Go to full page →

ದೇವರಿಂದ ಬಂದ ಒಂದು ವರ ಕೊಕಾಘ 166

ಕ್ರಿಸ್ತನ ನೀತಿಯು ಮಾತ್ರ ಪರಲೋಕಕ್ಕೆ ನಮ್ಮನ್ನು ಸೇರಿಸುವ ಏಕೈಕ ಮಾರ್ಗವಾಗಿದೆ. ಅಹಂಕಾರಿಗಳು ರಕ್ಷಣೆ ಗಳಿಸಿಕೊಳ್ಳಲು ಪ್ರಯತ್ನಿಸುವರು. ಆದರೆ ಕ್ರಿಸ್ತನ ನೀತಿಯಿಂದ ಮಾತ್ರ ಪರಲೋಕಕ್ಕೆ ಹೋಗುವ ಅರ್ಹತೆಯು ನಮಗೆ ದೊರೆಯುತ್ತದೆ (ಡಿಸೈರ್ ಆಫ್ ಏಜಸ್, ಪುಟ 300). ಕೊಕಾಘ 166.2

ನಾವು ಪರಲೋಕದ ಕುಟುಂಬದ ಸದಸ್ಯರಾಗಬೇಕೆಂಬ ಉದ್ದೇಶದಿಂದ, ಕ್ರಿಸ್ತನು ಭೂಲೋಕದ ಕುಟುಂಬದ ಸದಸ್ಯನಾದನು (ಡಿಸೈರ್ ಆಫ್ ಏಜಸ್ 638). ಈ ಲೋಕದ ಅತ್ಯಂತ ವೈಭವವಾದ ಅರಮನೆಗಿಂತಲೂ ನಮ್ಮ ಕರ್ತನು ಸಿದ್ಧಪಡಿಸಲು ಹೋಗಿರುವ ಬಿಡಾರಗಳನ್ನು ಪಡೆದುಕೊಳ್ಳುವುದು ಎಷ್ಟೋ ಉತ್ತಮವಾಗಿದೆ. ಲೋಕದಲ್ಲಿ ನಮಗೆ ದೊರೆಯುವ ಎಲ್ಲಾ ಹೊಗಳಿಕೆಗಳಿಗಿಂತ, ಕರ್ತನಾದ ಯೇಸುವು ನಂಬಿಗಸ್ತರಾದ ತನ್ನ ಸೇವಕರಿಗೆ ನನ್ನ ತಂದೆಯ ಆಶೀರ್ವಾದ ಹೊಂದಿದವರೇ, ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತವಾಗಿ ತೆಗೆದುಕೊಳ್ಳಿರಿ ಎಂದು ಹೇಳುವ ಮಾತುಗಳು ಬಹಳ ಶ್ರೇಷ್ಠವಾಗಿರುತ್ತವೆ (ಮತ್ತಾಯ 2534) (ಕ್ರೈಸ್ಟ್ ಆಬೈಕ್ಸ್ ಲೆಸನ್ಸ್, 374) ಕೊಕಾಘ 166.3