Go to full page →

ಮೂರನೇ ಉಪದ್ರವ ಕೊಕಾಘ 143

ಪರಲೋಕದ ದೇವದರ್ಶನದ ಗುಡಾರದಲ್ಲಿ ಕ್ರಿಸ್ತನ ಸೇವೆ ಮುಕ್ತಾಯವಾಗುವ ತನಕ ನಾಲ್ಕು ಮಂದಿ ದೇವದೂತರು ನಾಲ್ಕು ದಿಕ್ಕುಗಳ ಗಾಳಿಯನ್ನು ಹಿಡಿದುಕೊಂಡಿರುವುದನ್ನು ಶ್ರೀಮತಿ ವೈಟಮ್ಮನವರು ದರ್ಶನದಲ್ಲಿ ಕಂಡರು. ಇದಾದನಂತರ ಕೊನೆಯ ಏಳು ಉಪದ್ರವಗಳು ಬರುವವು, ಇವುಗಳಿಂದ ದುಷ್ಟರು ಒಳ್ಳೆಯವರ ವಿರುದ್ಧವಾಗಿ ಅತಿಯಾಗಿ ಕೋಪಗೊಳ್ಳುವರು. ನೀತಿವಂತರಿಂದಲೇ ಈ ಉಪದ್ರವಗಳು ಬಂದಿವೆ ಹಾಗೂ ಇವರನ್ನು ನಾಶಮಾಡಿ ಈ ಲೋಕದಿಂದ ತೆಗೆದು ಹಾಕಿದರೆ ಇವುಗಳು ನಿಲ್ಲುತ್ತವೆಂದು ದುಷ್ಟರು ಆಲೋಚಿಸುವರು. ದೇವರ ಮಕ್ಕಳನ್ನು ನಾಶಮಾಡಬೇಕೆಂಬ ಕಾನೂನು ಜಾರಿಯಾಗುವುದು. ಆಗ ನೀತಿವಂತರು ಹಗಲು ರಾತ್ರಿ ತಮ್ಮ ಬಿಡುಗಡೆಗಾಗಿ ದೇವರಿಗೆ ಮೊರೆಯಿಡುವರು (ಅರ್ಲಿ ರೈಟಿಂಗ್ಸ್, ಪುಟ 3, 37). ಕೊಕಾಘ 143.2

“ಮೂರನೆಯವನು ತನ್ನ ಪಾತ್ರೆಯಲ್ಲಿದ್ದದ್ದನ್ನು ನದಿಗಳ ಮೇಲೆಯೂ, ನೀರಿನ ಬುಗ್ಗೆಗಳ ಮೇಲೆಯೂ ಹೊಯಿದನು; ಅವುಗಳ ನೀರು ರಕ್ತವಾಯಿತು. ಈ ಉಪದ್ರವಗಳು ಬಹಳ ಭಯಂಕರವಾಗಿದ್ದು, ದೇವರ ತೀರ್ಪು ಸಂಪೂರ್ಣವಾಗಿ ನ್ಯಾಯವಾಗಿದೆ ಎಂದು ಸಮರ್ಥಿಸುತ್ತದೆ. ಜಲಾಧಿಪತಿಯಾದ ದೂತನು ‘ಸದಾ ಇರುವಾತನೇ, ಪರಿಶುದ್ದನೇ, ನೀನು ಹೀಗೆ ತೀರ್ಪು ಮಾಡಿದ್ದರಲ್ಲಿ ನೀತಿ ಸ್ವರೂಪನಾಗಿದ್ದೀ, ಅವರು ದೇವಜನರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದರು. ನೀನು ಅವರಿಗೆ ರಕ್ತವನ್ನೇ ಕುಡಿಯುವುದಕ್ಕೆ ಕೊಟ್ಟಿದ್ದೀ, ಅದಕ್ಕೆ ಅವರು ಪಾತ್ರರು ಎಂದು ಹೇಳಿದನು (ಪ್ರಕಟನೆ 162-6), ಈ ದುಷ್ಟರು ದೇವರ ಮಕ್ಕಳನ್ನು ಮರಣಕ್ಕೆ ಒಪ್ಪಿಸಿಕೊಟ್ಟರು. ಇದರಿಂದಾಗಿ ಅವರು ತಾವೇ ರಕ್ತವನ್ನು ಸುರಿಸಿದವರೆಂದು ಎಣಿಸಲ್ಪಟ್ಟು, ಆ ರಕ್ತದ ದೋಷ ಫಲವನ್ನು ಅನುಭವಿಸುವರು (ಗ್ರೇಟ್ ಕಾಂಟ್ರೊವರ್ಸಿ”, ಪುಟ 628). ಕೊಕಾಘ 143.3