ವ್ಯಾಪಾರ ವ್ಯವಹಾರದಲ್ಲಿ ತಲ್ಲೀನರಾಗಿ ಹಣಸಂಪಾದನೆ ಮಾಡುತ್ತಿರುವಾಗ, ಧಾರ್ಮಿಕ ನಾಯಕರು ಜಗತ್ತಿನಲ್ಲಿ ಕಂಡುಬರುವ ಅಭಿವೃದ್ಧಿ ಕಾರ್ಯಗಳನ್ನು ಹೇಳುತ್ತಿರುವಾಗ ಜನರು ಎಲ್ಲೆಲ್ಲಿಯೂ ಸುರಕ್ಷತೆಯಿದೆ ಎಂಬ ತಪ್ಪುಭ್ರಮೆಯಲ್ಲಿ ತೇಲಾಡುತ್ತಿರುವಾಗ, ಮಧ್ಯರಾತ್ರಿಯಲ್ಲಿ ಕಳ್ಳನು ಬರುವಂತೆ ತಕ್ಷಣದಲ್ಲಿ ದೇವರ ಎಚ್ಚರಿಕೆಗೆ ನಿರ್ಲಕ್ಷ್ಯ ತೋರಿದ ಭಕ್ತಿಹೀನರ ಮೇಲೆ ನಾಶವು ಬರುವುದು, ಅವರು ಅದರಿಂದ ತಪ್ಪಿಸಿಕೊಳ್ಳಲಾರರು (ಗ್ರೇಟ್ ಕಾಂಟ್ರೊವರ್ಸಿ, ಪುಟ 38). ಕೊಕಾಘ 136.1