Go to full page →

ಮೊದಲನೆ ಹಾಗೂ ಎರಡನೇ ಉಪದ್ರವಗಳು ಕೊಕಾಘ 142

ಪರಲೋಕದ ದೇವದರ್ಶನದ ಗುಡಾರದಲ್ಲಿ ಕ್ರಿಸ್ತನು ತನ್ನ ಮಹಾಯಾಜಕ ಸೇವೆಯನ್ನು ನಿಲ್ಲಿಸಿದಾಗ, ಮೃಗಕ್ಕೂ ಹಾಗೂ ಅದರ ವಿಗ್ರಹಕ್ಕೂ ಅಡ್ಡಬಿದ್ದು ನಮಸ್ಕರಿಸಿ ಅದರ ಗುರುತನ್ನು ಹೊಂದಿರುವವರ ಮೇಲೆ ಏನೂ ಬೆರಸದ ದೇವರ ಉಗ್ರಕೋಪವು ಸುರಿಸಲ್ಪಡುವುದು (ಪ್ರಕಟನೆ 14:9, 10). ದೇವರು ಇಸ್ರಾಯೇಲ್ಯರನ್ನು ಐಗುಪ್ತರಿಂದ ಬಿಡಿಸುವ ಸಂದರ್ಭದಲ್ಲಿ ಹತ್ತು ಮಹಾಉಪದ್ರವಗಳಿಂದ ಐಗುಪ್ತ್ಯ ರನ್ನು ಬಾಧಿಸಿದನು. ಅದೇ ರೀತಿಯಲ್ಲಿ ದೇವರು ತನ್ನ ಜನರನ್ನು ಅಂತಿಮವಾಗಿ ಬಿಡುಗಡೆಗೊಳಿಸುವ ಸಮಯದಲ್ಲಿ ಅದಕ್ಕಿಂತಲೂ ಭಯಂಕರವಾದ ಉಪದ್ರವಗಳು ಈ ಲೋಕದ ಮೇಲೆ ಬೀಳಲಿದೆ. ಭಯಂಕರವಾದ ಈ ದಂಡನೆಗಳ ಹೇಗಿರುತ್ತವೆಂಬುದನ್ನು ಯೋಹಾನನು ಪ್ರಕಟನೆ 16:2, 3ನೇ ವಚನಗಳಲ್ಲಿ ಈ ರೀತಿ ತಿಳಿಸುತ್ತಾನೆ : “ಆಗ ಮೊದಲನೆ ದೇವದೂತನು ಹೊರಟು ತನ್ನ ಪಾತ್ರೆಯಲ್ಲಿದ್ದದ್ದನ್ನು ಭೂಮಿಗೆ ಹೊಯ್ದನು; ಕೂಡಲೇ ಮೊದಲನೆ ಮೃಗದ ಗುರುತನ್ನು ಹೊಂದಿ, ಅದರ ವಿಗ್ರಹಕ್ಕೆ ನಮಸ್ಕಾರ ಮಾಡುವ ಮನುಷ್ಯರ ಮೈ ಮೇಲೆ ಕೆಟ್ಟ ಉರಿಹುಣ್ಣು ಎದ್ದಿತು... ಸಮುದ್ರದ ನೀರು ಸತ್ತವನ ರಕ್ತದ ಹಾಗಾಯಿತು ಮತ್ತು ಸಮುದ್ರದಲ್ಲಿದ್ದ ಜೀವ ಜಂತುಗಳೆಲ್ಲವೂ ಸತ್ತುಹೋದವು. ಕೊಕಾಘ 142.5

ಈ ಉಪದ್ರವಗಳು ಲೋಕದ ಜನರ ಮೇಲೆ ಸುರಿಸಲ್ಪಡುವವು, ಕೆಲವರು ದೇವರನ್ನು ಬಹಿರಂಗವಾಗಿ ಆಪಾದಿಸಿ ಶಪಿಸುವರು. ಬೇರೆ ಕೆಲವರು ದೇವರ ಮಕ್ಕಳ ಬಳಿಗೆ ತ್ವರೆಯಿಂದ ಬಂದು ಆತನ ದಂಡನೆಯನ್ನು ತಪ್ಪಿಸಿಕೊಳ್ಳುವುದು ಹೇಗೆಂದು ತಮಗೆ ಬೋಧಿಸಬೇಕೆಂದು ಬೇಡಿಕೊಳ್ಳುವರು. ಆದರೆ ದೇವರ ಮಕ್ಕಳು ಉಪದ್ರವಗಳ ಬಾಧೆ ಅನುಭವಿಸುತ್ತಿರುವವರಿಗೆ ಹೇಳಬೇಕಾಗಿದ್ದೇನೂ ಉಳಿದಿಲ್ಲ. ಅವರಿಗಾಗಿ ಕೊನೆಯ ಪ್ರಾರ್ಥನೆ ಮಾಡಿದ್ದಾಗಿದೆ. ಕೊನೆಯ ಎಚ್ಚರಿಕೆ ನೀಡಿದ್ದಾಗಿದೆ (ಅರ್ಲಿ ರೈಟಿಂಗ್, ಪುಟ 281). ಕೊಕಾಘ 143.1