Go to full page →

ಪರಲೋಕದ ಬಗ್ಗೆ ನಾವು ಯಾಕೆ ಆಲೋಚಿಸಬೇಕು? ಕೊಕಾಘ 166

ನಿತ್ಯವಾದ ಪರಲೋಕದ ದೃಶ್ಯವು ನಮ್ಮಿಂದ ಮರೆಯಾಗಬಾರದೆಂಬ ಉದ್ದೇಶದಿಂದ ಯೇಸುಕ್ರಿಸ್ತನು ಪರಲೋಕದ ಮಹಿಮೆ ಹಾಗೂ ವೈಭವವನ್ನು ನಮಗೆ ನೀಡಿದ್ದಾನೆ (ದಿ ಸೈನ್ಸ್ ಆಫ್ ದಿ ಟೈಮ್, ಏಪ್ರಿಲ್ 4, 1895). ಕೊಕಾಘ 166.4

ಶಾಶ್ವತವಾದ ವಾಸ್ತವಾಂಶಗಳು ನಮ್ಮ ಕಣ್ಮುಂದೆ ಇರುವಾಗ, ಸಹಜವಾಗಿಯೇ ದೇವರ ಪ್ರಸನ್ನತೆಯ ಆಲೋಚನೆಗಳು ನಮ್ಮಲ್ಲಿ ಉಂಟಾಗುತ್ತವೆ. ಇದು ವೈರಿಯಾದ ಸೈತಾನನ ದಾಳಿಗೆ ವಿರುದ್ಧವಾಗಿ ಒಂದು ಗುರಾಣಿಯಾಗಿದೆ. ಇದು ಭಯವನ್ನು ಹೋಗಲಾಡಿಸಿ, ನಮ್ಮಲ್ಲಿ ಬಲ ಹಾಗೂ ಭರವಸೆ ನೀಡುತ್ತದೆ. ಪರಲೋಕದ ಪರಿಸರ ನಮ್ಮ ಸುತ್ತಲೂ ಇರುವಾಗ, ಯಾವುದೇ ಕೆಟ್ಟ ಆಲೋಚನೆಗಳು ಅಥವಾ ರೋಗಗಳ ಪರಿಸರ ಕಂಡುಬರುವುದಿಲ್ಲ. ಕೊಕಾಘ 166.5

ಪರಲೋಕದ ಆಕರ್ಷಣೆಗಳು ನಮ್ಮ ಆಲೋಚನೆಗಳಲ್ಲಿ ಸಹಜವಾಗಿ ಕಂಡುಬರುವ ಸಲುವಾಗಿ, ಅದರ ಬಗ್ಗೆ ಸುಂದರವಾದ ಕಲ್ಪನೆಗಳನ್ನು ನಮಗೆ ತಿಳಿಸಲು ಕ್ರಿಸ್ತನು ಬಂದನು. ಅಲ್ಲದೇ ನಮ್ಮ ನೆನಪಿನ ಅಂಗಳದಲ್ಲಿ ಯಾವಾಗಲೂ ದೈವೀಕವಾದ ಹಾಗೂ ಶಾಶ್ವತವಾದ ಪರಲೋಕದ ಚಿತ್ರಣವು ತುಂಬಿರಬೇಕೆಂಬುದೂ ಸಹ ಕ್ರಿಸ್ತನ ಉದ್ದೇಶವಾಗಿದೆ. ಕೊಕಾಘ 167.1

ಜಗತ್ತು ಕಂಡ ಮಹಾಗುರುವಾದ ಯೇಸುವು ಪರಲೋಕದ ದೃಶ್ಯವನ್ನು ನಮಗೆ ಕೊಡುತ್ತಾನೆ. ಮಾನವರಾದ ನಮಗೆ ಗ್ರಹಿಸಲು ಶಕ್ತವಾಗುವಂತೆ ಅದರ ಆಕರ್ಷಣೆಯನ್ನು ತಿಳಿಸುತ್ತಾನೆ. ಪರಲೋಕದ ಜೀವನ ಹಾಗೂ ಅದರ ಆಶೀರ್ವಾದವನ್ನು ಈ ಲೋಕದ ತಾತ್ಕಾಲಿಕವಾದ ಆಸೆಗಳೊಂದಿಗೆ ಹೋಲಿಸಿದಾಗ, ಎದ್ದು ಕಾಣುವ ವ್ಯತ್ಯಾಸಗಳು ನಮ್ಮ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತವೆ (ಅವರ್ ಹೈಕಾಲಿಂಗ್, 285). ಕೊಕಾಘ 167.2