Go to full page →

ಕೃಪಾಕಾಲ ಮುಕ್ತಾಯವಾಯಿತೆಂದು ಸೈತಾನನು ಊಹಿಸುವನು ಕೊಕಾಘ 136

ಸಂಕಟದ ಸಮಯದಲ್ಲಿ ಸೈತಾನನು ದುಷ್ಟರನ್ನು ಪ್ರಚೋದನೆ ಮಾಡುತ್ತಾನೆ. ಇವರು ದೇವಜನರನ್ನು ನಾಶಮಾಡಲು ಕಾದುಕೊಂಡಿರುತ್ತದೆ. ಆದರೆ ದೇವಜನರ ಪಾಪಗಳು ಕ್ಷಮಿಸಲ್ಪಟ್ಟಿವೆಯೆಂದು ಪರಲೋಕದ ಪುಸ್ತಕಗಳಲ್ಲಿ ಬರೆದಿರುವುದು ಅವನಿಗೆ ತಿಳಿದಿಲ್ಲ (ರಿವ್ಯೂ ಅಂಡ್ ಹೆರಾಲ್ಡ್, ನವೆಂಬರ್ 19, 1908). ಕೊಕಾಘ 136.2

ಯಾಕೋಬನನ್ನು ಕೊಲ್ಲುವಂತೆ ಸೈತಾನನು, ಏಸಾವನನ್ನು ಪ್ರೇರೇಸಿದಂತೆ, ಸಂಕಟದ ಸಮಯದಲ್ಲಿ ದೇವಜನರನ್ನು ನಾಶಮಾಡುವಂತೆ ಅವನು ದುಷ್ಟರನ್ನು ಪ್ರಚೋದಿಸುವನು... ಆದರೆ ದೇವದೂತರು ದೇವಜನರನ್ನು ಕಾಪಾಡುತ್ತಿರುವುದನ್ನು ಸೈತಾನನು ನೋಡುವನು. ಅವರ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ಅವನು ಊಹಿಸುವನು. ಆದರೆ ಪರಲೋಕದ ದೇವದರ್ಶನ ಗುಡಾರದಲ್ಲಿ ದೇವರ ಮಕ್ಕಳ ಪ್ರಕರಣಗಳು ನಿರ್ಧರಿಸಲ್ಪಟ್ಟಿರುವುದು ಅವನಿಗೆ ತಿಳಿಯುವುದಿಲ್ಲ (ಗ್ರೇಟ್‌ಕಾಂಟ್ರೊವರ್ಸಿ, ಪುಟ 618). ಕೊಕಾಘ 136.3