Go to full page →

ಕ್ರಿಸ್ತನನ್ನು ಶಿಲುಬೆಯಲ್ಲಿ ಇರಿದವರ ಪ್ರತಿಕ್ರಿಯೆ ಕೊಕಾಘ 161

ಕ್ರಿಸ್ತನನ್ನು ತಿರಸ್ಕರಿಸಿ ಆತನನ್ನು ಶಿಲುಬೆಗೆ ಹಾಕಿಸುವುದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದವರು ಆತನನ್ನೂ ಹಾಗೂ ರಕ್ಷಿಸಲ್ಪಟ್ಟ ಭಕ್ತರನ್ನು ನೋಡಲು ವಿಶೇಷ ಪುನರುತ್ಥಾನ ಹೊಂದುವರು. ಆಗ ದೇವರು ಮಕ್ಕಳು ಮಹಿಮೆ ಹೊಂದಿ ಕಣ್ಣು ರೆಪ್ಪೆ ಮುಚ್ಚುವಷ್ಟರಲ್ಲಿ ಮಾರ್ಪಟ್ಟು, ಅಂತರಿಕ್ಷದಲ್ಲಿ ತಮ್ಮ ಕರ್ತನನ್ನು ಎದುರುಗೊಳ್ಳುವರು. ಕ್ರಿಸ್ತನಿಗೆ ಅಪಹಾಸ್ಯ ಮಾಡಿ ಶೋಭಾಯಮಾನವಾದ ಉಡುಪು ಹಾಕಿದವರು, ತಲೆಯ ಮೇಲೆ ಮುಳ್ಳಿನ ಕಿರೀಟ ಇಟ್ಟವರು ಹಾಗೂ ಆತನ ಕೈಕಾಲುಗಳಿಗೆ ಮೊಳೆ ಹೊಡೆದವರು ರಾಜಾಧಿರಾಜನನ್ನು ನೋಡಿ ಗೋಳಾಡುವರು (ಮ್ಯಾನುಸ್ಕ್ರಿಪ್ಟ್ ರಿಲೀಸ್, ಸಂಪುಟ 9, 252). ಕೊಕಾಘ 161.3

ಇವರೆಲ್ಲರೂ ತಾವು ಹೇಗೆ ರಕ್ಷಕನ ಪ್ರೀತಿಯನ್ನು ನಿರ್ಲಕ್ಷಿಸಿ, ಆತನ ಅನುಕಂಪವನ್ನು ದುರುಪಯೋಗಪಡಿಸಿಕೊಂಡೆವೆಂದು ನೆನಪಿಸಿಕೊಳ್ಳುವರು. ಕ್ರಿಸ್ತನ ಬದಲಿಗೆ ಕೊಲೆಗಾರನೂ, ದರೋಡೆಕೋರನೂ ಆಗಿದ್ದ ಬರಬ್ಬರನ್ನು ಹೇಗೆ ಬಿಟ್ಟರು, ಹೇಗೆ ಕ್ರಿಸ್ತನಿಗೆ ಮುಳ್ಳಿನ ಕಿರೀಟ ಹಾಕಿ, ಕೊರಡೆಗಳಿಂದ ಹೊಡೆದು ಬರಬ್ಬನನ್ನು ಶಿಲುಬೆಗೆ ಹಾಕಿದ್ದು, ಆತನು ಶಿಲುಬೆಯಲ್ಲಿ ವೇದನೆಯಿಂದ ತೂಗುತ್ತಿರುವಾಗ ಯಾಜಕರು ಹಾಗೂ ಅಧಿಕಾರಿಗಳು ಅಪಹಾಸ್ಯ ಮಾಡುತ್ತಾ ಅವನು ಮತ್ತೊಬ್ಬರನ್ನು ರಕ್ಷಿಸಿದನು, ತನ್ನನ್ನು ರಕ್ಷಿಸಿಕೊಳ್ಳಲಾರನು. ಈಗ ಶಿಲುಬೆಯಿಂದ ಇಳಿದು ಬರಲಿ, ಇಳಿದು ಬಂದರೆ ಅವನಲ್ಲಿ ನಂಬಿಕೆಯಿಟ್ಟೆವು’ (ಮತ್ತಾಯ 27:40-42) ಎಂದು ಹಂಗಿಸಿದ್ದು ಅವರ ನೆನಪಿಗೆ ಬರುವುದು, ಕ್ರಿಸ್ತನಿಗೆ ಮಾಡಿದ ಅಪಮಾನ, ಆತನ ಶಿಷ್ಯರಿಗೆ ಕೊಟ್ಟಂತ ಶಿಕ್ಷೆ, ಕಷ್ಟಸಂಕಟಗಳು ಅವರ ಮನಸ್ಸಿಗೆ ಅದೇ ತಾನೇ ನಡೆದಂತೆ ಕಂಡುಬರವವು. ಆಗ ಆತನನ್ನು ಇರಿದವರು ಬೆಟ್ಟಗಳಿಗೂ, ಬಂಡೆಗಳಿಗೂ ತಮ್ಮ ಮೇಲೆ ಬೀಳುವಂತೆ ಕೂಗಿಕೊಳ್ಳುವರು. ಕೊಕಾಘ 161.4